ವಿನಯ್ ರಾಜಕುಮಾರ್ ಜೊತೆ ರಮ್ಯಾ ಡೇಟಿಂಗ್? ಮೌನ ಮುರಿದ ರಮ್ಯಾ..!

Untitled design 2025 09 11t082752.943

ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಾಜ್‌ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್‌ಕುಮಾರ್ ಜೊತೆಗಿನ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಡೇಟಿಂಗ್ ವದಂತಿಗಳು ಹಬ್ಬಿದ್ದವು. ಆದರೆ ರಮ್ಯಾ ಸ್ವತಃ ಇದಕ್ಕೆ ಸ್ಪಷ್ಟನೆ ನೀಡಿ, ವದಂತಿಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.

ಈ ಎಲ್ಲಾ ಊಹಾಪೋಹಗಳಿಗೆ ಫುಲ್ ಸ್ಟಾಪ್ ಹೇಳಿದ ರಮ್ಯಾ, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯ ಮೂಲಕ ಸ್ಪಷ್ಟನೆ ನೀಡಿದ್ದಾರೆ. “ವಿನಯ್ ರಾಜ್‌ಕುಮಾರ್ ನನಗೆ ತಮ್ಮನಿದ್ದಂತೆ. ನೀವು ತುಂಬಾ ಫನ್ನಿ! ನಿಮ್ಮ ಊಹೆಗಳಿಗೆ ಬ್ರೇಕ್ ಹಾಕಿ” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಎಲ್ಲಾ ಗಾಳಿಸುದ್ದಿಗೆ ಬ್ರೇಕ್ ಹಾಕಿದ್ದಾರೆ.

ರಾಜ್ ಕುಟುಂಬದೊಂದಿಗೆ ರಮ್ಯಾ ಅವರ ಬಾಂಧವ್ಯವು ಹೊಸದಲ್ಲ. ಮೊದಲಿನಿಂದಲೂ ಅವರ ನಡುವೆ ಉತ್ತಮ ಸ್ನೇಹ ಮತ್ತು ಒಡನಾಟವಿದೆ. ಪಾರ್ವತಮ್ಮ ರಾಜ್‌ಕುಮಾರ್ ಅವರು ರಮ್ಯಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಪುನೀತ್ ರಾಜ್‌ಕುಮಾರ್ ಮತ್ತು ರಮ್ಯಾ ಉತ್ತಮ ಸ್ನೇಹಿತರಾಗಿದ್ದರು. ಅವರು ಮೂರು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು.

ಪುನೀತ್ ಅವರ ನಿಧನದ ನಂತರವೂ ರಮ್ಯಾ ರಾಜ್ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ. ವಿನಯ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ, ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸುತ್ತಿದ್ದಾರೆ. ಅವರು ‘ಸಿದ್ಧಾರ್ಥ’ ಮತ್ತು ‘ಗ್ರಾಮಾಯಣ’ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ರಮ್ಯಾ ಮತ್ತು ವಿನಯ್ ನ್ಯೂಯಾರ್ಕ್‌ನಲ್ಲಿ ಒಟ್ಟಿಗೆ ಪ್ರವಾಸ ಮಾಡಿದರು. ಅಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪುತ್ರಿ ವಂದಿತಾ ಕೂಡ ಇದ್ದರು. ಇಬ್ಬರು ಕೈ ಕೈ ಹಿಡಿದು ಸುತ್ತಾಡಿದ ಫೋಟೋಗಳು, ವಿನಯ್ ಹೆಗಲ ಮೇಲೆ ರಮ್ಯಾ ಮಲಗಿದ ಪೋಸ್, ಮ್ಯಾಗಜಿನ್ ಫೋಟೋಶೂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ನೆಟ್ಟಿಗರು ಇದನ್ನು ಡೇಟಿಂಗ್ ಎಂದು ಕರೆದು, ವದಂತಿಗಳನ್ನು ಹಬ್ಬಿಸಿದರು. ಕೆಲವರು “ರಾಜ್ ಕುಟುಂಬದೊಂದಿಗೆ ರಮ್ಯಾ ಮದುವೆಯಾಗುತ್ತಾರಾ?” ಎಂದು ಪ್ರಶ್ನಿಸಿದರು. ಆದರೆ ರಮ್ಯಾ ಅವರ ಸ್ಪಷ್ಟನೆ ನೀಡಿದ್ದಾರೆ.

Exit mobile version