ಮೋಹಕತಾರೆ ರಮ್ಯಾ ಸಿನಿಮಾ ಮತ್ತು ರಾಜಕೀಯ ರಂಗಗಳಿಂದ ದೂರ ಇದ್ರೂ ಸಹ ಕನ್ನಡಿಗರಿಂದ ಆಕೆ ಎಂದೂ ದೂರ ಆಗಿಲ್ಲ. ತಮ್ಮ ನಿಲುವು, ಧೋರಣೆಗಳನ್ನ ಆಗಿಂದಾಗ್ಗೆ ವ್ಯಕ್ತಪಡಿಸುತ್ತಾ ಬರ್ತಿರೋ ರಮ್ಯಾ, ಇದೀಗ ಕದನ ವಿರಾಮದ ಬಳಿಕ ಭಾರತದ ನಿಲುವಿನ ಬಗ್ಗೆ ಶ್ಲಾಘಿಸಿದ್ದಾರೆ. ಇಷ್ಟಕ್ಕೂ ಸ್ಯಾಂಡಲ್‌ವುಡ್ ಕ್ವೀನ್ ಹೇಳಿದ್ದೇನು ಅಂತೀರಾ..? ಜಸ್ಟ್ ವಾಚ್.
- ಭಾರತ ನೋಡಿ ಕಲಿಯಿರಿ.. ದೇಶದ ಪರ ರಮ್ಯಾ ಪೋಸ್ಟ್ !
- ಯುದ್ಧಕ್ಕೆ ಬ್ರೇಕ್.. ಕದನ ವಿರಾಮಕ್ಕೆ ಕರೆ ನೀಡಿದ್ದಕ್ಕೆ ಶ್ಲಾಘನೆ
- ಮೊದಲಿನಿಂದಲೂ ಯುದ್ಧದಿಂದ ಸಾವು ನೋವು ಅಂತಿದ್ರು
- ಮೋಹಕತಾರೆ ಶಾಂತಿಪ್ರಿಯೆ.. ಹಿಂಸೆಯನ್ನ ಒಪ್ಪದ ನಟಿ..!
ರಮ್ಯಾ.. ತಮ್ಮ ಅಂದ ಚೆಂದದಷ್ಟೇ ಒಳ್ಳೆಯ ಮನಸ್ಸುಳ್ಳ ಚೆಂದುಳ್ಳಿ ಚೆಲುವೆ. ಈಕೆ ಸಿನಿಮಾ ಬಿಟ್ಟು ರಾಜಕಾರಣಕ್ಕೆ ಹೋದಾಗಲೂ ಕೂಡ ತಾಯ್ನಾಡನ್ನ ಮರೆತಿರಲಿಲ್ಲ. ಅದರಲ್ಲೂ ದೇಶದ ಬಗ್ಗೆ ಈಕೆಗೆ ಎಲ್ಲಿಲ್ಲದ ಕಾಳಜಿ, ಗೌರವ, ಅಭಿಮಾನ. ಸದ್ಯ ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರಗಳಿಂದ ದೂರ ಉಳಿದಿರೋ ಮೋಹಕತಾರೆ, ಆಪರೇಷನ್ ಸಿಂದೂರ್ ಬಳಿಕ ಆದಂತಹ ಬೆಳವಣಿಗೆಗಳು, ದಾಳಿ- ಪ್ರತಿದಾಳಿಗಳು, ಕೊನೆಗೆ ಕದನ ವಿರಾಮಕ್ಕೆ ಭಾರತ ಒಪ್ಪಿಗೆ ಸೂಚಿಸಿದೆ. ಇವೆಲ್ಲವುಗಳ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.
ಮೊದಲಿನಿಂದಲೂ ಹಿಂಸೆ ಬೇಡ, ಎರಡೂ ರಾಷ್ಟ್ರಗಳ ಸೈನಿಕರು ಹುತಾತ್ಮರಾಗ್ತಾರೆ. ಸಾಕಷ್ಟು ಸಾವು ನೋವು ಅಂತಲೇ ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದ ರಮ್ಯಾ, ಇದೀಗ ಕದನ ವಿರಾಮಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿಲುವುಗಳನ್ನ ಗೌರವಿಸಿ, ಈ ನಡೆ ನಿಜಕ್ಕೂ ಇತರೇ ರಾಷ್ಟ್ರಗಳಿಗೆ ಮಾದರಿ ಆಗಲಿದೆ ಅಂತ ಅಭಿಪ್ರಾಯ ಪಟ್ಟಿದ್ದಾರೆ.
