ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಕ್ಷಿತ್ ಶೆಟ್ಟಿ ಹೀರೋಯಿನ್ಸ್ ಪಾಲಿಗೆ ಒಂಥರಾ ಲಕ್ಕಿ ಮ್ಯಾನ್ ಆಗಿಬಿಟ್ಟಿದ್ದಾರೆ. ಇವರೊಟ್ಟಿಗೆ ಕೆಲಸ ಮಾಡಿದ ನಟಿಮಣಿಯರಿಗೆಲ್ಲಾ ಡಿಮ್ಯಾಂಡೋ ಡಿಮ್ಯಾಂಡ್. ರಶ್ಮಿಕಾ ಬಳಿಕ ಮತ್ಯಾವ ಚೆಲುವೆ ಬೇಡಿಕೆ ಹೆಚ್ಚಿಸಿಕೊಂಡ್ರು ಅಂತೀರಾ..? ಈ ಕಲರ್‌ಫುಲ್ ಸ್ಟೋರಿನ ನೀವೊಮ್ಮೆ ಓದಲೇಬೇಕು.
- ರಕ್ಷಿತ್ ಲಕ್ ಫ್ಯಾಕ್ಟರ್.. ಶೆಟ್ರ ಹೀರೋಯಿನ್ಸ್‌ಗೆ ಡಿಮ್ಯಾಂಡ್
- ರಶ್ಮಿಕಾ ಆಯ್ತು.. ಈಗ ರುಕ್ಮಿಣಿ & ಚೈತ್ರಾ ಪರಭಾಷಾ ಪರ್ವ
- ನಾಗಾಲೋಟದಲ್ಲಿ ಓಡ್ತಿರೋ ಸಿಂಪಲ್ ಸ್ಟಾರ್ ನಟಿಯರು
- ನಿಂತಲ್ಲೇ ಜಡವಾದ್ರಾ ರಕ್ಷಿತ್..? 2 ವರ್ಷದಿಂದ ನಾಪತ್ತೆ..!
ನಟನೆ, ನಿರ್ದೇಶನ, ನಿರ್ಮಾಣ, ಬರವಣಿಗೆ.. ಹೀಗೆ ಚಿತ್ರರಂಗದ ಎಲ್ಲಾ ವಿಭಾಗಗಳಲ್ಲಿ ಆಟ ಆಡಿರೋ ಬಬಹುಮುಖ ಪ್ರತಿಭೆಗಳಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ ಒಬ್ರು. ಇವರ ಸಿನಿಮಾಗಳು ಎಲ್ಲರಂತೆ ಇರಲ್ಲ. ಹಾಗಾಗಿಯೇ ಇವರು ಸಿಂಪಲ್ ಸ್ಟಾರ್ ಪಟ್ಟ ಪಡೆದ್ರೂ ಸ್ಪೆಷಲ್ ಸಿನಿಮಾಗಳಿಂದ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಬರೀ ಕನ್ನಡಿಗರ ದಿಲ್ ಅಷ್ಟೇ ಅಲ್ಲ, ಆ ಚಿತ್ರದ ನಾಯಕನಟಿಯರ ಹೃದಯ ಕೂಡ ಕದ್ದಿದ್ದಾರೆ.
ಇವರೊಟ್ಟಿಗೆ ನಟಿಸಿದ ನಟಿಯರ ಪಾಲಿಗೆ ಈತ ಒಂಥರಾ ಲಕ್ಕಿ ಮ್ಯಾನ್. ಯೆಸ್.. ರಕ್ಷಿತ್ ಜೊತೆ ಬಣ್ಣ ಹಚ್ಚಿದ್ರೆ ಸಾಕು ಆ ನಟಿಯರ ನಸೀಬು ಕಂಪ್ಲೀಟ್ ಬದಲಾಗಿ ಹೋಗುತ್ತೆ. ಶೆಟ್ರ ಜೊತೆ ನಟಿಸೋ ಚೆಂದುಳ್ಳಿ ಚೆಲುವೆಯರಿಗೆ ಈತನೇ ಬಿಗ್ಗೆಸ್ಟ್ ಲಕ್ ಫ್ಯಾಕ್ಟರ್. ಅದಕ್ಕೆ ಜ್ವಲಂತ ಸಾಕ್ಷಿ ರಶ್ಮಿಕಾ ಮಂದಣ್ಣ. ಈಕೆ ಕಿರಿಕ್ ಪಾರ್ಟಿ ಸಿನಿಮಾ ಬಳಿಕ ಬೆಳೆದ ಪರಿ ನಿಜಕ್ಕೂ ಅನ್ ಬಿಲೀವಬಲ್.
