ಪವಿತ್ರಾ ಗೌಡಗೆ ಮಾನಸಿಕ ಖಿನ್ನತೆ: ಕೋರ್ಟ್‌ಗೂ ಗೈರು..!

ಮಹಿಳಾ ಆಯೋಗದ ಅಧ್ಯಕ್ಷೆ ಜೈಲಿಗೆ ಭೇಟಿ.. ಹೇಳಿದ್ದೇನು?

Untitled design 2026 08 19T140440.279

ಪರಪ್ಪನ ಅಗ್ರಹಾರದಲ್ಲಿರೋ ಡಿ ಗ್ಯಾಂಗ್ ಗತಿ ಒಂಥರಾ ಅದೋಗತಿ ಆಗ್ತಿದೆ ದಿನದಿಂದ ದಿನಕ್ಕೆ ಕಾನೂನು ಅವ್ರ ಪಾಲಿಕೆ ಕಂಕಟವಅಗ್ತಾ ಹೋಗ್ತಿದೆ. ಅದ್ರಲ್ಲೂ ಪವಿತ್ರಾ ಗೌಡ ಬಗ್ಗೆ ಇಲ್ಲಿಯ ತನಕ ಯಾವುದೇ ನ್ಯೂಸ್ ಇರಲಿಲ್ಲ. ಆದ್ರೀಗ ಮೆಂಟಲಿ ಸಖತ್ ಕುಗ್ಗಿ ಹೋಗಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ, ಕೋರ್ಟ್‌‌ ಕಲಾಪಗಳಿಗೂ ಗೈರಾಗಿರೋ ದಚ್ಚು ಗೆಳತಿ ಪರಿಸ್ಥಿತಿ ಈಗ ಹೇಗಿದೆ..? ಡಿಬಾಸ್ ದರ್ಶನ್‌‌ನ ಭೇಟಿ ಮಾಡಿ ಹೊರಬಂದ ಧನ್ವೀರ್ ಹೇಳಿಕೆ ನೀಡಿರೋದೇನು..?

ಪವಿತ್ರಾ ಗೌಡಗೆ ಮಾನಸಿಕ ಖಿನ್ನತೆ.. ಕೋರ್ಟ್‌ಗೂ ಗೈರು..!

ಮಹಿಳಾ ಆಯೋಗದ ಅಧ್ಯಕ್ಷೆ ಜೈಲಿಗೆ ಭೇಟಿ.. ಹೇಳಿದ್ದೇನು?

ಪವಿತ್ರಾ ಗೌಡ.. ನಟ ದರ್ಶನ್ ಜೊತೆ ಕಂಪ್ಲೀಟ್ ಡಿ ಗ್ಯಾಂಗ್ ಜೈಲು ಪಾಲಾಗೋದ್ರ ಹಿಂದಿನ ಅಸಲಿ ವ್ಯಕ್ತಿ. ಹೌದು.. ರೇಣುಕಾಸ್ವಾಮಿ ಕಿಡ್ನ್ಯಾಪ್, ಮರ್ಡರ್ ಹಾಗೂ ಅದರ ಸಾಕ್ಷ್ಯನಾಶಕ್ಕೆ ಪ್ರಮುಖ ಕಾರಣ ಇವರೇ. ಆರೋಪಿ ನಂಬರ್ 1 ಆಗಿರೋದ್ರಿಂದ ಪವಿತ್ರಾರಿಂದಲೇ ಇಷ್ಟೆಲ್ಲಾ ಆಯ್ತು ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸುಖದ ಸುಪ್ಪೊತ್ತಿಗೆಯಲ್ಲಿ ಜೀವನ ನಡೆಸಬೇಕಿದ್ದ ಇವರುಗಳು, ಸದ್ಯ ಜೈಲಿನ ನಾಲ್ಕು ಕಂಬಿಗಳ ಹಿಂದೆ ಮುದ್ದೆ ಮುರಿಯುತ್ತಿದ್ದಾರೆ ಅಂದ್ರೆ ಅದಕ್ಕೆಲ್ಲಾ ಪವಿತ್ರಾ ಗೌಡ ಆರಂಭದಲ್ಲಿ ಮಾಡಿದ ಸಣ್ಣದೊಂದು ತಪ್ಪು ಅನ್ನೋದು ಓಪನ್ ಸೀಕ್ರೆಟ್.

