ಸ್ಯಾಂಡಲ್‌ವುಡ್‌ಗೆ Jr. NTR ಗೆಳೆಯ ರಾಜೀವ್ ‘ಲವ್ ಓಟಿಪಿ’

ಅಪ್ಪು ಆತ್ಮೀಯ ಅನೀಶ್ ನಟಿಸಿ, ನಿರ್ದೇಶಿಸಿರೋ ಯೂತ್‌‌ ಚಿತ್ರ

Untitled design 2025 10 18t174525.471

ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಆಪ್ತ ಗೆಳೆಯ ರಾಜೀವ್ ಕನಕಾಲ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಲವ್ ಓಟಿಪಿ ಅನ್ನೋ ಸಿನಿಮಾ ಸದ್ಯ ರಿಲೀಸ್‌ಗೆ ಸಜ್ಜಾಗಿದ್ದು, ಪ್ರಮೋಷನ್ಸ್ ಕಿಕ್‌ಸ್ಟಾರ್ಟ್‌ ಮಾಡೋಕೂ ಮುನ್ನ ಅಪ್ಪು ಸ್ಮಾರಕಗೆ ವಿಸಿಟ್ ಮಾಡಿದ್ದಾರೆ. ಅಷ್ಟೇ ಅಲ್ಲ.. ಕ್ರೇಜಿಸ್ಟಾರ್ ರವಿಮಾಮ, ಶಿವಣ್ಣ ಹಾಗೂ ಶ್ರೀಮುರಳಿಯನ್ನ ಭೇಟಿ ಆಗಿದ್ದಾರೆ.

ಇದು ಲವ್ ಓಟಿಪಿ ಅನ್ನೋ ಚಿತ್ರದ ಟ್ರೈಲರ್ ಝಲಕ್. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಲಾಂಚ್ ಆಗಿತ್ತು. ಇದೀಗ ಹಾಡೊಂಡು ಬಿಡುಗಡೆ ಆಗಿ ಎಲ್ಲರ ಮನಸ್ಸು ಗೆಲ್ತಿದೆ. ಅಪ್ಪು ಅಚ್ಚುಮೆಚ್ಚಿನ ಅಕಿರ ಅನೀಶ್ ಇದೇ ಮೊದಲ ಬಾರಿಗೆ ಪಕ್ಕದ ಟಾಲಿವುಡ್‌ಗೂ ಇಂಟ್ರಡ್ಯೂಸ್ ಆಗ್ತಿದ್ದು, ಈ ಸಿನಿಮಾ ಕನ್ನಡದ ಜೊತೆ ತೆಲುಗಿನಲ್ಲೂ ತಯಾರಾಗಿದೆ.

ನವೆಂಬರ್ 14ರಂದು ತೆರೆಗೆ ಬರೋಕೆ ಸಜ್ಜಾಗಿರೋ ಲವ್ ಓಟಿಪಿ.. ಪಕ್ಕಾ ಯೂತ್‌‌ಫುಲ್ ಎಂಟರ್‌‌ಟೈನರ್ ಆಗಿದ್ದು, ಅನೀಶ್‌ಗೆ ಒಬ್ಬರಲ್ಲ ಇಬ್ಬಿಬ್ಬರು ನಾಯಕಿಯರಿದ್ದಾರೆ. ಸ್ವರೂಪಿಣಿ ಹಾಗೂ ಜಾನ್ವಿಕಾ ಗ್ಲಾಮರ್ ಟಚ್ ಸಿನಿಮಾಗಿದ್ದು, ಈ ಚಿತ್ರದ ಮೂಲಕ ಡೈರೆಕ್ಟರ್ ಆಗಿ ಹೊರಹೊಮ್ಮಿದ್ದಾರೆ ಅನೀಶ್. ಇಂಟರೆಸ್ಟಿಂಗ್ ಅಂದ್ರೆ ಜೂನಿಯರ್ ಎನ್‌ಟಿಆರ್ ಅವರ ಆಪ್ತ ಗೆಳೆಯ ರಾಜೀವ್ ಕನಕಾಲರನ್ನ ಸ್ಯಾಂಡಲ್‌ವುಡ್‌‌ಗೆ ಇಂಟ್ರಡ್ಯೂಸ್ ಮಾಡಿದ್ದಾರೆ ಅನೀಶ್.

