ಧುರಂಧರ್ ದಿ ರಿವೆಂಜ್ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ, ಸುಂಟರಗಾಳಿಯೇ ಎಬ್ಬಿಸಿರಬಹುದು ಆದ್ರೆ ನಮ್ಮ ಸೌತ್ ಪುಷ್ಪರಾಜ್ ರೂಲ್ ಮುಂದೆ ಏನೇನೂ ಇಲ್ಲ. ಮೊದಲ ವಾರದ ಕಲೆಕ್ಷನ್ ನೋಡಿದ್ರೆ ಪುಷ್ಪನೇ ನಂಬರ್ ಒನ್. ಅಲ್ಲು ಅರ್ಜುನ್ ಆರ್ಭಟದ ಮುಂದೆ ರಣ್ವೀರ್ ಸಿಂಗ್ ಆಟ ಅಷ್ಟೇನೂ ನಡೆದಿಲ್ಲ.
ಸಾವಿರ ಕೋಟಿ ಕ್ಲಬ್‌ಗೆ ಧುರಂಧರ್.. ಆದ್ರೆ ಪುಷ್ಪನೇ ನಂಬರ್-1
ಫಸ್ಟ್ ವೀಕ್ ಧುರಂಧರ್ 1031Cr.. ಪುಷ್ಪ 1062Cr ಕಲೆಕ್ಷನ್
ಧುರಂಧರ್ ದಿ ರಿವೆಂಜ್ ಹಾಗೂ ಪುಷ್ಪ ದಿ ರೂಲ್ ಸಿನಿಮಾಗಳಿಗೆ ಒಂದಕ್ಕೊಂದು ಕನೆಕ್ಷನ್ನೇ ಇಲ್ಲ. ಅದೇ ಬೇರೆ ಜಾನರ್. ಇದೇ ಬೇರೆ ಜಾನರ್. ಒಂದು ಕಾಲ್ಪನಿಕ ಕಥೆ ಆದ್ರೆ ಮತ್ತೊಂದು ನೈಜ ಘಟನೆಗಳನ್ನ ಆಧರಿಸಿದ ದೇಶಪ್ರೇಮದ ಕಥೆ. ಆದ್ರೆ ಕಲೆಕ್ಷನ್‌ನಲ್ಲಿ ವಿಚಾರದಲ್ಲಿ ಇವೆರಡೂ ಚಿತ್ರಗಳು ಟಾಕ್ ಆಫ್ ದಿ ಟೌನ್ ಆಗಿವೆ. ಇಬ್ಬರೂ ಸಾವಿರ ಕೋಟಿ ಸರದಾರರೇ.. ಆದ್ರೆ not both are same.
ಮೊದಲ ದಿನವೇ ಬರೋಬ್ಬರಿ 240 ಕೋಟಿ ಗಳಿಸೋ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ಅಬ್ಬರಿಸಿ, ಬೊಬ್ಬರಿದಿದ್ದ ಧುರಂಧರ್ ದಿ ರಿವೆಂಜ್ ಮೂವಿ, ಸೌತ್‌ನ ಅಲ್ಲು ಅರ್ಜುನ್ ನಟನೆಯ ಪುಷ್ಪ ಪಾರ್ಟ್-2 ಗಳಿಕೆಯ ದಾಖಲೆಯನ್ನ ಸರಿಗಟ್ಟುವಲ್ಲಿ ವಿಫಲವಾಗಿದೆ. ಇವೆರಡೂ ಚಿತ್ರಗಳು ಫಾಸ್ಟೆಸ್ಟ್ 1000 ಕ್ರೋರ್ ಕ್ಲಬ್ ಸಿನಿಮಾಗಳು ಅನಿಸಿಕೊಂಡರೂ, ಮೊದಲ ವಾರಾಂತ್ಯಕ್ಕೆ ರಣ್ವೀರ್ ಸಿಂಗ್ ಧುರಂಧರ್‌ಗಿಂತ ಅಲ್ಲು ಅರ್ಜುನ್ ಪುಷ್ಪನೇ ಮೇಲುಗೈ ಸಾಧಿಸಿದೆ.
ಸೌತ್ ಪುಷ್ಪರಾಜ್ ಅಲ್ಲು ಅರ್ಜುನ್ ಮುಂದೆ ರಣ್ವೀರ್ ಡಲ್..!
ಅಬ್ಬಬ್ಬಾ.. ಸೋಶಿಯಲ್ ಮೀಡಿಯಾದಲ್ಲಿ ಪುಷ್ಪ ಸಖತ್ ರಾಕ್ಸ್
ಧುರಂಧರ್-2 ಮೊದಲ ವಾರದಲ್ಲಿ 1031 ಕೋಟಿ ಗಳಿಸಿದ್ರೆ, ಅಲ್ಲು ಅರ್ಜುನ್-ರಶ್ಮಿಕಾ ಜೋಡಿ 1062 ಕೋಟಿ ಕೆಲಕ್ಷನ್ ಮಾಡಿ ಕಮಾಲ್ ಮಾಡುತ್ತೆ. ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ.
ಅದ್ರಲ್ಲೂ ಐಕಾನ್ ಸ್ಟಾರ್ ಹಾಗೂ ಮೆಗಾ ಫ್ಯಾನ್ಸ್ ಇದನ್ನ ಖುಷಿಯಿಂದ ಶೇರ್ ಮಾಡ್ತಾ ಖುಷಿ ವ್ಯಕ್ತಪಡಿಸ್ತಿದ್ದಾರೆ. ಸೌತ್ ಸಿನಿಮಾದ ಮುಂದೆ ಬಾಲಿವುಡ್ ಸಿನಿಮಾ ಕೊಂಚ ಡಲ್ ಹೊಡೆದಿದೆ ಅನ್ನೋದಷ್ಟೇ ಸತ್ಯ. ಆದ್ರೆ ಈ ರೀತಿ ಹೋಲಿಕೆಗಳೇ ಸರಿಯಲ್ಲ ಅನ್ನೋದನ್ನ ಫ್ಯಾನ್ಸ್ ಹಾಗೂ ಪ್ರೇಕ್ಷಕರು ಅಥ್ವಾ ಈ ರೀತಿಯ ಪೋಸ್ಟ್‌ಗಳನ್ನ ಮಾಡುವ ನೆಟ್ಟಿಗರು ಅರಿತುಕೊಳ್ಳಬೇಕಿದೆ.