ಕಳೆದ ವರ್ಷ ಆಗಸ್ಟ್ 14ರಂದು ದರ್ಶನ್ ಸೇರಿದಂತೆ ಪವಿತ್ರಾ ಗೌಡಗೂ ಬೇಲ್ ಕ್ಯಾನ್ಸಲ್ ಆಗಿತ್ತು. ಒಂದು ವರ್ಷ ಆದ್ರೂ ಇಂದಿಗೂ ಜೈಲಲ್ಲೇ ಇದ್ದಾರೆ ಪವಿತ್ರಾ. ಆದ್ರೆ ಆಕೆಗೂ ಬೇಲ್ ಸಿಗ್ತಿಲ್ಲ. ಅಂದಹಾಗೆ ಜೈಲು ಅನ್ನೋದು ಕೈದಿಗಳನ್ನ ಬದಲಾಯಿಸೋ ಜಾಗವಾಗಿದೆ. ಅವ್ರ ತಪ್ಪಿಗೆ ಪಶ್ಚಾತ್ತಾಪ ಪಡೋಕೆ ಇರೋ ಒಂದು ಸೂಕ್ತ ಸ್ಥಳವಾಗಿದೆ. ಎಂಥದ್ದೇ ದೊಡ್ಡ ಸ್ಟಾರ್ ಆಗಿರಲಿ ಅಥ್ವಾ ಶ್ರೀಸಾಮಾನ್ಯನಾಗಿರಲಿ.. ಜೈಲು ಅಂದಾಕ್ಷಣ ಅರ್ಧ ಕುಗ್ಗಿ ಹೋಗ್ತಾರೆ. ಸದ್ಯ ಪವಿತ್ರಾ ವಿಷಯದಲ್ಲೂ ಅದೇ ಆಗಿದೆ. ಮಾನಸಿಕವಾಗಿ ಆಕೆ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿದ್ದಾರಂತೆ. ಇದನ್ನ ನಾವು ಹೇಳ್ತಿಲ್ಲ. ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆಯಾದ ನಾಗಲಕ್ಷ್ಮೀ ಚೌಧರಿ ಅವ್ರೇ ಹೇಳಿದ್ದಾರೆ.

ಇತ್ತೀಚೆಗೆ ಪರಪ್ಪನ ಅಗ್ರಹಾರದಲ್ಲಿರೋ ಮಹಿಳಾ ಕೈದಿಗಳ ಯೋಗಕ್ಷೇಮ ವಿಚಾರಿಸಲು ಜೈಲಿಗೆ ತೆರಳಿದ್ದ ನಾಗಲಕ್ಷ್ಮೀ ಅವರು, ಅಲ್ಲಿ ಪವಿತ್ರಾ ಗೌಡನ ಭೇಟಿ ಮಾಡಿ ಬಂದಿದ್ದಾರೆ. ಆಕೆಯ ಮಾನಸಿಕ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಅಲ್ಲಿಗೆ ಯಾವುದೋ ತಪ್ಪು ಮಾಡಿ ಹೋಗಿರ್ತಾರೆ. ಶಿಕ್ಷೆ ಕೂಡ ಅನುಭವಿಸ್ತಿರ್ತಾರೆ. ಆ ಬಗ್ಗೆ ಮತ್ತೆ ಮಾತಾಡೋದು ಸೂಕ್ತವಲ್ಲ. ಒಟ್ಟಾರೆ ಆಕೆ ಮೆಂಟಲಿ ತುಂಬಾ ಡಿಸ್ಟರ್ಬ್ ಆಗಿದ್ದಾರೆ ಅಂತ ಕಡ್ಡಿ ತುಂಡಾದಂತೆ ಅಲ್ಲಿನ ಪರಿಸ್ಥಿತಿ ವಿವರಿಸಿದ್ದಾರೆ.

