ಡಿಸೈನ್‌‌ನಲ್ಲಿ ಪದವಿ ಪಡೆದ ರಾಜರತ್ನನ ಹಿರಿ ಮಗಳು ಧೃತಿ..!

ನ್ಯೂಯಾರ್ಕ್‌ನಲ್ಲಿ ಅಪ್ಪು ಪುತ್ರಿ.. ಕಾನ್ವೊಕೇಷನ್‌‌ನಲ್ಲಿ ಅಶ್ವಿನಿ

Untitled design 2025 05 17t180442.042

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಈಗ ಇದ್ದಿದ್ರೆ ಅದೆಷ್ಟು ಖುಷಿ ಪಡ್ತಿದ್ರೋ ಏನೋ. ಹೌದು.. ಅಪ್ಪು ಮುದ್ದಿನ ಹಿರಿಮಗಳು ಧೃತಿ, ನ್ಯೂಯಾರ್ಕ್‌‌ನಲ್ಲಿ ಪದವಿ ಪಡೆದಿದ್ದಾರೆ. ಕಾನ್ವೊಕೇಷನ್‌‌‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ವಂದಿತಾ ಹಾಗೂ ವಿನಯ್ ಭಾಗಿಯಾಗಿ ಸಂಭ್ರಮಿಸಿದ್ದಾರೆ. ಈ ಕುರಿತ ಡಿಟೈಲ್ಡ್ ರಿಪೋರ್ಟ್‌ ಇಲ್ಲಿದೆ ನೋಡಿ.

ಯೋಗವು ಒಮ್ಮೆ ಬರುವುದು ನಿನಗೆ.. ಯೋಗ್ಯತೆ ಒಂದೇ ಉಳಿವುದು ಕೊನೆಗೆ ಅನ್ನೋ ಮಾತು ಅಕ್ಷರಶಃ ಸತ್ಯ. ಇದು ರಾಜಕುಮಾರ ಸಿನಿಮಾದ ಹಾಡೊಂದರ ಸಾಲು ಆದ್ರೂ ಸಹ ಇಡೀ ಮನುಕುಲಕ್ಕೆ ಅಪ್ಲೈ ಆಗುವಂತಹ ತೂಕದ ಮಾತಾಗಿದೆ. ಅದ್ರಂತೆ ರಾಜರತ್ನ ಪುನೀತ್ ರಾಜ್‌‌ಕುಮಾರ್‌‌ರ ಮುದ್ದಿನ ಹಿರಿಮಗಳು ಧೃತಿ ಪುನೀತ್ ರಾಜ್‌ಕುಮಾರ್‌‌ತನಗೆ ಸಿಕ್ಕಿರೋ ಯೋಗವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.

ಅಪ್ಪು ಇದ್ದಾಗಲೇ ನ್ಯೂಯಾರ್ಕ್‌‌ನಲ್ಲಿ ಡಿಸೈನರ್ ವಿಭಾಗದಲ್ಲಿ ಪದವಿ ಮಾಡಲು ಅಮೆರಿಕಾಗೆ ಫ್ಲೈಟ್ ಏರಿದ್ರು ಅಪ್ಪು-ಅಶ್ವಿನಿ ಪುನೀತ್‌ರಾಜ್‌ಕುಮಾರ್‌ರ ಹಿರಿ ಮಗಳು ಧೃತಿ. ನ್ಯೂಯಾರ್ಕ್‌‌ನ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಸಂಸ್ಥೆಯಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿರುವಾಗಲೇ ಅಪ್ಪು ಹೃದಯಾಘಾತದಿಂದ ಇನ್ನಿಲ್ಲವಾದರು. ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಗೆ ಬಂದು ಹೋಗಿದ್ದ ಧೃತಿ, ಇದೀಗ ಅಪ್ಪನ ಆ ಆಶಯವನ್ನು ಸಾಕಾರಗೊಳಿಸಿದ್ದಾರೆ. ಹೌದು.. ಧೃತಿ ಪುನೀತ್ ರಾಜ್‌ಕುಮಾರ್ ಈಗ ಡಿಗ್ರಿ ಗ್ರಾಜುಯೇಟ್.

ಡಿಸೈನ್ ಕೋರ್ಸ್‌ನಲ್ಲಿ ಪದವಿ ಪಡೆದ ಧೃತಿ ಕಾನ್ವೊಕೇಷನ್‌ನಲ್ಲಿ ತಾಯಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಸಹೋದರಿ ವಂದಿತಾ, ಸಹೋದರ ವಿನಯ್ ರಾಜ್‌ಕುಮಾರ್, ಪಿಆರ್‌ಕೆ ಪ್ರೊಡಕ್ಷನ್ಸ್‌ನ ಮ್ಯಾನೇಜರ್ ಸತೀಶ್ ಭಾಗಿಯಾಗಿ ಧೃತಿ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ. ಗ್ರಾಜುಯೇಟ್ ಆದ ಧೃತಿ, ಆ ಫೋಟೋಗಳನ್ನ ಬಹಳ ಖುಷಿಯಿಂದ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಬಹುಶಃ ಇಂದು ಪುನೀತ್ ರಾಜ್‌‌ಕುಮಾರ್ ಇದ್ದಿದ್ರೆ ಅದೆಷ್ಟು ಖುಷಿ ಪಡ್ತಿದ್ರೋ ಏನೋ. ಮಗಳು ಗ್ರಾಜುಯೇಟ್ ಆದ ಈ ಅವಿಸ್ಮರಣೀಯ ಕ್ಷಣಗಳನ್ನ ನೋಡುವ ಯೋಗ ಅಪ್ಪುಗೆ ಇಲ್ಲ. ಅಪ್ಪನ ಆ ಖುಷಿ ಕ್ಷಣಗಳನ್ನು ನೋಡಿ ಅಪ್ಪುಗೆಯೊಂದು ನೀಡುವ ಯೋಗ ಧೃತಿಗೂ ಇಲ್ಲದಂತೆ ಮಾಡಿದ್ದಾನೆ ದೇವರು. ಅದೇನೇ ಇರಲಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ದಿಟ್ಟ ಹೆಣ್ಣಾಗಿ, ನೋವನ್ನೆಲ್ಲಾ ನುಂಗಿ, ಪತಿಯ ಸಿನಿಮಾ ನಿರ್ಮಾಣದ ಕನಸು, ಶಾಲೆ ಆರಂಭಿಸೋ ಕನಸು, ಮಕ್ಕಳ ಗ್ರಾಜುಯೇಷನ್.. ಹೀಗೆ ಎಲ್ಲವನ್ನೂ ಹಂತ ಹಂತವಾಗಿ ಈಡೇರಿಸುತ್ತಿದ್ದಾರೆ. ಧೃತಿಗೆ ಶುಭಾಶಯ ಹೇಳ್ತಾ, ಅಶ್ವಿನಿ ಅವ್ರಿಗೊಂದು ಹ್ಯಾಟ್ಸಾಫ್ ಹೇಳಲೇಬೇಕು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version