ರಚಿತಾಗೆ ದರ್ಶನ್‌, ಲೋಕೇಶ್ ಕನಕರಾಜ್ ಗಾಡ್ ಫಾದರ್ಸ್.. ‘ನೀಲಾಂಬರಿ’ಯೇ ಸ್ಫೂರ್ತಿ

IMDb ಪಾಪ್ಯುಲರ್ ಸೆಲೆಬ್ರಿಟೀಸ್ ಲಿಸ್ಟ್‌‌ನಲ್ಲಿ ಕನ್ನಡತಿ ರಚಿತಾ ರಾಕ್ಸ್..!

Untitled design (38)

12 ವರ್ಷಗಳ ಹಿಂದೆ ಹೀರೋಯಿನ್ ಆದ ಡಿಂಪಲ್ ಕ್ವೀನ್ ರಚಿತಾ, ಇದೀಗ ವಿಲನ್ ಆಗೋ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ದರ್ಶನ್ ಜೊತೆ ಲೋಕೇಶ್ ಕನಕರಾಜ್ ಕೂಡ ಗಾಡ್‌‌ಫಾದರ್ ಅಂತಿರೋ ರಚ್ಚು, ಕೂಲಿಯಿಂದಾಗಿ IMDb ಪಾಪ್ಯುಲರ್ ಸೆಲೆಬ್ರಿಟೀಸ್ ಲಿಸ್ಟ್‌‌‌ನಲ್ಲಿ ದಿಢೀರ್ ಅಂತ ಟ್ರೆಂಡಿಂಗ್‌‌ನಲ್ಲಿದ್ದಾರೆ. ಅಷ್ಟೇ ಅಲ್ಲ, ನೀಲಾಂಬರಿ ರಮ್ಯಾಕೃಷ್ಣನೇ ರೋಲ್ ಮಾಡೆಲ್ ಅಂತಿದ್ದಾರೆ.

ನಾಲ್ಕೇ ದಿನದಲ್ಲಿ 404 ಕೋಟಿ ಕಲೆಕ್ಷನ್ ಮಾಡೋ ಮೂಲಕ ಕೂಲಿ ಎಲ್ಲೆಡೆ ಧೂಳೆಬ್ಬಿಸ್ತಿದೆ. ಸೂಪರ್ ಸ್ಟಾರ್ ರಜನೀಕಾಂತ್, ನಾಗಾರ್ಜುನ್, ಆಮೀರ್ ಖಾನ್, ಉಪೇಂದ್ರ, ಸೌಬಿನ್ ಹೀಗೆ ಎಲ್ಲರ ಬಗ್ಗೆ ಜನ ಮಾತಾಡಿಕೊಳ್ತಿದ್ದಾರೆ. ಅಂತಹ ಅದ್ಭುತ ಪಾತ್ರಗಳನ್ನ ಕ್ರಿಯೇಟ್ ಮಾಡಿರೋ ಮಾಸ್ಟರ್‌ಮೈಂಡ್ ಲೋಕೇಶ್ ಕನಕರಾಜ್, ಅಷ್ಟೇ ಅತ್ಯದ್ಭುತ ಪರ್ಫಾಮೆನ್ಸ್‌‌ನ ಅವರುಗಳಿಂದ ತೆಗೆಸಿದ್ದಾರೆ. ಇನ್ನು ಪ್ರಮೋಷನ್ಸ್ ಮಾಡದೆ ಸರ್‌ಪ್ರೈಸ್ ಆಗಿ ಇಟ್ಟಿದ್ದ ನಮ್ಮ ಕನ್ನಡತಿ ರಚಿತಾ ರಾಮ್‌‌ ಕಲ್ಯಾಣಿ ರೋಲ್ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.

ಹೌದು, ಸ್ಯಾಂಡಲ್‌ವುಡ್‌ನ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್, ಕೂಲಿ ಚಿತ್ರದ ಲೇಡಿ ಡಾನ್. ಇದೇ ಮೊದಲ ಬಾರಿಗೆ ಖಡಕ್ ಖಳನಾಯಕಿಯಾಗಿ ನೆಗೆಟಿವ್ ಶೇಡ್‌‌ನಲ್ಲಿ ಖದರ್ ತೋರಿರುವ ರಚಿತಾ, ಖಚಿತವಾಗಿ ತಮಿಳಿಗರ ದಿಲ್ ದೋಚಿದ್ದಾರೆ. ಅಷ್ಟೇ ಅಲ್ಲ, ಈಗ ರಚ್ಚು ವರ್ಲ್ಡ್‌ ಫೇಮಸ್. ಕಾರಣ ಆಕೆಯ ಔಟ್‌‌ಸ್ಟ್ಯಾಂಡಿಂಗ್ ಪರ್ಫಾಮೆನ್ಸ್. ಈಕೆ ಡಿಂಪಲ್ ಕ್ವೀನ್ ಅಲ್ಲ, ಕಿಲ್ಲರ್ ಕ್ವೀನ್. ಸಿಕ್ಕಿರೋ ಕೆಲವೇ ನಿಮಿಷಗಳನ್ನ ಸಮರ್ಪಕವಾಗಿ ಬಳಸಿಕೊಂಡು, ನೋಡುಗರು ಹುಬ್ಬೇರಿಸೋ ಅಂತಹ ಅಭಿನಯ ನೀಡಿದ್ದಾರೆ.

