ಅಟ್ಲೀ-ಅಲ್ಲು ಜೊತೆ ಕೈ ಜೋಡಿಸ್ತಾರಾ ಶಾರೂಖ್ ಖಾನ್?

ಜೈಲರ್ ಮಿಸ್.. ರಾಕಾ ಫಿಕ್ಸ್.. ಕಿಂಗ್ ಖಾನ್ ಲೆಕ್ಕಾಚಾರ

BeFunky collage (4)

ಸದ್ಯ ಬಾಕ್ಸ್ ಆಫೀಸ್‌ನ ಶೇಕ್ ಮಾಡೋಕೆ ರೆಡಿಯಾಗ್ತಿರೋ ಸಿನಿಮಾ ಅಂದ್ರೆ ಅದು ರಾಕಾ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಮಾಸ್ ಮಾಂತ್ರಿಕ ಅಟ್ಲಿ ಕಾಂಬೋ ಅಂದ್ರೆ ಅಲ್ಲಿ ಅಬ್ಬರ ಜೋರಾಗಿರುತ್ತೆ ಅನ್ನೋದು ಗೊತ್ತು. ಆದ್ರೆ ಈಗ ಕೇಳಿಬರ್ತಿರೋ ಲೇಟೆಸ್ಟ್ ಸುದ್ದಿ ಕೇಳಿದ್ರೆ ನೀವು ಅಕ್ಷರಶಃ ದಂಗಾಗ್ತೀರಾ. ಪುಷ್ಪರಾಜನ ಸಾಮ್ರಾಜ್ಯಕ್ಕೆ ಈಗ ಬಾಲಿವುಡ್ ಬಾದ್‌ಶಾ ಶಾರೂಖ್ ಎಂಟ್ರಿ ಕೊಡ್ತಾರಾ? ಜವಾನ್ ಜೋಡಿ ಮತ್ತೆ ಒಂದಾಗಿ ರಾಕನಲ್ಲಿ ರಗಡ್ ಪ್ಲ್ಯಾನ್ ಮಾಡ್ತಿದ್ಯಾ? ಹಾಗಾದ್ರೆ ರಾಕಾ ಟೀಂ ಸೇರ್ತಿರೋ ಆ ಸ್ಟಾರ್ ಹಿರೋ ಮ್ಯಾಟರ್ ಏನು? ಹೇಳ್ತೀವಿ ಈ ಸ್ಟೋರಿ ನೋಡಿ.

ಸದ್ಯ ಸೌತ್ ಮತ್ತು ನಾರ್ತ್ ಸಿನಿ ದುನಿಯಾದಲ್ಲಿ ಸೌಂಡ್ ಮಾಡ್ತಿರೋದು ಒಂದೇ ಸಿನಿಮಾದ ಟೈಟಲ್ ಅದುವೇ ರಾಕಾ. ಅಲ್ಲು ಅರ್ಜುನ್ ಬರ್ತ್‌ಡೇಗೆ ರಿಲೀಸ್ ಆಗಿರೋ ಫಸ್ಟ್ ಲುಕ್ ಪೋಸ್ಟರ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಟ್ಲಿ ಸ್ಟೈಲ್ ಆಫ್ ಮೇಕಿಂಗ್‌ನಲ್ಲಿ ಐಕಾನ್ ಸ್ಟಾರ್ ಎಷ್ಟು ಮಾಸ್ ಆಗಿ ಕಾಣಿಸ್ತಾರೆ ಅನ್ನೋದಕ್ಕೆ ಆ ಪೋಸ್ಟರ್‌ಗಳೇ ಸಾಕ್ಷಿ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆಟಪ್ ಬದಲಿಸಲು ಭರ್ಜರಿ ಕಸರತ್ತು ನಡೆಸಿದ್ದಾರೆ. ಇನ್ನು ಈ ಕ್ರೇಜಿ ಪ್ರಾಜೆಕ್ಟ್‌ಗೆ ರಶ್ಮಿಕಾ ಮಂದಣ್ಣ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ಲೇಡಿ ಡಾನ್‌ಗಳಂತೆ ಸಾಥ್ ನೀಡ್ತಿರೋದು ಚಿತ್ರದ ಮೇಲಿನ ಕುತೂಹಲವನ್ನ ಡಬಲ್ ಮಾಡಿದೆ.

ಅಟ್ಲೀ-ಅಲ್ಲು ಜೊತೆ ಕೈ ಜೋಡಿಸ್ತಾರಾ ಶಾರೂಖ್ ಖಾನ್?