ಹೌದು.. ಲವ್ ಓಟಿಪಿ ಚಿತ್ರದಲ್ಲಿ ಹೀರೋ ತಂದೆ ಪಾತ್ರದಲ್ಲಿ ಖಾಕಿ ರೋಲ್ ನಿರ್ವಹಿಸಿರೋ ರಾಜೀವ್ ಕನಕಾಲರಿಗೆ ಇದು ಚೊಚ್ಚಲ ಕನ್ನಡ ಸಿನಿಮಾ. ಹಾಗಾಗಿ ಚಿತ್ರದ ಪ್ರಮೋಷನ್ಸ್‌‌, ಅವ್ರ ಗೆಳೆಯರ ಆಪ್ತಮಿತ್ರ ಅಪ್ಪು ಸ್ಮಾರಕದಿಂದಲೇ ಶುರುಮಾಡಿದ್ರು ರಾಜೀವ್. ಕಂಠೀರವದಲ್ಲಿರೋ ಪುನೀತ್ ಸ್ಮಾರಕಕ್ಕೆ ತೆರಳಿ ವಿಶೇಷ ಪೂಜೆ ಮಾಡಿ, ಅಲ್ಲಿಂದ ಸಾಕಷ್ಟು ಕನ್ನಡದ ಸ್ಟಾರ್ ಮನೆಗಳಿಗೂ ವಿಸಿಟ್ ಮಾಡಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್, ಡಾ. ಶಿವರಾಜ್‌‌ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಮನೆಗಳಿಗೆ ಭೇಟಿ ನೀಡಿ, ಚಿತ್ರದ ಸ್ಯಾಂಪಲ್ಸ್ ತೋರಿಸಿ ಮೆಚ್ಚುಗೆ ಪಡೆದಿದ್ದಾರೆ ರಾಜೀವ್ ಕನಕಾಲ ಹಾಗೂ ಅನೀಶ್. ಇಡೀ ಸಿಟಿ ರೌಂಡ್ಸ್ ಹಾಕೋ ಮೂಲಕ ಮೊದಲ ಚಿತ್ರವಾದ್ರೂ ಇದರಲ್ಲೇ ಹತ್ತು ಸಿನಿಮಾಗಳಿಗೆ ಆಗುವಷ್ಟು ಅನುಭವಗಳನ್ನು ಪಡೆದುಕೊಂಡಿದ್ದಾರೆ ಸ್ಟಾರ್ ನಿರೂಪಕಿ ಸುಮಾ ಕನಕಾಲ ಪತಿ ರಾಜೀವ್ ಕನಕಾಲ.

ಡೈರೆಕ್ಷನ್ ಮಾಡ್ಕೊಂಡಿದ್ದ ನನ್ನನ್ನು ಕರೆತಂದು ಆ್ಯಕ್ಟರ್ ಮಾಡಿದ್ದು ರಾಜಮೌಳಿ ಅವರು. ಇಲ್ಲಿ ನನ್ನ ಪಾಲಿಗೆ ಅನೀಶ್ ಅವರೇ ರಾಜಮೌಳಿ. ಯಾಕಂದ್ರೆ ಕನ್ನಡಕ್ಕೆ ಪರಿಚಯಿಸಿದ್ದು ಅನೀಶ್ ಅಂತ ರಾಜೀವ್ ಕನಕಾಲ ತಮ್ಮ ಕನ್ನಡ ಚಿತ್ರ ಹಾಗೂ ಕನ್ನಡಾಭಿಮಾನವನ್ನು ಹೊರಹಾಕಿದ್ರು.

ಅಂದಹಾಗೆ ಅನೀಶ್ ಬಹುಕಾಲದ ಗೆಳೆಯ ವಿಜಯ್ ಎಂ ರೆಡ್ಡಿ ಈ ಲವ್ ಓಟಿಪಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ದ್ವಿಭಾಷಾ ಚಿತ್ರವಾಗಿ ಸಿನಿಮಾ ಹೊರಹೊಮ್ಮಿದೆ. ಕಂಟೆಂಟ್ ಸಖತ್ ಪ್ರಾಮಿಸಿಂಗ್ ಆಗಿದ್ದು, ಅನೀಶ್ ನಟನೆ ಹಾಗೂ ನಿರ್ದೇಶನದ ಬಗ್ಗೆ ಇಡೀ ಚಿತ್ರರಂಗ ಮಾತಾಡ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version