ಒಂದೆರಡು ಸಿನಿಮಾ ಮಾಡಿದಾಕ್ಷಣ ನಟರನ್ನ ತಲೆ ಮೇಲೆ ಹೊತ್ತು ಮೆರೆಸೋಕೆ ಮುನ್ನ, ಅದಕ್ಕೆ ಅವನು ಯೋಗ್ಯನಾ ಅಂತ ಒಮ್ಮೆ ಯೋಚಿಸಿ. ಅಮ್ಮನಿಗೆ ಲಾಡಿ ಬಿಚ್ಚುವಂತಹ ಮನಸ್ಥಿತಿ ಇರೋ ದಟ್ಟ, ದರಿದ್ರ ಮೈಂಡ್‌ಗಳು ಎಂದೂ ಬದಲಾಗಲ್ಲ. ಭಾರತದ ಅನ್ನ ತಿಂದು, ಇಲ್ಲಿನ ಗಾಳಿಯಿಂದಲೇ ಉಸಿರಾಡ್ತಿರೋ ಪಾಕ್ ನಟ ಫವಾದ್ ಖಾನ್, ಉಗ್ರ್ರರ ಬೂಟು ನೆಕ್ಕುತ್ತಿದ್ದಾನೆ.
- ತಿನ್ನೋಕೆ ಬೇಕು ಭಾರತದ ಅನ್ನ.. ನೆಕ್ಕೋದು ಮಾತ್ರ ಉಗ್ರರ ಬೂಟು
- ನೆಲೆ, ಸ್ಟಾರ್ಡಮ್ ಕೊಟ್ಟ ಭಾರತದ ವಿರುದ್ಧ ಫವಾದ್ ಪೋಸ್ಟ್
- ಆಪರೇಷನ್ ಸಿಂದೂರ್‌ನ ಖಂಡಿಸಿದ ಪಾಕ್ ನಟ ಫವಾದ್..!
- ಭಾರತದ್ದು ನಾಚಿಕೆಗೇಡಿತನ ದಾಳಿ ಎಂದ ಪಾಪಿಸ್ತಾನದ ನಾಯಿ
ಹಾವಿಗೆ ಎಷ್ಟು ಹಾಲೆರೆದರೇನು..? ಅದು ವಿಷ ಕಾರುವುದು ಬಿಡಲು ಸಾಧ್ಯವೇ..? ಬೇವಿನ ಮರಕ್ಕೆ ಎಷ್ಟು ಸಕ್ಕರೆ ನೀರು ಹಾಕಿದ್ರೂ ಅದು ಮಾತ್ರ ಕಹಿಯೇ. ಅದರಂತೆ ಪಾಕಿಗಳಿಗೆ ಎಷ್ಟೇ ಪ್ರೀತಿ, ಗೌರವ, ವಿಶ್ವಾಸ ತೋರಿಸಿದ್ರೂ ಅನ್ನ ಕೊಟ್ಟ ಮನೆಗೆ ಕನ್ನ ಹಾಕೋದು ಮಾತ್ರ ನಿಲ್ಲಿಸಲ್ಲ. ಹೌದು.. ಭಾರತದಲ್ಲೇ ಫುಡ್ಡು, ಬೆಡ್ಡು ಕಂಡುಕೊಂಡಿರೋ ಪಾಕಿಸ್ತಾನದ ಕಲಾವಿದರು ಇಲ್ಲಿನ ಅನ್ನ ತಿಂದು, ಇಲ್ಲಿನದ್ದೇ ಗಾಳಿ ಉಸಿರಾಡ್ತಾ ಇದ್ರೂ, ಅವರ ಮೈಯಲ್ಲಿ ಹರಿಯೋದು ಮಾತ್ರ ಪಾಪಿಸ್ತಾನದ ರಕ್ತ.
ಹೌದು.. ಪಾಕ್ ಕಲಾವಿದರಿಗೆ ತಿನ್ನೋಕೆ ಭಾರತದ ಅನ್ನ ಬೇಕು. ಆದ್ರೆ ಅವರು ನೆಕ್ಕುವುದು ಮಾತ್ರ ಉಗ್ರರ ಬೂಟುಗಳನ್ನ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಫವಾದ್ ಖಾನ್. ಖೂಬ್ ಸೂರತ್ ಹಾಗೂ ಏ ದಿಲ್ ಹೈ ಮುಷ್ಕಿಲ್ ಸಿನಿಮಾಗಳಿಂದ ಭಾರತೀಯರ ಮನಸ್ಸುಗಳನ್ನ ಗೆದ್ದಂತಹ ಫವಾದ್ ಖಾನ್, ಪಾಕ್ ತೊರೆದು ಮುಂಬೈನಲ್ಲೇ ಸೆಟಲ್ ಆಗ್ತಾನೆ. ಬಾಲಿವುಡ್ ಚಿತ್ರರಂಗ ಹಾಗೂ ಇಂಡಿಯನ್ ಟಿವಿ ಸೀರೀಸ್ ಹಾಗೂ ಟಿವಿ ಶೋಗಳಲ್ಲಿ ಬದುಕು ಕಟ್ಟಿಕೊಳ್ತಾನೆ.
