ಪವನ್ ಕಲ್ಯಾಣ್‌ ಆರೋಗ್ಯ ಸ್ಥಿರ ಎಂದ ಚಿರು..ಟಾಲಿವುಡ್ ಕಂಗಾಲು

ಸೈನಸೈಟಿಸ್‌‌‌ನಿಂದ ಬಳಲುತ್ತಿರೋ PK.. ಆಸ್ಪತ್ರೆಯಲ್ಲಿ ಚಿಕಿತ್ಸೆ..!

Untitled design 2026 04 20T175952.111

ಆಂಧ್ರ ಡಿಸಿಎಂ, ಪವರ್ ಸ್ಟಾರ್ ಪವನ್ ಕಲ್ಯಾಣ್ ಸೈನಸೈಟಿಸ್‌‌‌ನಿಂದ ಬಳಲುತ್ತಿದ್ದು.. ಸದ್ಯ ರಾಜಕೀಯ ಕಾರ್ಯ ಕಲಾಪಗಳನ್ನ ಪಕ್ಕಕ್ಕಿಟ್ಟು ಆಸ್ಪತ್ರೆ ಸೇರಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು, ಮೆಗಾಸ್ಟಾರ್ ಚಿರಂಜೀವಿ ಸಹೋದರನ ಹೆಲ್ತ್ ಅಪ್ಡೇಟ್ಸ್ ನೀಡಿದ್ದಾರೆ. ಇಷ್ಟಕ್ಕೂ ಪವನ್‌ಗೆ ಏನಾಗಿದೆ..? ರಿಕವರಿ ಆಗೋಕೆ ಎನ್ನೂ ಎಷ್ಟು ದಿನ ಬೇಕಾಗುತ್ತೆ..? ಇಲ್ಲಿದೆ ಡಿಟೈಲ್ಡ್ ರಿಪೋರ್ಟ್.

ಪವನ್ ಕಲ್ಯಾಣ್.. ಕರ್ನಾಟಕದಲ್ಲಿ ನಮ್ಮ ಡಿಬಾಸ್ ದರ್ಶನ್‌ಗೆ ಇದ್ದಂತೆ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಇರೋ ಟಾಲಿವುಡ್ ಸ್ಟಾರ್. ಅಲ್ಲಿ ಅವರನ್ನ ಪವರ್ ಸ್ಟಾರ್ ಅಂತೆಲ್ಲಾ ಕರೀತಾರೆ. ಬರೀ ಸ್ಟಾರ್ ಅಷ್ಟೇ ಅಲ್ಲ, ಡೈನಾಮಿಕ್ ಪೊಲಿಟಿಕಲ್ ಲೀಡರ್ ಕೂಡ ಹೌದು. ಜನಸೇನಾ ಪಕ್ಷ ಕಟ್ಟಿ, ಆ ಮೂಲಕ ಟಿಡಿಪಿ ಜೊತೆಗೂಡಿ ಆಂಧ್ರದಲ್ಲಿ ಸಮ್ಮಿಶ್ರ ಸರ್ಕಾರವನ್ನ ಫಾರ್ಮ್ ಮಾಡಿದ ಗರಿಮೆ ಅವರಿಗಿದೆ.

ಸದ್ಯ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಯಾಗಿರೋ ಪವನ್ ಕಲ್ಯಾಣ್, ಜನ ಮೆಚ್ಚುವ ನಾಯಕನಾಗಿ, ಮೋದಿ ಅತ್ಯಾಪ್ತರ ಬಳಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಯಾಕಂದ್ರೆ ಆಂಧ್ರ ಪಾಲಿಟಿಕ್ಸ್‌ಗೆ ಗೇಮ್ ಚೇಂಜರ್ ಆದಂತಹ ಪಿಕೆಯನ್ನ ಮೋದಿ ನೋಡುವ ಪರಿ ಬಹಳ ವಿಭಿನ್ನ. ಅಕ್ಷರಶಃ ಪವನ್ ಗೇಮ್ ಚೇಂಜರ್ ಕೂಡ ಹೌದು. ಸಿನಿಮಾ ಸ್ಟಾರ್ ಆಗಿದ್ದುಕೊಂಡು ಸಿನಿಮೀಯ ರೀತಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರು.

ಇತ್ತೀಚೆಗೆ ಅವರ ಹಳೆಯ ಕಮಿಟ್ಮೆಂಟ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ತೆರೆಗಪ್ಪಳಿಸಿದವು. ಹರಿಹರ ವೀರಮಲ್ಲು ಫ್ಲಾಪ್ ಆದ್ರೆ ಓಜಿ ಬ್ಲಾಕ್ ಬಸ್ಟರ್ ಹಿಟ್ ಆಯ್ತು. ಇತ್ತೀಚೆಗೆ ಬಂದಂತಹ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಕೂಡ ಅಟ್ಟರ್ ಫ್ಲಾಪ್ ಆಗಿ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ರು. ಒಟ್ಟಾರೆ ರಾಜಕೀಯ ಮತ್ತು ಸಿನಮಾ ಕೆಲಸ ಕಾರ್ಯಗಳಿಂದ ಬಹಳ ಒತ್ತಡಕ್ಕೆ ಒಳಗಾಗಿದ್ದಾರೆ ಪವನ್. ಅಷ್ಟೇ ಅಲ್ಲ ಸೈನಸೈಟಿಸ್‌‌ನಿಂದ ಬಳಲುತ್ತಿದ್ದಾರೆ.

ಈಗಾಗ್ಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರೋ ಡಿಸಿಎಂ ಪವನ್ ಆರೋಗ್ಯದ ಕುರಿತು ಮೆಗಾಸ್ಟಾರ್ ಚಿರಂಜೀವಿ ಸಾಮಾಜಿಕ ಜಾಲತಾಣಗಳಲ್ಲಿ ಹೆಲ್ತ್ ಅಪ್ಡೇಟ್ ಪೋಸ್ಟ್ ಮಾಡಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಯಾರೋ ಆತಂಕ ಪಡುವ ಅವಶ್ಯಕತೆ ಇಲ್ಲ. ವೈದ್ಯರ ಪ್ರಕಾರ ಒಂದು ವಾರದ ಕಾಲ ವಿಶ್ರಾಂತಿ ಬೇಕಿದೆ. ನಿಮ್ಮ ಪ್ರೀತಿ, ಕಾಳಜಿ ಹಾಗೂ ಪ್ರಾರ್ಥನೆಗಳಿಗೆ ಧನ್ಯವಾದಗಳು ಎಂದಿದ್ದಾರೆ ಚಿರಂಜೀವಿ.

ಪವನ್ ಪತ್ನಿ ಅನ್ನಾ ಕೂಡ ಪೋಸ್ಟ್ ಮಾಡಿದ್ದು, ಐಕಾನ್ ಸ್ಟಾರ್ ಅಲ್ಲು ಅರ್ಜುನ್, ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್‌‌ರಂತಹ ದೊಡ್ಡ ಸ್ಟಾರ್‌‌ಗಳೆಲ್ಲಾ ಆಂಧ್ರ ಡಿಸಿಎಂ ಆರೋಗ್ಯ ಚೇತರಿಕೆಗೆ ದೇವರ ಮೊರೆ ಹೋಗಿದ್ದಾರೆ. ಪೋಸ್ಟ್‌‌ಗಳ ಮೂಲಕ ಹಿಂದೆಂದಿಗಿಂತ ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡಿ ಅಂತ ಪವನ್ ಮೇಲಿನ ಅಭಿಮಾನ ಹೊರಹಾಕಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್ 

Exit mobile version