ರಾಜಮೌಳಿಗೆ ಬೇಕೇ ಬೇಕಂತೆ 15 ಲಕ್ಷ ಲೀಟರ್ ವಾಟರ್

150 ವಾಟರ್ ಟ್ಯಾಂಕರ್ಸ್‌ಗೆ‌ ಬೇಡಿಕೆ ಇಟ್ಟಿದ್ಯಾಕೆ ಮೌಳಿ..?

BeFunky collage (5)

ಬೇಸಿಗೆ ಬಂತು ಅಂದ್ರೆ ಸಾಕು ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗುತ್ತೆ. ಜನರಿಗೆ ಕುಡಿಯೋಕೆ ನೀರು ಸಿಗದೆ ಇದ್ದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತೆ. ಅದ್ರಲ್ಲೂ ಬೆಂಗಳೂರು, ಹೈದ್ರಾಬಾದ್, ಮುಂಬೈ, ಕೋಲ್ಕತ್ತಾ ಚೆನ್ನೈ ಅಂತಹ ಬಿಗ್ ಸಿಟೀಸ್‌‌ಗಳಲ್ಲಿ ಅದರ ತೀವ್ರತೆ ಮತ್ತಷ್ಟು ಹೆಚ್ಚುತ್ತೆ. ಹೀಗಿರುವಾಗ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿಗೆ 15 ಲಕ್ಷ ಲೀಟರ್ ನೀರು ಬೇಕಂತೆ. ಅದ್ಯಾಕೆ ಅನ್ನೋದಕ್ಕೆ ಈ ಸ್ಟೋರಿ ಒಮ್ಮೆ ನೋಡಿ.

ಸೆನ್ಸೇಷನಲ್ ಡೈರೆಕ್ಟರ್‌ ರಾಜಮೌಳಿಗೆ ಸ್ವಲ್ಪ ಆದ್ರೂ ಸೆನ್ಸ್ ಇಲ್ಲ. ಹೀಗಂತ ಇಡೀ ದೇಶವೇ ಮಾತಾಡ್ತಿದೆ. ಹೌದು.. ಅದಕ್ಕೆ ಕಾರಣ ಆಗಿರೋದು ಅವ್ರ ಬಹುನಿರೀಕ್ಷಿತ ವಾರಣಾಸಿ ಸಿನಿಮಾ. ಸೂಪರ್ ಸ್ಟಾರ್ ಮಹೇಶ್ ಬಾಬು, ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಿಯಾಂಕಾ ಚೋಪ್ರಾ ಅಂತಹ ಘಟಾನುಘಟಿ ಕಲಾವಿದರುಗಳನ್ನ ಇಟ್ಕೊಂಡು ಚಿತ್ರೀಕರಣ ನಡೆಸ್ತಿದ್ದಾರೆ ಮೌಳಿ. ಸಿಂಗಲ್ ಟೀಸರ್‌‌ನಿಂದ ಸಿನಿಮಾ ಹಾಲಿವುಡ್‌‌ವರೆಗೆ ಟಾಕ್ ಆಫ್ ದಿ ಟೌನ್ ಆಗಿದೆ. ಆದ್ರೀಗ ಇದೇ ವಾರಣಾಸಿ ಚಿತ್ರದ ಶೂಟಿಂಗ್ ವಿಚಾರ ಎಲ್ಲರೂ ರಾಜಮೌಳಿ ಬಗ್ಗೆ ಕೇವಲವಾಗಿ ಮಾತನಾಡುವಂತಾಗಿದೆ.

ರಾಜಮೌಳಿಗೆ ಬೇಕೇ ಬೇಕಂತೆ 15 ಲಕ್ಷ ಲೀಟರ್ ವಾಟರ್

150 ವಾಟರ್ ಟ್ಯಾಂಕರ್ಸ್‌ಗೆ‌ ಬೇಡಿಕೆ ಇಟ್ಟಿದ್ಯಾಕೆ ಮೌಳಿ..?

ಅರೇ 1400 ಕೋಟಿ ರೂಪಾಯಿ ಬಿಗ್ ಬಜೆಟ್‌‌ನಲ್ಲಿ ತಯಾರಾಗುತ್ತಿರೋ ಈ ಸಿನಿಮಾ ಬಗ್ಗೆ ಇಡೀ ವಿಶ್ವ ಸಿನಿದುನಿಯಾ ಕೊಂಡಾಡ್ತಿದೆ. ಅಂಥದ್ರಲ್ಲಿ ರಾಜಮೌಳಿಯನ್ನ ಟೀಕಿಸುವಂಥದ್ದು ಏನಾಯ್ತು ಅಂತೀರಾ..? ಹೇಳ್ತೀವಿ ಕೇಳಿ. ಇತ್ತೀಚೆಗೆ ರಾಜಮೌಳಿ ಹೈದ್ರಾಬಾದ್‌ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬಳಿ ತನಗೆ 15 ಲಕ್ಷ ಲೀಟರ್ ವಾಟರ್ ಬೇಕು ಅಂತ ಮನವಿ ಪತ್ರ ನೀಡಿದ್ದರಂತೆ. ಅದಕ್ಕೆ ಅಲ್ಲಿನ ಜಲಮಂಡಳಿ ನೇರವಾಗಿ ಮುಖಕ್ಕೆ ಹೊಡೆದಂತೆ ನೋ ಅಂದುಬಿಟ್ಟಿದೆ.

