49.6 ಕೆಜಿ ಚಿನ್ನ, 30 ಕೋಟಿ ಹವಾಲ: ರನ್ಯಾಳ ಕೇಸ್‌ನಲ್ಲಿ ಸ್ಫೋಟಕ ಗುಟ್ಟು ರಟ್ಟು!

Film 2025 04 03t203236.022

ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ದಿನಕ್ಕೊಂದು ತಿರುವು ಸಿಗುತ್ತಿದೆ. ಕೇಸ್ ಮೂರನೇ ಆರೋಪಿ ಸಾಹಿಲ್ ಜೈನ್ ಡಿಆರ್ ಮುಂದೆ ವಿಚಾರಣೆ ವೇಳೆ ಚಿನ್ನದ ಕಳ್ಳಸಾಗಣೆ ಜಾಲದ ಮತ್ತಷ್ಟು ರೋಚಕ ಮತ್ತು ಸ್ಫೋಟಕ ಮಾಹಿತಿಗಳು ಬಯಲಾಗಿವೆ. ಕೇವಲ ಮೂರು ತಿಂಗಳಲ್ಲಿ ರನ್ಯಾ ಎಷ್ಟು ಚಿನ್ನವನ್ನು ಭಾರತಕ್ಕೆ ಸಾಗಿಸಿದ್ದಾಳೆ? ಸ್ಮಗ್ಲಿಂಗ್ ಹೇಗೆ ನಡೆಯುತ್ತಿತ್ತು? ಎಂಬುದನ್ನು ಸಾಹಿಲ್ ಜೈನ್ ಬಾಯ್ಬಿಟ್ಟಿದ್ದಾನೆ.

ರನ್ಯಾ ರಾವ್ ಚಿನ್ನದ ಕಳ್ಳಾಟದ ರಹಸ್ಯ

ದುಬೈನಿಂದ ಚಿನ್ನ ಸಾಗಾಟ ಮಾಡಿ ಜೈಲು ಸೇರಿರುವ ರನ್ಯಾ ರಾವ್ ಸ್ಮಗ್ಲಿಂಗ್ ಜಾಲದ ಒಂದೊಂದೇ ಅಂಶಗಳು ತೆರೆದುಕೊಳ್ಳುತ್ತಿವೆ. ಪ್ರಕರಣದ ಮೂರನೇ ಆರೋಪಿ ಸಾಹಿಲ್ ಜೈನ್, ಡಿಆರ್ಐಗೆ ನೀಡಿದ ಹೇಳಿಕೆಯಲ್ಲಿ, ಜನವರಿಯಿಂದ ರನ್ಯಾ ಬರೋಬ್ಬರಿ 49.6 ಕೆಜಿ ಚಿನ್ನವನ್ನು ಭಾರತಕ್ಕೆ ಸಾಗಿಸಿದ್ದ ಸ್ಫೋಟಕ ವಿಚಾರ ಬಹಿರಂಗಪಡಿಸಿದ್ದಾನೆ. ಚಿನ್ನವನ್ನು ರನ್ಯಾ ತಂದು ಸಾಹಿಲ್ಗೆ ಹಸ್ತಾಂತರಿಸುತ್ತಿದ್ದಳು, ಮತ್ತು ಆತ ಚಿನ್ನವನ್ನು ಮಾರಾಟ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದ. ಅಷ್ಟೇ ಅಲ್ಲ, ಚಿನ್ನ ಖರೀದಿಗಾಗಿ 30 ಕೋಟಿ ರೂಪಾಯಿ ಹಣವನ್ನು ಹವಾಲ ಮೂಲಕ ದುಬೈಗೆ ರವಾನಿಸುತ್ತಿದ್ದಳು ಎಂಬ ಸಂಗತಿ ತನಿಖೆಯಲ್ಲಿ ದೃಢಪಟ್ಟಿದೆ.

