ಮದ್ವೆ ಬಳಿಕ ಕಾಕ್ಟೇಲ್ ಪಾರ್ಟಿ ಕೊಡಿಸೋಕೆ ಬರ್ತಿದ್ದಾರೆ ನಮ್ಮ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ. ಅದಕ್ಕೆ ಶಾಹಿದ್ ಕಪೂರ್ ಹಾಗೂ ಕೃತಿ ಸನನ್ ಕೂಡ ಸಾಥ್ ನೀಡಿದ್ದು, ಇತ್ತೀಚೆಗೆ ಕಾನ್ಸೆಪ್ಟ್ ಟ್ರೈಲರ್ ಲಾಂಚ್ ಇವೆಂಟ್ ಅದ್ಧೂರಿಯಾಗಿ ನಡೀತು. ಇಂಟರೆಸ್ಟಿಂಗ್ ಅಂದ್ರೆ, ಶಾಹಿದ್ ರಶ್ಮಿಕಾ ಟಚ್ಚಲ್ಲಿ ಏನೋ ಇದೆ. ಅದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸಂಚಲನ ಮೂಡಿಸಿದೆ.
ರಶ್ಮಿಕಾ ಮಂದಣ್ಣ..ಇಷ್ಟು ದಿನ ಒಂಟಿಯಾಗಿದ್ದ ಈ ಬ್ಯೂಟಿ, ಇತ್ತೀಚೆಗೆ ವಿಜಯ್ ದೇವರಕೊಂಡ ಕೈ ಹಿಡಿಯೋ ಮೂಲಕ ಜಂಟಿ ಆಗಿದ್ದು ಗೊತ್ತೇಯಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಬಾಲಿವುಡ್‌ನಲ್ಲಿ ರಶ್ಮಿಕಾ ಮೊದಲ ಸಿನಿಮಾ ತೆರೆಗೆ ಬರೋಕೆ ಸಜ್ಜಾಗ್ತಿದೆ. ಅದೇ ಕಾಕ್ಟೇಲ್-2. ಅದ್ರ ಕಾನ್ಸೆಪ್ಟ್ ಟ್ರೈಲರ್‌ನ ಇತ್ತೀಚೆಗೆ ಮುಂಬೈನಲ್ಲಿ ಗ್ರ್ಯಾಂಡ್ ಇವೆಂಟ್ ಮೂಲಕ ಲಾಂಚ್ ಮಾಡಲಾಯಿತು.
ಶಾಹಿದ್ ರಶ್ಮಿಕಾ ಟಚ್ಚಲಿ ಏನೋ ಇದೆ..ವಿಡಿಯೋ ವೈರಲ್
ಕಾಕ್ಟೇಲ್ ಪಾರ್ಟಿಯಲ್ಲಿ ನ್ಯಾಷನಲ್ ಕ್ರಶ್‌ಗೆ ಬ್ಯಾಡ್ ಟಚ್..?
ಕಪೂರ್ ಫ್ಯಾಮಿಲಿಯ ಸ್ಟಾರ್ ಶಾಹಿದ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ಹಾಗೂ ಕೃತಿ ಸನನ್ ಇಬ್ಬರು ನಟಿಮಣಿಯರು ಬಣ್ಣ ಹಚ್ಚಿದ್ದು, ಯೂತ್ ಹಾರ್ಟ್ ಫೇವರಿಟ್ ಸಿನಿಮಾ ಆಗುವ ಸೂಚನೆ ಸಿಕ್ಕಿದೆ. ಅಂದಹಾಗೆ ಕಾಕ್ಟೇಲ್-2 ಇವೆಂಟ್ ವೇದಿಕೆಯಲ್ಲಿ ಹೈಲೈಟ್ ಆಗಿದ್ದು ಮಾತ್ರ ಶಾಹಿದ್ ಕಪೂರ್-ರಶ್ಮಿಕಾ ಮಂದಣ್ಣ ಕೆಮಿಸ್ಟ್ರಿ ಹಾಗೂ ಕೃತಿ ಸನನ್‌ಗೆ ಕೂರ್ಗ್ ಬ್ಯೂಟಿ ಬಳಸಿದ ಆ ಬ್ಯಾಡ್ ವರ್ಡ್.
ನಟ ಶಾಹಿದ್ ಕಪೂರ್ ನಟಿ ರಶ್ಮಿಕಾ ಬೆನ್ನು ಮುಟ್ಟುವ ಮೂಲಕ ಎಲ್ಲರ ಮುಂದೆ ಮುಹುಗರ ತರಿಸಿದ್ದಾರೆ. ಮೆತ್ತಗೆ ಬೆನ್ನ ಹಿಂದೆ ಕೈ ಹಾಕಿದ ಶಾಹಿದ್ ಕಪೂರ್ ನಡೆಗೆ ದಿಢೀರ್ ಅಂತ ಬೆಚ್ಚಿಬಿದ್ದಿದ್ದಾರೆ ನ್ಯಾಷನಲ್ ಕ್ರಶ್ ರಶ್ಮಿಕಾ. ಆ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಅರೇ.. ಆ ಟಚ್ ಬ್ಯಾಡ್ ಟಚ್ ಆಗದೇ ಇರಬಹುದು. ಆದ್ರೆ ಆ ಟಚ್ಚಲಿ ಏನೋ ಇದೆ ಅಂತಿದ್ದಾರೆ ನೆಟ್ಟಿಗರು.
