ಆಂಧ್ರ ಕಿಂಗ್ ಆದ ಉಪ್ಪಿ.. ರಾಮ್ ‘ಸೂಪರ್’ ಫ್ಯಾನ್..!

ಕೂಲಿ ಬ್ಲಾಕ್ ಬಸ್ಟರ್.. ಟಾಲಿವುಡ್‌‌ನಲ್ಲೂ ಬುದ್ಧಿವಂತ ಬ್ಯುಸಿ..!

Untitled design 2025 10 17t222631.323

ಇಸ್ಮಾರ್ಟ್‌ ಶಂಕರ್ ರಾಮ್ ಪೋತಿನೇನಿ ಇದೀಗ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವ್ರ ಸೂಪರ್ ಫ್ಯಾನ್‌‌ಬಾಯ್ ಆಗಿ ಮಿಂಚೋಕೆ ಸಜ್ಜಾಗಿದ್ದಾರೆ. ಆಂಧ್ರದಲ್ಲಿ ಅಷ್ಟೆಲ್ಲಾ ಸೂಪರ್ ಸ್ಟಾರ್‌‌ಗಳಿದ್ದುಕೊಂಡು ನಮ್ಮ ಲೆಜೆಂಡ್ ಉಪೇಂದ್ರ ಅವರನ್ನೇ ಅದಕ್ಕೆ ಆರಿಸಿಕೊಂಡಿದ್ಯಾಕೆ..? ಆ ಚಿತ್ರದ ಹಿಂದಿನ ಅಸಲಿಯತ್ತೇನು..? ಅನ್ನೋದ್ರ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.

ಇತ್ತೀಚೆಗೆ ರಿಲೀಸ್ ಆಗಿರೋ ಈ ಚಿತ್ರದಲ್ಲಿ ಇಸ್ಮಾರ್ಟ್‌ ಶಂಕರ್ ಖ್ಯಾತಿಯ ರಾಮ್ ಪೋತಿನೇನಿ ನಾಯಕನಟನಾಗಿ ಲೀಡ್‌‌ನಲ್ಲಿ ಬಣ್ಣ ಹಚ್ಚಿದ್ದಾರೆ. ರೀಸೆಂಟ್ ಆಗಿ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ನಟನೆಯ ಕಿಂಗ್‌ಡಮ್‌‌ನಲ್ಲಿ ಬಣ್ಣ ಹಚ್ಚಿದ್ದ ಭಾಗ್ಯಶ್ರೋ ಬೋರ್ಸೆ ಇಲ್ಲಿ ರಾಮ್‌ಗೆ ಜೋಡಿಯಾಗಿ ಕಾಣಸಿಗಲಿದ್ದಾರೆ.

ಆಂಧ್ರ ಕಿಂಗ್ ಆದ ಉಪ್ಪಿ.. ರಾಮ್ ‘ಸೂಪರ್’ ಫ್ಯಾನ್..!

ಸೂಪರ್ ಸ್ಟಾರ್ ಉಪ್ಪಿ ಡೈಹಾರ್ಡ್‌ ಫ್ಯಾನ್ ಬಯೋಗ್ರಫಿ

ಚಿತ್ರದ ಎರಡು ಸಾಂಗ್ ಟೀಸರ್‌‌ಗಳು ರಿಲೀಸ್ ಆಗಿದ್ದವು. ಆದ್ರೀಗ ಟೀಸರ್ ಎಲ್ಲರ ಹುಬ್ಬೇರುವಂತೆ ಮಾಡಿದೆ. ಅದಕ್ಕೆ ಕಾರಣ ಚಿತ್ರದಲ್ಲಿರೋ ಸೂಪರ್ ಸ್ಟಾರ್ ಉಪೇಂದ್ರ. ಹೌದು.. ನಮ್ಮ ಹೆಮ್ಮೆಯ ಕನ್ನಡಿಗ, ಲೆಜೆಂಡ್ ಉಪ್ಪಿ ಕೂಡ ಬಣ್ಣ ಹಚ್ಚಿದ್ದಾರೆ. ಅದೂ ಸಿನಿಮಾ ಸೂಪರ್ ಸ್ಟಾರ್ ಆಗಿಯೇ ಅನ್ನೋದು ಇಂಟರೆಸ್ಟಿಂಗ್. ಇಲ್ಲಿ ಉಪ್ಪಿ ಡೈಹಾರ್ಡ್‌ ಸೂಪರ್ ಫ್ಯಾನ್‌‌ಬಾಯ್ ಆಗಿ ರಾಮ್ ಕಮಾಲ್ ಮಾಡ್ತಿದ್ದು, ಆ ಅಭಿಮಾನಿಯ ಬಯೋಗ್ರಫಿ ಈ ಚಿತ್ರ ಅನ್ನೋದು ವಿಶೇಷ.