ಅಂದಹಾಗೆ ಪವಿತ್ರಾ ಗೌಡ ಇತ್ತೀಚೆಗೆ ಕೋರ್ಟ್ ಕಲಾಪಗಳಿಗೂ ಅಟೆಂಡ್ ಆಗಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಬೇಕಿದ್ದ ಪವಿತ್ರಾ ಗೌಡ, ತನಗೆ ವಿಪರೀತ ಜ್ವರ ಅಂತ ಹೇಳಿ ಗೈರಾಗಿದ್ದಾರೆ. ಟ್ರಯಲ್ಸ್‌ಗೆ ಗೈರು ಹಾಜರಾಗಿರೋದ್ರ ಬಗ್ಗೆ ಅವ್ರ ಪರ ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಆಗ ನ್ಯಾಯಾಧೀಶರು, ಜೈಲಿನ ಮ್ಯಾನುವಲ್ ಪ್ರಕಾರ ಅವರಿಗೆ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.

ಧನ್ವೀರ್ ಹೇಳಿದ್ದೇ ಬೇರೆ.. ಜೈಲೊಳಗೆ ನಡೆದಿರೋದೇ ಬೇರೆ..!

ಧನುನ ಹತ್ತಿರಕ್ಕೂ ಬಿಟ್ಟುಕೊಳ್ಳದ ದಚ್ಚು.. ಬೈಗುಳಗಳ ಸರಮಾಲೆ

ಜೈಲಿನ ಒಳಗೆ ಯಾವುದೇ ಸಂಧಾನ ಅಥ್ವಾ ರಾಜಿ ನಡೆದೇ ಇಲ್ಲ

ತಾಯಿ-ಪತ್ನಿ ದಾಸನ ಜೊತೆ ಚರ್ಚೆ.. ದೂರದಲ್ಲಿದ್ದ ಧನ್ವೀರ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಂಟನಂತೆ ಇದ್ದ ಧನ್ವೀರ್ ಗೌಡ ಈಗ ದಚ್ಚುಗೆ ಅಷ್ಟಕ್ಕಷ್ಟೇ ಎನ್ನಲಾಗಿತ್ತು. ಆದಾಗ್ಯೂ ಕೂಡ ಒಂದಲ್ಲ ಎರಡೆರಡು ಬಾರಿ ದರ್ಶನ್‌‌ನ ಮೀಟ್ ಮಾಡಿಕೊಂಡು ಬಂದ್ರು ಧನ್ವೀರ್. ಆದ್ರೆ ನಿನ್ನೆ ದಾಸನ ಪತ್ನಿ ವಿಜಯಲಕ್ಷ್ಮೀ ಹಾಗೂ ತಾಯಿ ಮೀನಾ ತೂಗುದೀಪ ಜೊತೆಗೂಡಿ ಪರಪ್ಪನ ಅಗ್ರಹಾರಕ್ಕೆ ತೆರಳಿದ್ರು ಧನ್ವೀರ್. ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಧನ್ವೀರ್.. ಅವರು ಆರಾಮಾಗಿ ಇದ್ದಾರೆ. ನಮ್ಮ ಮಧ್ಯೆ ಯಾವುದೇ ಮನಸ್ತಾಪ ಇಲ್ಲ. ಒಂದು ವೇಳೆ ಮನಸ್ತಾಪ ಇದ್ದಿದ್ರೆ ನಾನ್ಯಾಕೆ ಭೇಟಿ ಮಾಡೋಕೆ ಬರ್ತಿದ್ದೆ ಎಂದಿದ್ದಾರೆ.