ಹೊಸದಾಗಿ ವಿಜಯ್ ದೇವರಕೊಂಡನ ಮದ್ವೆ ಆಗಿರೋ ರಶ್ಮಿಕಾ, ಇತ್ತೀಚೆಗಷ್ಟೇ ಹನಿಮೂನ್ ಮುಗಿಸಿ ಬಂದಿದ್ರು. ಇನ್ನೂ ಅದೇ ಪ್ರಣಯದ ಗುಂಗಲ್ಲಿರೋ ರಶ್ಮಿಕಾಗೆ ಹಾಗೆ ಥಟ್ ಅಂತ ಬೆನ್ನಿಗೆ ಕೈ ಹಾಕಿದ್ರೆ ಆಕೆಯ ಪರಿಸ್ಥಿತಿ ಏನಾಗಬೇಡ ನೀವೇ ಹೇಳಿ. ಒಂಥರಾ ಫೀಲ್ ಮಾಡಿಕೊಂಡ ರಶ್ಮಿಕಾ, ಆಕೆಯ ಮುಜುಗರತನವನ್ನ ಅಲ್ಲೇ ಕೂಡಲೇ ವ್ಯಕ್ತಪಡಿಸಿದ್ರು. ಆ ವಿಡಿಯೋ ವೈರಲ್ ಆಗ್ತಿದ್ದಂತೆ, ಶಾಹಿದ್ ಕಪೂರ್‌ಗೆ ಎಲ್ಲರೂ ಕ್ಲಾಸ್ ತೆಗೆದುಕೊಳ್ತಿದ್ದಾರೆ.
OMG..! ಮಿಸೆಸ್ ದೇವರಕೊಂಡ ಬಾಯಲ್ಲಿ ಬ್ಯಾಡ್ ವರ್ಡ್
ಕ್ಯೂಟಿ ಕೃತಿ ಸನನ್‌ಗೆ ಏನಂದ್ರು ರಶಿ? ನೆಟ್ಟಿಗರಿಗೆ ಹಬ್ಬವೋ ಹಬ್ಬ
ಶಾಹಿದ್ ರಶ್ಮಿಕಾಗೆ ಮಾಡಿದ ಟಚ್ಚಿಂಗ್ ಸ್ಟೋರಿ ಅದಾದ್ರೆ, ಮತ್ತೊಂದು ರಶ್ಮಿಕಾನೇ ಬಾಯ್ತಪ್ಪಿನಿಂದ ಮಾಡಿಕೊಂಡಿರೋ ಎಡವಟ್ ಮತ್ತೊಂದು. ಸಿಕ್ಕಾಪಟ್ಟೆ ಹಾಟ್ ಆಗಿ ಕಾಣ್ತಿದ್ದ ಬಾಲಿವುಡ್ ದೀವಾ ಕೃತಿ ಸನನ್‌ಗೆ ಸ್ವತಃ ರಶ್ಮಿಕಾನೇ ಫಿದಾ ಆಗಿಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಅದನ್ನ ಬಹಿರಂಗವಾಗಿ ಹೇಳುವ ಭರದಲ್ಲಿ ಯುವರ್ ಲುಕಿಂಗ್ ಎಫ್ ಪದದ ಬಳಿಸಿ ಹಾಟ್ ಅಂದುಬಿಟ್ಟಿದ್ದಾರೆ.
ಇಷ್ಟು ದಿನ ಮಡಿ ಮೈಲಿಗೆಯಂತಿದ್ದ ರಶ್ಮಿಕಾ, ಬಾಲಿವುಡ್‌ಗೆ ಹೋಗಿ ಬಾಯಿಗೆ ಲಗಾಮು ಇಲ್ಲದೆ ಮಾತಾಡ್ತಿದ್ದಾರೆ. ಎಫ್ ಪದವನ್ನ ಎಲ್ಲಂದರಲ್ಲಿ ಬಳಸುವ ಪದ್ದತಿ ಬಾಲಿವುಡ್‌ನಲ್ಲಿ ಸರ್ವೇ ಸಾಮಾನ್ಯ. ಆದ್ರೆ ನಮ್ಮ ಸೌತ್ ಚೆಲುವೆ ಬಾಯಲ್ಲಿ ಆ ಪದ ಕೇಳಿ ಅಕ್ಷರಶಃ ಸಾಕಷ್ಟು ಮಂದಿ ಶಾಕ್ ಆಗಿದ್ದಾರೆ. ಬಿಟೌನ್ ಇವ್ರನ್ನ ಹಾಳು ಮಾಡಿತಾ ಅಥ್ವಾ ಇವರೇ ಬಿಟೌನ್‌ಗೆ ಹೀಗಿ ಹಾಳಾದ್ರಾ ಅನ್ನೋ ಚರ್ಚೆಗಳು ಕೂಡ ನಡೀತಿವೆ.