ಭಾರತದಲ್ಲೇ ಫುಡ್ಡು, ಬೆಡ್ಡು ಕಂಡುಕೊಂಡಿರೋ ಫವಾದ್ ಖಾನ್‌ಗೆ ಇಲ್ಲಿ ಆತನ ಸಿನಿಮಾಗಳಿಂದ ಬರೋ ಹಣದಿಂದಲೇ ಜೀವನ ಅನ್ನುವಂತಾಗಿದೆ. ಸಿನಿಮಾ, ಸೀರಿಯಲ್ ರೂಪದಲ್ಲಿ ಈ ಪಾಕ್ ನಾಯಿಗೆ ಭಾರತದ ಹಣ ಬೇಕು. ಆದ್ರೆ ಈತನ ದೇಶಪ್ರೇಮ ಮಾತ್ರ ಪಾಕಿಸ್ತಾನದ ಪರ. ಇದೆಂಥಾ ನಡೆ ನೀವೇ ಹೇಳಿ.
ಮೊನ್ನೆಯಷ್ಟೇ ಈತನ ಅಬಿರ್ ಗುಲಾಲ್ ಸಿನಿಮಾ ರಿಲೀಸ್‌ಗೂ ಮೊದಲೇ ಭಾರತದಲ್ಲಿ ಬ್ಯಾನ್ ಮಾಡಲಾಯಿತು. ಅದೇ ಕೋಪದಲ್ಲಿದ್ದ ಫವಾದ್ ಖಾನ್, ಇದೀಗ ತನ್ನ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ನಾಲಿಗೆ ಹರಿಬಿಟ್ಟಿದ್ದಾನೆ. ಆಪರೇಷನ್ ಸಿಂದೂರ್‌ಗೆ ಚಕಾರ ಎತ್ತಿದ್ದಾನೆ. ”ಈ ನಾಚಿಕೆಗೇಡಿನ ದಾಳಿಯಲ್ಲಿ ಗಾಯಗೊಂಡ ಮತ್ತು ಸಾವನ್ನಪ್ಪಿದವರ ಕುಟುಂಬಗಳಿಗೆ ನನ್ನ ಮನದಾಳದ ಸಂತಾಪಗಳು. ಮುಂದಿನ ದಿನಗಳಲ್ಲಿ ಮೃತರ ಆತ್ಮಗಳಿಗೆ ಮತ್ತು ಅವರ ಪ್ರೀತಿಪಾತ್ರರ ಶಕ್ತಿಗಾಗಿ ನಾನು ಪ್ರಾರ್ಥಿಸುತ್ತೇನೆ. ಎಲ್ಲರಿಗೂ ಗೌರವಯುತ ವಿನಂತಿ.. ಗಲಭೆಯನ್ನು ಕೆರಳಿಸುವ ಮಾತುಗಳಿಂದ ಬೆಂಕಿಯನ್ನು ಹೊತ್ತಿಸುವುದನ್ನು ನಿಲ್ಲಿಸಿ. ಇದು ಮುಗ್ಧ ಜನರ ಜೀವಕ್ಕೆ ಯೋಗ್ಯವಲ್ಲ. ಉತ್ತಮ ಪ್ರಜ್ಞೆ ಮೇಲುಗೈ ಸಾಧಿಸಲಿ. ಇನ್ಶಾ ಅಲ್ಲಾಹ್. ಪಾಕಿಸ್ತಾನ ಜಿಂದಾಬಾದ್” ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾನೆ.
ಇಂತಹ ವಿಷ ಕಾರುವ ಕಲಾವಿದರು ನಮ್ಮ ಭಾರತೀಯ ಚಿತ್ರರಂಗದಲ್ಲಿ ಇರಬೇಕೇ..? ಅವರಿಗೆ ನಿಜಕ್ಕೂ ನಾವು ಅವಕಾಶಗಳನ್ನ ಕೊಡಬೇಕೇ..? ಎಲ್ಲಕ್ಕಿಂತ ಮಿಗಿಲಾಗಿ ಅವರ ಸಿನಿಮಾ, ಸೀರಿಯಲ್‌ಗಳನ್ನ ನೋಡಬೇಕೇ..? ನೋ ವೇ.. ಚಾನ್ಸೇ ಇಲ್ಲ. ಯಾವುದೇ ಕಾರಣಕ್ಕೂ ಇಂಥವ್ರನ್ನ ನಾವು ಎಂಟರ್‌ಟೈನ್ ಮಾಡಬಾರದು. ಕೂಡಲೇ ಇವ್ರ ಸಿನಿಮಾ, ಸೀರಿಯಲ್‌ಗಳು ಹಾಗೂ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ಜೊತೆ ಇವರನ್ನು ಕೂಡ ತಿರಸ್ಕರಿಸಬೇಕು.. ಬಹಿಷ್ಕರಿಸಬೇಕು. ಆದ್ರೆ ಈ ಫವಾದ್ ಖಾನ್ ಅನ್ನೋ ಪಾಕ್ ನಾಯಿಯನ್ನ ಕೂಡಲೇ ಒದ್ದು ಓಡಿಸಬೇಕು.
