ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಇದೇ ಮೊದಲ ಬಾರಿಗೆ ನಮ್ಮ ಗ್ಯಾರಂಟಿ ನ್ಯೂಸ್‌ಗೊಂದು ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಡಿಸ್ಟ್ರಿಬ್ಯೂಟರ್ ಆಗಿದ್ದ ಪ್ರಿಯಾ ಸುದೀಪ್, ನಿರ್ಮಾಪಕಿಯಾಗಿಯೂ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಮಲಯಾಳಂ ಮೂಲದವರಾದ್ರೂ ಅವರ ಕನ್ನಡ ಕೇಳೋಕೆ ಅದ್ಭುತ ಅನಿಸಲಿದೆ. ಮ್ಯಾಂಗೋ ಪಚ್ಚ ಮೂವಿ ಅಲ್ಲದೆ, ತಮ್ಮ ಯಜಮಾನ ದೀಪು, ಮಗಳು ಸಾನ್ವಿ ಸೇರಿದಂತೆ ಹೈದ್ರಾಬಾದ್‌ನಲ್ಲೊಂದು ಮನೆ ಇರೋ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದರ ಫುಲ್ ಡಿಟೇಲ್ಸ್ ಇಲ್ಲಿದೆ.
- ಅಬ್ಬಬ್ಬಾ.. ಅದ್ಭುತ, ಅಮೋಘ ಮಾಣಿಕ್ಯನ ಮನದನ್ನೆಯ ಕನ್ನಡ
- ಇವ್ರ ಕನ್ನಡ ಕೇಳಿ ಬಿಗ್ಬಾಸ್ಗೆ ಆಫರ್ ಬಂದ್ರೂ ಅಚ್ಚರಿಯಿಲ್ಲ
ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರು ಮಾರ್ಕ್ ಚಿತ್ರದ ಮೂಲಕ ಡಿಸ್ಟ್ರಿಬ್ಯೂಟರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆದ್ರೀಗ ನಿರ್ಮಾಪಕಿ ಕೂಡ ಹೌದು. ಯೆಸ್.. ಕಿಚ್ಚನ ಅಕ್ಕನ ಮಗ ಸಂಚಿತ್ ಸಂಜೀವ್.. ಅಂದ್ರೆ ತಮ್ಮ ಸೋದರಳಿಯನನ್ನ ಹೀರೋ ಆಗಿ ಬೆಳ್ಳಿಪರದೆಗೆ ಇಂಟ್ರಡ್ಯೂಸ್ ಮಾಡ್ತಿದ್ದಾರೆ. ಕೆಆರ್‌ಜಿ ಜೊತೆಗೂಡಿ ತಮ್ಮ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಮೂಲಕ ಮ್ಯಾಂಗೋ ಪಚ್ಚ ಚಿತ್ರವನ್ನ ಪ್ರಿಯಾ ಸುದೀಪ್ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಗ್ಯಾರಂಟಿ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೂಡ ನೀಡಿದ್ದಾರೆ ಪ್ರಿಯಾ.
ಮೂಲತಹ ಮಲಯಾಳಿ ಆಗಿರೋ ಪ್ರಿಯಾ ಸುದೀಪ್ ಅವ್ರ ಕನ್ನಡ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ. ಹೌದು.. ಆಕೆ ಮಲಯಾಳಿ ಅನ್ನೋದೇ ಡೌಟು. ಅಷ್ಟರ ಮಟ್ಟಿಗೆ ಸ್ಪಷ್ಟ ಕನ್ನಡ ಮಾತಾಡ್ತಾರೆ. ಹರಳು ಉರಿದಂತೆ ಕನ್ನಡ ಮಾತಾಡೋ ಇವರ ಬಾಯಿಂದ ಕನ್ನಡ ಕೇಳೋದೇ ಒಂಥರಾ ಮಜಬೂತಾಗಿದೆ. ಯಾಕಂದ್ರೆ ಆಕೆ ಕಿಚ್ಚನ ಕೈ ಹಿಡಿದು ಬರೋಬ್ಬರಿ 25 ವರ್ಷಗಳಾಯ್ತು. ಅಂದಿನಿಂದ ಇದೇ ಮೊದಲ ಬಾರಿಗೆ ಹೀಗೆ ಮುಕ್ತವಾಗಿ ಕ್ಯಾಮೆರಾ ಮುಂದೆ ಕೂತು ಮಾತನಾಡಿರೋದು. ಬಹುಶಃ ಇವ್ರ ಕನ್ನಡ ಕೇಳ್ತಿದ್ರೆ, ಮುಂದೊಂದು ದಿನ ಇವರೇ ಬಿಗ್‌ಬಾಸ್‌ನ ಹೋಸ್ಟ್ ಮಾಡಿದ್ರೂ ಅಚ್ಚರಿಯಿಲ್ಲ ಎನ್ನುವಂತಿದೆ.
