ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ ಬಾಕ್ಸ್ ಆಫೀಸ್ ಅಲ್ಲೋಲ ಕಲ್ಲೋಲ ಮಾಡೋಕೆ ರೆಡಿಯಾಗಿದ್ದಾರೆ. ಜೈಲರ್-2ರಿಲೀಸ್ ಆಗೋಕು ಮೊದಲೇ ಇಡೀ ಇಂಡಸ್ಟ್ರಿ ಬೆರಗಾಗುವಂತಹ ಬಿಗ್ ಬ್ರೇಕಿಂಗ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ ತಲೈವಾ.
ಟೈಗರ್ ಮುತ್ತುವೇಲ್ ಪಾಂಡಿಯನ್ ಕಂಬ್ಯಾಕ್‌ಗೆ ಕೌಂಟ್‌ಡೌನ್
ಜೈಲರ್-2 ಓಟಿಟಿ ರೈಟ್ಸ್ 160 ಕೋಟಿ.. ಫಸ್ಟ್ ಸಾಂಗ್ ಕಮಿಂಗ್..!
ಆಗಸ್ಟ್ 21ಕ್ಕೆ ಜೈಲರ್-2 ಮೊದಲ ಮಾಸ್ ಸಾಂಗ್ ದರ್ಶನ
ಹುಕುಂ ಬಳಿಕ ತಲೈವಾ ಮತ್ತೊಂದು ಮೆಗಾ ಮಾಸ್ ಬೇಟೆ..!
ಸೂಪರ್‌ಸ್ಟಾರ್ ರಜನಿಕಾಂತ್ ಅಂದ್ರೇನೆ ಮಾಸ್, ಕ್ಲಾಸ್, ಜೊತೆಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಕಾ ಬಾಪ್. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಜೈಲರ್ 2 ಸಿನಿಮಾ, ಥಿಯೇಟರ್‌ಗೆ ಕಾಲಿಡುವ ಮುನ್ನವೇ ಒಟಿಟಿ ಸಾಮ್ರಾಜ್ಯದಲ್ಲಿ ಹೊಸ ಇತಿಹಾಸ ಬರೆದಿದೆ. ತಲೈವಾ ಬ್ರ್ಯಾಂಡ್ ವ್ಯಾಲ್ಯೂ ಮುಂದೆ ಯಾವುದೇ ಲೆಕ್ಕಾಚಾರವೂ ನಡೆಯಲ್ಲ ಅನ್ನೋದನ್ನು ಈ ಡೀಲ್ ಮತ್ತೊಮ್ಮೆ ಪ್ರೂವ್ ಮಾಡಿದೆ.
ವರದಿಗಳ ಪ್ರಕಾರ, ಈ ಸಿನಿಮಾದ ಡಿಜಿಟಲ್ ಹಕ್ಕುಗಳು ಬರೋಬ್ಬರಿ 160 ಕೋಟಿಗೆ ಅಮೆಜಾನ್ ಪ್ರೈಮ್ ವೀಡಿಯೋಗೆ ಸೇಲ್ ಆಗಿವೆಯಂತೆ. ಬಾಲಿವುಡ್ ಹಂಗಾಮಾ ಪ್ರಕಾರ, 2026ನೇ ಸಾಲಿನ ಅತ್ಯಂತ ದುಬಾರಿ ಮತ್ತು ಡಿಜಿಟಲ್ ಡೀಲ್ ಇದಾಗಿದೆ. ತಮಿಳು ಚಿತ್ರರಂಗದ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಮೊತ್ತಕ್ಕೆ ಒಟಿಟಿ ಹಕ್ಕುಗಳು ಮಾರಾಟವಾಗಿರೋದು ಇದೇ ಮೊದಲ ಬಾರಿಯಾಗಿದ್ದು, ರಜನಿ ಕ್ರೇಜ್‌ಗೆ ಇಡೀ ಸೌತ್ ಇಂಡಿಯಾ ಶೇಕ್ ಆಗಿದೆ.
