ಸ್ಯಾಂಡಲ್‌ವುಡ್‌‌ನಲ್ಲಿ ಇಲ್ಲ ಒಗ್ಗಟ್ಟು..! ಹೀಗ್ಯಾಕಂದ್ರು ರಮ್ಯಾ?

‘ಇಂಡಸ್ಟ್ರಿಯಲ್ಲಿ ಹೆಣ್ಮಕ್ಳಿಗೆ ಸಪೋರ್ಟ್‌ ಕಮ್ಮಿ’-ಮೋಹಕತಾರೆ

Untitled design 2025 07 07t182517.577

ಸಿನಿಮಾ ಮತ್ತು ರಾಜಕಾರಣದಿಂದ ಅಂತರ ಕಾಯ್ದುಕೊಂಡಿರೋ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಕನ್ನಡ ಚಿತ್ರರಂಗದ ಒಗ್ಗಟ್ಟಿನ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಇಂಡಸ್ಟ್ರಿಯಲ್ಲಿ ಹೆಣ್ಮಕ್ಳಿಗೆ ಸಪೋರ್ಟ್ ಕಡಿಮೆ. ಸ್ಪೋರ್ಟ್ಸ್‌‌‌ನಲ್ಲಿ ಗಂಡು ಮಕ್ಕಳು ಡಾಮಿನೇಟ್ ಮಾಡ್ತಾರೆ ಅಂತ ತಾರತಮ್ಯದ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ. ಈ ಕುರಿತ ಡಿಟೈಲ್ಡ್ ರಿಪೋರ್ಟ್‌ ನಿಮ್ಮ ಮುಂದೆ.

ಇತ್ತೀಚೆಗೆ ನಡೆದ ಕ್ವೀನ್ಸ್ ಪ್ರೀಮಿಯರ್ ಲೀಗ್ ಸೀಸನ್-2 ಲೋಗೋ ಲಾಂಚ್ ಮಾಡಿದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಸಾಕಷ್ಟು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ರು. ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿದ್ದ ರಮ್ಯಾ, ಅಪ್ಪು ಜೊತೆ ತಾನು ಕೂಡ ಆರ್‌ಸಿಬಿ ಟೀಮ್‌ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ದಿನಗಳನ್ನು ನೆನೆದರು.

ADVERTISEMENT
ADVERTISEMENT

ಇಂಡಸ್ಟ್ರಿಯಲ್ಲಿ ಹೆಣ್ಣು ಮಕ್ಕಳಿಗೆ ಸಪೋರ್ಟ್ ಕಮ್ಮಿ ಅಂತ ನೇರವಾಗಿ ಗುಡುಗಿದ ಮೋಹಕತಾರೆ, ಕ್ರೀಡೆಯಲ್ಲಿ ಗಂಡು ಮಕ್ಕಳು ತುಂಬಾ ಡಾಮಿನೇಟ್ ಮಾಡ್ತಾರೆ ಎಂದರು. ಅಷ್ಟೇ ಅಲ್ಲ, ಸ್ಪೋರ್ಟ್ಸ್‌‌ ಅನ್ನೋದು ಕೆಳ ಜಾತಿ, ಮೇಲ್ಜಾತಿ, ಬಡವ-ಶ್ರೀಮಂತ ಅನ್ನೋದು ಇಲ್ಲದೆ ಆಡುವಂಥದ್ದು ಅಂತ ತಮ್ಮ ಅಭಿಪ್ರಾಯ ಹೊರಹಾಕಿದರು.

ಕನ್ನಡ ಚಿತ್ರರಂಗದ ಒಗ್ಗಟ್ಟಿನ ಬಗ್ಗೆ ಕೂಡ ಮಾತನಾಡಿದ ಸ್ಯಾಂಡಲ್‌ವುಡ್ ಕ್ವೀನ್, ಇಲ್ಲಿ ಯೂನಿಟಿ ಕಾಣ್ತಿಲ್ಲ. ಈ ರೀತಿಯ ಕ್ರೀಡೆಗಳಿಂದ ಆದ್ರೂ ಒಗ್ಗಟ್ಟು ಕಾಣಿಸುತ್ತೆ. ಸ್ಫೋರ್ಟ್‌‌ಮೆನ್‌ಶಿಪ್ ಅನ್ನೋದು ತುಂಬಾ ಮುಖ್ಯ ಎಂದರು. ಇದರೊಟ್ಟಿಗೆ ಹೊಸಬರಿಗೆ ಸಪೋರ್ಟ್ ಮಾಡುವ ವಿಚಾರ ನಾನು ಯಾರೇ ಕಾರ್ಯಕ್ರಮಕ್ಕೆ ಕರೆದ್ರೂ ಹೋಗ್ತೀನಿ. ನಾನು ಈ ಸ್ಥಾನದಲ್ಲಿರೋಕೆ ಕಾರಣ ನೀವು ಅಂತ ಮನಸ್ಸಿನ ಮಾತು ಹೊರಹಾಕಿದ್ರು.

ಇನ್ನು ಕ್ವೀನ್ಸ್ ಪ್ರೀಮಿಯರ್ ಲೀಗ್‌ ಸೀಸನ್-2ನಲ್ಲಿ ಸಾಕಷ್ಟು ಮಂದಿ ಸ್ಯಾಂಡಲ್‌ವುಡ್‌‌‌ ನಟಿಯರು ಹಾಗೂ ಸೀರಿಯಲ್ ಕಲಾವಿದರು ಭಾಗಿಯಾಗಲಿದ್ದು, ರಮ್ಯಾ ಜೊತೆ ನೀತು, ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, ರಚನಾ ಇಂದರ್, ಶಾನ್ವಿ ಶ್ರೀವಾಸ್ತವ್, ಧನ್ಯಾ ರಾಮ್‌‌‌ಕುಮಾರ್ ಸಾಥ್ ನೀಡಿದ್ರು.

ಸಿನಿಮಾ ಹಾಗೂ ರಾಜಕಾರಣ ಎರಡೂ ಕ್ಷೇತ್ರಗಳಿಂದ ದೂರ ಉಳಿದಿರುವ ರಮ್ಯಾ, ಅದ್ಯಾವಾಗ ಬಣ್ಣ ಹಚ್ಚಿ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡ್ತಾರೋ ಅಂತ ಕೋಟ್ಯಂತರ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಅಷ್ಟೇ ಅಲ್ಲ, ಮಾಜಿ ಸಂಸದೆಯಾಗಿದ್ದ ರಮ್ಯಾ, ರಾಜಕಾರಣಕ್ಕೆ ವಾಪಸ್ ಆದ್ರೂ ಒಂದಷ್ಟು ಮಂದಿಗೆ ಸಿಂಹಸ್ವಪ್ನವಾಗಿ ಕಾಡಲಿದ್ದಾರೆ. ಸದಾ ಅನ್ಯಾಯವನ್ನು ಪ್ರಶ್ನಿಸುವ ಮನೋಭಾವದವರಾಗಿರೋ ಮೋಹಕತಾರೆ ಕೈಯಲ್ಲಿ ಪವರ್ ಇದ್ರೆ ಪ್ರಶ್ನಿಸುವ ಧ್ವನಿ ಮತ್ತಷ್ಟು ಗಟ್ಟಿಯಾಗಲಿದೆ ಅನ್ನೋದು ಹಲವರ ಅಭಿಪ್ರಾಯ.

Exit mobile version