ರಾಮ-ರಾವಣರ ಅಮರಕಥೆ ರಾಮಾಯಣ ಚಿತ್ರದ ಟೈಟಲ್ ಟೀಸರ್ ಸದ್ಯ ವಿಶ್ವ ಸಿನಿದುನಿಯಾದಲ್ಲಿ ಸಖತ್ ಸಂಚಲನ ಮೂಡಿಸುತ್ತಿದೆ. ರಣ್‌ಬೀರ್ ಕಪೂರ್-ಯಶ್ ಕಾಂಬೋನ ಈ ಮಾಸ್ಟರ್‌ಪೀಸ್ ಸಿನಿಮಾದ ಗತ್ತು, ಗಮ್ಮತ್ತು ಎಂಥದ್ದು ಅನ್ನೋದಕ್ಕೆ ಸಣ್ಣದೊಂದು ಝಲಕ್ ಮೂಲಕ ಉತ್ತರ ಕೊಟ್ಟಿದೆ ಟೀಂ. ಅದ್ಭುತ, ಅಮೋಘ, ಅದ್ವಿತೀಯ ಅನ್ನುವಂತಿರೋ ರಾಮಾಯಣ ದೃಶ್ಯ ವೈಭವವನ್ನು ನೀವೊಮ್ಮೆ ಕಣ್ತುಂಬಿಕೊಳ್ಳಲೇಬೇಕು.
- ಅದ್ಭುತ, ಅಮೋಘ, ಅದ್ವಿತೀಯ.. ‘ರಾಮಾಯಣ’ ದೃಶ್ಯ ವೈಭವ
- 8 ಆಸ್ಕರ್ ಪಡೆದ VFX ಸ್ಟುಡಿಯೋ.. ರಾಮ-ರಾವಣರ ಅಮರಕಥೆ
- ನೋಡುಗರ ನಾಡಿಮಿಡಿತ ಹೆಚ್ಚಿಸಿದ ರಾಕಿಂಗ್ ಸ್ಟಾರ್, ರಣ್‌ಬೀರ್
ಬ್ರಹ್ಮಾಂಡ ಸೃಷ್ಠಿಯಾದ ಸಮಯದಿಂದ ತ್ರಿಮೂರ್ತಿಗಳು ಈ ಬ್ರಹ್ಮಾಂಡವನ್ನು ರಕ್ಷಿಸುತ್ತಿದ್ದಾರೆ. ಬ್ರಹ್ಮ ಸೃಷ್ಠಿಕರ್ತ. ವಿಷ್ಣು ಸಂರಕ್ಷಕ. ಶಿವ ವಿನಾಶಕ. ಆದ್ರೆ ತ್ರಿಮೂರ್ತಿಗಳಿಂದಾದ ಸೃಷ್ಠಿಯೇ ಬ್ರಹ್ಮಾಂಡವನ್ನು ತನ್ನ ಮುಷ್ಠಿಯಲ್ಲಿ ಇಟ್ಟಿಕೊಳ್ಳಲು ಹೊರಟಾಗ, ಎಲ್ಲಾ ಯುದ್ಧಗಳಿಗೆ ಅಂತ್ಯ ಹಾಡುವಂತಹ ಮಹಾಯುದ್ಧ ಪ್ರಾರಂಭವಾಯಿತು. ಅದು 2.5 ಶತಕೋಟಿ ಜನರು 5 ಸಾವಿರ ವರ್ಷಗಳಿಂದ ಆರಾಧಿಸುತ್ತಿರುವ ರಾಮ ರಾವಣರ ಅಮರಕಥೆ. ಶಕ್ತಿ ಮತ್ತು ಪ್ರತೀಕಾರಕ್ಕೆ ರಾವಣ ಹೆಸರಾದರೆ, ಧರ್ಮ ಮತ್ತು ತ್ಯಾಗದ ಪ್ರತೀಕ ರಾಮ.
ಇದೆಲ್ಲವೂ ರಾಮಾಯಣದ ಗೊತ್ತಿರೋ ವಿಷಯಗಳೇ ಆದ್ರೂ, ಅದನ್ನ ಪ್ರಸ್ತುತ ಪಡಿಸಿರೋ ವಿಧಾನ ನಿಜಕ್ಕೂ ಅದ್ಭುತ. ರಾಮನಾಗಿ ರಣ್‌ಬೀರ್ ಕಪೂರ್, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣ-ಹನುಮಂತನಾಗಿ ರವಿ ದುಬೇ, ಸನ್ನಿ ಡಿಯೋಲ್ ನಟಿಸಿರೋ ರಾಮಾಯಣ ದಿ ಇಂಟ್ರಡಕ್ಷನ್ ಚಿತ್ರದ ಟೈಟಲ್ ಟೀಸರ್ ಇದು.
