ದಂಗಲ್, ಸುಲ್ತಾನ್ ಸಾಲಿಗೆ ಪೆದ್ದಿ ಕೂಡ ಸೇರ್ಪಡೆ ಆಗ್ತಿದೆ. ಯೆಸ್.. ರಾಮ್ ಚರಣ್ ಪೆದ್ದಿ ಟ್ರೈಲರ್ ಟಾಕ್ ಆಫ್ ದಿ ಟೌನ್ ಆಗಿದ್ದು, ಮುಂಬೈ ಇವೆಂಟ್‌ನಲ್ಲಿ ಸಾಕಷ್ಟು ಅಚ್ಚರಿಯ ವಿಷಯಗಳು ಹೊರಬಂದಿವೆ. ಇಷ್ಟಕ್ಕೂ ಶೂಟಿಂಗ್ ವೇಳೆ ಚಿರು ತನಯನಿಗೆ ಆದ ಗಾಯಗಳೆಷ್ಟು..? ಸರ್ಜರಿಗಳೆಷ್ಟು..? ಅನ್ನೋದ್ರ ಜೊತೆ ನೋವಲ್ಲೂ ಪ್ರಮೋಷನ್ಸ್ ಮಾಡ್ತಿರೋ ಚೆರ್ರಿ ಡೆಡಿಕೇಷನ್ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ….
- ಪೆದ್ದಿಗಾಗಿ ಚರಣ್‌ಗಾದ ಗಾಯಗಳೆಷ್ಟು..? ಸರ್ಜರಿಗಳೆಷ್ಟು..?!
- ‘ಕುಸ್ತಿ’ಗಾಗಿ ಚಿರು ತನಯ ಪಟ್ಟ ಪಾಡು ಎಂಥದ್ದು ಗೊತ್ತಾ..?
- ಒಮ್ಮೆ ಕಣ್ಣು.. ಈಗ ಕೈ.. ಬ್ಯಾಕ್ ಟು ಬ್ಯಾಕ್ 2 ಶಸ್ತ್ರ ಚಿಕಿತ್ಸೆ..!
- ಆಮೀರ್, ಸಲ್ಲುಗೆ ಹ್ಯಾಟ್ಸ್ ಆಫ್ ಹೇಳಿದ ರಾಮ್ ಚರಣ್
ಪೆದ್ದಿ.. ಇದೇ ಜೂನ್ 4ಕ್ಕೆ ವಿಶ್ವದಾದ್ಯಂತ ಬಿಗ್‌ಸ್ಕ್ರೀನ್‌ಗೆ ಬರೋಕೆ ಸಜ್ಜಾಗ್ತಿರೋ ತೆಲುಗಿನ ಪ್ಯಾನ್ ಇಂಡಿಯಾ ಮೂವಿ. ಈ ಹಿಂದೆ ರಂಗಸ್ಥಳಂ ಸಿನಿಮಾ ಮಾಡಿದ್ದ ರಾಮ್ ಚರಣ್, ಮತ್ತೀಗ ಅದೇ ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ಅಂಥದ್ದೇ ಭಿನ್ನ ಕಥೆಯ ಮೂಲಕ ಬರ್ತಿರೋ ಚಿತ್ರ. ಅದಕ್ಕೆ ನಿನ್ನೆಯಷ್ಟೇ ಬಿಡುಗಡೆ ಆಗಿರೋ ಟ್ರೈಲರ್ ಸಾಕ್ಷಿ ಆಗಿದೆ. ಹೌದು.. ಲೋಕಲ್ ಸ್ಪೋರ್ಟ್ಸ್‌ನ ಪ್ರಧಾನವಾಗಿ ಇಟ್ಟಿಕೊಂಡು ಕಟ್ಟಿರೋ ಕಥೆ ಪೆದ್ದಿಯದ್ದಾಗಿದೆ.