- ಹೈದ್ರಾಬಾದ್‌ನಲ್ಲೊಂದು ಕಿಚ್ಚನ ಮನೆ.. ಗಿಫ್ಟ್ ಮಾಡಿದ್ಯಾರು?!
- ಸ್ಟೇಜ್ 360 ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಆ್ಯಕ್ಟೀವ್..?
ಪ್ರಿಯಾ ಸುದೀಪ್ ನಿರ್ಮಾಪಕಿ ಆಗೋಕೆ ಮುನ್ನ ಉದ್ಯಮಿ. ಹೌದು.. ಸ್ಟೇಜ್ 360 ಅನ್ನೋ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನ ಆರಂಭಿಸಿದ್ರು. ಅದು ಇಂದಿಗೂ ಆ್ಯಕ್ಟೀವ್ ಆಗಿದ್ದು, ಸುದೀಪ್ ಹುಡುಗರಿಗಾಗಿ ತಾನು ಕೈ ಜೋಡಿಸಿದ್ದರ ಬಗ್ಗೆ ಮುಕ್ತವಾಗಿ ಮಾತನಾಡಿದ್ರು. ಅಲ್ಲದೆ, ಹೈದ್ರಾಬಾದ್‌ನಲ್ಲಿ ಬ್ಯುಸಿನೆಸ್ ಇಲ್ಲ. ಬದಲಿಗೆ ಒಂದು ಮನೆ ಇದೆ. ಹಾಗಾಗಿ ಆಗಾಗ ಅಲ್ಲಿಗೆ ಹೋಗಿ ಬರ್ತಿರ್ತೀವಿ ಅಂತಾರೆ ಪ್ರಿಯಾ ಸುದೀಪ್.
ಯೆಸ್.. ಸುದೀಪ್ ಅವರು ರಾಜಮೌಳಿಯ ಈಗ ಚಿತ್ರದಲ್ಲಿ ನಟಿಸಿದ್ದರು. ಆಗ ಅದಕ್ಕಾಗಿ ನೀಡಿದ ಸಂಭಾವನೆಯಲ್ಲಿ ಹೈದ್ರಾಬಾದ್‌ನಲ್ಲಿ ಮನೆ ಖರೀದಿಸಿದ್ರಂತೆ ಕಿಚ್ಚ. ಇಲ್ಲಿ ಬೇಜಾರು ಆದಾಗ, ಬಿಡುವಿನ ವೇಳೆ ಸ್ವಲ್ಪ ದಿನ ಅಲ್ಲಿಗೆ ತೆರಳಿ ಅಲ್ಲೇ ಕಾಲ ಕಳೆಯುತ್ತಾರಂತೆ ಸುದೀಪ್ ಫ್ಯಾಮಿಲಿ. ಈ ವಿಷಯವನ್ನ ಇದೇ ಮೊದಲ ಬಾರಿಗೆ ಗ್ಯಾರಂಟಿ ನ್ಯೂಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ.
- ನಾಯಕ ಸುದೀಪ್.. ಆದ್ರೆ ಗಾಯನ ಅಂದ್ರೆ ಸಾನ್ವಿನೇ ಬೆಸ್ಟ್..!
- ಮ್ಯಾಂಗೋ ಪಚ್ಚ ಚಿತ್ರದ ‘ಅರಗಿಣಿ’ಗೆ ಸಾನ್ವಿ ಸುದೀಪ್ ಕಂಠ
ಪ್ರಿಯಾ ಸುದೀಪ್ ಅವರಿಗೆ ಮಗಳು ಸಾನ್ವಿ, ಆಕೆಯ ಗಾಯನ ಅಂದ್ರೆ ಪಂಚಪ್ರಾಣ. ಅದರಲ್ಲೂ ಸುದೀಪ್ ಅವರು ಗಾಯಕರಾಗಿ ಕೂಡ ಗುರ್ತಿಸಿಕೊಂಡಿದ್ರೂ ಸಹ, ಸಾನ್ವಿನೇ ಬೆಸ್ಟ್ ಸುದೀಪ್ ನೆಕ್ಸ್ಟ್ ಅಂತಾರೆ ಪ್ರಿಯಾ ಸುದೀಪ್.
ಮ್ಯಾಂಗೋ ಪಚ್ಚ ಚಿತ್ರದ ಅರಗಿಣಿ ಸಾಂಗ್‌ನ ಸಾನ್ವಿಯೇ ಹಾಡಿದ್ದು, ಮಾರ್ಕ್ ಚಿತ್ರದ ಮಸ್ತ್ ಮಲೈಕಾಗಿಂತ ಪ್ರಿಯಾ ಸುದೀಪ್ ಅವರಿಗೆ ಇದೇ ಫೇವರಿಟ್ ಅಂತೆ.
- ಸಾನ್ವಿಗೆ ಬ್ಯಾಡ್ ಕಮೆಂಟ್ಸ್.. ಪ್ರಿಯಾ ಸುದೀಪ್ ಹೇಳಿದ್ದೇನು..?