ಮೂರು ತಿಂಗಳಲ್ಲಿ 49.6 ಕೆಜಿ ಚಿನ್ನ ಸಾಗಾಟ

ಕಳೆದ ನವೆಂಬರ್ನಿಂದ ರನ್ಯಾ 49.6 ಕೆಜಿ ಚಿನ್ನವನ್ನು ದುಬೈನಿಂದ ತಂದು ಭಾರತಕ್ಕೆ ಸಾಗಿಸಿದ್ದಾಳೆ. ಚಿನ್ನವನ್ನು ತಂದು ಸಾಹಿಲ್ಗೆ ಕೊಟ್ಟ ಬಳಿಕ, ಆತ ಇದನ್ನು ಮಾರಾಟ ಮಾಡುತ್ತಿದ್ದ. ಚಿನ್ನ ಮಾರಾಟದಿಂದ ಬಂದ ಹಣವನ್ನೇ ಮತ್ತೆ ದುಬೈಗೆ ಹವಾಲ ಮೂಲಕ ಕಳುಹಿಸಿ, ಹೊಸ ಚಿನ್ನ ಖರೀದಿಗೆ ಬಳಸುತ್ತಿದ್ದಳು. ರೀತಿಯಾಗಿ, ಒಟ್ಟು 30 ಕೋಟಿ ರೂಪಾಯಿ ಹಣ ದುಬೈಗೆ ಸಾಗಾಟವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರತಿ ಬಾರಿ ಚಿನ್ನ ತಂದು ಮಾರಾಟ ಮಾಡಿದ ನಂತರ, ಹಣದಿಂದ ಮತ್ತೆ ದುಬೈಗೆ ತೆರಳಿ ಚಿನ್ನ ಖರೀದಿಸುವ ಚಕ್ರ ನಡೆಯುತ್ತಿತ್ತು.

ರನ್ಯಾ ರಾವ್ ಚಿನ್ನ ಖರೀದಿಗಾಗಿ ಹವಾಲ ಮೂಲಕ ಹಣ ರವಾನಿಸುವ ಕೆಲಸವನ್ನು ಸಾಹಿಲ್ ಜೈನ್ ಮೂಲಕ ಮಾಡಿಸುತ್ತಿದ್ದಳು. ಜನವರಿಯಲ್ಲಿ 55 ಲಕ್ಷ ರೂಪಾಯಿ, ಫೆಬ್ರವರಿಯಲ್ಲಿ 55 ಲಕ್ಷ ರೂಪಾಯಿ, ಮತ್ತೊಮ್ಮೆ 30 ಲಕ್ಷ ರೂಪಾಯಿ ಸೇರಿ ಒಟ್ಟು 1,73,61,787 ರೂಪಾಯಿ ಹಣವನ್ನು ತನ್ನ ಮನೆಗೆ ಹವಾಲ ಮೂಲಕ ತರಿಸಿಕೊಂಡಿದ್ದಾಳೆ. ಪ್ರತಿ ಹವಾಲ ವಹಿವಾಟಿಗೆ ಸಾಹಿಲ್ ಜೈನ್ 55,000 ರೂಪಾಯಿ ಕಮಿಷನ್ ಪಡೆಯುತ್ತಿದ್ದ ಎಂಬುದು ತಿಳಿದುಬಂದಿದೆ. ಒಟ್ಟಾರೆಯಾಗಿ, ಪ್ರಕರಣದಲ್ಲಿ ಇದುವರೆಗೆ 38,39,97,000 ರೂಪಾಯಿ ಹಣ ದುಬೈಗೆ ಹವಾಲ ಮೂಲಕ ಕಳುಹಿಸಲಾಗಿದೆ.

ಡಿಆರ್ಐಗೆ ಸಿಕ್ಕಿದ್ದೇನು?