ಭಾರತದ ನಡೆ ಇತರೆ ರಾಷ್ಟ್ರಗಳಿಗೆ ಮಾದರಿ
‘ನಮ್ಮ ಸರ್ಕಾರ ಮತ್ತು ನಮ್ಮ ಸೇನೆಯ ಬಗ್ಗೆ ಹೆಮ್ಮೆ ಇದೆ. ಕಳೆದ ಕೆಲವು ವಾರಗಳಲ್ಲಿ ಅವರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ಶ್ಲಾಘಿಸಲೇಬೇಕು. ನಿಖರತೆಯಿಂದ ಕೇವಲ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿ, ಗಡಿ ಭಾಗದ ನಾಗರಿಕರ ಬಗ್ಗೆ ಸೂಕ್ಷ್ಮತೆ ವಹಿಸಿರುವುದು. ಇತರ ದೇಶಗಳು ಇದನ್ನು ನೋಡಿ ಕಲಿಯಬಹುದು. ಯುದ್ಧಕ್ಕೆ ಪ್ರೇರಿತಗೊಳ್ಳದಿರುವುದು ಮತ್ತು ಕದನ ವಿರಾಮಕ್ಕೆ ಕರೆ ನೀಡುವುದು ನಾವು ಮಾಡಬಹುದಾದ ಬುದ್ದಿವಂತಿಕೆ ಕೆಲಸ. ಇದು ಭಾರತದ ಮಾದರೀಯ ನಡವಳಿಕೆ’. -ರಮ್ಯಾ, ನಟಿ
ನಟಿ, ಮಾಜಿ ಸಂಸದೆ ರಮ್ಯಾ ಅವರ ಮಾತು ಅಕ್ಷರಶಃ ಸತ್ಯ. ಕೆಲವು ವಾರಗಳಿಂದ ಭಾರತ ಸರ್ಕಾರ ಈ ಬಿಕ್ಕಟ್ಟನ್ನು ನಿಯಂತ್ರಿಸೋಕೆ ಮಾಡ್ತಿರೋ ತಂತ್ರಗಳು, ಪ್ರತಿತಂತ್ರಗಳು ಹಾಗೂ ಅವುಗಳ ಎಕ್ಸಿಕ್ಯೂಷನ್ ನಿಜಕ್ಕೂ ಮೆಚ್ಚುವಂಥದ್ದು. ಯಾಕಂದ್ರೆ ನಮ್ಮ ಸರ್ಕಾರ ಹಾಗೂ ಸೇನೆಯ ಟಾರ್ಗೆಟ್ ಕೇವಲ ಭಯೋತ್ಪಾದಕರು ಹಾಗೂ ಅವರ ಶಿಬಿರಗಳೇ ಹೊರತು ನಾಗರಿಕರಲ್ಲ. ಹಾಗಾಗಿ ಅದನ್ನ ಸರ್ಕಾರ ಬಹಳ ಸೂಕ್ಷ್ಮವಾಗಿ ನಿಭಾಯಿಸಿದೆ ಎಂದಿದ್ದಾರೆ. ಅದು ನಿಜವೂ ಹೌದು.
ಇನ್ನು ಈ ಹಿಂದೆ ರಮ್ಯಾ ಅವರು ನಾನು ಶಾಂತಿಪ್ರಿಯೆ. ನನ್ನ ಪ್ರಕಾರ ಯುದ್ಧ ಆಗೋದು ಬೇಡ. ಅದ್ರಿಂದ ಬರೀ ಹಿಂಸೆ ಅನ್ನೋ ಸ್ಟೇಟ್‌ಮೆಂಟ್ ನೀಡಿದಾಗ ಅವರಿಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಬಂದಿತ್ತು. ಆದ್ರೀಗ ಈ ಪೋಸ್ಟ್‌ನಿಂದ ರಮ್ಯಾ ಅವರ ನಿಲುವುಗಳು ಬಹಳ ಸ್ಪಷ್ಟವಾಗಿವೆ. ಆಕೆಯ ಅಭಿಮಾನಿಗಳ ಜೊತೆ ಕನ್ನಡಿಗರು ಕೂಡ ರಮ್ಯಾ ದೇಶಾಭಿಮಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