- ಟ್ಯಾಟೂ ವಿವಾದ, ಬಾಡಿ ಶೇಮಿಂಗ್ ಬಗ್ಗೆ ಕಿಚ್ಚನ ವೈಫ್ ಟಾಕ್
ಸಂಗೀತ ಕ್ಷೇತ್ರದಲ್ಲಿ ತನ್ನನ್ನ ತಾನು ಗುರ್ತಿಸಿಕೊಳ್ಳೋದ್ರಲ್ಲಿ ಬ್ಯುಸಿ ಆಗಿರೋ ಸಾನ್ವಿಗೆ ಒಂದಷ್ಟು ಮಂದಿ ಇತ್ತೀಚೆಗೆ ಬಾಡಿ ಶೇಮಿಂಗ್ ಮಾಡಿದ್ರು. ಅಷ್ಟೇ ಅಲ್ಲ, ಬೆನ್ನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡಿದ್ದ ಸಾನ್ವಿಗೆ ನೆಟ್ಟಿಗರು ಮನಸೋ ಇಚ್ಚೆ ಬ್ಯಾಡ್ ಕಮೆಂಟ್ಸ್ ಹಾಕಿದ್ರು. ಈ ಬಗ್ಗೆ ಪ್ರಿಯಾ ಸುದೀಪ್ ಪ್ರತಿಕ್ರಿಯಿಸಿದ್ದು, ತಮ್ಮ ಅನಿಸಿಕೆ ಹೊರ ಹಾಕಿದ್ದಾರೆ. ಕಮೆಂಟ್ ಮಾಡೋಕೆ ಮುನ್ನ ಒಮ್ಮೆ ಯೋಚಿಸಿ ಅಂಯತ ನಯವಾಗಿಯೇ ಉತ್ತರಿಸಿದ್ದಾರೆ.
- ರನ್ನನ ಅಡುಗೆ, ಕೋಪ & ನಿರೂಪಣೆ ಬಗ್ಗೆ ಪತ್ನಿ ಓಪನ್ ಟಾಕ್
- ವಿಷ್ಣುವರ್ಧನ ಫೇವರಿಟ್ ಮೂವಿ.. ಫೇವರಿಟ್ ಸಾಂಗ್ ಯಾವ್ದು?
ತಮ್ಮ ಯಜಮಾನ ಬಾದ್‌ಷಾ ಸುದೀಪ್ ಕುರಿತು ಸಾಕಷ್ಟು ವಿಷಯಗಳನ್ನ ಹಂಚಿಕೊಂಡಿರೋ ಪ್ರಿಯಾ ಸುದೀಪ್, ಅವರು ಎಂತಹ ನಳಮಹಾರಾಜರು ಅನ್ನೋದನ್ನ ಹೇಳಿದ್ದಾರೆ. ಅಲ್ಲದೆ ತಾವು ಅಡುಗೆ ಮಾಡೋದ್ರಲ್ಲಿ ಎಷ್ಟರ ಮಟ್ಟಿಗೆ ಮೇಲುಗೈ ಅನ್ನೋದನ್ನೂ ತಿಳಿಸಿದ್ದಾರೆ.
ಇನ್ನೂ ಸುದೀಪ್ ಅವರ ಕೋಪ, ಅವರಲ್ಲಿರೋ ಮುಗ್ಧತೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಒಬ್ಬ ಗಂಡನಾಗಿ ಜವಾಬ್ದಾರಿಗಳನ್ನ ತಗೊಳೋದ್ರಲ್ಲಿ ಸುದೀಪ್ ಕುರಿತು ಹಾಡಿ, ಹೊಗಳಿದ್ದಾರೆ ಪ್ರಿಯಾ ಸುದೀಪ್.
ಕಿಚ್ಚನ ಫೇವರಿಟ್ ಮೂವಿ, ಸಾಂಗ್ ಜೊತೆಗೆ ಅವ್ರನ್ನ ಇವರು ಏನಂತ ಕರೀತಾರೆ..? ಇವರನ್ನ ಅವರು ಏನಂತ ಕರೀತಾರೆ ಅನ್ನೋ ಟಾಪ್ ಸೀಕ್ರೆಟ್ ಕೂಡ ಬಿಚ್ಚಿಟ್ಟಿದ್ದಾರೆ.
ಒಟ್ಟಾರೆ ಮ್ಯಾಂಗೋ ಪಚ್ಚ ಸಿನಿಮಾ ಇದೇ ಜೂನ್ 5ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಮಿಸ್ ಮಾಡದೇ ಥಿಯೇಟರ್‌ನಲ್ಲೇ ನೋಡಿ, ಸುದೀಪ್ ಕುಟುಂಬದ ಕುಡಿಗೆ ಸಪೋರ್ಟ್ ಮಾಡಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್