ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ಪುಷ್ಪ ಸಿನಿಮಾದ ಶ್ರೀವಲ್ಲಿಯಾಗಿ ಇಡೀ ದೇಶವನ್ನು ಹುಚ್ಚೆಬ್ಬಿಸಿದ ರಶ್ಮಿಕಾ, ನೇರ ನುಡಿಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಮೊದಲ ಪ್ರೇಮ ವೈಫಲ್ಯ ಮತ್ತು ಬ್ರೇಕಪ್‌ನ ನೋವಿನ ಬಗ್ಗೆ ನೀಡಿರೋ ಒಂದು ಸ್ಟೇಟ್ಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಬ್ರೇಕ್ ಅಪ್ ಆದಾಗ ಹುಡುಗರಿಗಿಂತ ಹುಡುಗಿಯರೇ ಹೆಚ್ಚು ನೋವು ಅನುಭವಿಸ್ತಾರೆ ಎಂದಿರೋ ರಶ್ಮಿಕಾ, ಮೊದಲ ಪ್ರೇಮ ಹಾಗೂ ಕೊನೆಯ ಪ್ರೇಮದ ನಡುವಿನ ಪ್ರೇಮಾಯಣ ಬಿಚ್ಚಿಟ್ಟಿದ್ದಾರೆ.
ಇಡೀ ಬಾಲಿವುಡ್ ಜಗತ್ತು ಈಗ ರಶ್ಮಿಕಾ ಅವರತ್ತ ತಿರುಗಿ ನೋಡುತ್ತಿದೆ. ಕೇವಲ ಬಾಲಿವುಡ್ ಅಲ್ಲ, ಜಗತ್ತೇ ಈಗ ರಶ್ಮಿಕಾ ಕಡೆ ನೋಡತೊಡಗಿದೆ. ಕಾರಣ, ಕನ್ನಡತಿ ರಶ್ಮಿಕಾ ಮಂದಣ್ಣ ನಟನೆಯ ಥಾಮ ಸಿನಿಮಾ ಥೀಯೇಟರ್ ನಲ್ಲಿ ಭರ್ಜರಿ ಓಟ ನಡೆಸಿದೆ. ಈ ವರ್ಷದ ಟಾಪ್ ಒನ್ ಚಿತ್ರ ಛಾವಾದಲ್ಲಿ ಕೂಡ ರಶ್ಮಿಕಾ ಮಂದಣ್ಣ ನಟಿಸಿದ್ರು. ಇದೀಗ ಥಾಮ ಕೂಡ ಸಕ್ಸಸ್ ಕಾಣುವ ಹಾದಿಯಲ್ಲಿದ್ದು, ಸದ್ಯ ಸೌತ್ ಇಂಡಿಯನ್ ಟಾಪ್ ನಟಿ ಬಾಲಿವುಡ್‌ನಲ್ಲೂ ನಂಬರ್ ಒನ್ ಆಗುವ ಮೂಲಕ ಇಂಡಿಯಾದ ಟಾಪ್ ಮೋಸ್ಟ್ ನಟಿ ಪಟ್ಟ ಪಡೆಯುವುದು ಪಕ್ಕಾ ಎನ್ನಲಾಗುತ್ತಿದೆ.
ರಕ್ಷಿತ್ ಜೊತೆ ಬ್ರೇಕಪ್.. ರಶ್ಮಿಕಾ ಮಂದಣ್ಣ ಸ್ಫೋಟಕ ಹೇಳಿಕೆ
ಕಿರಿಕ್ ಪಾರ್ಟಿ ಜೊತೆ ಏನಾಗಿತ್ತು..? ಕೊನೆಗೂ ಸಿಕ್ತು ಉತ್ತರ..!
ಥಾಮ ಸಿನಿಮಾದ ಸಕ್ಸಸ್ ನಡುವೆ ದಿ ಗರ್ಲ್ ಫ್ರೆಂಡ್ ಚಿತ್ರದ ಪ್ರಚಾರದಲ್ಲೂ ರಶ್ಮಿಕಾ ಹಾಗೂ ದೀಕ್ಷಿತ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ಅಂದಹಾಗೆ ದಿ ಗರ್ಲ್ ಫ್ರೆಂಡ್ ಚಿತ್ರದ ಸಂದರ್ಶನ ವೇಳೆ ರಶ್ಮಿಕಾ ಕೊಟ್ಟಿರೋ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿದೆ. ಇತೀಚೆಗಷ್ಟೇ ವಿಜಯ್ ದೇವರಕೊಂಡ ಜೊತೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿರೋ ರಶ್ಮಿಕಾ ಶುದ್ಧ ಪ್ರೀತಿ.. ಬ್ರೇಕ್ ಅಪ್ ನೋವಿನ ಬಗ್ಗೆ ಮೌನ ಮುರಿದಿದ್ದಾರೆ. ಎಸ್, ಬ್ರೇಕ್ ಅಪ್ ಆದಾಗ ಹುಡುಗೀರು ಹುಡುಗರಿಗಿಂತ ಈಜಿ ಆಗಿ ಮೂವ್ ಆನ್ ಆಗ್ತಾರೆ ಎಂಬ ಪ್ರಶ್ನೆಗೆ ರಶ್ಮಿಕಾ ನೇರವಾಗಿ ಉತ್ತರಿಸಿದ್ದಾರೆ.