ಹೌದಲ್ವಾ..? ಧನ್ವೀರ್ ಹೇಳೋದ್ರಲ್ಲಿ ಅರ್ಥ ಇದೆ. ಆದ್ರೆ ಅಸಲಿಗೆ ಒಳಗೆ ನಡೆದಿರೋದೇ ಬೇರೆ. ಜೈಲಿನ ಹೊರಗೆ ಧನ್ವೀರ್ ಬಂದು ಸ್ಟೇಟ್ಮೆಂಟ್ ನೀಡಿರೋದೇ ಬೇರೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಧನ್ವೀರ್‌ ಅಲ್ಲೆಲ್ಲೋ ದೂರದಲ್ಲಿ ನಿಂತಿದ್ದರಂತೆ. ತಾಯಿ ಮೀನಮ್ಮ ಹಾಗೂ ಪತ್ನಿ ವಿಜಯಲಕ್ಷ್ಮೀ ಜೊತೆ ಮಾತನಾಡಿದ ದರ್ಶನ್, ಸಿಕ್ಕಾಪಟ್ಟೆ ಭಾವುಕರಾಗಿ, ಕಣ್ಣೀರು ಕೂಡ ಹಾಕಿದ್ರಂತೆ. ಆದ್ರೆ ಧನ್ವೀರ್‌ನ ಹತ್ತಿರಕ್ಕೂ ಬಿಟ್ಟುಕೊಳ್ಳದ ದಾಸ ದರ್ಶನ್, ಸಿಕ್ಕಾಪಟ್ಟೆ ಆತನನ್ನ ಬೈದಿದ್ದಾರೆ ಎನ್ನಲಾಗಿದೆ.

ಅಂದಹಾಗೆ ದಚ್ಚು ಧನ್ವೀರ್‌ಗೆ ಬೈಯ್ಯೋಕೆ ಕಾರಣ ಸುಪ್ರೀಂನಲ್ಲೇ ಇನ್ನೊಂದು ವರ್ಷ ಬೇಲ್‌ ಕೊಡೋಕೆ ಸಾಧ್ಯವಾಗಲ್ಲ ಅಂದಿರೋದು. ಪರಿಸ್ಥಿತಿಗಳು ಈಗ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಕಾನೂನು ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಇರೋದ್ರಿಂದ ದರ್ಶನ್‌ಗೆ ಅದು ಉರುಳಾಗೋ ಸಾಧ್ಯತೆಯಿದೆ. ಸೋ.. ದರ್ಶನ್ ಕೂಡ ಮೆಂಟಲಿ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿರೋದು ಇದ್ರಿಂದ ಸ್ಪಷ್ಟವಾಗ್ತಿದೆ. ಒಂದ್ಕಡೆ ಪ್ರದೋಶ್ ಅಪ್ರೂವರ್ ಆಗ್ತಿರೋದು.. ಮತ್ತೊಂದ್ಕಡೆ ತುಮಕೂರಿನ ಬಾರ್ ಕ್ಯಾಷಿಯರ್‌ಗೆ ಜೀವ ಬೆದರಿಕೆ ಹಾಕಿ, ಸಾಕ್ಷಿನಾಶಕ್ಕೆ ಮುಂದಾಗಿರೋದು.. ಇವೆಲ್ಲಾ ಒಟ್ಟೊಟ್ಟಿಗೆ ದರ್ಶನ್‌ಗೆ ಕಂಟಕವಾಗ್ತಿವೆ.

ದರ್ಶನ್ ಭೇಟಿ ಬಳಿಕ ವಿಜಯಲಕ್ಷ್ಮೀ ಇನ್ನೂ ಜೈಲಿನಲ್ಲಿ ಇದ್ದಂತೆಯೇ ಹೊರಗೆ ಬಂದು ಬಿಡ್ತಾರೆ ಧನ್ವೀರ್ ಗೌಡ. ಇದರಲ್ಲೇ ಅರ್ಥ ಆಗುತ್ತೆ ಅಲ್ಲಿ ಯಾವುದೇ ಸಂಧಾನ, ರಾಜಿ ಪಂಚಾಯ್ತಿಗಳು ನಡೆದಿಲ್ಲ. ಬದಲಿಗೆ ಪರಿಸ್ಥಿತಿ ಮಗದಷ್ಟು ಬಿಗಡಾಯಿಸಿದೆ. ಒಂದು ವೇಳೆ ರಾಜಿ ಆಗಿದ್ದಿದ್ರೆ, ವಿಜಯಲಕ್ಷ್ಮೀ ದರ್ಶನ್ ಸಮೇತ ಬಂದು ಧನ್ವೀರ್ ಆ ಮಾತನ್ನ ಮಾಧ್ಯಮಗಳಿಗೆ ಸ್ಪಷ್ಟಪಡಿಸಬಹುದಿತ್ತು.

 

 

Exit mobile version