ಇನ್ನು ನೆಚ್ಚಿನ ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ರಜನಿಕಾಂತ್ ಮತ್ತೆ ತೆರೆಮೇಲೆ ರಗಡ್ ಅವತಾರದಲ್ಲಿ ಅಬ್ಬರಿಸಲಿದ್ದಾರೆ. ಇದೇ ಅಕ್ಟೋಬರ್‌ನಲ್ಲಿ ಸಿನಿಮಾವನ್ನು ಅದ್ಧೂರಿಯಾಗಿ ಗ್ರ್ಯಾಂಡ್ ರಿಲೀಸ್ ಮಾಡಲು ಸನ್ ಪಿಕ್ಚರ್ಸ್ ಪ್ಲಾನ್ ಮಾಡಿದ್ದು, ಪ್ರಚಾರದ ಬಿಸಿ ಈಗಾಗಲೇ ಶುರುವಾಗಿದೆ. ಅದಕ್ಕೆ ತಕ್ಕಂತೆ, ಆಗಸ್ಟ್ 21ರ ಶುಕ್ರವಾರದಂದು ಚಿತ್ರದ ಮೊದಲ ಮಾಸ್ ಸಾಂಗ್ ರಿಲೀಸ್ ಆಗಲಿದ್ದು, ಪೋಸ್ಟರ್ ನೋಡಿದ ಅಭಿಮಾನಿಗಳಿಗೆ ಕಾತರ ತಡೆಯಲಾಗುತ್ತಿಲ್ಲ ಎಂದು ಕಾಮೆಂಟ್ ಮಾಡ್ತಿದ್ದಾರೆ.
ಯೆಸ್, ಜೈಲರ್ ಮೊದಲ ಭಾಗದಲ್ಲಿ ಅನಿರುದ್ಧ್ ರವಿಚಂದರ್ ಅವರ ಮ್ಯೂಸಿಕ್ ಯಾವ ಮಟ್ಟಿಗೆ ವೈರಲ್ ಆಗಿತ್ತು ಅಂತ ಎಲ್ಲರಿಗೂ ಗೊತ್ತೇ ಇದೆ. ಈಗ ಮತ್ತೆ ಟೈಗರ್ ಕ ಹುಕುಂ.. ಗಿಂತಲೂ ಮಸ್ತ್ ಹಾಗೂ ಖಡಕ್ ಆದ ಟ್ಯೂನ್ ತರಲು ಅನಿರುದ್ಧ್ ರೆಡಿಯಾಗಿದ್ದಾರೆ. ವಿಶೇಷವೆಂದರೆ, ಮೊದಲ ಭಾಗದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ತಮ್ಮ ಮಾಸ್ ಎಂಟ್ರಿಯಿಂದ ತಮಿಳು ಆಡಿಯೆನ್ಸ್ ಗೆ ಹಾಟ್ ಫೇವರಿಟ್ ಹೀರೋ ಆಗಿ ಚಿತ್ರಮಂದಿರಗಳನ್ನೇ ಅಲ್ಲಾಡಿಸಿದ್ದರು, ಈಗ ಜೈಲರ್ 2 ನಲ್ಲೂ ಅವರ ಖಡಕ್ ಪಾತ್ರ ಮುಂದುವರಿಯಲಿದೆ.
ಇದರ ಜೊತೆಗೆ ಕನ್ನಡದ ಮತ್ತೊಬ್ಬ ನಟಿ ಮೇಘನಾ ರಾಜ್ ಕೂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಮ್ಮ ಸ್ಯಾಂಡಲ್‌ವುಡ್‌ನ ಈ ಇಬ್ಬರು ನಕ್ಷತ್ರಗಳ ಉಪಸ್ಥಿತಿ ಕನ್ನಡಿಗರಲ್ಲಿ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಅಂದಹಾಗೆ ಸನ್ ಪಿಕ್ಚರ್ಸ್ ಬ್ಯಾನರ್‌ನಡಿ ಕಲಾನಿಧಿ ಮಾರನ್ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾ, ಬಿಡುಗಡೆಗೂ ಮುನ್ನವೇ ರಜನಿಕಾಂತ್ ಫ್ಯಾನ್ಸ್‌ಗೆ ಅಸಲಿ ದೀಪಾವಳಿ ಕಿಕ್ ನೀಡಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
