ಡೆಲ್ಲಿಯ ಭಾರತ್ ಮಂಟಪದಲ್ಲಿ ಇಂದು ಸಂಜೆ ಮಹಾ ದೃಶ್ಯಕಾವ್ಯ ರಾಮಾಯಣ ಸಿನಿಮಾದ ಟ್ರೈಲರ್ ಲಾಂಚ್ ಆಗಲಿದೆ. ರಣ್‌ಬೀರ್ ಕಪೂರ್-ಯಶ್ ನಟನೆಯ ಈ ಚಿತ್ರ4 ಸಾವಿರ ಕೋಟಿಯಲ್ಲಿ ತಯಾರಾಗಿದ್ದು.. ಫ್ರಮ್ ಭಾರತ್ ಟು ದಿ ವರ್ಲ್ಡ್ ಅನ್ನೋ ಹೆಸರಲ್ಲಿ ಟ್ರೈಲರ್ ಲಾಂಚ್ ಆಗ್ತಿದೆ. ಅಮೆರಿಕಗೂ ಮೊದ್ಲೇ ಭಾರತದಲ್ಲಿ ದೃಶ್ಯಗುಚ್ಚ ಅನಾವರಣ ಆಗ್ತಿರೋದು ಇಂಟರೆಸ್ಟಿಂಗ್.
- ಇಂದು ಡೆಲ್ಲಿ ಭಾರತ್ ಮಂಟಪದಲ್ಲಿ ರಾಮಾಯಣ ಟ್ರೈಲರ್
- ಭಾರತದಲ್ಲಿ ಪ್ಯಾನ್ ಇಂಡಿಯಾ ಮೀಟ್.. ಯಶ್ ಹಾಜರ್?
- ಜುಲೈ 24ಕ್ಕೆ ಅಮೆರಿಕದಲ್ಲಿ ಟ್ರೈಲರ್ ಲಾಂಚ್ ಇವೆಂಟ್..!!
- ನವೆಂಬರ್-5ರ ದೀಪಾವಳಿಗೆ ರಣ್‌ಬೀರ್-ಯಶ್ ದರ್ಶನ
ರಾಮಾಯಣ.. ಎರಡು ಭಾಗಗಳಲ್ಲಿ ಬೆಳ್ಳಿತೆರೆ ಬೆಳಗೋಕೆ ತಯಾರಾಗ್ತಿರೋ ಭಾರತೀಯ ಚಿತ್ರರಂಗದ ಮಹಾ ದೃಶ್ಯಕಾವ್ಯ. ರಣ್‌ಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್, ಸಾಯಿ ಪಲ್ಲವಿ, ಅಮಿತಾಬ್ ಬಚ್ಚನ್, ಸನ್ನಿ ಡಿಯೋಲ್ ಅಂತಹ ಮೆಗಾ ಮಲ್ಟಿಸ್ಟಾರ್ ಸಿನಿಮಾಗೆ ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ನಮಿತ್ ಮಲ್ಹೋತ್ರಾ ಜೊತೆ ನಮ್ಮ ಯಶ್ ಕೂಡ ಸಹ ನಿರ್ಮಾಣ ಮಾಡಿರೋ ಈ ಚಿತ್ರದ ಎರಡೂ ಭಾಗಗಳ ಬಜೆಟ್ 3500 ರಿಂದ 4000 ಕೋಟಿ ಅನ್ನೋದು ಅಚ್ಚರಿ.
ಇದೇ ದೀಪಾವಳಿಗೆ ಅಂದ್ರೆ ನವೆಂಬರ್ 5ಕ್ಕೆ ರಾಮಾಯಣ ಮೊದಲ ಭಾಗ ಬಿಡುಗಡೆ ಆಗ್ತಿದ್ದು, ಜುಲೈ 24ರಂದು ಅಮೆರಿಕಾದ ಸ್ಯಾನ್ ಡಿಯಾಗೋನಲ್ಲಿ ಟ್ರೈಲರ್ ಲಾಂಚ್ ಇವೆಂಟ್ ನಡೆಯಲಿದೆ. ಆದ್ರೆ ಅದಕ್ಕೂ ಮುನ್ನ ಇಂದು ಸಂಜೆ ಡೆಲ್ಲಿಯಲ್ಲಿ ಪ್ಯಾನ್ ಇಂಡಿಯಾ ಪ್ರೆಸ್‌ಮೀಟ್ ಮಾಡಿ, ದೇಶೀಯ ಭಾಷೆಗಳಲ್ಲಿ ಟ್ರೈಲರ್‌ನ ಬಿಡುಗಡೆ ಮಾಡಲಿದೆ ಚಿತ್ರತಂಡ. ಈ ಇವೆಂಟ್‌ನಲ್ಲಿ ನಮ್ಮ ಗ್ಯಾರಂಟಿ ನ್ಯೂಸ್ ಪ್ರತಿನಿಧಿಯಾಗಿ ಫಿಲ್ಮ್ ಬ್ಯೂರೋ ಹೆಡ್ ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ ಭಾಗಿಯಾಗ್ತಿರೋದು ಹೆಮ್ಮೆ. ನಿರ್ದೇಶಕ, ನಿರ್ಮಾಪಕರು ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾಗಿ, ರಾಮಾಯಣ ಮೇಕಿಂಗ್‌ನ ಆ ಅಭೂತಪೂರ್ವ ಜರ್ನಿಯನ್ನ ಮುಕ್ತವಾಗಿ ಹಂಚಿಕೊಳ್ಳಲಿದ್ದಾರೆ. ರಾವಣ ಪಾತ್ರಧಾರಿ ನಮ್ಮ ಯಶ್ ಕೂಡ ಭಾಗಿಯಾಗೋ ಸಾಧ್ಯತೆಯಿದೆ.
ಎರಡೆರಡು ಟ್ರೈಲರ್‌ಗಳು ರಿಲೀಸ್ ಆಗಲಿವೆ ಅನ್ನೋ ಸುದ್ದಿ ಸುಳ್ಳು. ಆದ್ರೆ ಮೊದಲು ದೆಹಲಿಯ ಭಾರತ್ ಮಂಟಪದಲ್ಲಿ ಇಂಡಿಯನ್ ಲ್ಯಾಂಗ್ವೇಜಸ್‌ನಲ್ಲಿ ರಿಲೀಸ್ ಆಗಲಿದ್ದು, ನಂತ್ರ ಫಾರಿನ್ ಭಾಷೆಗಳಲ್ಲಿ ಅಮೆರಿಕಾದಲ್ಲಿ ರಾಮಾಯಣ ಟ್ರೈಲರ್ ಅನಾವರಣಗೊಳ್ಳಲಿದೆ ಅನ್ನೋದು ಪಕ್ಕಾ ಆಗಿದೆ. 3 ನಿಮಿಷ 29 ಸೆಕೆಂಡ್ ರನ್‌ಟೈಂ ಇರೋ ಟ್ರೈಲರ್‌ನ ನೋಡೋಕೆ ಕೋಟ್ಯಂತರ ಮಂದಿ ಚಿತ್ರಪ್ರೇಮಿಗಳು ಬಹಳ ಕಾತರದಿಂದ ಕಾಯ್ತಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
