ಬಯಲಾಯ್ತು ರಾಜಾಸಾಬ್ ಹಾರರ್ ಫ್ಯಾಂಟಸಿ ವರ್ಲ್ಡ್‌

ಪ್ರಭಾಸ್ ಹೊಸ ಪ್ರಯೋಗಕ್ಕೆ ಸಂಜಯ್ ದತ್ ಸಾಥ್..!!

Untitled design 2025 06 16t180930.586

ಪ್ರಭಾಸ್ ಬರೀ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲ. ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಕೂಡ ಹೌದು. ಬರೀ ಹೊಡಿ ಬಡಿ ಕಡಿ ಸಿನಿಮಾಗಳಿಗೆ ಸೀಮಿತವಾಗದ ಡಾರ್ಲಿಂಗ್, ದೆವ್ವ-ಭೂತದ ಹಾರರ್ ಸಿನಿಮಾಗಳಿಂದಲೂ ಸದ್ದು ಮಾಡ್ತಿದ್ದಾರೆ. ಯೆಸ್.. ಇಂಡಿಯಾದ ಬಿಗ್ಗೆಸ್ಟ್ ಹಾರರ್ ಫ್ಯಾಂಟಸಿ ಎಂಟರ್‌ಟೈನರ್ ರಾಜಾಸಾಬ್ ಪ್ರಪಂಚ ಅನಾವರಣಗೊಂಡಿದೆ.

ದಿ ವೆಯ್ಟ್ ಈಸ್ ಓವರ್.. ರಾಜಾಸಾಬ್ ಪ್ರಪಂಚ ಕೊನೆಗೂ ರಿವೀಲ್ ಆಗಿದೆ. ಯೆಸ್.. ಸ್ಟಿಲ್ ಫೋಟೋಸ್ ಹಾಗೂ ಕಾಂಬಿನೇಷನ್‌ನಿಂದಲೇ ಅತೀವ ನಿರೀಕ್ಷೆ ಮೂಡಿಸಿದ್ದ ದಿ ರಾಜಾಸಾಬ್ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಕಾತರದಿಂದ ಕಾಯ್ತಿದ್ದ ಪ್ರಭಾಸ್ ಫ್ಯಾನ್ಸ್‌‌‌ ನಿರೀಕ್ಷೆ ಮಾತ್ರ ಹುಸಿಯಾಗಿಲ್ಲ. ಯಾಕಂದ್ರೆ ನಿರೀಕ್ಷೆಯಂತೆ ಮಸ್ತ್ ಮಜಾ ಕೊಡ್ತಿದೆ ದಿ ರಾಜಾಸಾಬ್ ಟೀಸರ್ ದೃಶ್ಯಗುಚ್ಚ.

ADVERTISEMENT
ADVERTISEMENT

ಮಾರುತಿ ನಿರ್ದೇಶನದಲ್ಲಿ  ಸುಮಾರು 300 ಕೋಟಿ ಬಿಗ್ ಬಜೆಟ್‌‌ನಲ್ಲಿ ತಯಾರಾಗಿರೋ ರಾಜಾಸಾಬ್‌‌‌ನಲ್ಲಿ ಪ್ರಭಾಸ್ ಕಾಮಿಡಿ ಟೈಂ ಮತ್ತೊಮ್ಮೆ ಉಲ್ಬಣಿಸಿದೆ. ಮಾಸ್ ಹೊರತಾಗಿ ಆತನಲ್ಲಿರೋ ಕ್ಯಾಲಿಬರ್‌ಗೆ ತಕ್ಕನಾಗಿ ಈ ಸಿನಿಮಾನ ಕಟ್ಟಿಕೊಟ್ಟಿದ್ದಾರೆ ಡೈರೆಕ್ಟರ್. ಹೌದು.. ಹೈ ವೋಲ್ಟೇಜ್ ಮಾಸ್ ಸಿನಿಮಾಗಳಲ್ಲಿ ನೋಡಿ ನೋಡಿ ಬೋರ್ ಆಗಿದ್ದ ಪ್ರೇಕ್ಷಕರಿಗೆ ಪ್ರಭಾಸ್‌‌‌ ಮೂಲಕ ಮಸ್ತ್ ಮನರಂಜನೆಯ ರಸದೌತಣ ಉಣಬಡಿಸೋ ಕಾರ್ಯದಲ್ಲಿ ಯಶಸ್ವಿ ಆಗಿದ್ದಾರೆ.