ನಮಿತ್ ಮಲ್ಹೋತ್ರಾ ನಿರ್ಮಾಣದ ರಾಮಾಯಣ ಚಿತ್ರ ಎರಡು ಭಾಗಗಳಲ್ಲಿ ತಯಾರಾಗ್ತಿದ್ದು, 2026ರ ದೀಪಾವಳಿಗೆ ಒಂದು, 2027ರ ದೀಪಾವಳಿ ಹಬ್ಬಕ್ಕೆ ಎರಡನೇ ಭಾಗ ಪ್ರೇಕ್ಷಕರ ಮುಂದೆ ಬರಲಿದೆ. ನಮ್ಮ ಸತ್ಯ.. ನಮ್ಮ ಇತಿಹಾಸದ ಈ ರಾಮಾಯಣದ ಸ್ಮಾಲ್ ಟೀಸರ್‌ನಲ್ಲಿ ಕೆಲ ಸೆಕೆಂಡ್‌ಗಳಲ್ಲೇ ಯಶ್ ಹಾಗೂ ರಣ್‌ಬೀರ್ ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದಾರೆ. ಮರವನ್ನು ಏರಿ ಬಿಲ್ಲಿಂದ ಬಾಣವನ್ನು ಬಿಡುವ ಶ್ರೀರಾಮ, ಭಿಕ್ಷುಕನ ಅವತಾರದಲ್ಲಿ ಮೈಗೆಲ್ಲಾ ಕಪ್ಪು ಬಟ್ಟೆ ಸುತ್ತಿಕೊಂಡು, ತನ್ನ ವಕ್ರ ಕಣ್ಣಿನಿಂದ ನೋಡುವ ಲಂಕಾಧಿಪತಿ ರಾವಣನ ಇಂಟ್ರಡಕ್ಷನ್ ನಿಜಕ್ಕೂ ರೋಮಾಂಚನಕಾರಿ ಆಗಿದೆ.
ಮುಂಬೈ, ಬೆಂಗಳೂರು, ಹೈದ್ರಾಬಾದ್, ಕೊಚ್ಚಿ, ಅಹಮದಾಬಾದ್, ನ್ಯೂ ಡೆಲ್ಲಿ, ಪುಣೆ ಸೇರಿದಂತೆ ಎಲ್ಲೆಡೆ ಏಕಕಾಲದಲ್ಲಿ ಟೀಸರ್ ಲಾಂಚ್ ಆಗಿದೆ. ಸದ್ಯ ಯಶ್ ಕುಟುಂಬ ಸಮೇತ ಅಮೆರಿಕ ಪ್ರವಾಸದಲ್ಲಿದ್ದು, ಫ್ಯಾನ್ಸ್ ಬೆಂಗಳೂರಿನ ಮಾಲ್‌ವೊಂದರಲ್ಲಿ ಟೀಸರ್ ಲಾಂಚ್ ಮಾಡಿ ಸಂಭ್ರಮಿಸಿದರು. ಗ್ಯಾರಂಟಿ ನ್ಯೂಸ್ ಜೊತೆ ಯಶ್ ಮೇಲಿಮ ಅಭಿಮಾನವನ್ನು ಮೆರೆದರು. ಇದು ಜಸ್ಟ್ ಫಸ್ಟ್‌ಲುಕ್ ಅಷ್ಟೇ.. ಐಮ್ಯಾಕ್ಸ್‌ಗಾಗಿ ಸ್ಪೆಷಲ್ ಆಗಿ ತಯಾರಿಸಿರೋ ಈ ಟೀಸರ್ ಹೀಗಿದೆ ಅಂದ್ರೆ, ಇನ್ನು ಸಿನಿಮಾದ ವಿಷ್ಯುವಲ್ಸ್ ನೋಡೋಕೆ ಹಂಡ್ರೆಟ್ ಪರ್ಸೆಂಟ್ ಟ್ರೀಟ್ ಕೊಡಲಿವೆ.