ಅಂದಹಾಗೆ 15 ಲಕ್ಷ ಲೀಟರ್ ನೀರು ಅಂದ್ರೆ 150 ಟ್ಯಾಂಕರ್‌‌‌‌ಗಳಷ್ಟು ವಾಟರ್. ತಲಾ 10 ಸಾವಿರ ಲೀಟರ್ ಅಂದ್ರೂ 150 ಟ್ಯಾಂಕರ್ಸ್‌‌‌ಗೆ 15 ಲಕ್ಷ ಲೀಟರ್ ಆಗಲಿದೆ. ಮೊದಲೇ ಬೇಸಿಗೆಯಿಂದ ಎಲ್ಲೆಡೆ ನೀರಿಗೆ ಅಭಾವ ಶುರುವಾಗಿದೆ. ಕೆರೆಗಳು, ನದಿಗಳು, ಸರೋವರುಗಳು, ಡ್ಯಾಂಗಳು ಬತ್ತಿ ಹೋಗುತ್ತವೆ. ಅಂತರ್ಜಲ ಕೂಡ ಕಡಿಮೆ ಆಗುತ್ತೆ. ಬೋರ್‌‌ವೆಲ್‌‌ಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತೆ. ಜನಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡೋದೇ ಕಷ್ಟಸಾಧ್ಯ. ಕೆಲ ವಾರ್ಡ್‌‌ಗಳಿಗೆ ಟ್ಯಾಂಕರ್‌‌ಗಳ ಮೂಲಕ ನೀರು ಹರಿಸಲಾಗುತ್ತೆ. ಹೀಗಿರುವಾಗ 15 ಲಕ್ಷ ಲೀಟರ್ ವಾಟರ್ ಕೇಳಿದ್ರೆ ಕೊಟ್ಟಾದ್ರೂ ಕೊಡ್ತಾರೆಯೇ..? ನೀವೇ ಹೇಳಿ.

ಸೆನ್ಸೇಷನಲ್ ಡೈರೆಕ್ಟರ್‌‌‌ ಮನವಿ ತಿರಸ್ಕರಿಸಿದ ಜಲ ಮಂಡಳಿ

ಬೇಸಿಗೆಯಲ್ಲಿ ಕುಡಿಯೋಕೆ ನೀರಿಲ್ಲ.. ಬುದ್ಧಿ ಆದ್ರೂ ಬೇಡವೇ?

ಇಷ್ಟಕ್ಕೂ ರಾಜಮೌಳಿಗೆ ಏತಕ್ಕೆ ಅಷ್ಟು ನೀರು ಅಂತೀರಾ..? ವಾರಣಾಸಿ ಚಿತ್ರದ ಶೂಟಿಂಗ್‌ಗಾಗಿ ಅನ್ನೋದು ಇಂಟರೆಸ್ಟಿಂಗ್. ಗಗನ್‌‌ಪಹಾದ್‌‌ನಲ್ಲಿರೋ ಫಿಲ್ಮ್ ಸ್ಟುಡಿಯೋದಲ್ಲಿ ವಾರಣಾಸಿ ಚಿತ್ರಕ್ಕಾಗಿ ವಿಶೇಷವಾಗಿ ಶೂಟಿಂಗ್ ಸೆಟ್‌ನ ನಿರ್ಮಿಸಲಾಗಿದೆಯಂತೆ. ಅಲ್ಲಿ ಸಿನಿಮಾದ ಪ್ರಮುಖ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರಿಸಲು ನೀರಿನ ಅವಶ್ಯಕತೆಯಿದೆಯಂತೆ. ಅಂದಹಾಗೆ ಅದು ಅಂಡರ್‌ವಾಟರ್ ಫೈಟ್ ಸೀಕ್ವೆನ್ಸ್ ಆಗಿದ್ದು, ನೀರಿಲ್ಲದೆ ಶೂಟಿಂಗ್ ಕೂಡ ಸ್ಟಾಪ್ ಮಾಡಿದ್ದಾರಂತೆ ಮೌಳಿ. ಇಷ್ಟಕ್ಕೂ ಮಳೆಗಾಲ ಶುರುವಾದ ಬಳಿಕ ನೀರಿನ ಕೊರತೆ ನೀಗಿದ ಬಳಿಕ, ಬೇಸಿಗೆ ಕಳೆದು ಆ ದೃಶ್ಯಗಳನ್ನ ಚಿತ್ರಿಸುವ ಅವರ ಬುದ್ಧಿಗೆ ಏನಾಗಿದೆ ಅಂತ ಜನ ನೇರವಾಗಿಯೇ ರಾಜಮೌಳಿ ಕಾಲೆಳೆಯುತ್ತಿದ್ದಾರೆ.

 

 

 

Exit mobile version