2027ರ ದೀಪಾವಳಿಗಿಲ್ಲ ರಾಮಾಯಣ ಪಾರ್ಟ್-2 ಚಿತ್ರ..!

Untitled design (20)

ರಾಮಾಯಣ ಮಾಸ್ಟರ್‌ಪೀಸ್‌‌ಗಳಿಂದ ತಯಾರಾದ ವರ್ಲ್ಡ್‌‌ಕ್ಲಾಸ್ ಮೂವಿ. ಹಾಗಾದ್ರೆ ಯಾಱರ ಕಾಂಟ್ರಿಬ್ಯೂಷನ್ ಎಷ್ಟೆಷ್ಟಿದೆ..? ಮೈ ನವಿರೇಳಿಸುವ ರೋಮಾಂಚಕ ದೃಶ್ಯಗಳ ಹೊರತಾಗಿಯೂ ಸಹ ಸಿನಿಮಾದಲ್ಲಿರೋ ಮೈನಸ್ ಪಾಯಿಂಟ್ಸ್ ಏನು..? ರಾಮಾಯಣ ಪಾರ್ಟ್-2 ಯಾವಾಗ..? ವರ್ಲ್ಡ್‌‌ವೈಡ್ ಕಲೆಕ್ಷನ್ ಎಷ್ಟು ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ನಿಮಗಾಗಿ ಕಾಯ್ತಿದೆ.

ರಾಮಾಯಣ ಸಿನಿಮಾನ ಇಡೀ ವಿಶ್ವವೇ ಕೊಂಡಾಡ್ತಿರೋದಕ್ಕೆ ಕಾರಣ.. ಅದೊಂದು ಮಾಸ್ಟರ್‌ಪೀಸ್ ತಂತ್ರಜ್ಞರ ಕೈಚಳಕದಲ್ಲಿ ತಯಾರಾದ ವರ್ಲ್ಡ್‌ಕ್ಲಾಸ್ ಮೂವಿ ಅನ್ನೋದನ್ನ ಮರೆಯೋ ಹಾಗಿಲ್ಲ. ಹೌದು.. ಸದ್ಯ ಭಾರತೀಯ ಚಿತ್ರರಂಗದ ಹೈಯೆಸ್ಟ್ ಕಲೆಕ್ಷನ್ ಮೂವಿ ಅಂದ್ರೆ ಅದು ದಂಗಲ್. ಈ ರಾಮಾಯಣ ಚಿತ್ರದ ಡೈರೆಕ್ಟರ್ ಕೂಡ ದಂಗಲ್ ನಿರ್ದೇಶಿಸಿದ್ದ ನಿತೇಶ್ ತಿವಾರಿ ಅನ್ನೋದು ಇಂಟರೆಸ್ಟಿಂಗ್. ಇಲ್ಲಿ ನಿತೇಶ್ ತಿವಾರಿ ಸಿನಿಮಾಗಾಗಿ ಮಾಡಿರೋ ತಪಸ್ಸು ಪ್ರತಿ ಫ್ರೇಮ್‌‌ನಲ್ಲೂ ಎದ್ದು ಕಾಣ್ತಿದೆ. ಹಾಗಾಗಿಯೇ ದಂಗಲ್‌ನ ಕಲೆಕ್ಷನ್ ದಾಖಲೆಯನ್ನ ಮೀರಿಸೋ ಅಂತಹ ಮತ್ತೊಂದು ಎವರ್‌‌ಗ್ರೀನ್ ಸಿನಿಮಾನ ಆತ ತೆರೆಗೆ ತಂದಿದ್ದಾನೆ.

ಲಂಡನ್ ಬೇಸ್ಡ್ ವಿಎಫ್‌ಎಕ್ಸ್ ಕಂಪನಿ DNEG ಈ ರಾಮಾಯಣ ಸಿನಿಮಾಗಾಗಿ ಸಾಕಷ್ಟು ವರ್ಷಗಳಿಂದ ಸಾವಿರಾರು ತಂತ್ರಜ್ಞರ ಮೂಲಕ ಕೆಲಸ ಮಾಡಿದೆ. ಅಂದಹಾಗೆ ಈ ಸಂಸ್ಥೆಯಲ್ಲಿ ತಯಾರಾದ ಹಾಲಿವುಡ್‌ ಸಿನಿಮಾಗಳ ಕೈಂಕರ್ಯಕ್ಕೆ ಒಂದಲ್ಲ ಎರಡಲ್ಲ ಎಂಟು ಬಾರಿ ಆಸ್ಕರ್ ಅಕಾಡೆಮಿ ಅವಾರ್ಡ್‌ಗಳು ದೊರೆತಿವೆ. ಅದರ ಮಾಲೀಕ ರಾಮಾಯಣದ ನಿರ್ಮಾಪಕ ನಮಿತ್ ಮಲ್ಹೋತ್ರಾ. ಬೇರೆಯ ಸಿನಿಮಾಗಳಿಗೇ ಅಷ್ಟು ಆಸ್ಕರ್‌‌ಗಳನ್ನ ಪಡೆದಿರೋ ನಮಿತ್.. ಇನ್ನೂ ತನ್ನದೇ ಮನೆಯ ಪ್ರಾಡಕ್ಟ್ ಅಂದಾಗ ಇನ್ನೆಷ್ಟು ತಲೆಕೆಡಿಸಿಕೊಳ್ಳಲ್ಲ ನೀವೇ ಊಹಿಸಿ.

ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಹಾಗೂ ವರ್ಲ್ಡ್‌ಕ್ಲಾಸ್ ಕಂಪೋಸರ್ ಹ್ಯಾನ್ಸ್ ಝಿಮ್ಮರ್ ಇಬ್ಬರೂ ರಾಮಾಯಣ ಚಿತ್ರಕ್ಕೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಇವರಿಬ್ಬರ ಟ್ರ್ಯಾಕ್ ರೆಕಾರ್ಡ್ ದೊಡ್ಡದಿದ್ದು, ದಂತಕಥೆಗಳೇ ಈ ಸಿನಿಮಾಗಾಗಿ ತಮ್ಮ ಕೈಚಳಕ ತೋರಿಸಿರೋದು ವಿಶೇಷ.

ಕೆಜಿಎಫ್ ಸಿನಿಮಾಗಳಿಂದ ಕನ್ನಡ ಚಿತ್ರರಂಗದ ದಿಕ್ಕು, ದೆಸೆ ಬದಲಿಸಿ.. ಕನ್ನಡದ ಚಿತ್ರಗಳು ಗ್ಲೋಬಲ್ ಮಾರ್ಕೆಟ್‌‌ನಲ್ಲಿ ಸಾವಿರಾರು ಕೋಟಿ ಗಳಿಸಬಲ್ಲವು ಅನ್ನೋದನ್ನ ತೋರಿಸಿಕೊಟ್ಟ ಲೆಜೆಂಡ್ ಯಶ್. ಇಲ್ಲಿ ಯಶ್ ರಾವಣನಾಗಿ ಅಬ್ಬರಿಸುವುದರ ಜೊತೆ ಒನ್ ಆಫ್ ದಿ ಪ್ರೊಡ್ಯೂಸರ್ ಆಗಿ ಹೂಡಿಕೆ ಕೂಡ ಮಾಡಿರೋದು ಹೈಲೈಟ್. ಯಶ್‌ನ ಇಷ್ಟ ಪಡುವ, ಆರಾಧಿಸೋ ಅದೆಷ್ಟೋ ಮಂದಿ ವಿದೇಶಿಗರಿಗೆ ಈಗ ರಾವಣನಾಗಿ ಈ ಯಂಗೆಸ್ಟ್ ಸೂಪರ್ ಸ್ಟಾರ್ ಮತ್ತಷ್ಟು ಹತ್ತಿರ ಆಗಿದ್ದಾರೆ.

ರಣ್ಬೀರ್ ಕಪೂರ್‌ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕಲೆ ಅನ್ನೋದು ರಕ್ತಗತವಾಗಿಯೇ ಬಂದು ಬಿಟ್ಟಿದೆ. ಕಪೂರ್ ಕುಟುಂಬದ ಕುಡಿ ರಣ್ಬೀರ್ ನಟನಾ ಗತ್ತು ತೋರಿಸೋಕೆ ಬರ್ಫಿ, ಸಂಜು, ಅನಿಮಲ್ ಅಂತಹ ಸಿನಿಮಾಗಳೇ ಸಾಕ್ಷಿ. ರಾಮನಾಗಿ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ರಣ್ಬೀರ್ ಕಪೂರ್.

ಯೆಸ್.. ಇಡೀ ಭಾರತೀಯ ಚಿತ್ರರಂಗ ಇಷ್ಟ ಪಡುವಂತಹ ಚೆಲುವೆ ಸಾಯಿ ಪಲ್ಲವಿ ಸೀತೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈಕೆಯ ಸಹಜ ಹಾಗೂ ಸ್ವಾಭಾವಿಕ ನಟನೆ ಸಿನಿಮಾದ ತೂಕ ಹೆಚ್ಚಿಸಿದೆ. ಅಲ್ಲದೆ.. ವಿದ್ಯುತ್‌‌ಜೀವನಾಗಿ ವಿವೇಕ್ ಒಬೇರಾಯ್, ದಶರಥನಾಗಿ ಅರುಣ್ ಗೋವಿಲ್, ಲಕ್ಷ್ಮಣನಾಗಿ ರವಿ ದುಬೆ ಒಳ್ಳೆಯ ಮಾರ್ಕ್ಸ್‌ ಸ್ಕೋರ್ ಮಾಡಿದ್ದಾರೆ.

