‘ಮ್ಯಾಂಗೋ ಪಚ್ಚ’ಗೆ ಕಿಚ್ಚ ನ್ಯೂ ಶೇಪ್..ಸಂಚಿತ್ ಕಮಿಂಗ್

ಮಗನಿಗಿಂತ ಹೆಚ್ಚು ಬಾದ್‌ಷಾಗೆ ಅಳಿಯ ಸಂಚಿತ್ ಸಂಜೀವ್

BeFunky collage

ಬಾದ್‌ಷಾ ಕಿಚ್ಚ ಸುದೀಪ್ ಕುಟುಂಬದ ಕುಡಿ ಸಂಚಿತ್ ಸಂಜೀವ್ ಮ್ಯಾಂಗೋ ಪಚ್ಚನಾಗಿ ಬರ್ತಿರೋದು ಎಲ್ರಿಗೂ ಗೊತ್ತೇಯಿದೆ. ಆದ್ರೆ ಅದು ಯಾವಾಗ..? ಕಿಚ್ಚನ ಕೈಚಳಕದಿಂದ ಸಿನಿಮಾ ಪಡೆದ ರೂಪ ಎಂಥದ್ದು..? ಅನ್ನೋದ್ರ ಜೊತೆಗೆ ಶೂಟಿಂಗ್ ಮಾಡದೆ ಸುಮ್ಮನಿದ್ದಾರಾ ಸುದೀಪ್ ಅನ್ನೋರಿಗೆ ಉತ್ತರ ಇಲ್ಲಿದೆ.

ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಅಭಿನಯದ ಚೊಚ್ಚಲ ಚಿತ್ರ ‘ಮ್ಯಾಂಗೋ ಪಚ್ಚ’. ಟೈಟಲ್ ಹಾಗೂ ಒಂದಷ್ಟು ಟೀಸರ್, ಸಾಂಗ್ಸ್ ಝಲಕ್‌ಗಳ ಮೂಲಕವೇ ಕುತೂಹಲ ಹೆಚ್ಚಿಸಿರೋ ಈ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜೂನ್ 5ರಂದು ಮ್ಯಾಂಗೋ ಪಚ್ಚ ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ.

‘ಮ್ಯಾಂಗೋ ಪಚ್ಚ’ಗೆ ಕಿಚ್ಚ ನ್ಯೂ ಶೇಪ್..ಸಂಚಿತ್ ಕಮಿಂಗ್

ಜೂನ್ 5ಕ್ಕೆ ಗ್ರ್ಯಾಂಡ್ ರಿಲೀಸ್..ಕಾದಿದೆ ಬಿಗ್ ಸರ್‌‌ಪ್ರೈಸ್

ಮ್ಯಾಂಗೋ ಪಚ್ಚ ಕಂಪ್ಲೀಟ್ ಕಮರ್ಷಿಯಲ್ ಎಂಟರ್‌ಟೈನರ್ ಆಗಿದ್ದು, ಇದು ಜೀವನಕ್ಕಿಂತ ದೊಡ್ಡ ಪಾತ್ರವನ್ನು ಪರಿಚಯಿಸುತ್ತದೆ. ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಾಲ್ಪನಿಕ ನಾಯಕನ ಕಥೆ ಇದಾಗಿದೆ. ಇಡೀ ಸಿನಿಮಾ ಮೈಸೂರಿನಲ್ಲಿಯೇ ಚಿತ್ರೀಕರಣ ಆಗಿದೆ. ಚಿತ್ರದ ಪ್ರತಿ ಫ್ರೇಮ್ ನಗರದ ಆತ್ಮವಾಗಿದೆ. ಅದ್ರ ಬೀದಿಗಳಿಂದ ಹಿಡಿದು ನಗರದವರೆಗೆ, ಅದ್ರ ನಾಡಿಮಿಡಿತದಿಂದ ಹಿಡಿದು ಹೆಮ್ಮೆಯವರೆಗಿನ ಕಥೆ ಚಿತ್ರದಲ್ಲಿದೆ. ಮ್ಯಾಂಗೋ ಪಚ್ಚ ಸಿನಿಮಾ ಕೇವಲ ಮೈಸೂರಿನಲ್ಲಿ ಹೊಂದಿಸಿಲ್ಲ. ಅದು ಮೈಸೂರಿಗೇ ಸೇರಿದೆ.