ಥಿಯೇಟರ್‌‌ ಮುಂದೆಯೂ ಉಪ್ಪಿ ಕಟೌಟ್.. ಥಿಯೇಟರ್ ಸ್ಕ್ರೀನ್ ಮೇಲೂ ಉಪ್ಪಿ ಸಿನಿಮಾ. ಮಧ್ಯೆ ಆತನನ್ನೇ ಫಾಲೋ ಮಾಡುವ ಕಟ್ಟಾಭಿಮಾನಿ. ಆತನ ನವಿರಾದ ಲವ್ ಸ್ಟೋರಿ. ಇದೇ ಈ ಚಿತ್ರದ ಒನ್ ಲೈನ್ ಸ್ಟೋರಿ. ಅಂದಹಾಗೆ ರಾಮ್ ಪೋತಿನೇನಿ ಅದ್ಯಾಕೆ ನಮ್ಮ ಕನ್ನಡ ಸೂಪರ್ ಸ್ಟಾರ್‌ನ ಇಟ್ಕೊಂಡು ಚಿತ್ರ ಮಾಡ್ತಿದ್ದಾರೆ..? ಅಲ್ಲೇ ಸಾಕಷ್ಟು ಮಂದಿ ತೆಲುಗು ಸ್ಟಾರ್ಸ್‌ ಇರುವಾಗ ಅಂತ ಒಂದಷ್ಟು ಮಂದಿ ಕಾಲೆಳೆಯುತ್ತಿದ್ದಾರೆ.

ಮುಗಿಲೆತ್ತರದ ಕಟೌಟ್.. ಥಿಯೇಟರ್‌ ಸ್ಕ್ರೀನ್ ಮೇಲೂ ಉಪ್ಪಿ

ಕೂಲಿ ಬ್ಲಾಕ್ ಬಸ್ಟರ್.. ಟಾಲಿವುಡ್‌‌ನಲ್ಲೂ ಬುದ್ಧಿವಂತ ಬ್ಯುಸಿ..!

ಕೂಲಿ ಸಿನಿಮಾದ ನಟನೆಯಿಂದಾಗಿ ಸದ್ಯ ಎಲ್ಲರೂ ಮಾತನಾಡುವಂತಾಗಿದ್ದಾರೆ ಉಪೇಂದ್ರ. ಅಲ್ಲದೆ, ಟಾಲಿವುಡ್‌ಗೆ ಉಪ್ಪಿ ಹೊಸಬರಲ್ಲ. ಎ, ರಾ, ಉಪೇಂದ್ರ ಸಿನಿಮಾಗಳನ್ನ ಅಲ್ಲಿಯೂ ಮಾಡಿದ್ರು. ಓಂ ಸಿನಿಮಾನ ರಾಜಶೇಖರ್‌‌ಗೆ ಡೈರೆಕ್ಟ್ ಮಾಡಿದ್ರು. ಅಷ್ಟೇ ಯಾಕೆ ಅಲ್ಲು ಅರ್ಜುನ್ ಜೊತೆ ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ದೇವರಾಜು ನಾಯ್ಡು ಅನ್ನೋ ಖಡಕ್ ಖಳನಾಯಕನಾಗಿ ಅಬ್ಬರಿಸಿ, ಆರ್ಭಟಿಸಿದ್ರು.

ಇವೆಲ್ಲಾ ಕಾರಣಗಳಿಂದಾಗಿ ಉಪ್ಪಿಗೆ ಆಂಧ್ರದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಅದಕ್ಕೂ ಹೊರತಾಗಿ ತೆಲುಗು ಸ್ಟಾರ್‌‌ಗಳನ್ನ ಇಟ್ಕೊಂಡು ಸಿನಿಮಾ ಮಾಡಿದ್ರೆ ಸ್ಟಾರ್‌‌‌ಗಳ ಫ್ಯಾನ್ಸ್ ನಡುವೆ ವಾರ್ ಶುರುವಾಗುತ್ತೆ ಅನ್ನೋ ವಿವೇಕತೆಯಿಂದ ನಿರ್ಮಾಣ ಸಂಸ್ಥೆ ಹಾಗೂ ಡೈರೆಕ್ಟರ್ ಮಹೇಶ್ ಬಾಬು ಈ ಚಿತ್ರವನ್ನು ತೆರೆಗೆ ತರ್ತಿದ್ದಾರೆ.

 

 

Exit mobile version