ಕೈಕೇಯಿಯಾಗಿ ಲಾರಾ ದತ್ತ, ಮಂಡೋದರಿಯಾಗಿ ಕಾಜಲ್, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್, ಜಟಾಯುಗೆ ಹಿನ್ನೆಲೆ ಧ್ವನಿ ನೀಡಿರೋ ಅನುಪಮ್ ಖೇರ್.. ಹೀಗೆ ಎಲ್ಲರೂ ಅವರವರ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪಂಕಜ್ ಕುಮಾರ್ ಹಾಗೂ ಮಹೇಶ್ ಲಿಮಾಯೆ ಸಿನಿಮಾಟೋಗ್ರಫಿ ಕೂಡ ಮೆಚ್ಚುವಂತಿದ್ದು, ಸಿನಿಮಾ ಒಂದೊಳ್ಳೆ ಪೇಂಟಿಂಗ್‌ನಂತೆ ಮೂಡಿಬಂದಿದೆ.

ಸಿನಿಮಾಗಳು ಅಂದ್ಮೇಲೆ ಟೀಕೆಗಳು ಸರ್ವೇ ಸಾಮಾನ್ಯ. ರಾಮಾಯಣಕ್ಕೆ ಎಲ್ಲೆಡೆಯಿಂದ ಔಟ್ ಆಫ್ ಔಟ್ ರೇಟಿಂಗ್ ವ್ಯಕ್ತವಾಗ್ತಿದೆ. ಆದ್ರೆ ಬ್ಯಾಗ್ರೌಂಡ್ ಮ್ಯೂಸಿಕ್ ವಿಷಯಕ್ಕೆ ಬಂದ್ರೆ ನಿರೀಕ್ಷಿತ ಮಟ್ಟಕ್ಕಿಲ್ಲ ಅನ್ನೋದು ಸ್ಪಷ್ಟ. ಬಹುಶಃ ರಾಜಮೌಳಿಯ ಬಾಹುಬಲಿ ಸಿನಿಮಾ ಹಾಗೂ ಅದಕ್ಕೆ ಸ್ಕೋರ್ ಮಾಡಿಕೊಟ್ಟಿರೋ ಕೀರವಾಣಿಯವರ ರೀತಿ ಜನಕ್ಕೆ ನಿರೀಕ್ಷೆ ಇರಬಹುದು. ಅಲ್ಲದೆ.. ಕನ್ನಡದ ಸಂಭಾಷಣೆ ತುಂಬಾ ಸೀದಾ ಸಾದಾ ಇದೆ. ಮನಸ್ಸಲ್ಲಿ ಉಳಿಯುವಂತಹ ಯಾವುದೇ ಅದ್ಭುತ ಪದಬಳಕೆ ಆಗದೇ ಇರೋದು ಬೇಸರದ ವಿಷಯ. ಇವೆರಡು ಹೊರತು ಪಡಿಸಿದ್ರೆ ಉಳಿದಂತೆ ರಾಮಾಯಣ ಅತ್ಯದ್ಭುತ ಸಿನಿಮಾ.

ಚಿತ್ರತಂಡ ಈ ಹಿಂದೆಯೇ ಅನೌನ್ಸ್ ಮಾಡಿದಂತೆ ಮುಂದಿನ ವರ್ಷ ಅಂದ್ರೆ 2027ರ ದೀಪಾವಳಿಗೆ ರಾಮಾಯಣ ಪಾರ್ಟ್-2 ರಿಲೀಸ್ ಮಾಡಬೇಕಿತ್ತು. ಆದ್ರೆ ಅದು ಮತ್ತೊಂದು ವರ್ಷ ಪೋಸ್ಟ್‌ಪೋನ್ ಆಗಿದೆ. ರಾಮಾಯಣ ಮೊದಲ ಭಾಗದ ಕ್ಲೈಮ್ಯಾಕ್ಸ್ ಬಳಿಕ ಕೊನೆಯಲ್ಲಿ ಪಾರ್ಟ್-2 ಸಿನಿಮಾ 2028ಕ್ಕೆ ಅನ್ನೋದು ಈಗಲೇ ಸ್ಪಷ್ಟಪಡಿಸಿದೆ ಟೀಂ. ಇಂತಹ ಅದ್ಭುತ ದೃಶ್ಯಕಾವ್ಯಗಳನ್ನ ಕಟ್ಟಲು ಕೊಂಚ ಜಾಸ್ತಿನೇ ಕಾಲಾವಕಾಶ ಬೇಕಾಗುತ್ತೆ ಅನ್ನೋದನ್ನ ಈ ಮೂಲಕ ಮನವರಿಕೆ ಮಾಡಿದೆ.

