QPL 2.0 ಲೋಗೋ ಬಿಡುಗಡೆ: ರಮ್ಯಾ, ಪ್ರಮೋದ್ ಶೆಟ್ಟಿ ಸಾಥ್

Web 2025 07 07t195244.925

ಬೆಂಗಳೂರಿನಲ್ಲಿ ಕ್ವೀನ್ಸ್ ಪ್ರೀಮಿಯರ್ ಲೀಗ್ (QPL) ದ್ವಿತೀಯ ಆವೃತ್ತಿಯ ಕ್ರೀಡೋತ್ಸವದ ಲೋಗೋವನ್ನು ಅಧಿಕೃತವಾಗಿ ಅನಾವರಣ ಮಾಡಲಾಯಿತು. ಕಳೆದ ವರ್ಷದ ಮೊದಲ ಆವೃತ್ತಿಯ ಭರ್ಜರಿ ಯಶಸ್ಸಿನ ನಂತರ, ಈ ಬಾರಿಯ ಆವೃತ್ತಿಯಲ್ಲಿ 12 ಹೊಸ ಕ್ರೀಡೆಗಳನ್ನು ಸೇರಿಸಿಕೊಳ್ಳಲಾಗಿದೆ. 25 ಮಿಲಿಯನ್ ಡಿಜಿಟಲ್ ವೀಕ್ಷಣೆಗಳು ಮತ್ತು 5000ಕ್ಕೂ ಅಧಿಕ ಪ್ರೇಕ್ಷಕರನ್ನು ಒಳಗೊಂಡ ಮೊದಲ ಆವೃತ್ತಿಯ ಯಶಸ್ಸಿನ ಬಳಿಕ, QPL 2.0 ಹೊಸ ಗುರಿಗಳೊಂದಿಗೆ ಮುನ್ನಡೆಯುತ್ತಿದೆ.

ಲೋಗೋ ಅನಾವರಣ ಕಾರ್ಯಕ್ರಮದಲ್ಲಿ QPL ಸ್ಥಾಪಕ ಮಹೇಶ್ ಗೌಡ, ನಟಿ ರಮ್ಯಾ, ನಟ ಪ್ರಮೋದ್ ಶೆಟ್ಟಿ, ಮತ್ತು ಬಾಲಿವುಡ್ ನಟಿ ಎಲಿ ಎವ್ರಾಮ್ ಉಪಸ್ಥಿತರಿದ್ದರು. ಪ್ರಮೋದ್ ಶೆಟ್ಟಿ QPL ಸಮಿತಿಯ ಸದಸ್ಯರಾಗಿದ್ದಾರೆ. ಕ್ರೀಡೆ, ಫ್ಯಾಷನ್, ಮತ್ತು ಸಿನಿಮಾ ಲೋಕದ ಗಣ್ಯರು ಕಾರ್ಯಕ್ರಮಕ್ಕೆ ಮೆರಗು ತಂದರು.

ADVERTISEMENT
ADVERTISEMENT

ಮಹೇಶ್ ಗೌಡ ಅವರು ಮಾತನಾಡಿ, “QPL 2.0 ಮೂಲಕ ನಾವು ಕೇವಲ ಮುಂದಿನ ಹಂತಕ್ಕೆ ಹೋಗುತ್ತಿಲ್ಲ. ಮಹಿಳೆಯರಿಗಾಗಿ ಕ್ರೀಡೆ ಮತ್ತು ಮನರಂಜನೆ ಕ್ಷೇತ್ರವನ್ನು ಪೂರ್ತಿಯಾಗಿ ಬದಲಾಯಿಸುತ್ತಿದ್ದೇವೆ. ಈ ಸೀಸನ್ನಲ್ಲಿ 50 ಮಿಲಿಯನ್ ಡಿಜಿಟಲ್ ವೀಕ್ಷಣೆಗಳ ಗುರಿಯನ್ನು ಹೊಂದಿದ್ದೇವೆ. ಭಾರತದೆಲ್ಲೆಡೆ ವಿಸ್ತರಿಸಲು ತಯಾರಾಗಿದ್ದೇವೆ,” ಎಂದರು.

ನಟಿ ರಮ್ಯಾ ಅವರು, “QPL ಮಹಿಳಾ ಕಲಾವಿದರನ್ನು ಬೆಂಬಲಿಸುವ ರೀತಿ ನನಗೆ ತುಂಬಾ ಇಷ್ಟವಾಗಿದೆ. ಈ ವೇದಿಕೆಯ ಮೂಲಕ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಕ್ರೀಡೆಗಳಲ್ಲಿ ಸಕ್ರಿಯ ಭಾಗವಹಿಸುವುದು ದೈಹಿಕ ಆರೋಗ್ಯಕ್ಕೆ ಸಹಾಯಕವಾಗಿದೆ ಮತ್ತು ಡಿಜಿಟಲ್ ಮಾಧ್ಯಮದಿಂದ ದೂರವಿರಲು ನೆರವಾಗುತ್ತದೆ,” ಎಂದರು.

ಪ್ರಮೋದ್ ಶೆಟ್ಟಿ ಅವರು, “QPL ಎಂದರೆ ಕ್ರೀಡೆಯೊಂದೇ ಅಲ್ಲ, ಗುರಿಯನ್ನು ಹೊಂದಿರುವ ಮನರಂಜನೆ. ಇದು ಸಿನಿಮಾ ಕ್ಷೇತ್ರ ಮತ್ತು ಕಾರ್ಪೊರೇಟ್ ಜಗತ್ತನ್ನು ಒಂದು ವೇದಿಕೆಯಲ್ಲಿ ಒಗ್ಗೂಡಿಸುತ್ತದೆ,” ಎಂದು ಹೇಳಿದರು.

Exit mobile version