ಸಿನಿಮಾದಲ್ಲಿ ಸಾಕಷ್ಟು ಕಲಾವಿದರಿದ್ದು, ಕೆಲವರು ಗೆಸ್ಟ್ ಅಪಿಯರೆನ್ಸ್ ನೀಡಿದ್ದಾರೆ. ಆದ್ರೆ ಸೋಶಿಯಲ್ ಮೀಡಿಯಾ ಪ್ರಕಾರ ಕೂಲಿ ಹೀರೋ ಸೌಬಿನ್. ಹೀರೋಯಿನ್ ನಮ್ಮ ಬುಲ್‌ಬುಲ್ ಬೆಡಗಿ ರಚಿತಾ ರಾಮ್. ಉಳಿದವರೆಲ್ಲಾ ಕೆಮಿಯೋ ಅಂತಿದ್ದಾರೆ. ಅಷ್ಟರ ಮಟ್ಟಿಗೆ ನೋಡುಗರ ಎದೆಗೆ ನಾಟಿದ್ದಾರೆ ಡಿಂಪಲ್ ಕ್ವೀನ್. ಲೋಕೇಶ್ ಕನಕರಾಜ್ ರಚಿತಾಗಾಗಿಯೇ ಒಂದು ವಿಶೇಷ ಫೈಟ್ ಕೂಡ ಕಂಪೋಸ್ ಮಾಡಿದ್ದು, ನಾಗಾರ್ಜುನ್ ಮೇಲೆ ಅಟ್ಯಾಕ್ ಮಾಡೋ ರಚ್ಚು ಟ್ರಾನ್ಸ್‌ಫಾರ್ಮೇಷನ್ ಸಖತ್ ಥ್ರಿಲ್ಲಿಂಗ್ ಆಗಿದೆ. ಲವ್ಲಿ ಗರ್ಲ್ ಹಾಗೂ ಕಿಲ್ಲರ್ ಕಲ್ಯಾಣಿ ಹೀಗೆ ಎರಡು ಶೇಡ್‌‌ಗಳಲ್ಲಿ ರಚ್ಚು ಎಲ್ಲೆಡೆ ರಾಕಿಂಗ್.

ಅಂದಹಾಗೆ ಕೂಲಿ ಸಿನಿಮಾದ ಕಲ್ಯಾಣಿ ಪಾತ್ರದ ನಟನೆಯಿಂದಾಗಿ ರಚಿತಾಗೆ ವರ್ಲ್ಡ್‌ವೈಡ್ ಫ್ಯಾನ್ಸ್ ಹುಟ್ಟಿಕೊಳ್ತಿದ್ದಾರೆ. ಪ್ರತಿಷ್ಠಿತ IMDb ಮೋಸ್ಟ್ ಪಾಪ್ಯುಲರ್ ಇಂಡಿಯನ್ ಸೆಲೆಬ್ರಿಟೀಸ್ ಲಿಸ್ಟ್‌‌ನಲ್ಲಿ ಕಳೆದ ವಾರ 392ನೇ ಶ್ರೇಯಾಂಕದಲ್ಲಿದ್ದ ಕನ್ನಡತಿ ರಚಿತಾ, ಕೂಲಿ ಬ್ಲಾಕ್‌‌ಬಸ್ಟರ್ ಹಿಟ್ ಆದ ಹಿನ್ನೆಲೆ, ದಿಢೀರ್ ಅಂತ 37ನೇ ರ‍್ಯಾಂಕಿಂಗ್‌ಗೆ ಜಿಗಿದಿದ್ದಾರೆ. ಅಲ್ಲದೆ ಟ್ರೆಂಡಿಂಗ್‌ನಲ್ಲಿ ಕೂಡ ಇದ್ದಾರೆ. ಇದನ್ನ ಸ್ವತಃ ರಚಿತಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಖುಷಿ ಹಂಚಿಕೊಂಡಿದ್ರು.