ಸಾವಿರಾರು ಕೋಟಿ ಒಡೆಯನಾದ್ರೂ ಸರಳವಾಗಿ, ಸ್ವತಂತ್ರವಾಗಿ ಬದುಕೋ ನಿಟ್ಟಿನಲ್ಲಿ ತಮ್ಮ ಅಹಂಗೆ ತಾವೇ ಬ್ರೇಕ್ ಹಾಕಿಕೊಳ್ಳೋಕೆ ಅಂತ ವರ್ಷದಲ್ಲಿ ಕನಿಷ್ಟ 100ರಿಂದ 120 ದಿನ ಅಯ್ಯಪ್ಪ ಸ್ವಾಮಿ ಮಾಲೆಯಲ್ಲಿರ್ತಾರೆ ಚರಣ್. ಅಷ್ಟೇ ಅಲ್ಲ, ಪಾತ್ರ ಅಂತ ಬಂದಾಗ ಅದರೊಳಗೆ ಪರಕಾಯ ಪ್ರವೇಶ ಮಾಡುವ ಚರಣ್, ಅದೆಷ್ಟೋ ಮಂದಿಗೆ ರೋಲ್ ಮಾಡೆಲ್ ಆಗುವಂತೆ ದೇಹವನ್ನ ದಂಡಿಸಿ, ಮೌಲ್ಡ್ ಮಾಡಿಕೊಳ್ತಾರೆ. ಸದ್ಯ ಪೆದ್ದಿಗಾಗಿ ಚರಣ್ ಎರಡು ವರ್ಷಗಳಲ್ಲಿ ಸಾಕಷ್ಟು ಎಫರ್ಟ್ ಹಾಕಿದ್ದಾರೆ. ಅದು ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣಲಿದೆ.
ಇತ್ತೀಚೆಗೆ ಶೂಟಿಂಗ್ ವೇಳೆ ಕಣ್ಣು ರೆಪ್ಪೆಗೆ ಪೆಟ್ಟು ಮಾಡಿಕೊಂಡಿದ್ರು. ಅದಕ್ಕೆ ಸರ್ಜರಿ ಕೂಡ ಮಾಡಿಸಿಕೊಂಡು ಮತ್ತೆ ಶೂಟಿಂಗ್ ಸೆಟ್‌ಗೆ ವಾಪಸ್ ಆಗಿದ್ರು. ಆ ಬಗ್ಗೆ ಖುದ್ದು ಚರಣ್ ತಂದೆ ಮೆಗಾಸ್ಟಾರ್ ಚಿರಂಜೀವಿ ಪೋಸ್ಟ್ ಕೂಡ ಹಾಕಿದ್ರು. ಇದೀಗ ಬಲಗೈ ಪೆಟ್ಟು ಮಾಡಿಕೊಂಡಿದ್ದಾರೆ. ಮುಂಬೈ ಇವೆಂಟ್‌ನಲ್ಲಿ ಆ ಕೈ ನೋವಲ್ಲೂ ಸಹ ಬಂದು ಚಿತ್ರದ ಪ್ರಮೋಷನ್ಸ್ ಮಾಡಿದ್ದು ಇಂಟರೆಸ್ಟಿಂಗ್.
