ಡೆವಿಲ್ ಕ್ವೀನ್ ರಚನಾ ರೈಗೆ ಡಿಬಾಸ್ ಜೊತೆಗಿನ ಡೆವಿಲ್ ಚೊಚ್ಚಲ ಸಿನಿಮಾ. ಸಾಮಾನ್ಯವಾಗಿ ಸಿನಿಮಾ ರಿಲೀಸ್ ಆಗಿ, ಹಿಟ್ ಆದ್ಮೇಲೆ ನಟಿಯರಿಗೆ ಡಿಮ್ಯಾಂಡ್ ಹೆಚ್ಚಾಗುತ್ತೆ. ಆದ್ರೆ ಈ ಕರಾವಳಿ ಚೆಲುವೆಗೆ ಡೆವಿಲ್ ರಿಲೀಸ್‌ಗೂ ಮೊದಲೇ ಪಕ್ಕದ ಟಾಲಿವುಡ್ ರೆಡ್ ಕಾರ್ಪೆಟ್ ಹಾಸಿದೆ. ಇಷ್ಟಕ್ಕೂ ಯಾವ ಸ್ಟಾರ್ ಜೊತೆ ಸಿನಿಮಾ ಮಾಡ್ತಿದ್ದಾರೆ ಡೆವಿಲ್ ದೇವತೆ ಅಂತೀರಾ..? ಈ ಎಕ್ಸ್‌ಕ್ಲೂಸಿವ್ ಸ್ಟೋರಿ ನೋಡಿ.
ಅಬ್ಬಬ್ಬಾ.. ‘ಡೆವಿಲ್ ಕ್ವೀನ್’ಗೆ ಟಾಲಿವುಡ್ ರೆಡ್ ಕಾರ್ಪೆಟ್
ದಚ್ಚು ಡೆವಿಲ್ ರಿಲೀಸ್‌ಗೂ ಮೊದ್ಲೇ ತೆಲುಗಲ್ಲಿ ಡಿಮ್ಯಾಂಡ್
ಒಂದೇ ಒಂದು ಸಲ ಸೋತು ಬಿಡೆ ನೀ.. ಅನ್ನೋ ಡೆವಿಲ್ ಹಾಡಿನಿಂದ ಕನ್ನಡಿಗರ ದಿಲ್ ದೋಚಿದ್ದಾರೆ ಅಪ್ಪಟ ಕನ್ನಡತಿ, ಕರಾವಳಿ ಬ್ಯೂಟಿ, ಬಹುಮುಖ ಪ್ರತಿಭೆ ರಚನಾ ರೈ. ಜಸ್ಟ್ ಒಂದು ಹಾಡಿನಿಂದಲೇ ಚಿತ್ರ ಪ್ರೇಮಿಗಳ ಕಣ್ಣು ಕುಕ್ಕುವಂತೆ ಮಾಡಿದ್ದಾರೆ ರಚನಾ. ಅದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟಾರ್‌ಡಮ್, ಡೆವಿಲ್ ಡೈರೆಕ್ಟರ್ ಮಿಲನ ಪ್ರಕಾಶ್ ಅಂಡ್ ಅಫ್ ಕೋರ್ಸ್ ರಚನಾ ಅಂದ, ಚೆಂದ, ಮನೋಜ್ಞ ಅಭಿನಯವೂ ಹೌದು.
ಡೆವಿಲ್ ಕ್ವೀನ್ ಅಂತಲೇ ಕನ್ನಡಿಗರ ಮನೆ, ಮನಗಳನ್ನ ತಲುಪುತ್ತಿರೋ ರಚನಾ ರೈಗೆ ಅಂದದ ಜೊತೆ ಅದೃಷ್ಠ ಕೂಡ ಕೈ ಹಿಡಿದಿದೆ. ತಾಯಿ ಕನ್ನಡ ಟೀಚರ್ ಆಗಿರೋದ್ರಿಂದ ರಚನಾ ಬಹುಮುಖ ಪ್ರತಿಭೆಯೂ ಹೌದು. ಸದ್ಯ ಜರ್ನಲಿಸಂ ವೃತ್ತಿ, ವೆಟರ್ನಲಿ ಡಾಕ್ಟರ್ ಆಗಬೇಕೆಂಬ ಕನಸು, ಭಾವನೆಗಳಿಗೆ ಬಣ್ಣ ತುಂಬುವ ಆರ್ಟಿಸ್ಟ್ ಕಲೆ, ಕ್ಲಾಸಿಕಲ್ ಡ್ಯಾನ್ಸ್.. ಹೀಗೆ ಎಲ್ಲವನ್ನು ಬಿಟ್ಟು ನಟನೆಯೊಂದನ್ನಷ್ಟೇ ಆರಿಸಿಕೊಂಡಿದ್ದಾರೆ. ಅದಕ್ಕೆ ಪ್ರತಿಫಲವಾಗಿ ಆ ಅಭಿನಯ ಶಾರದೆ ರಚನಾರನ್ನ ಕೈ ಹಿಡಿದು ಮುನ್ನಡೆಸೋ ಸೂಚನೆ ಕೂಡ ಸಿಕ್ಕಿದೆ.
