ಪ್ರಭಾಸ್ ಸ್ಪಿರಿಟ್ ಚಿತ್ರದಿಂದ ದೀಪಿಕಾ ಪಡುಕೋಣೆಗೆ ಗೇಟ್ಪಾಸ್ ನೀಡಿದ ಸಂದೀಪ್ ರೆಡ್ಡಿ ವಂಗಾಗೆ ಬಾಲಿವುಡ್ ಬ್ಯೂಟಿ ಶಾಕ್ ನೀಡಿದ್ದಾರೆ. ಸ್ಪಿರಿಟ್ ಕಥೆ ಲೀಕ್ ಮಾಡಿ, ಡೈರೆಕ್ಟರ್ನ ಕೆರಳಿಸಿದ್ದಾರೆ ದೀಪಿಕಾ. ಅನೌಪಚಾರಿಕ ಒಪ್ಪಂದ ಮುರಿದ ಕನ್ನಡತಿ ಮೇಲೆ ಕೆಂಡಾಮಂಡಲ ಆಗಿದ್ದಾರೆ ಸೆನ್ಸೇಷನಲ್ ಡೈರೆಕ್ಟರ್. ಈ ಕುರಿತ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ ನೋಡಿ.
- ‘ಸ್ಪಿರಿಟ್’ ಕಥೆ ಲೀಕ್.. ದೀಪಿಕಾಗೆ ವಂಗಾ ಖಡಕ್ ಕೌಂಟರ್
- ನಟಿಯರ ತೃಪ್ತಿ-ಅತೃಪ್ತಿಗಳ ಕದನದಲ್ಲಿ ಮಂಗನಾದ ವಂಗಾ
- ದೀಪಿಕಾ ಡರ್ಟಿ ಪಿಆರ್ ಗೇಮ್ಸ್ ವಿರುದ್ಧ ಕಿಡಿಕಾರಿದ ಡೈರೆಕ್ಟರ್
- ಹಸಿಬಿಸಿ ದೃಶ್ಯಗಳ A ರೇಟೆಡ್ ಮೂವಿ.. ‘ಸ್ತ್ರೀವಾದ’ ಥಳಕು..!
ಬ್ಯಾಕ್ ಟು ಬ್ಯಾಕ್ ಮೂರು ಬ್ಲಾಕ್ ಬಸ್ಟರ್ ಹಿಟ್ಸ್ ನೀಡಿರೋ ಇಂಡಿಯಾದ ಸೆನ್ಸೇಷನಲ್ ಡೈರೆಕ್ಟರ್. ಮತ್ತೊಬ್ರು ಇತ್ತೀಚೆಗೆ ನಟಿಸಿದ ಮೂರೂ ಪ್ಯಾನ್ ಇಂಡಿಯಾ ಚಿತ್ರಗಳು ಸೂಪರ್ ಹಿಟ್. ಇವರಿಬ್ಬರ ನಡುವೆ ದೊಡ್ಡ ಮಟ್ಟದ ಈಗೋ ಕ್ಲ್ಯಾಶ್ ಆಗಿದೆ. ಅದ್ರಿಂದ ಇಡೀ ಬಾಲಿವುಡ್ ತಲ್ಲಣಗೊಂಡಿದೆ. ಯೆಸ್.. ಸಂದೀಪ್ ರೆಡ್ಡಿ ವಂಗಾ ಹಾಗೂ ದೀಪಿಕಾ ಪಡುಕೋಣೆ ನಡುವೆ ನೀನಾ-ನಾನಾ ಫೈಟ್ ಶುರುವಾಗಿದ್ದು, ಪರಸ್ಪರ ಕೆಸರೆರಚಾಡುವ ಕಾರ್ಯಗಳು ಜೋರಾಗಿ ನಡೀತಿವೆ.
