ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಕ್ರಿಮಿನಲ್ ಸಿನಿಮಾದಿಂದ ರಚಿತಾ ರಾಮ್ ಹೊರಬಂದಿದ್ದಾರೆ ಅನ್ನೋ ವದಂತಿ ಜೋರಾಗಿ ಹರಡಿತ್ತು. ಅದು ಜಸ್ಟ್ ಸೋಶಿಯಲ್ ಮೀಡಿಯಾಗಷ್ಟೇ ಸೀಮಿತ ಆಗಿದ್ದು, ಈ ಬಗ್ಗೆ ಸ್ವತಃ ಲೇಡಿ ಸೂಪರ್ ಸ್ಟಾರ್ ರಚಿತಾ ಅವ್ರೇ ಗ್ಯಾರಂಟಿ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ.
ಕ್ರಿಮಿನಲ್ ಚಿತ್ರದಿಂದ ಹೊರಬಂದಿಲ್ಲ ರಚಿತಾ ರಾಮ್
ಗ್ಯಾರಂಟಿ ನ್ಯೂಸ್ ಮೂಲಕ ಫೇಕ್ ನ್ಯೂಸ್‌ಗೆ ಇತಿಶ್ರೀ
ಧ್ರುವ ಸರ್ಜಾ.. ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಪಟ್ಟಕ್ಕೇರಿ, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಕಮಾಲ್ ಮಾಡ್ತಿರೋ ಶಕ್ತಿ ಪ್ರಸಾದ್ ಕುಟುಂಬದ ಪವರ್‌ಫುಲ್ ಹೀರೋ. ಇತ್ತ ರಚಿತಾ ರಾಮ್.. ಸತತ 13 ವರ್ಷಗಳಿಂದ ಚಿತ್ರಪ್ರೇಮಿಗಳನ್ನ ರಂಜಿಸುತ್ತಾ ಬರ್ತಿರೋ ಲೇಡಿ ಸೂಪರ್ ಸ್ಟಾರ್. ಇವರ ಭರ್ಜರಿ ಕಾಂಬಿನೇಷನ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇದೀಗ ಬರೋಬ್ಬರಿ 8 ವರ್ಷಗಳ ನಂತ್ರ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ. ಅದೇ ಕ್ರಿಮಿನಲ್.
ಆದ್ರೆ ರಚಿತಾ ದಪ್ಪ ಆಗಿದ್ದಾರೆ ಅಂತೆ. ಅವರು ಕ್ರಿಮಿನಲ್ ಚಿತ್ರದಿಂದ ಹೊರಬಂದರಂತೆ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಕ್ರಿಯೇಟ್ ಅಗಿದೆ. ಅಸಲಿ ಕಥೆ ಬೇರೇನೇ ಇದೆ. ರಚಿತಾನೇ ಧ್ರುವ ಸರ್ಜಾ ಕ್ರಿಮಿನಲ್‌ಗೆ ಜೋಡಿ ಅನ್ನೋದು ಖಚಿತ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಲ್ಯಾಂಡ್‌ಲಾರ್ಡ್ ಚಿತ್ರದ ನಿಂಗವ್ವ ರೋಲ್‌ಗಾಗಿ ತೂಕ ಹೆಚ್ಚಿಸಿಕೊಂಡಿದ್ದ ರಚ್ಚು, ಸದ್ಯ ಜಿಮ್‌ನಲ್ಲಿ ಸಿಕ್ಕಾಪಟ್ಟೆ ಬೆವರಿಳಿಸ್ತಿದ್ದಾರೆ. ಅದಕ್ಕೆ ಇನ್ಸ್‌ಪಿರೇಷನ್ ಕೂಡ ನಟ ಧ್ರುವ ಸರ್ಜಾ. ಅದನ್ನ ಸ್ವತಃ ರಚಿತಾನೇ ಸ್ಪಷ್ಟನೆ ನೀಡಿದ್ದಾರೆ ನೋಡಿ.
ರಚ್ಚು ಜಿಮ್ ವರ್ಕೌಟ್.. ಧ್ರುವ ಸರ್ಜಾನೇ ಸ್ಫೂರ್ತಿ..!
ಏನೇ ಆಗ್ಲಿ ಧ್ರುವ ಜೊತೆ ನಿಲ್ಲುವೆ ಎಂದ ಡಿಂಪಲ್ ಕ್ವೀನ್
ಹೌದು.. ಗ್ಯಾರಂಟಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಎಕ್ಸ್‌ಕ್ಲೂಸಿವ್ ಅಂಶವನ್ನ ಸ್ವತಃ ಅವರೇ ಹೊರಹಾಕಿದ್ದಾರೆ. ಈ ಮೂಲಕ ಕ್ರಿಮಿನಲ್ ಚಿತ್ರದ ನಾಯಕನಟಿ ವಿಚಾರ ಇದ್ದ ದೊಡ್ಡ ಕನ್ಫ್ಯೂಶನ್‌ಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಅಷ್ಟೇ ಅಲ್ಲ, 8 ವರ್ಷಗಳ ಹಿಂದಿನ ಧ್ರುವ ಹಾಗೂ ಇಂದಿನ ಧ್ರುವ ನಡುವೆ ಇರೋ ವ್ಯತ್ಯಾಸ, ಅವ್ರ ಗೆಳೆತನದ ಬಗ್ಗೆ ವಿವರಿಸಿದ್ದಾರೆ. ಏನೇ ಆಗಲಿ ನೋ ಮ್ಯಾಟರ್. ನಾನು ಸದಾ ಧ್ರುವ ಜೊತೆ ನಿಲ್ಲುವೆ. ಈ ಸಿನಿಮಾದಲ್ಲಿ ನಾವಿಬ್ಬರೂ ಚೆನ್ನಾಗಿ ಕಾಣಿಸಿಕೊಳ್ಳಬೇಕು. ಚಿತ್ರ ಚೆನ್ನಾಗಿ ಆಗಬೇಕು. ಧ್ರುವಗಾಗಿ ಈ ಸಿನಿಮಾ ಗೆಲ್ಲಲೇಬೇಕು ಎಂದಿದ್ದಾರೆ.
ಅಷ್ಟೇ ಅಲ್ಲ, ಕ್ರಿಮಿನಲ್ ಚಿತ್ರದ ಮುಹೂರ್ತದಲ್ಲಿ ಜುಟ್ಟು ಹಿಡಿದು ಎಳೆದ ಧ್ರುವ ಸರ್ಜಾ, ಮತ್ತೆ ಅದಕ್ಕೆ ಕಳವಳ ವ್ಯಕ್ತಪಡಿಸಿದ ಧ್ರುವ ಕುರಿತು ತುಂಬಾ ಕ್ಯೂಟ್ ಆಗಿ ಮಾತನಾಡಿದ್ದಾರೆ. ಒಟ್ಟಾರೆ ಕ್ರಿಮಿನಲ್ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದ್ದು, ಸದ್ಯದಲ್ಲೇ ಸಿನಿಮಾ ಶೂಟಿಂಗ್ ಅಡ್ಡಾಗೆ ಎಂಟ್ರಿ ಕೊಡಲಿದ್ದಾರೆ ಲೇಡಿ ಸೂಪರ್ ಸ್ಟಾರ್ ರಚಿತಾ.
