ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾಗಿ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ‘ಧುರಂಧರ್’ ಚಿತ್ರದ ಮುಂದುವರಿದ ಭಾಗ ‘ಧುರಂಧರ್ ದ ರಿವೇಂಜ್’ ಇಂದು (ಮಾರ್ಚ್ 19) ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಿರೀಕ್ಷೆಯಂತೆಯೇ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸುನಾಮಿ ಎಬ್ಬಿಸಿದ್ದು, ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ.
ದಾಖಲೆ ಬುಕ್ಕಿಂಗ್
ಚಿತ್ರ ಬಿಡುಗಡೆಯಾದ ಮೊದಲ ದಿನವೇ ಬಹುತೇಕ ಎಲ್ಲಾ ಚಿತ್ರಮಂದಿರಹಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಆದ ‘ಬುಕ್‌ಮೈಶೋ’ನಲ್ಲಿ ಪ್ರತಿ ಗಂಟೆಗೆ ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗುತ್ತಿವೆ. ಯುಗಾದಿ ಹಬ್ಬದ ಸಾಲು ಸಾಲು ರಜೆಗಳು ಈ ಚಿತ್ರಕ್ಕೆ ವರದಾನವಾಗಿದ್ದು, ಮೊದಲ ದಿನವೇ 100 ಕೋಟಿ ರೂ. ಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ.
🚨 Viral Scene from Dhurandhar 2🚨
A powerful cameo of Narendra Modi shows demonetization in action 💥
The Dhurandhar 2 film hints how notebandi helped cut off terror funding by stopping illegal cash flow.
Cinema meets real impact #Dhurandhar2 pic.twitter.com/UtaRuwF3B3— Cricket News Network (@arshdeep3444) March 19, 2026
ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಚಿತ್ರವನ್ನು ನೋಡಿದ ಬಹುತೇಕ ಪ್ರೇಕ್ಷಕರು ಮೇಕಿಂಗ್ ಮತ್ತು ನಟನೆಗೆ ಫಿದಾ ಆಗಿದ್ದಾರೆ. ಮೊದಲ ಭಾಗಕ್ಕಿಂತಲೂ ಈ ಭಾಗ ಅತ್ಯಂತ ರೋಚಕವಾಗಿದೆ ಎಂದು ಹಲವರು ಹೊಗಳುತ್ತಿದ್ದಾರೆ. ಆದರೆ, ಕೆಲವರು ಮೊದಲ ಭಾಗದಲ್ಲಿ ಸತ್ಯಾಂಶ ಹೆಚ್ಚಿತ್ತು, ಆದರೆ ಈ ಬಾರಿ ಸಿನಿಮೀಯ ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂಬ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅತಿಥಿ ಪಾತ್ರ ?
ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನಟನೆ. ಹೌದು, ಚಿತ್ರದಲ್ಲಿ ಪ್ರಧಾನಿ ಮೋದಿ ಅವರು 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿ (Demonetization) ಘೋಷಣೆ ಮಾಡಿದ ಐತಿಹಾಸಿಕ ವಿಡಿಯೋವನ್ನು ಬಳಸಿಕೊಳ್ಳಲಾಗಿದೆ. ನೋಟು ನಿಷೇಧದ ನಡೆಯಿಂದಾಗಿ ಉಗ್ರ ಸಂಘಟನೆಗಳಿಗೆ ತಲುಪುತ್ತಿದ್ದ ಅಕ್ರಮ ಹಣದ ಹರಿವು ಹೇಗೆ ಸ್ಥಗಿತಗೊಂಡಿತು ಎಂಬುದನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗಿದೆ.
ಒಟ್ಟಾರೆಯಾಗಿ, ‘ಧುರಂಧರ್ 2’ ಕೇವಲ ಮನರಂಜನೆಯಷ್ಟೇ ಅಲ್ಲದೆ, ದೇಶದ ಪ್ರಮುಖ ಆರ್ಥಿಕ ಮತ್ತು ಭದ್ರತಾ ನಿರ್ಧಾರಗಳ ಎಳೆಯನ್ನು ಒಳಗೊಂಡಿರುವುದು ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ.