ಇದು ಡೈರೆಕ್ಟರ್ ಬುಚ್ಚಿಬಾಬು ಗಿಫ್ಟ್ ಎಂದ ಚರಣ್, ಸದ್ಯದಲ್ಲೇ ಸರ್ಜರಿ ಕೂಡ ಮಾಡಿಸಿಕೊಳ್ಳಲಿದ್ದಾರಂತೆ. ಅಲ್ಲದೆ, ಕುಸ್ತಿ ಹಿನ್ನೆಲೆಯ ಈ ಸಿನಿಮಾದ ಶೂಟಿಂಗ್ ವೇಳೆ ಮೈಯೆಲ್ಲಾ ಗಾಯಗಳನ್ನ ಮಾಡಿಕೊಂಡಿದ್ದಾರಂತೆ. ಆಮೀರ್ ಖಾನ್ ದಂಗಲ್ ಹಾಗೂ ಸಲ್ಮಾನ್ ಖಾನ್ ಸುಲ್ತಾನ್ ಚಿತ್ರಗಳನ್ನ ಅದ್ಹೇಗೆ ಮಾಡಿದ್ರೋ ಗೊತ್ತಿಲ್ಲ. ಆದ್ರೆ ಒಂದು ಟ್ರೆಂಡ್ ಸೆಟ್ ಮಾಡಿದ್ರು. ಅವ್ರ ಹಾದಿಯಲ್ಲಿ ನಾನೂ ಹೆಜ್ಜೆ ಹಾಕಿದ್ದೇನೆ. ಅವರಿಗೆ ನನ್ನದೊಂದು ಹ್ಯಾಟ್ಸ್ ಆಫ್ ಎಂದಿದ್ದಾರೆ ಚರಣ್.
- ಮೇ 23ಕ್ಕೆ ಭೂಪಾಲ್‌ನಲ್ಲಿ ಪೆದ್ದಿ ಮತ್ತೊಂದು ಇವೆಂಟ್
- ಉತ್ತರ ಭಾರತೀಯರಿಗೆ ಕುಸ್ತಿ ಆಟ ಸಖತ್ ಫೇವರಿಟ್
ಮುಂಬೈನಲ್ಲಿ ಟ್ರೈಲರ್ ಲಾಂಚ್ ಇವೆಂಟ್ ಮಾಡಿದ್ದ ಟೀಂ, ಇದೀಗ ಇದೇ ಮೇ 23ಕ್ಕೆ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಮತ್ತೊಂದು ಮೆಗಾ ಇವೆಂಟ್ ಮಾಡಲು ಸಜ್ಜಾಗಿದೆ. ಮಿರ್ಜಾಪುರ್ ಸೀರೀಸ್‌ನ ದಿವ್ಯೇಂದು, ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್ ಹಾಗೂ ನಮ್ಮ ಶಿವರಾಜ್‌ಕುಮಾರ್ ಚಿತ್ರದ ಪ್ರಧಾನ ಪಾತ್ರಗಳಲ್ಲಿ ಕಾಣಸಿಗಲಿದ್ದು, ಎ ಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಇವರೆಲ್ಲಾ ಭೂಪಾಲ್ ಇವೆಂಟ್‌ನಲ್ಲಿ ಭಾಗಿಯಾಗಲಿದ್ದಾರಂತೆ.
ಉತ್ತರ ಭಾರತದಲ್ಲಿ ಇಂದಿಗೂ ಕುಸ್ತಿ ಸ್ಪರ್ಧೆ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಹಾಗಾಗಿ ಇಂಡಿಯಾದ ಸೆಂಟರ್ ಪಾಯಿಂಟ್ ಆಗಿರೋ ಭೂಪಾಲ್‌ನಲ್ಲಿ ಪೆದ್ದಿ ಇವೆಂಟ್ ನಡೆಸಲು ಚರಣ್ ಪ್ಲ್ಯಾನ್ ಮಾಡಿದ್ದಾರೆ.
ಒಟ್ಟಾರೆ ಕ್ರಿಕೆಟ್ ಹಾಗೂ ಕುಸ್ತಿ ಲೋಕಲ್ ಸ್ಪೋರ್ಟ್ಸ್ ಡ್ರಾಮಾಗಾಗಿ ಚರಣ್ ಬೆವರಿನ ಜೊತೆ ರಕ್ತ ಕೂಡ ಸುರಿಸಿದ್ದಾರೆ. ಅದು ಎಷ್ಟರ ಮಟ್ಟಿಗೆ ಅನ್ನೋದು ಇದೇ ಜೂನ್ 4ಕ್ಕೆ ತೆರೆ ಮೇಲೆ ಕಾಣಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