ಹೈ ಎನರ್ಜಿಯ ಆ್ಯಕ್ಷನ್ ದೃಶ್ಯಗಳು, ಗಟ್ಟಿಯಾದ‌ ಭಾವನೆ ಹಾಗೂ ಆಳವಾಗಿ ಬೇರೂರಿರುವ ಕಥೆ ಹೇಳುವ ಮೂಲಕ ಸಂಚಿತ್ ಸಂಜೀವ್ ಕನ್ನಡ ಚಿತ್ರರಂಗದಲ್ಲಿ ಲಾಂಗ್ ಜರ್ನಿ ಮಾಡುವ ಸೂಚನೆ ಸಿಕ್ಕಿದೆ. ಈ ಚಿತ್ರದ ಮೂಲಕ ಒಬ್ಬ ನಾಯಕನಟನ ಉದಯವಾಗುತ್ತಿದೆ. ಒಂದು ನಗರವು ಘರ್ಜಿಸುತ್ತದೆ.‌ ಒಂದು ಕಥೆ ಮನೆ ಮನೆಗೆ ತಲುಪುತ್ತದೆ. ಈ ಚಿತ್ರಕ್ಕೆ ವಿವೇಕ್ ಆ್ಯಕ್ಷನ್ ಕಟ್ ಹೇಳಿದ್ದು, ಕಾಜಲ್ ಕುಂದರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಯೂರ್‌ ಪಟೇಲ್‌, ಭಾವನಾ, ಹರಿಣಿ ಶ್ರೀಕಾಂತ್‌, ಹಂಸ, ವಿಜಯ ರಾಘವೇಂದ್ರ ಅವ್ರ ಅಳಿಯ ಜೈ ಗೋಪಿನಾಥ್‌, ಪ್ರಶಾಂತ್‌ ಹಿರೇಮಠ್‌, ಇನ್ನೂ ಅನೇಕರು ಬಣ್ಣ ಹಚ್ಚಿದ್ದಾರೆ.

ಮಗನಿಗಿಂತ ಹೆಚ್ಚು ಬಾದ್‌ಷಾಗೆ ಅಳಿಯ ಸಂಚಿತ್ ಸಂಜೀವ್

ಕೈಕಟ್ಟಿ ಕೂತಿಲ್ಲ ಕಿಚ್ಚ..ಶುರುವಾಗಲಿದೆ BRB & ಬಿಗ್‌ಬಾಸ್..!

ಶೇಖರ್‌ ಚಂದ್ರ ಛಾಯಾಗ್ರಹಣ, ಚರಣ್‌ ರಾಜ್‌ ಸಂಗೀತ ಸಂಯೋಜನೆ, ರವಿವರ್ಮಾ ಹಾಗೂ ರಿಯಲ್‌ ಸತೀಶ್‌ ಮ್ಯಾಂಗೋ ಪಚ್ಚ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಮೆಲೋಡಿ ಹಾಡೊಂದಕ್ಕೆ ಎ ಹರ್ಷ ಕೊರಿಯೋಗ್ರಫಿ ಮಾಡಿದ್ದಾರೆ. ಅಂದಹಾಗೆ ಮ್ಯಾಂಗೋ ಪಚ್ಚ ಲೇಟ್ ಆಗೋಕೆ ಕಾರಣ ಸಾಕಷ್ಟು ದೃಶ್ಯಗಳನ್ನ ಮರುಚಿತ್ರೀಕರಣ ಮಾಡಲಾಗಿದೆ. ಅದಕ್ಕೆ ಹೊಸ ರೂಪ ಕೊಡೋದ್ರಲ್ಲಿ ಕಿಚ್ಚ ಯಶಸ್ವಿ ಆಗಿದ್ದಾರೆ. ಪೋಸ್ಟ್ ಪ್ರೊಡಕ್ಷನ್‌‌‌ನಲ್ಲಿ ಕೂಡ ಕಿಚ್ಚ ಕಂಪ್ಲೀಟ್ ಆಗಿ ತೊಡಗಿಸಿಕೊಂಡಿದ್ದಾರೆ.

ಇಷ್ಟು ದಿನದಿಂದ ಸುದೀಪ್ ಸೈಲೆಂಟ್ ಆಗಿ ಇರೋದ್ಯಾಕೆ ಆಂತಿದ್ದವ್ರಿಗೆ ಮ್ಯಾಂಗೋ ಪಚ್ಚಗೆ ನ್ಯೂ ಶೇಪ್ ಕೊಟ್ಟಿರೋ ನ್ಯೂಸ್ ನೀಡಿದ್ದಾರೆ. ಅಷ್ಟೇ ಅಲ್ಲ, ಸದ್ಯದಲ್ಲೇ ಬಿಲ್ಲ ರಂಗ ಬಾಷ ಸಿನಿಮಾ ಕೂಡ ಶುರುವಾಗಲಿದ್ದು, ಬಿಗ್‌ಬಾಸ್ ಸೀಸನ್-13 ಕೂಡ ಕಿಕ್‌‌ಸ್ಟಾರ್ಟ್ ಆಗುವ ಮುನ್ಸೂಚನೆ ಇದೆ. ಸೋ.. ಕಿಚ್ಚ ಇನ್ಮೇಲೆ ಬ್ಯುಸಿಯೋ ಬ್ಯುಸಿ.

 

 

Exit mobile version