ಬುಲ್‌‌ಬುಲ್ ಚಿತ್ರದ ಮೂಲಕ ದರ್ಶನ್ ಜೊತೆ ಬಣ್ಣ ಹಚ್ಚಿದ ರಚಿತಾ ಪಾಲಿಗೆ ಡಿಬಾಸ್ ದರ್ಶನ್ ಆಲ್‌ಟೈಂ ಗಾಡ್‌ಫಾದರ್. ಆದ್ರೀಗ ರಚ್ಚು ಕರಿಯರ್ ಅಂತ ಬಂದಾಗ ಲೋಕೇಶ್ ಕನಕರಾಜ್ ಕೂಡ ಗಾಡ್‌ಫಾದರ್ ಲಿಸ್ಟ್ ಸೇರಿಕೊಳ್ತಾರೆ. 12 ವರ್ಷದಿಂದ ಇಲ್ಲಿಯವರೆಗೆ ಒಂದು ಲೆಕ್ಕ. ಈಗ ಹೊಸ ಲೆಕ್ಕ ಅನ್ನುವಂತಾಗಿದೆ. ಅಷ್ಟರ ಮಟ್ಟಿಗೆ ಕೂಲಿ ಸಿನಿಮಾದ ಆ ಪಾತ್ರ ಇಂಪ್ಯಾಕ್ಟ್ ಆಗ್ತಿದೆ.

ಅಂದಹಾಗೆ ರಚಿತಾಗೆ ಮೊದಲಿನಿಂದಲೂ ವಿಲನ್ ರೋಲ್ ಮಾಡೋಕೆ ಇಷ್ಟವಂತೆ. ಅದಕ್ಕೆ ಕಾರಣ ತಲೈವಾ ರಜನೀಕಾಂತ್‌ರ ಪಡೆಯಪ್ಪ. ಹೌದು.. ಬುಲ್‌ಬುಲ್ ಸಿನಿಮಾದ ಸಮಯದಲ್ಲೇ ಪಡೆಯಪ್ಪ ಸಿನಿಮಾನ ಕನ್ನಡದಲ್ಲಿ ಮಾಡಿದ್ರೆ, ಅದ್ರಲ್ಲಿನ ರಮ್ಯಾಕೃಷ್ಣ ಅವ್ರ ನೀಲಾಂಬರಿ ಪಾತ್ರವನ್ನು ತಾನು ಮಾಡ್ತೀನಿ ಅಂದಿದ್ರಂತೆ ರಚ್ಚು. ಅಲ್ಲದೆ, ಮತ್ತದೇ ದರ್ಶನ್ ಜೊತೆ ಅಂಬರೀಶ ಸಿನಿಮಾ ಮಾಡಿದಾಗ್ಲೂ ಅದರಲ್ಲಿದ್ದ ಪ್ರಿಯಾಮಣಿಯವರ ನೆಗೆಟಿವ್ ಶೇಡ್‌‌ನ ತಾನು ಮಾಡುವ ಆಶಯ ವ್ಯಕ್ತಪಡಿಸಿದ್ರಂತೆ. ಆದ್ರೆ ಆಗ ಅದು ಕೈಗೂಡಿರಲಿಲ್ಲ. ಈಗ ಲೋಕೇಶ್ ಕನಕರಾಜ್ ಮೂಲಕ ಆ ಕನಸು ನನಸಾಗಿದೆ.

ನೀಲಾಂಬರಿಯ ಪಾತ್ರ ರಚ್ಚು ವಿಲನ್‌ ರೋಲ್‌ಗೆ ಸ್ಫೂರ್ತಿಯಾಗಿದ್ದು, ರಮ್ಯಾಕೃಷ್ಣ ನಟನೆಯ ಆ ಮಾಸ್ಟರ್‌ಪೀಸ್ ರೋಲ್ ಒಂಥರಾ ಡ್ರೀಮ್ ಪ್ರಾಜೆಕ್ಟ್ ಎಂದಿದ್ದಾರೆ. ಇನ್‌‌ಫ್ಯಾಕ್ಟ್ ಡೈರೆಕ್ಟರ್ ಕೆ.ಎಸ್. ರವಿಕುಮಾರ್ ಏನಾದ್ರೂ ಪಡೆಯಪ್ಪ ಸೀಕ್ವೆಲ್ ಮಾಡಿದ್ರೆ, ರಚಿತಾ ರಾಮ್‌‌‌ ಆ ಚಿತ್ರದ ನಾಯಕಿ ಕಮ್ ಖಳನಾಯಕಿ ಆದ್ರೂ ಅಚ್ಚರಿಯಿಲ್ಲ. ಅಂದಹಾಗೆ ರಚಿತಾ ರೆಮ್ಯುನರೇಷನ್ ಈಗಾಗ್ಲೇ ಒಂದು ಕೋಟಿ ದಾಟಿದ್ದು, ಅತಿಹೆಚ್ಚು ಸಂಭಾವನೆ ಪಡೆಯೋ ಕನ್ನಡದ ನಟಿ ಅನ್ನೋ ಗರಿಮೆಗೆ ಪಾತ್ರರಾಗಿದ್ದಾರೆ. ಈಗ ಕೂಲಿ ಚಿತ್ರದ ಸಕ್ಸಸ್‌ನಿಂದಾಗಿ ಪರಭಾಷಾ ಚಿತ್ರಗಳ ಆಫರ್ಸ್‌ ಜೊತೆ ಸಂಭಾವನೆ ಕೂಡ ಉತ್ತುಂಗಕ್ಕೇರಲಿದೆ.

Exit mobile version