ಧುರಂಧರ್ ಬೆಡಗಿ ಸಾರಾ ಅರ್ಜುನ್‌ಗೆ ಟಾಲಿವುಡ್‌ನಲ್ಲಿ ಬಿಗ್ ಆಫರ್

ರಾಮ್ ಚರಣ್-ಸುಕುಮಾರ್ ಕಾಂಬಿನೇಷನ್‌ನಲ್ಲಿ RC17 ಸಿನಿಮಾ

ಮುನ್ಸೂಚನೆ (25)

ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಮತ್ತು ಮಾಸ್ಟರ್ ಮೈಂಡ್ ಡೈರೆಕ್ಟರ್ ಸುಕುಮಾರ್ ಕಾಂಬಿನೇಷನ್ ಅಂದ್ರೆ  ಫಿಲ್ಮ್‌ನಗರ್‌ ನಲ್ಲಿ ಹವಾ ಇದೆ. ಈ ಬಿಗ್ ಪ್ರಾಜೆಕ್ಟ್‌ಗೆ ಈಗ ನ್ಯಾಷನಲ್ ಲೆವೆಲ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಸಾರಾ ಅರ್ಜುನ್ ನಾಯಕಿಯಾಗಿ ಗ್ರಾಂಡ್‌ ಎಂಟ್ರಿ ಕೊಡ್ತಿದ್ದಾರೆ. ಚೈಲ್ಡ್ ಆರ್ಟಿಸ್ಟ್‌ ಆಗಿ ಬಂದು ಹಿಟ್ ಸಿನಿಮಾಗಳಲ್ಲಿ ಜೀವಮಾನದ ನಟನೆ ನೀಡಿದ್ದ ಸಾರಾ ಅರ್ಜುನ್ ಈಗ ರಾಮ್ ಚರಣ್ ಜೊತೆ ರೊಮ್ಯಾನ್ಸ್ ಮಾಡಲಿರೋ ಕಂಪ್ಲೀಟ್ ಸ್ಟೋರಿ ಇಲ್ಲಿದೆ..

ಟಾಲಿವುಡ್ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಹಾಗೂ ಸ್ಟೈಲಿಶ್ ಡೈರೆಕ್ಟರ್ ಸುಕುಮಾರ್ ಜೋಡಿಯ ಮೋಸ್ಟ್ ಅವೈಟೆಡ್ ‘RC17’ ಸಿನಿಮಾ ಬಗ್ಗೆ ಸಿನಿವಲಯದಲ್ಲಿ ಈಗ ಬಿಗ್ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ‘ಪೆದ್ದಿ’ ಚಿತ್ರದ ಬಳಿಕ ಕೊಂಚ ವಿಶ್ರಾಂತಿ ಪಡೆದು, ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ರಾಮ್ ಚರಣ್ ಈಗ ಹೊಸ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಈ ಹೈ-ವೋಲ್ಟೇಜ್ ಪ್ರಾಜೆಕ್ಟ್‌ಗೆ ನಾಯಕಿಯಾಗಿ ‘ಧುರಂಧರ್’ ಮತ್ತು ‘ಧುರಂಧರ್ 2’ ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳ ಮನಸ್ಸು ಗೆದ್ದಿರುವ ನಟಿ ಸಾರಾ ಅರ್ಜುನ್ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಬಾಲ್ಯದಲ್ಲೇ ‘ಡಾಲಿ’ ಮತ್ತು ‘ಸೊನ್ನೆ ಕಿ ದಿಲ್ ಹೈ’ ಚಿತ್ರಗಳಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ಕಣ್ಣೀರು ತರಿಸಿದ್ದ, ಮಣಿರತ್ನಂ ಅವರ ಬ್ರಹ್ಮಾಂಡ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದಲ್ಲಿ ರಾಜಕುಮಾರಿಯಾಗಿ ಮಂಕಾಗಿಸಿದ್ದ ಸಾರಾ ಅರ್ಜುನ್, ಈಗ ಸುಕುಮಾರ್ ಸ್ಕ್ರಿಪ್ಟ್ ಮೆಚ್ಚಿ ರಾಮ್ ಚರಣ್ ಜೊತೆ ಸ್ಕ್ರೀನ್ ಶೇರ್ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಈ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಮುಂಬರುವ ದಸರಾ ಹಬ್ಬದ ವಿಶೇಷ ದಿನದಂದು ಈ ಮೆಗಾ ಪ್ರಾಜೆಕ್ಟ್ ಅತ್ಯಂತ ಅದ್ಧೂರಿಯಾಗಿ ಲಾಂಚ್ ಆಗಲಿದೆ. ತದನಂತರ ಡಿಸೆಂಬರ್ ತಿಂಗಳಿಂದ ಶೂಟಿಂಗ್ ಕಣಕ್ಕಿಳಿಯಲಿರುವ ಈ ಚಿತ್ರವನ್ನು ಪ್ರತಿಷ್ಠಿತ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಿಸುತ್ತಿದೆ. ಇನ್ನು ಮ್ಯೂಸಿಕ್ ವಿಚಾರದಲ್ಲೂ ಸೌತ್‌ನ ಮೋಸ್ಟ್ ವಾಂಟೆಡ್ ಅನಿರುದ್ಧ್ ರವಿಚಂದರ್ ಅಥವಾ ಪ್ರತಿಭಾವಂತ ಶಾಶ್ವತ್ ಸಚ್‌ದೇವ್ ಅವರಲ್ಲಿ ಒಬ್ಬರು ಸಂಗೀತ ನಿರ್ದೇಶಕರಾಗಿ ಅಂತಿಮಗೊಳ್ಳಲಿದ್ದು, ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.

ರಾಮ್ ಚರಣ್ ಮತ್ತು ಸುಕುಮಾರ್ ಮ್ಯಾಜಿಕಲ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಬಿಗ್ ಬಜೆಟ್ ಸಿನಿಮಾವು 2028ರಲ್ಲಿ ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಕಥೆಯ ಆಯ್ಕೆಯಲ್ಲಿ ಅತಿ ಹೆಚ್ಚು ಚ್ಯೂಸಿಯಾಗಿರುವ ಸಾರಾ ಅರ್ಜುನ್, ತಮ್ಮ ಹಿಂದಿನ ಚಿತ್ರಗಳ ಅದ್ಭುತ ಯಶಸ್ಸಿನ ಬಳಿಕ ಈಗ ರಾಮ್ ಚರಣ್ ಜೋಡಿಯಾಗಿ ನಟಿಸುತ್ತಿರುವುದು ಅವರ ಕೆರಿಯರ್‌ನಲ್ಲಿ ಬಿಗ್ಗೆಸ್ಟ್ ಟರ್ನಿಂಗ್ ಪಾಯಿಂಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

 

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version