ಡಿಆರ್ ತನಿಖೆಯಲ್ಲಿ ಇದುವರೆಗೆ 14.206 ಕೆಜಿ ಚಿನ್ನ, 2,67,00,000 ರೂಪಾಯಿ ನಗದು, ಮತ್ತು 2 ಕೆಜಿ ಚಿನ್ನದ ಆಭರಣಗಳನ್ನು ಮಾತ್ರ ವಶಪಡಿಸಿಕೊಂಡಿದೆ. ಆದರೆ, ಒಟ್ಟಾರೆ 49.6 ಕೆಜಿ ಚಿನ್ನ ಸಾಗಾಟವಾಗಿದ್ದು, ಉಳಿದ ಚಿನ್ನ ಮತ್ತು ಹಣದ ಲೆಕ್ಕಾಚಾರ ಇನ್ನೂ ಸಂಪೂರ್ಣವಾಗಿ ಬಯಲಾಗಿಲ್ಲ.

ಸಾಹಿಲ್ ಜೈನ್ ಯಾರು?

ಸಾಹಿಲ್ ಜೈನ್ ಬಳ್ಳಾರಿ ಮೂಲದವನಾಗಿದ್ದು, ರನ್ಯಾ ರಾವ್ ಜೊತೆ ವಾಟ್ಸ್ಆ್ಯಪ್ ಚಾಟ್ ಮಾಡಿದ್ದ ಹಿನ್ನೆಲೆಯಲ್ಲಿ ಡಿಆರ್ಐಗೆ ಸಿಕ್ಕಿಬಿದ್ದಿದ್ದಾನೆ. ಸಾಹಿಲ್ ತಂದೆ ಮಹೇಂದ್ರ ಜೈನ್ ಸಹೋದರರ ಬಟ್ಟೆ ಅಂಗಡಿ ಬಳ್ಳಾರಿಯಲ್ಲಿದ್ದು ಮತ್ತು ಅವರ ಕುಟುಂಬ ಬಳ್ಳಾರಿಯಲ್ಲಿ ವಾಸಿಸುತ್ತಿದೆ. ಆದರೆ, ಕೆಲ ವರ್ಷಗಳಿಂದ ಸಾಹಿಲ್ ಜೈನ್ ಕುಟುಂಬ ಬೆಂಗಳೂರಿಗೆ ಸ್ಥಳಾಂತರಗೊಂಡಿದೆ. ಚಿನ್ನದ ವ್ಯಾಪಾರಿಗಳ ಜೊತೆ ಸಂಪರ್ಕ ಹೊಂದಿದ್ದ ಸಾಹಿಲ್, ಚಿನ್ನದ ಮಾರಾಟದ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದ.

ತನಿಖೆಯಲ್ಲಿ ಮುಂದೇನು?

ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಈಗಾಗಲೇ ಹಲವು ಆರೋಪಿಗಳು ಜೈಲು ಸೇರಿದ್ದಾರೆ. ಸಾಹಿಲ್ ಜೈನ್ ಹೇಳಿಕೆಯಿಂದ ಜಾಲದ ಆಳ ಮತ್ತು ವಿಸ್ತಾರ ಇನ್ನಷ್ಟು ಸ್ಪಷ್ಟವಾಗಿದೆ. ಡಿಆರ್ ಈಗ ಸ್ಮಗ್ಲಿಂಗ್ ಜಾಲದ ಹಿಂದಿನ ಮಾಸ್ಟರ್ಮೈಂಡ್ಗಳನ್ನು ಪತ್ತೆಹಚ್ಚುವತ್ತ ಗಮನ ಹರಿಸಿದೆ. ಪ್ರಕರಣದ ಮುಂದಿನ ತಿರುವುಗಳು ಇನ್ನಷ್ಟು ಆಶ್ಚರ್ಯಕರ ಬೆಳವಣಿಗೆಗಳನ್ನು ತರುವ ಸಾಧ್ಯತೆ ಇದೆ.

Exit mobile version