ದೀಪಿಕಾ ಡರ್ಟಿ ಪಿಆರ್ ಗೇಮ್ಸ್ಗೆ ವಂಗಾ ಆಕ್ರೋಶ
‘ನಾನು ಕೆಲ ದಿನಗಳ ಹಿಂದೆ ಒಬ್ಬ ಖ್ಯಾತ ನಾಯಕನಟಿಗೆ ಕಥೆಯನ್ನ ಹೇಳಿದ್ದೆ. ಸಂಪೂರ್ಣ ನಂಬಿಕೆಯಿಂದಲೇ ಕಥೆಯನ್ನ ಹೇಳಿದೆ ಎಂಬುದನ್ನು ಗಮನಿಸಬೇಕು. ಆದ್ರೆ ಅವರು ನನ್ನ ನಂಬಿಕೆಯನ್ನು ಉಳಿಸಿಕೊಂಡಿಲ್ಲ. ಕಥೆಯನ್ನ ಸೋರಿಕೆ ಮಾಡಿದ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದಾರೆ. ನಾವು ಕಲಾವಿದರಿಗೆ ಕಥೆ ಹೇಳುವಾಗ, ಅದನ್ನ ಯಾರ ಬಳಿಯೂ ಹಂಚಿಕೊಳ್ಳಬಾರದು ಎನ್ನುವ ಅನೌಪಚಾರಿಕ ಒಪ್ಪಂದವಿರುತ್ತದೆ. ಆದ್ರೆ ನಟಿ ಅದನ್ನ ಉಲ್ಲಂಘಿಸಿದ್ದಾರೆ. ನಿಮ್ಮ ಸ್ತ್ರೀವಾದ ಇದನ್ನೇ ಉಲ್ಲೇಖಿಸುತ್ತದೆಯೇ..? ನಿಮ್ಮ ಪಿಆರ್ ತಂಡ ಯುವ ನಟನನ್ನು ಕೀಳಾಗಿ ನೋಡುತ್ತದೆ. ಸ್ತ್ರೀವಾದ ಅಂದ್ರೆ ಇದೇನಾ..? ನಾನು ಸಿನಿಮಾ ನಿರ್ದೇಶಕನಾಗಿ ಕಥೆ ಬರೆಯಲು ಹಲವು ವರ್ಷಗಳು ಶ್ರಮಿಸಿದ್ದೇನೆ. ನನಗೆ ಸರ್ವವೂ ಸಿನಿಮಾನೇ. ನನ್ನ ಚಿತ್ರದ ಸಂಪೂರ್ಣ ಕಥೆಯನ್ನೇ ನೀವು ಸೋರಿಕೆ ಮಾಡಿದ್ರೂ ಸಹ ನಾನು ಕಳೆದುಕೊಳ್ಳುವುದು ಏನೂ ಇಲ್ಲ’.
ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಕಥೆ ಲೀಕ್ ಮಾಡಿರೋ ದೀಪಿಕಾ ಪಡುಕೋಣೆಗೆ ನೇರವಾಗಿಯೇ ಲೆಫ್ಟು ರೈಟಯ ತರಾಟೆಗೆ ತೆಗೆದುಕೊಂಡಿದ್ದಾರೆ ವಂಗಾ. ಒಟ್ಟಾರೆ ಪಾತ್ರ ನೀಡಿದ್ದಕ್ಕೆ ತೃಪ್ತಗೊಂಡ ತೃಪ್ತಿ ದಿಮ್ರಿ ಹಾಗೂ ಸಿನಿಮಾದಿಂದ ಉಚ್ಚಾಟಿಸಿದ್ದಕ್ಕೆ ಅತೃಪ್ತರಾದ ದೀಪಿಕಾ ಪಡುಕೋಣೆ ನಡುವೆ ಒಂಥರಾ ಮಂಗನಾಗಿದ್ದಾರೆ ಸಂದೀಪ್ ರೆಡ್ಡಿ ವಂಗಾ. ಆದ್ರೆ ಸಿನಿಮಾದ ಕಥೆ ವಿಚಾರ ದೀಪಿಕಾ ಗೌಪ್ಯತೆ ಕಾಪಾಡಿಕೊಳ್ಳಬೇಕಿತ್ತು ಅಂತ ಎಲ್ಲರೂ ವಂಗಾ ಪರವೇ ಬ್ಯಾಟ್ ಬೀಸುತ್ತಿದ್ದಾರೆ.