ಬಾಲಿವುಡ್ನ ಅತಿ ದೊಡ್ಡ ಮೈಥಾಲಾಜಿಕಲ್ ಬ್ರಹ್ಮಾಂಡ ತೆರೆಗೆ ಅಪ್ಪಳಿಸೋಕೆ ಕೌಂಟ್ಡೌನ್ ಶುರುವಾಗಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಹಾಗೂ ನಿರೀಕ್ಷಿತ ಸಿನಿಮಾ ಆದ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಭಾಗ 1’ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ದರ್ಶನ ಕೊಡಲಿದ್ದರೆ, ಲಂಕಾಧಿಪತಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಬ್ಬರಿಸಲು ಸಜ್ಜಾಗಿದ್ದಾರೆ. ಬ್ರಹ್ಮಾಂಡ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಹಾಗೂ ರೋಚಕ ಡಿಟೇಲ್ಸ್ ಇಲ್ಲಿದೆ ನೋಡಿ..
- ದಸರಾ ಹಬ್ಬಕ್ಕೆ ರಾಮಾಯಣ ಟೀಮ್ನಿಂದ ಬಿಗ್ ಅಪ್ಡೇಟ್
- ಅಡ್ವಾನ್ಸ್ ಬುಕಿಂಗ್ ಬಗ್ಗೆ ಕುತೂಹಲ ಹೆಚ್ಚಿಸಿದ ರಾಮಾಯಣ ಟೀಮ್
- ಐಮ್ಯಾಕ್ಸ್, ಪ್ರೀಮಿಯಂ ಫಾರ್ಮ್ಯಾಟ್ಗಳಲ್ಲಿ ರಿಲೀಸ್ ಪ್ಲ್ಯಾನ್
- ರಾಮಾಯಣ ಪಾತ್ರಗಳು ರಿವೀಲ್.. ತಾರಾಗಣಕ್ಕೆ ಮತ್ತಷ್ಟು ಬಲ
ತಿಂಗಳುಗಟ್ಟಲೆ ಹರಿದಾಡಿದ್ದ ಗೊಂದಲಗಳಿಗೆ ತೆರೆ ಎಳೆದಿರುವ ‘ರಾಮಾಯಣ: ಭಾಗ 1’ ಚಿತ್ರತಂಡ, ದಸರಾ ಹಬ್ಬದ ವಿಶೇಷವಾಗಿ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆರಂಭಿಸುವುದಾಗಿ ಅಧಿಕೃತ ಘೋಷಣೆ ಮಾಡಿದೆ. ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಬ್ರಹ್ಮಾಂಡ ಸಿನಿಮಾ ಬರುವ ನವೆಂಬರ್ 5, 2026 ರಂದು ವಿಶ್ವದಾದ್ಯಂತ ಐಮ್ಯಾಕ್ಸ್ ಸೇರಿದಂತೆ ಎಲ್ಲಾ ಪ್ರೀಮಿಯಂ ಫಾರ್ಮ್ಯಾಟ್ಗಳಲ್ಲಿ ಬಿಡುಗಡೆಯಾಗಲಿದೆ. “ಯೇ ರಾಮ್ ಕೆ ಯುಗ್ ಕಾ ಆರಂಭ ಹೈ” ಎನ್ನುವ ಮಂತ್ರದೊಂದಿಗೆ ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿರುವ ಹೊಸ ಪೋಸ್ಟರ್ಗಳು ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ಸದ್ದು ಮಾಡುತ್ತಿದ್ದು, ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿವೆ.
ಭಾರತೀಯ ಚಿತ್ರರಂಗದ ಸ್ಟಾರ್ ನಟರ ಮಹಾಸಂಗಮವೇ ಈ ಸಿನಿಮಾದಲ್ಲಿದೆ ಎನ್ನಬಹುದು. ಶ್ರೀರಾಮನಾಗಿ ರಣಬೀರ್ ಕಪೂರ್, ಸೀತಾ ಮಾತೆಯಾಗಿ ಸಾಯಿ ಪಲ್ಲವಿ ಹಾಗೂ ಲಕ್ಷ್ಮಣನಾಗಿ ರವಿ ದುಬೆ ವನವಾಸದ ಉಡುಪಿನಲ್ಲಿ ದೈವಿಕ ಕಳೆ ಚೆಲ್ಲಿದ್ದಾರೆ. ಇನ್ನು ಲಂಕಾಧಿಪತಿ ರಾವಣನಾಗಿ ‘ರಾಕಿಂಗ್ ಸ್ಟಾರ್’ ಯಶ್ ಅವರ ರೌದ್ರ ಮತ್ತು ಭೀಕರ ಲುಕ್ ಈಗಾಗಲೇ ಅಭಿಮಾನಿಗಳ ನಿದ್ದೆಗೆಡಿಸಿದೆ. ಇವರೊಂದಿಗೆ ಹನುಮಂತನಾಗಿ ಸನ್ನಿ ಡಿಯೋಲ್, ದಶರಥನಾಗಿ ಅರುಣ್ ಗೋವಿಲ್, ಕೈಕೇಯಿಯಾಗಿ ಲಾರಾ ದತ್ತಾ, ಹಾಗೂ ಜಟಾಯುವಾಗಿ ಅಮಿತಾಭ್ ಬಚ್ಚನ್ ಕಾಣಿಸಿಕೊಳ್ಳಲಿದ್ದು, ತೆರೆಮೇಲೆ ದೃಶ್ಯ ವೈಭವ ಮರುಕಳಿಸುವುದು ಖಚಿತವಾಗಿದೆ.
ಸೋನಿ ಪಿಕ್ಚರ್ಸ್ ವಿತರಣೆ ಹಾಗೂ ವಿವಿಧ ಹಂತದ ಬಿಡುಗಡೆ ದಿನಾಂಕಗಳ ಬಗ್ಗೆ ಹರಿದಾಡಿದ ವದಂತಿಗಳಿಗೆಲ್ಲಾ ಈಗ ಬ್ರೇಕ್ ಬಿದ್ದಿದೆ. ನವೆಂಬರ್ 5ರಂದೇ ವಿಶ್ವಾದ್ಯಂತ ಅದ್ದೂರಿಯಾಗಿ ಥಿಯೇಟರ್ಗಳಿಗೆ ಲಗ್ಗೆ ಇಡುತ್ತಿರುವ ಈ ಸಿನಿಮಾ, ಭಾರತೀಯ ಸಿನಿಪರಿಧಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಈಗಾಗಲೇ ಬಿಡುಗಡೆಯಾಗಿರುವ ಸೋಲೋ ಪೋಸ್ಟರ್ಗಳು ಮತ್ತು ಪಾತ್ರಗಳ ಪರಿಚಯದ ಹೈಪ್ ನೋಡ್ತಿದ್ರೆ, ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಸೃಷ್ಟಿಸಲಿರುವ ಸುನಾಮಿ ಇತಿಹಾಸ ಬರೆಯೋದ್ರಲ್ಲಿ ಯಾವುದೇ ಸಂಶಯವಿಲ್ಲ.