ಜೈಲರ್ ಮಿಸ್.. ರಾಕಾ ಫಿಕ್ಸ್.. ಕಿಂಗ್ ಖಾನ್ ಲೆಕ್ಕಾಚಾರ

ಈಗ ಕೇಳಿ ಬರ್ತಿರೋ ಅತಿ ದೊಡ್ಡ ನ್ಯೂಸ್ ಅಂದ್ರೆ, ಶಾರೂಖ್ ಖಾನ್ ರಾಕಾ ಚಿತ್ರದಲ್ಲಿ ಅತಿಥಿ ಪಾತ್ರ ಮಾಡ್ತಾರೆ ಅನ್ನೋದು. ಈ ಹಿಂದೆ ರಜನಿಕಾಂತ್ ಅವರ ಜೈಲರ್ 2 ಸಿನಿಮಾದಲ್ಲಿ ಶಾರುಖ್ ನಟಿಸ್ತಾರೆ ಎಂದು ಹೇಳಲಾಗಿತ್ತು, ಅದು ಸಾಧ್ಯವಾಗಲಿಲ್ಲ. ಆದ್ರೆ ಈಗ ಅಲ್ಲು ಅರ್ಜುನ್ ಸಿನಿಮಾದಲ್ಲಿ ಕಿಂಗ್ ಖಾನ್ ಅಬ್ಬರಿಸೋದು ಗ್ಯಾರಂಟಿ ಎನ್ನಲಾಗ್ತಿದೆ. ಹೌದು,  ಯಾಕಂದ್ರೆ ಅಲ್ಲು ಅರ್ಜುನ್ ಬರ್ತ್‌ಡೇಗೆ ರಾಕಾ ಪೋಸ್ಟರ್ ಹಂಚಿಕೊಂಡಿದ್ದ ಶಾರೂಖ್, ಅಲ್ಲು ಸ್ಟೈಲ್‌ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ರು. ಈ ಟ್ವೀಟ್ ಬೆನ್ನಲ್ಲೇ ಈಗ ಮೆಗಾ ಗಾಸಿಪ್ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ.

ಅಟ್ಲೀ-ಖಾನ್ ಬಾಂಡಿಂಗ್.. ಜವಾನ್ ಮ್ಯಾಜಿಕ್ ರಿಪೀಟ್?

ನ್ಯಾಷನಲ್ ಅವಾರ್ಡ್ ವಿನ್ನರ್ಸ್‌‌ನಿಂದ ಬಿಗ್ ಗೇಮ್..!!

ಅಟ್ಲಿ ಮತ್ತು ಶಾರೂಖ್ ಖಾನ್ ನಡುವಿನ ಸ್ನೇಹ ಜವಾನ್ ಸಿನಿಮಾದಿಂದಲೇ ವರ್ಲ್ಡ್ ಫೇಮಸ್. ಅಟ್ಲಿ ನಿರ್ದೇಶನದ ಆ ಸಿನಿಮಾ ಶಾರೂಖ್‌ಗೆ ನ್ಯಾಷನಲ್ ಅವಾರ್ಡ್ ಕೂಡ ತಂದುಕೊಟ್ಟಿದೆ. ಹೀಗಾಗಿ ಅಟ್ಲಿ ಒಂದು ಮಾತು ಹೇಳಿದ್ರೆ ಬಾದ್‌ಶಾ ಇಲ್ಲ ಅನ್ನೋ ಮಾತೆ ಇಲ್ಲ. ಅಲ್ಲು ಅರ್ಜುನ್ ಜೊತೆಗಿನ ಅಟ್ಲಿ ಚಿತ್ರಕ್ಕೆ ಸ್ಪೆಷಲ್ ಟಚ್ ಕೊಡಲು ಶಾರೂಖ್ ಅವರನ್ನ ಕರೆತರುವ ಪ್ಲ್ಯಾನ್ ಫೈನಲ್ ಆಗಿದೆ ಎನ್ನಲಾಗ್ತಿದೆ. ಒಂದು ವೇಳೆ ಈ ಸುದ್ದಿ ನಿಜವಾದ್ರೆ, ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲೇ ಇದೊಂದು ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಮತ್ತು ಮಾಸ್ ಮೂವಿ ಆಗೋದ್ರಲ್ಲಿ ಡೌಟೇ ಇಲ್ಲ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version