ಅಂದಹಾಗೆ ರಾವಣ ಸೀತೆಯನ್ನ ಅಪಹರಿಸಿ, ಲಂಕೆಯಲ್ಲಿ ಬಂಧಿಸುತ್ತಾನೆ. ಜಟಾಯುವಿನ ಅಂತ್ಯದೊಂದಿಗೆ ಮೊದಲ ಭಾಗ ಮುಕ್ತಾಯವಾಗುತ್ತೆ. ಎರಡನೇ ಭಾಗಕ್ಕೆ ವಾಯುಪುತ್ರ, ಪವನ ಸುತ, ಹನುಮಂತನ ಎಂಟ್ರಿ ಆಗಲಿದೆ. ಸನ್ನಿ ಡಿಯೋಲ್ ಹನುಮನ ಪಾತ್ರ ಮಾಡ್ತಿದ್ದು, ಅದ್ರ ಹಿಂಟ್ ಕೂಡ ಕ್ಲೈಮ್ಯಾಕ್ಸ್‌‌ನಲ್ಲಿ ತೋರಿಸಲಾಗಿದೆ.

ರಾಮಾಯಣ ಕಣ್ತುಂಬಿಕೊಂಡ ಯಶ್ ತಾಯಿ ಪುಷ್ಪಮ್ಮನ ಖುಷಿಗೆ ಪಾರವೇ ಇಲ್ಲ. ಮಗನ ಸಾಧನೆಗೆ ಭಾವನಾತ್ಮಕವಾಗಿ ಪೋಸ್ಟ್ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ತಮಗಾಗ್ತಿರೋ ಹೆಮ್ಮೆಯನ್ನ ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ.. ನಟ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ರಿಷಬ್ ಶೆಟ್ಟಿ ಸೇರಿದಂತೆ ಸಾಕಷ್ಟು ಮಂದಿ ಸೂಪರ್ ಸ್ಟಾರ್ಸ್ ರಾಮಾಯಣ ತಂಡಕ್ಕೆ ಹಾಗೂ ನಟ ಯಶ್‌ಗೆ ಮನಸಾರೆ ತುಂಬು ಹೃದಯದಿಂದ ಶುಭಾಶಯ ಕೋರಿದ್ದಾರೆ.

ರಿಲೀಸ್‌ಗೂ ಮೊದಲೇ 1130 ಕೋಟಿ ರೂಪಾಯಿಯಷ್ಟು ದೊಡ್ಡ ಮಟ್ಟದಲ್ಲಿ ಬ್ಯುಸಿನೆಸ್ ಮಾಡಿದ್ದ ರಾಮಾಯಣ ಸಿನಿಮಾ.. ಇದೀಗ ಫಸ್ಟ್ ಡೇ ವರ್ಲ್ಡ್‌ವೈಡ್ ಸುಮಾರು 180 ಕೋಟಿಗೂ ಅಧಿಕ ರೂಪಾಯಿ ಗಳಿಸಿದೆ. ಇದು ನಮ್ಮ ಮಹಾಕಾವ್ಯ ರಾಮಾಯಣಕ್ಕಿರೋ ಸ್ಟ್ರೆಂಥ್ ಅನ್ನೋದನ್ನ ಇದು ಮತ್ತೊಮ್ಮೆ ಪ್ರೂವ್ ಮಾಡಿದೆ. ಒಟ್ಟಾರೆ.. ಕರ್ನಾಟಕ ಸೇರಿದಂತೆ ದೇಶದಾದ್ಯಂತ ಸಿನಿಮಾಗೆ ಔಟ್ ಸ್ಟ್ಯಾಂಡಿಂಗ್ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಸುಮಾರು 100ಕ್ಕೂ ಅಧಿಕ ದೇಶಗಳಲ್ಲಿ ಇಂಗ್ಲಿಷ್ ಅವತರಣಿಕೆ ಕೂಡ ರಿಲೀಸ್ ಆಗಿದ್ದು.. ಅನಿವಾಸಿ ಭಾರತೀಯರ ಜೊತೆ ವಿದೇಶಿಗರಿಗೂ ಈ ಚಿತ್ರ ರುಚಿಸುತ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version