ಬ್ರೇಕಪ್ ಆದರೆ ಹುಡುಗರೇ ಹೆಚ್ಚು ನರಳುತ್ತಾರೆ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಆ ನೋವು ಹುಡುಗಿಯರಿಗೆ ಇನ್ನೂ ಹೆಚ್ಚಾಗಿರುತ್ತದೆ. ಯಾಕೆಂದರೆ, ನಮ್ಮ ನೋವನ್ನು ಹೊರಹಾಕಲು ಹುಡುಗರಂತೆ ಗಡ್ಡ ಬಿಟ್ಟು ಓಡಾಡಲು ಸಾಧ್ಯವಿಲ್ಲ. ದುಃಖ ಮರೆಯಲು ಮದ್ಯಪಾನ ಅಥವಾ ಬೇರೆ ಚಟಗಳಿಗೆ ದಾಸರಾಗಲು ಆಗುವುದಿಲ್ಲ. ಹುಡುಗಿಯರು ತಮ್ಮ ನೋವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಒಳಗೊಳಗೆ ಕೊರಗುತ್ತಾರೆ. ಆದರೆ ಜಗತ್ತಿನ ಮುಂದೆ ಏನೂ ಆಗಿಲ್ಲ ಎಂಬಂತೆ ಧೈರ್ಯದಿಂದ ಇರಬೇಕಾಗುತ್ತದೆ.ಬ್ರೇಕ್ ಅಪ್ ಆದ್ರೆ ಹೆಚ್ಚಿನ ಯಾತನೆಯನ್ನು ನಾವು ಹುಡುಗೀರು ಅನುಭವಿಸುತ್ತೇವೆ ಎಂದು ತಮ್ಮ ಅಭಿಪ್ರಾಯವನ್ನು ಖಡಾಖಂಡಿತವಾಗಿ ವ್ಯಕ್ತಪಡಿಸಿದ್ದಾರೆ.
ಹುಡುಗ್ರು ಗಡ್ಡ ಬಿಡ್ತಾರೆ.. ಹುಡ್ಗೀರ ಯಾತನೆ ಕೇಳೋರ್ಯಾರು..?
‘ರಕ್ಷಿತ್ ಫಸ್ಟ್ ಲವ್‌ಗಿಂತ ವಿಜಿ ಲಾಸ್ಟ್ ಲವ್ ಶುದ್ಧ’- ರಶ್ಮಿಕಾ
ಇದರ ಜೊತೆಗೆ ಸಮಾಜಕ್ಕೆ ಹೆದರಿ ಕುಟುಂಬದ ಒತ್ತಾಯದಿಂದ ಹುಡುಗಿ ಮದುವೆ ಆಗಬೇಕಾಗುತ್ತೆ. ಆದ್ರೆ ಅವ್ಳು ಆ ಹುಡುಗನಿಗೆ ಕಮಿಟ್ ಆಗಿರೋದಿಲ್ಲ ಹೀಗಿದ್ದಾಗ ಏಕಏಕಿ ಬ್ರೇಕ್ ಅಪ್ ಅಂದಾಗ ಹುಡುಗಿನ blame ಮಾಡ್ತಾರೆ ಎಂಬ ರಶ್ಮಿಕಾ ಹೇಳಿಕೆ ಅವರ ವೈಯಕ್ತಿಕ ಜೀವನಕ್ಕೂ ಕನೆಕ್ಟ್ ಆಗ್ತಿದೆ ಅಂತಿದ್ದಾರೆ ನೆಟ್ಟಿಗರು. ಈ ಹಿಂದೆ ನಟ ರಕ್ಷಿತ್ ಶೆಟ್ಟಿ ಅವರೊಂದಿಗಿನ ನಿಶ್ಚಿತಾರ್ಥ ಮುರಿದುಬಿದ್ದಾಗ ರಶ್ಮಿಕಾ ವೈಯಕ್ತಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದರು. ಆ ಅನುಭವದ ಹಿನ್ನೆಲೆಯಲ್ಲಿಯೇ ಅವರು ಈ ಮಾತನ್ನು ಹೇಳಿರಬಹುದು ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಅಲ್ಲದೆ, ರಕ್ಷಿತ್ ಶೆಟ್ಟಿ ಮೊದಲ ಪ್ರೀತಿಗಿಂತ, ವಿಜಯ್ ದೇವರಕೊಂಡ ಕೊನೆಯ ಪ್ರೀತಿಯೇ ಶುದ್ಧ ಅಂತ ಪರೋಕ್ಷವಾಗಿ ಹೇಳಿದ್ದಾರೆ ಕೋರ್ಗ್ ಚೆಲುವೆ.
ಒಟ್ಟಿನಲ್ಲಿ, ಸದಾ ಲವಲವಿಕೆಯಿಂದ ಕಾಣುವ ರಶ್ಮಿಕಾ ಅವರ ಈ ಗಂಭೀರ ಹೇಳಿಕೆ, ಬ್ರೇಕಪ್ ನೋವಿನ ಕುರಿತ ಚರ್ಚೆಗೆ ಹೊಸ ಆಯಾಮ ನೀಡಿದೆ.