ರಾಜಾಸಾಬ್ ಚಿತ್ರ ಭಾರತೀಯ ಚಿತ್ರರಂಗದಲ್ಲೇ ಬಿಗ್ಗೆಸ್ಟ್ ಹಾರರ್ ಫ್ಯಾಂಟಸಿ ಎಂಟರ್‌ಟೈನರ್ ಎನ್ನಲಾಗ್ತಿದೆ. ಇಲ್ಲಿ ಹಾರರ್ ಜೊತೆ ಅನ್‌ಲಿಮಿಟೆಡ್ ಫನ್ ಇದೆ. ಲವ್, ರೊಮ್ಯಾನ್ಸ್ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಒಂದೊಳ್ಳೆ ಡ್ರಾಮಾ ಇದೆ. ಅದರಲ್ಲೂ ಗ್ರಾಫಿಕಲ್ ಪ್ರೆಸೆಂಟೇಷನ್ ಸಂಥಿಂಗ್ ಇಂಪ್ರೆಸ್ಸೀವ್ ಅನಿಸಿದೆ. ಮಕ್ಕಳು ಕೂಡ ಈ ದೆವ್ವವನ್ನು ಭಯ ಪಡೆದೆ ನೋಡುವಂತಿದೆ. ಹಾಗಾಗಿಯೇ ಇಲ್ಲಿ ಸಂಜಯ್ ದತ್ ಈ ಹಾರರ್ ವೆಂಚರ್‌‌ನಲ್ಲಿ ಪ್ರಭಾಸ್‌ಗೆ ಸಾಥ್ ನೀಡಿದ್ದಾರೆ.

ಮಾಳವಿಕಾ ಮೋಹನ್, ನಿಧಿ ಅಗರ್ವಾಲ್, ರಿದ್ಧಿ ಕುಮಾರ್, ಬೊಮನ್ ಇರಾನಿ, ಸಮುದ್ರಕಣಿ, ವೆನ್ನೆಲ ಕಿಶೋರ್ ಸೇರಿದಂತೆ ಬಹುದೊಡ್ಡ ತಾರಾಗಣವಿದೆ. ಕಾರ್ತಿಕ್ ಪಳನಿ ಸಿನಿಮಾಟೋಗ್ರಫಿ ಹಾಗೂ ತಮನ್ ಮ್ಯೂಸಿಕ್ ಚಿತ್ರಕ್ಕಿದ್ದು, ಸಿನಿಮಾ ಇದೇ ಡಿಸೆಂಬರ್ 5ಕ್ಕೆ ವಿಶ್ವದಾದ್ಯಂತ ದೊಡ್ಡ ಪರದೆಗೆ ಎಂಟ್ರಿ ಕೊಡ್ತಿದೆ. ಪ್ರಭಾಸ್‌‌ನ ಡಿಫರೆಂಟ್ ಆಗಿ ನೋಡೋಕೆ ಬಯಸೋ ಚಿತ್ರಪ್ರೇಮಿಗಳಿಗೆ ಇದು ಹಂಡ್ರೆಡ್ ಪರ್ಸೆಂಟ್ ರುಚಿಸಲಿದೆ.

ಇನ್ನು ಡಾರ್ಲಿಂಗ್ ಪ್ರಭಾಸ್ ಗೆಸ್ಟ್ ಅಪಿಯರೆನ್ಸ್ ನೀಡಿರುವ ಕಣ್ಣಪ್ಪ ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗಿದ್ದು, ಶಿವನ ರೂಪದಲ್ಲಿ ಮಿಂಚು ಹರಿಸಿದ್ದಾರೆ ಡಾರ್ಲಿಂಗ್. ಇದಲ್ಲದೆ 2026ಕ್ಕೆ ಫೌಜಿ ಬರಲಿದ್ದು, ಇವೆರಡರ ಪ್ರಮೋಷನ್ಸ್ ಜೊತೆ ಫೌಜಿ ಶೂಟಿಂಗ್‌ನಲ್ಲಿ ತೊಡಗಿಕೊಳ್ಳಲಿದ್ದಾರೆ ಬಾಹುಬಲಿ ಸ್ಟಾರ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version