ಪೂನಂ ಪಾಂಡೆಗೆ ಕಿಸ್ ಕೊಡಲು ಯತ್ನಿಸಿದ ಅಭಿಮಾನಿ!

ಪೂನಂ ಪಾಂಡೆಗೆ ಕಿಸ್ ಕೊಡಲು ಯತ್ನಿಸಿದ ಅಭಿಮಾನಿ!

Poonam pandey

ನಟಿ ಮತ್ತು ಮಾಡೆಲ್ ಪೂನಂ ಪಾಂಡೆ ಯಾವಾಗಲೂ ಒಂದಲ್ಲ ಒಂದು ಸುದ್ದಿಯಿಂದ ಗಮನ ಸೆಳೆಯುತ್ತಾರೆ. ಅದರಲ್ಲೂ ಪೂನಂ ಪಾಂಡೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದು, ತಮ್ಮ ನಾಟಕೀಯ ಶೈಲಿ ಮತ್ತು ಹೇಳಿಕೆಗಳಿಂದ ನಿರಂತರವಾಗಿ ಸುದ್ದಿಯಲ್ಲಿರುತ್ತಾರೆ.

ಏನಿದು ಘಟನೆ!

ADVERTISEMENT
ADVERTISEMENT

ಶುಕ್ರವಾರ ನಡೆದ ಪ್ಯಾಪ್ ಸೆಷನ್‌ನಲ್ಲಿ ಪೂನಂ ಪಾಂಡೆಗೆ ಶಾಕಿಂಗ್ ಅನುಭವ ಎದುರಾಯಿತು. ಫೋಟೋಗೆ ಪೋಸ್ ನೀಡುತ್ತಿದ್ದಾಗ, ಒಂದು ಕ್ಷಣದಲ್ಲಿ ಒಬ್ಬ ಅಭಿಮಾನಿ ಅವರ ಹತ್ತಿರ ಬಂದು ಸೆಲ್ಫಿ ತೆಗೆದುಕೊಳ್ಳಲು ಅನುವು ಮಾಡಿಕೊಂಡನು. ಪೂನಂ ಒಪ್ಪಿಗೆ ನೀಡಿದ ತಕ್ಷಣವೇ ಆ ವ್ಯಕ್ತಿ ಅವರ ಕೆನ್ನೆಗೆ ಬಲವಂತವಾಗಿ ಮುತ್ತಿಡಲು ಯತ್ನಿಸಿದ್ದಾನೆ. ತಕ್ಷಣ ಪೂನಂ ಪಾಂಡೆ ಗಾಬರಿಯಾಗಿ ಆ ವ್ಯಕ್ತಿಯನ್ನು ತಳ್ಳಿದ್ದಾರೆ. ಈ ಘಟನೆ ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

 

ಅಲ್ಲದೆ, ನೆಟ್ಟಿಗರು ಈ ಬಗ್ಗೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಹಲವರು ಇದನ್ನು ಪೂನಂ ಪಾಂಡೆ ಕೇವಲ ಪ್ರಚಾರಕ್ಕಾಗಿ ಮಾಡಿದ್ದಾರಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಪೂನಂ ಪಾಂಡೆ ತಮ್ಮ ಸಾವಿನ ಸುಳ್ಳು ಸುದ್ದಿಯನ್ನು ಹಬ್ಬಿಸಿ ಸುದ್ದಿಯಾಗಿದ್ದರು. ನಂತರ, ಅವರು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿಯ ನಾಟಕ ಮಾಡಿದ್ದಾರೆ ಎಂದು ತಿಳಿಸಿದರು. ಇತ್ತೀಚೆಗೆ, ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದು ಮತ್ತೆ ಸುದ್ದಿಯಾಗಿದೆ.

ಈ ಘಟನೆಯಿಂದಾಗಿ ಅವರ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ.

Exit mobile version