39 ವರ್ಷಗಳ ಹಿಂದೆ ಒಟ್ಟೊಟ್ಟಿಗೆ ಸಿನಿಮಾ ಮಾಡಿದ್ದ ರಜನೀಕಾಂತ್- ಹೃತಿಕ್ ರೋಷನ್, ಇದೀಗ ಬಾಕ್ಸ್ ಆಫೀಸ್ ವಾರ್‌ಗೆ ಮುಂದಾಗಿದ್ದಾರೆ. ತಲೈವಾ ಕೂಲಿ ಹಾಗೂ ಹೃತಿಕ್ ವಾರ್-2 ಒಂದೇ ದಿನ ತೆರೆಗೆ ಬರ್ತಿದ್ದು, ಬಿಗ್ ಕ್ಲ್ಯಾಶ್‌ಗೆ ಮುನ್ನುಡಿ ಬರೆಯುತ್ತಿವೆ.
ಈ ವಾರ ಚಿತ್ರ ಪ್ರೇಮಿಗಳಿಗೆ ಡಬಲ್ ಧಮಾಕ. ಯಾಕಂದ್ರೆ ಒಂದ್ಕಡೆ ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ಕೂಲಿ ರಿಲೀಸ್ ಆಗ್ತಿದ್ರೆ, ಮತ್ತೊಂದೆಡೆ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್ ಜೋಡಿಯ ವಾರ್-2 ಬಿಡುಗಡೆ ಆಗ್ತಿದೆ. ಎರಡೂ ಮಲ್ಟಿಸ್ಟಾರ್ ಸಿನಿಮಾಗಳೇ. ಎರಡರಲ್ಲೂ ಮಾಸ್ ಎಲಿಮೆಂಟ್ಸ್ ಇದೆ. ಎಮೋಷನ್ಸ್ ಇದೆ. ಹಾಗಾಗಿ ಒಟ್ಟೊಟ್ಟಿಗೆ ತೆರೆಗೆ ಬರ್ತಿರೋದ್ರಿಂದ ಬಿಗ್ ಬಾಕ್ಸ್ ಆಫೀಸ್ ಕ್ಲ್ಯಾಶ್‌ಗೆ ಮುನ್ನುಡಿ ಬರೆಯುತ್ತಿವೆ.
ಅಂದಹಾಗೆ 1986ರಲ್ಲಿ ತೆರೆಕಂಡ ಭಗವಾನ್ ದಾದಾ ಅನ್ನೋ ಹಿಂದಿ ಚಿತ್ರದಲ್ಲಿ ತಲೈವಾ ರಜನೀಕಾಂತ್ ಜೊತೆ ಹೃತಿಕ್ ರೋಷನ್ ಸ್ಕ್ರೀನ್ ಶೇರ್ ಮಾಡಿದ್ರು. ಬಾಲನಟನಾಗಿ 39 ವರ್ಷಗಳ ಹಿಂದೆಯೇ ರಜನೀಕಾಂತ್ ಜೊತೆ ನಟಿಸಿದ್ರು ಬಾಲಿವುಡ್ ಗ್ರೀಕ್ ಗಾಡ್. ಆ ರೆಟ್ರೋ ಸಿನಿಮಾದ ಕ್ಲಿಪಿಂಗ್ಸ್ ಈಗಲೂ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಅಂದು ಆ ರೀತಿ ಸ್ಕ್ರೀನ್ ಶೇರ್ ಮಾಡಿದ್ದ ಇವರುಗಳು, ಇಂದು ಸ್ಕ್ರೀನ್‌ಗಳನ್ನ ಪ್ರತ್ಯೇಕವಾಗಿ ಹಂಚಿಕೊಳ್ತಿರೋದು ವೆರಿ ವೆರಿ ಇಂಟರೆಸ್ಟಿಂಗ್ ಅನಿಸ್ತಿದೆ.
ಆದ್ರೆ ಈ 39 ವರ್ಷಗಳಲ್ಲಿ ಬಾಲಿವುಡ್ ಅಂಗಳದಲ್ಲಿ ನಟ ಹೃತಿಕ್ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಸೂಪರ್ ಸ್ಟಾರ್ ಪಟ್ಟ ಅಲಂಕರಿಸಿರೋ ಹೃತಿಕ್‌ಗೆ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಕೂಡ ಇದೆ. ರಜನಿಗೆ ವಯಸ್ಸಾದ್ರೂ, ಖದರ್ ಮಾತ್ರ ಕಿಂಚಿತ್ತೂ ಕಮ್ಮಿ ಆಗಿಲ್ಲ. ಇವರುಗಳ ನಡುವೆ ಯಾವುದೇ ರೈವಲ್ರಿ ಕೂಡ ಇಲ್ಲ. ಆದ್ರೆ ಒಟ್ಟಿಗೆ ನಟಿಸಿದ ಇಬ್ಬರು ಸೂಪರ್ ಸ್ಟಾರ್‌ಗಳ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗ್ತಿರೋದು ಚಿತ್ರರಂಗಕ್ಕೆ ಬಿಗ್ ಲಾಸ್.
ಒಂದೇ ದಿನ ತೆರೆಗೆ ಬರೋದ್ರಿಂದ ಥಿಯೇಟರ್‌ಗಳ ಕ್ಲ್ಯಾಶ್ ಆಗಲಿದೆ. ಮಲ್ಟಿಪ್ಲೆಕ್ಸ್ ಸ್ಕ್ರೀನ್ಸ್ ಕ್ಲ್ಯಾಶ್ ಆಗಲಿದೆ. ಅಷ್ಟೇ ಯಾಕೆ, ಜನಕ್ಕೆ ಯಾವುದು ನೋಡಬೇಕು ಯಾವುದು ಬಿಡಬೇಕು ಅನ್ನೋ ಕನ್ಫ್ಯೂಷನ್ ಬೇರೆ. ಹಾಗಾಗಿ ಬಾಕ್ಸ್ ಆಫೀಸ್ ಗಳಿಕೆ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರಲಿದೆ. ವರ್ಲ್ಡ್ ವೈಡ್ ಸಾವಿರಾರು ಸ್ಕ್ರೀನ್‌ಗಳನ್ನ ಇವೆರಡೇ ಚಿತ್ರಗಳು ಆವರಿಸಿಕೊಳ್ತಿದ್ದು, ಸಾವಿರಾರು ಕೋಟಿ ಗಳಿಸೋ ಲೆಕ್ಕಾಚಾರವಿದೆ.