ಬಿಟೌನ್ ರಾಮಾಯಣಕ್ಕೆ ರಾಕೀಭಾಯ್ ಎಂಟ್ರಿಕೊಟ್ಟಾಗಿನಿಂದ ಸಿಕ್ಕಾಪಟ್ಟೆ sensation ಕ್ರಿಯೇಟ್ ಮಾಡಿದೆ. ಅದ್ರಲ್ಲೂ ಸಿನಿಮಾದ ಸ್ಟಾರ್ ಕ್ಯಾಸ್ಟ್ ಮೇಲೆ ಗ್ಲೋಬಲ್ ಆಡಿಯೆನ್ಸ್ ಕಣ್ಣಿದೆ. ಈಗಾಗಲೇ ರಾಮಾಯಣ್ ಸಿನಿಮಾದಲ್ಲಿ ದೊಡ್ಡ ಸ್ಟಾರ್ಗಳೇ ಇದ್ದಾರೆ. ಸದ್ಯ ಈಗ ರಾವಣನ ಸಹೋದರಿ ಮಂಡೋದರಿ ಪಾತ್ರಕ್ಕೆ ಮತ್ತೊಬ್ಬ ಸ್ಟಾರ್ ನಟಿಯ ಆಗಮನವಾಗಿದೆ. ಹಾಗಾದ್ರೆ ಯಾರು ಆ ಸ್ಟಾರ್ ನಟಿ..? ಮಂಡೋದರಿ ಪಾತ್ರ ಮಾಡೋದು ಅವರೇನಾ.? ಮಂಡೋದರಿ ಪಾತ್ರಕ್ಕೆ ಆ ನಟಿ ಪಡೆದುಕೊಳ್ತಾಯಿರೋ ಸಂಭಾವನೆ ಎಷ್ಟು ಅನ್ನೋದನ್ನ ಹೇಳ್ತೀವಿ ಈ ಸ್ಟೋರಿ ಓದಿ.
- ಪೌರಾಣಿಕ ಸಿನಿಮಾದ ಸಾಹಸದಲ್ಲಿ ನಿತೇಶ್ ತಿವಾರಿ
- ರಾಮಾಯಣ ಅಖಾಡಕ್ಕೆ ಸ್ಟಾರ್ ಹೀರೋಯಿನ್ ಎಂಟ್ರಿ
- ರಾವಣ ಯಶ್ ಗೆ ಸಿಕ್ಕೇಬಿಟ್ಲು ಮಂಡೋದರಿ..!
ಹಿಂದಿಯ ರಾಮಾಯಣ್ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸದ್ದು ಸುದ್ದಿಯಾಗುತ್ತಲೇ ಇದೆ. ಅದರಲ್ಲೂ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ರಾಮಾಯಣ್ ಸಿನಿಮಾಗೆ ಎಂಟ್ರಿಕೊಟ್ಟಾಗಿನಿಂದ ರಾಮಾಯಣ್ ಸಿನಿಮಾದ ರೇಂಜ್ ಇನ್ನಷ್ಟು ಚೇಂಜ್ ಆಗಿದೆ. ಪೌರಾಣಿಕ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ರೆಗ್ಯೂಲರ್ ಕಮರ್ಷಿಯಲ್ ಸಿನಿಮಾಗಿಂತ ಈ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತೆ. ಒಂದೊಂದೂ ಪಾತ್ರವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕಾಗುತ್ತೆ. ಇಂತ ಸಾಹಸಕ್ಕೆ ನಿರ್ದೇಶಕ ನಿತೇಶ್ ತಿವಾರಿ ಕೈ ಹಾಕಿದ್ದಾರೆ.
‘ರಾಮಾಯಣ’ದಂತಹ ಮಹಾಕಾವ್ಯಕ್ಕೆ ಸಿನಿಮಾ ರೂಪ ಕೊಡುವುದಕ್ಕೆ ಅಷ್ಟು ಸುಲಭ ಅಲ್ಲವೇ ಅಲ್ಲಾ. ಅದಕ್ಕೆ ಸರಿಯಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬಾಲಿವುಡ್‌ನಲ್ಲಿ ಶುರುವಾಗಿರುವ ‘ರಾಮಾಯಣ’ ಸಿನಿಮಾಗೂ ಪಾತ್ರ ಆಯ್ಕೆಯೇ ದೊಡ್ಡ ಸವಾಲಾಗಿತ್ತು. ಸದ್ಯ ಸಿನಿಮಾ ಚಿತ್ರೀಕರಣ ಆರಂಭ ಆಗಿದ್ದರೂ, ನಿರ್ದೇಶಕ ನಿತೇಶ್ ತಿವಾರಿ ಇನ್ನೂ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಾರೆ ಅನ್ನೋ ಸುಳಿವನ್ನು ಬಿಟ್ಟುಕೊಟ್ಟಿಲ್ಲ.
ಶಿವನ ಪಾತ್ರದಲ್ಲಿ ಗ್ರೀಕ್ ಗಾಡ್ ಹೃತಿಕ್ ರೋಷನ್ .?
ಹೌದು..ನಿತೇಶ್ ತಿವಾರಿ ಮೋಸ್ಟ್ anticipated ಸಿನಿಮಾ ‘ರಾಮಾಯಣ’ದಲ್ಲಿ ಪಡ್ಡೆ ಹುಡುಗರ ದಿಲ್ ಕಿ ದಡ್ಕನ್ ನಟಿ ಕಾಜಲ್ ಅಗರ್ವಾಲ್ ಮಂಡೋದರಿ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈ ಮೂಲಕ ರಾವಣ ಯಶ್ ಜೊತೆಗೆ ಮಂಡೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಬಾಲಿವುಡ್ ವರದಿಗಳ ಪ್ರಕಾರ ಈ ಹಿಂದೆ ಸಾಕ್ಷಿ ತನ್ವರ್ ಮಂಡೋದರಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಈ ಅದೃಷ್ಟ ಕಾಜಲ್ ಅಗರ್ ವಾಲ್ ಪಲಾಗಿದೆ ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ತೆಲುಗಿನ ಪ್ಯಾನ್ ಇಂಡಿಯಾ ‘ಕಣ್ಣಪ್ಪ’ ಸಿನಿಮಾದಲ್ಲೂ ಕಾಜಲ್ ಅಗರ್ವಾಲ್ ಪಾರ್ವತಿಯಾಗಿ ಕಾಣಿಸಿಕೊಂಡಿದ್ದಾರೆ. ಆದ್ರೂ ಮಂಡೋದರಿಯ ಪಾತ್ರವನ್ನು ತಿರಸ್ಕಿರಸದೇ ಒಪ್ಪಿಕೊಂಡಿದ್ದಾರಂತೆ.
ವರದಿ: ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್