ಪ್ರೀತಿ, ಭಕ್ತಿ, ಗೌರವದಿಂದ ಬಹಳ ವಿನಯ, ವಿಧೇಯ ಹಾಗು ಮುಗ್ಧಳಾಗಿ ಆಗಷ್ಟೇ ಅಂಬೆಗಾಲು ಇಟ್ಕೊಂಡು ಚಿತ್ರರಂಗಕ್ಕೆ ಬಂದಂತಹ ಕೂರ್ಗ್ ಚೆಲುವೆ ರಶ್ಮಿಕಾ, ಹಂತ ಹಂತವಾಗಿ ತೆಲುಗು, ತಮಿಳು ಹಾಗೂ ಬಾಲಿವುಡ್‌ನಲ್ಲಿ ಮಿಂಚ್ತಿರೋದು ನೋಡಿದ್ರೆ ಖುಷಿ ಆಗುತ್ತೆ. ಖಾನ್, ಕಪೂರ್‌ಗಳಿಂದ ಹಿಡಿದು ಶೆಹೆನ್‌ಶಾ ಅಮಿತಾಬ್ ಬಚ್ಚನ್‌ವರೆಗೆ ಈಕೆಯೇ ಎಲ್ಲರಿಗೂ ಫೇವರಿಟ್.
ಅನಿಮಲ್, ಛಾವಾ, ಪುಷ್ಪ-2, ಕುಬೇರ.. ಹೀಗೆ ಸಾಲು ಸಾಲು ಪ್ಯಾನ್ ಇಂಡಿಯಾ ಹಿಟ್ಸ್ ನೀಡಿದ ರಶ್ಮಿಕಾ ಕಿರಿಕ್ ಪಾರ್ಟಿ ಬಳಿಕ ಒಂಬತ್ತೇ ವರ್ಷದಲ್ಲಿ 25 ಸಿನಿಮಾಗಳನ್ನ ಮಾಡಿದ್ರು. ಆದ್ರೆ ರಕ್ಷಿತ್ ಶೆಟ್ಟಿ ಯಾಕೋ ಇದ್ದಲ್ಲೇ ಜಡವಾಗಿ ನಿಂತು ಬಿಟ್ಟಿದ್ದಾರೆ. ಕಿರಿಕ್ ಪಾರ್ಟಿ ಬಳಿಕ ನಾಲ್ಕೇ ಸಿನಿಮಾಗಳಿಗೆ ತನ್ನನ್ನ ಸೀಮಿತಗೊಳಿಸಿಕೊಂಡ್ರು ರಕ್ಷಿತ್. ಅದ್ರಲ್ಲೂ ಎರಡು ವರ್ಷಗಳಿಂದ ಸಿಂಪಲ್ ಸ್ಟಾರ್ ನಾಪತ್ತೆ ಆಗಿಬಿಟ್ಟಿದ್ದಾರೆ.
ಇನ್ನು ರಶ್ಮಿಕಾ ಬಳಿಕ ಸಪ್ತಸಾಗರದಾಚೆ ಎಲ್ಲೋ ನಟಿಮಣಿಯರುಗಳದ್ದೂ ಅದೇ ಹಾದಿ ಆಗಿದೆ. ಸಪ್ತಸಾಗರ ಪುಟ್ಟಿ ಅಂತಲೇ ಕರೆಯಲ್ಪಡುವ ರುಕ್ಮಿಣಿ ವಸಂತ್, ತೆಲುಗು, ತಮಿಳು ಚಿತ್ರರಂಗಗಳಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ವಿಜಯ್ ಸೇತುಪತಿ ಜೊತೆ ಏಸ್ ಹಾಗೂ ನಿಖಿಲ್ ಸಿದ್ದಾರ್ಥ್ ಜೊತೆ ಅಪ್ಪುಡೋ ಇಪ್ಪುಡೋ ಎಪ್ಪುಡೋ ಸಿನಿಮಾಗಳ ಬಳಿಕ, ಶಿವಕಾರ್ತಿಕೇಯನ್ ಹಾಗೂ ಎನ್‌ಟಿಆರ್ ನೀಲ್ ಸಿನಿಮಾದ ನಾಯಕಿಯಾಗಿ ಬ್ಯುಸಿ ಆಗಿದ್ದಾರೆ.
ಇನ್ನು ಚೈತ್ರಾ ಆಚಾರ್ ಕೂಡ ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿನಲ್ಲಿ ಮಿಂಚಿದ್ರು. ಅವರಿಗೂ ಕಾಲಿವುಡ್ ರೆಡ್ ಕಾರ್ಪೆಟ್ ಹಾಸಿದ್ದು, ಸದ್ಯ 3 ಬಿಹೆಚ್‌ಕೆ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ನಾಲ್ಕೈದು ತಮಿಳು ಸಿನಿಮಾಗಳಿಗೆ ಚೈತ್ರಾ ಬುಕ್ ಆಗಿದ್ದಾರಂತೆ. ರಕ್ಷಿತ್ ಶೆಟ್ಟಿ ಕೂಡ ಬೇಗ ಚಿತ್ರರಂಗಕ್ಕೆ ರಿಟರ್ನ್ ಆಗಲಿ ಅನ್ನೋದು ಚಿತ್ರಪ್ರೇಮಿಗಳ ಆಶಯ.