ಮುಂಬೈ ವೇವ್ಸ್ ಸಮ್ಮಿಟ್‌‌ನಲ್ಲಿ ರಾಮಾಯಣ ಗ್ಲಿಂಪ್ಸ್..!

ರಾಕಿ-ರಣ್‌ಬೀರ್ ರಾಮಾಯಣ ಟೀಸರ್‌ಗೆ ದಿನಗಣನೆ

Untitled design (99)

ರಾಮಾಯಣ.. ಬಾಲಿವುಡ್ ಅಂಗಳದಲ್ಲಿ ಸಾವಿರಾರು ಕೋಟಿಯಲ್ಲಿ ತಯಾರಾಗ್ತಿರೋ ಮಹಾ ದೃಶ್ಯಕಾವ್ಯ. ರಣ್‌ಬೀರ್ ಕಪೂರ್- ರಾಕಿಭಾಯ್ ಕಾಂಬೋನ ಈ ಸಿನಿಮಾ, ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿತ್ತು. ಆದ್ರೀಗ ಫಸ್ಟ್ ಗ್ಲಿಂಪ್ಸ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಅದು ಯಾವಾಗ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಈ ಸ್ಪೆಷಲ್ ಪ್ಯಾಕೇಜ್.

ADVERTISEMENT
ADVERTISEMENT

ರಾಮಾಯಣ.. ಹತ್ತು ಹಲವು ಕಾರಣಗಳಿಂದ ಬಾಲಿವುಡ್‌‌ನಲ್ಲಿ ಸದ್ಯ ಚಿತ್ರೀಕರಣ ಆಗ್ತಿರೋ ಈ ಸಿನಿಮಾ ಅತೀವ ನಿರೀಕ್ಷೆ ಮೂಡಿಸಿದೆ. ಈ ಹಿಂದೆ ಅದೇ ಹಿಂದಿ ಚಿತ್ರರಂಗದಲ್ಲಿ ತಯಾರಾದ ಆದಿಪುರುಷ್ ಸಿನಿಮಾ ಸಾಕಷ್ಟು ವಿವಾದಗಳಿಗೆ ಗುರಿಯಾಗಿತ್ತು. ಆದ್ರೀಗ ಆ ಕಳಂಕದಿಂದ ಮುಕ್ತವಾಗಲು ಬಿಟೌನ್ ದೊಡ್ದ ಮಟ್ಟದಲ್ಲೇ ಪ್ಲ್ಯಾನ್ ಮಾಡಿದೆ.

ಆಮೀರ್ ಖಾನ್ ನಟನೆಯ ದಂಗಲ್ ಸಿನಿಮಾದ ಡೈರೆಕ್ಟರ್ ನಿತೇಶ್ ತಿವಾರಿ ರಾಮಾಯಣ ಸಿನಿಮಾಗೆ ಌಕ್ಷನ್ ಕಟ್ ಹೇಳ್ತಿದ್ದು, ಒಂದಲ್ಲ ಎರಡೆರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆದ ಬಳಿಕ ಸೆಟ್ಟೇರಿದ ಈ ಸಿನಿಮಾದಲ್ಲಿ ರಣ್‌ಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ರಾಮನಾಗಿ ರಣ್‌ಬೀರ್ ಕಾಣಿಸಿಕೊಂಡ್ರೆ, ಸೀತೆಯಾಗಿ ಸಾರಿ ಪಲ್ಲವಿ ಸಿನಿಮಾದ ಚೆಲುವು ಹೆಚ್ಚಿಸಲಿದ್ದಾರೆ. ಇನ್ನು ನಮ್ಮ ಹೆಮ್ಮೆಯ ಕನ್ನಡಿಗ, ಯಂಗೆಸ್ಟ್ ಸೂಪರ್ ಸ್ಟಾರ್ ಯಶ್ ಲಂಕೇಶ್ವರ ರಾವಣನ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಸಿನಿಮಾನ ಸಾವಿರ ಕೋಟಿಯಲ್ಲಿ ಬೃಹತ್ ಸೆಟ್‌‌ಗಳ ಮೂಲಕ ಅದ್ಭುತವಾಗಿ ವ್ಹಾವ್ ಫೀಲ್ ಕೊಡೋ ರೇಂಜ್‌ಗೆ ಕಟ್ಟಲಾಗುತ್ತಿದೆ.

ಅಂದಹಾಗೆ ಈ ರಾಮಾಣ ಸಿನಿಮಾ ಒಂದಲ್ಲ, ಎರಡೆರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. 2026ರ ದೀಪಾವಳಿಗೆ ಮೊದಲ ಭಾಗ, 2027ರ ದೀಪಾವಳಿಗೆ ಎರಡನೇ ಭಾಗ ತೆರೆಗೆ ಬರಲಿದೆ. ಅಂದಹಾಗೆ ಬಾಹುಬಲಿ, ಕೆಜಿಎಫ್ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ವರ್ಕೌಟ್ ಆಗಿದ್ದವು. ಇದೀಗ ರಾಮಾಯಣ ಕೂಡ ಆ ನಿಟ್ಟಿನಲ್ಲಿ ಒಂದೊಳ್ಳೆ ಫ್ರಾಂಚೈಸ್ ಮೂವಿಯಾಗಿ ಹೊರಹೊಮ್ಮುವ ಲಕ್ಷಣ ತೋರಿದೆ.

ರಿಲೀಸ್ ಡೇಟ್ ಏನೋ ಚಿತ್ರತಂಡ ಈ ಹಿಂದೆಯೇ ಅನೌನ್ಸ್ ಮಾಡಿತ್ತು. ಆದ್ರೆ ಸಿನಿಮಾದ ಗ್ಲಿಂಪ್ಸ್ ಆಗಲಿ, ಫಸ್ಟ್ ಲುಕ್ ಆಗಲಿ ಇಲ್ಲಿವರೆಗೂ ಹೊರಬಿದ್ದಿಲ್ಲ. ಅದಕ್ಕೀಗ ಸಮಯ ಸನಿಹಿಸಿದೆ. ಹೌದು.. ಮುಂಬೈನಲ್ಲಿ ಇದೇ ಮೇ 1ರಿಂದ 4ನೇ ತಾರೀಖಿನವರೆಗೆ ನಡೆಯಲಿರೋ ವೇವ್ಸ್ ಸಮ್ಮಿಟ್‌‌ನಲ್ಲಿ ರಾಮಾಯಣ ಚಿತ್ರದ ಫಸ್ಟ್ ಗ್ಲಿಂಪ್ಸ್ ರಿವೀಲ್ ಆಗ್ತಿದೆ. ಅಲ್ಲಿ ಭಾರತೀಯ ಚಿತ್ರರಂಗದ ಜೊತೆ ಹಾಲಿವುಡ್ ಮಂದಿ ಸೇರಿದಂತೆ ವಿಶ್ವದ ಮೂಲೆ ಮೂಲೆಗಳಿಂದ ಎಲ್ಲಾ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಭಾಗಿಯಾಗಲಿದ್ದು, ಆ ವೇದಿಕೆಯಲ್ಲಿ ಲಾಂಚ್ ಆಗ್ತಿರೋದು ಇಂಟರೆಸ್ಟಿಂಗ್ ಅನಿಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version