ಸಾಮಾನ್ಯವಾಗಿ ಬಣ್ಣ ಹಚ್ಚುವ ನಟಿಮಣಿಯರಿಗೆ ಒಂದು ಸಿನಿಮಅ ನಿರೀಕ್ಷೆಗೂ ಮೀರಿ ಹಿಟ್ ಆದ್ರೆ, ಅವರ ಮುಂದಿನ ಜರ್ನಿ ಮತ್ತಷ್ಟು ಸುಗಮವಾಗುತ್ತೆ. ಆದ್ರೆ ರಚನಾ ರೈಗೆ ಚೊಚ್ಚಲ ಕನ್ನಡ ಸಿನಿಮಾ ಡೆವಿಲ್ ರಿಲೀಸ್‌ಗೂ ಮೊದಲೇ ನಸೀಬು ಬದಲಾಗಿದೆ. ಹೌದು.. ಪಕ್ಕದ ತೆಲುಗು ಚಿತ್ರರಂಗದವರ ಕಣ್ಣು ನಮ್ಮ ಕನ್ನಡತಿ ಮೇಲೆ ಬಿದ್ದಿದೆ. ಅದೇ ಕಾರಣಕ್ಕೆ ಡೆವಿಲ್ ದೇವತೆಗೆ ರೆಡ್ ಕಾರ್ಪೆಟ್ ಹಾಸಿ, ಟಾಲಿವುಡ್‌ಗೆ ವೆಲ್ಕಮ್ ಹೇಳ್ತಿದ್ದಾರೆ.
ಜಯಂ, ದಿಲ್, ಸೈ ಚಿತ್ರಗಳ ಸ್ಟಾರ್ ನಿತಿನ್‌ಗೆ ರಚನಾ ನಾಯಕಿ
ಫೆಬ್ರವರಿಯಿಂದ ಶೂಟಿಂಗ್.. ಆ್ಯಡ್ ಫಿಲಂಸ್‌ಗೂ ಬೇಡಿಕೆ..!!
ಯೆಸ್.. ಟಾಲಿವುಡ್‌ನ ಸ್ಟಾರ್‌ಗಳಲ್ಲಿ ಒಬ್ಬರಾದ ನಿತಿನ್ ಮುಂದಿನ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಡೆವಿಲ್ ಕ್ವೀನ್ ರಚನಾ ರೈ. ಸತತ ಎರಡೂವರೆ ದಶಕಗಳಿಂದ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಾ ಬರ್ತಿರೋ ನಿತಿನ್, ಜಯಂ, ಸೈ, ದಿಲ್, ಧೈರ್ಯಂ, ಇಷ್ಕ್, ಗುಂಡೆಜಾರಿ ಗಲ್ಲಂತೈಯಿಂದೆ, ಅ ಆ, ಭೀಷ್ಮ.. ಸೇರಿದಂತೆ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ್ದಾರೆ.
ನಿತಿನ್ ಕಳೆದ ಚಿತ್ರದಲ್ಲಿ ನಮ್ಮ ಕನ್ನಡತಿ, ಕಾಂತಾರ ಚೆಲುವೆ ಸಪ್ತಮಿ ಗೌಡ ಜೊತೆ ಮಿಂಚಿದ್ರು. ಇದೀಗ ರಚನಾ ರೈ ಸರದಿ. ಈಗಾಗ್ಲೇ ರಚನಾ ರೈ ಜೊತೆ ಮಾತುಕತೆ ನಡೆಸಿ, ಸ್ಕ್ರೀನ್ ಟೆಸ್ಟ್, ಲುಕ್ ಟೆಸ್ಟ್ ಎಲ್ಲಾ ಆಗಿದೆ. ಸಿನಿಮಾ ಸದ್ಯ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, 2026ರ ಫೆಬ್ರವರಿಯಿಂದ ಶೂಟಿಂಗ್ ಶುಭಾರಂಭ ಆಗ್ತಿದೆ. ಹಾಗಾಗಿ ರಚನಾ ಕೂಡ ಅದಕ್ಕೆ ತಕ್ಕನಾಗಿ ಫಿಸಿಕ್, ಡ್ಯಾನ್ಸ್, ಫೈಟ್ಸ್ ಎಲ್ಲಾ ತಯಾರಿ ನಡೆಸಿಕೊಳ್ಳಲಿದ್ದಾರೆ. ಇದಲ್ಲದೆ ಚರನಾ ರೈಗೆ ದೊಡ್ಡ ದೊಡ್ಡ ಜಾಹೀರಾತು ಕಂಪೆನಿಗಳಿಂದ ಆ್ಯಡ್ ಫಿಲಂಸ್‌ಗೆ ಬುಲಾವ್ ಬರ್ತಿದ್ದು, ಡೆವಿಲ್ ರಿಲೀಸ್ ಬಳಿಕ ಸಿಕ್ಕಾಪಟ್ಟೆ ಬ್ಯುಸಿ ಆಗಲಿದ್ದಾರೆ ಈ ಚೆಲುವೆ. ನಮ್ಮ ಕನ್ನಡತಿ ಹೀಗೆ ಪರಭಾಷೆಗಳಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಳ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ.
