‘ಪಡೆಯಪ್ಪ’ನಿಗೆ 26 ವರ್ಷ.. ರಜನಿ- ರಮ್ಯಾ ಹರುಷ

ಜೈಲರ್-2 ಸೆಟ್‌‌ನಲ್ಲಿ ನೀಲಾಂಬರಿ ಪಡೆಯಪ್ಪನ ಜಪ

Untitled design 2025 04 12t193610.882

ಪಡೆಯಪ್ಪ.. ಸ್ಟೈಲ್ ಐಕಾನ್ ರಜನೀಕಾಂತ್ ಕರಿಯರ್‌‌ನ ಎವರ್‌‌ಗ್ರೀನ್ ಸಿನಿಮಾ. ಈ ಚಿತ್ರ ತೆರೆಕಂಡು ಬರೋಬ್ಬರಿ 26 ವರುಷ. ಅದೇ ಹರುಷದಲ್ಲಿ ಬ್ಯೂಟಿ ಕ್ವೀನ್ ರಮ್ಯಾಕೃಷ್ಣ ಜೈಲರ್-2 ಶೂಟಿಂಗ್‌ ಸೆಟ್‌‌ನಿಂದ ಆಟೋಗ್ರಾಫ್ ಪೋಸ್ಟ್ ಹಾಕಿದ್ದಾರೆ. ಈ ಕುರಿತ ಇಂಟರೆಸ್ಟಿಂಗ್ ಡಿಟೈಲ್ಡ್ ಸ್ಟೋರಿ ಇಲ್ಲಿದೆ.

ಜೈಲರ್-2.. 2023ರ ತಮಿಳು ಬ್ಲಾಕ್ ಬಸ್ಟರ್. ತಲೈವಾ ರಜನೀಕಾಂತ್ ನಟನೆಯ ಈ ಸಿನಿಮಾದಲ್ಲಿ ನಮ್ಮ ಶಿವರಾಜ್‌‌ಕುಮಾರ್, ಮೋಹನ್‌ಲಾಲ್, ಜಾಕಿಶ್ರಾಫ್, ಕಿಶೋರ್, ರಮ್ಯಾಕೃಷ್ಣ, ತಮನ್ನಾ, ವಿನಾಯಕನ್ ಸೇರಿದಂತೆ ದೊಡ್ಡ ತಾರಾಗಣವಿತ್ತು. ನೆಲ್ಸನ್ ಆ್ಯಕ್ಷನ್ ಕಟ್ ಹೇಳಿದ್ದ ಈ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಬರೋಬ್ಬರಿ 650 ಕೋಟಿ ಹಣವನ್ನು ಲೂಟಿ ಮಾಡಿತ್ತು. ಇದೀಗ ಜೈಲರ್ ಸೀಕ್ವೆಲ್ ಶೂಟಿಂಗ್ ಭರದಿಂದ ಸಾಗ್ತಿದೆ. ಕೇರಳದಲ್ಲಿ ಟೀಂ ಬೀಡುಬಿಟ್ಟಿದೆ.

ಜೈಲರ್‌ಗಿಂತ ಜೈಲರ್-2 ಮತ್ತಷ್ಟು ಮಗದಷ್ಟು ಡೆಡ್ಲಿ & ಡ್ಯಾಶಿಂಗ್ ಆಗಿರಲಿದ್ದು, ಒನ್ಸ್ ಅಗೈನ್ ರಮ್ಯಾಕೃಷ್ಣ ಜೈಲರ್-2 ಸೆಟ್‌‌ನಿಂದ ಪೋಸ್ಟ್‌ ಒಂದನ್ನ ಹಾಕೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು.. ಇದೇ ಏಪ್ರಿಲ್ 10ಕ್ಕೆ ಪಡೆಯಪ್ಪ ಸಿನಿಮಾ ತೆರೆಗಪ್ಪಳಿಸಿ ಬರೋಬ್ಬರಿ 26 ವರ್ಷಗಳಾಗಿದೆ. ತಮಿಳಿನ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಪಡೆಯಪ್ಪ, ತೆಲುಗಿನಲ್ಲಿ ನರಸಿಂಹ ಆಗಿ ರಿಲೀಸ್ ಆಗಿತ್ತು. ಅಂದಿನಿಂದ ಇಂದಿನವರೆಗೆ ರಜನಿ-ರಮ್ಯಾಕೃಷ್ಣ ಬಾಂಧವ್ಯದಲ್ಲಿ ಕಿಂಚಿತ್ತೂ ಬದಲಾವಣೆ ಆಗಿಲ್ಲ.

ಅಂದಹಾಗೆ 1999ರ ಪಡೆಯಪ್ಪ ಸಿನಿಮಾ ಹತ್ತು ಹಲವು ದಾಖಲೆಗಳಿಂದ ಇತಿಹಾಸ ಬರೆದ ಆಲ್‌ ಟೈಂ ಹಿಟ್ ಮೂವಿ. ಕೆ ಎಸ್ ರವಿ ಕುಮಾರ್ ನಿರ್ದೇಶನದ ಪಡೆಯಪ್ಪದಲ್ಲಿ ನೀಲಾಂಬರಿ ಆಗಿ ರಮ್ಯಾಕೃಷ್ಣ ನಟನೆ ವ್ಹಾವ್ ಫೀಲ್ ತರಿಸಿತ್ತು. ಸೌಂದರ್ಯ ರಜನಿಕಾಂತ್‌ರ ಜೋಡಿಯಾಗಿ ನಟಿಸಿದ್ರೆ, ರಜನಿಯನ್ನ ಪಡೆಯೋ ಹಠಕ್ಕೆ ಬಿದ್ದ ಹಠಮಾರಿ ಹೆಣ್ಣಾಗಿ ರಮ್ಯಾಕೃಷ್ಣ ಮಿಂಚಿದ್ರು. ಅದರಲ್ಲೂ ರಮ್ಯಾಕೃಷ್ಣ ಮನೆಗೆ ಬರೋ ರಜನಿಗೆ ಚೇರ್ ಇಲ್ಲದೆ ನಿಲ್ಲಿಸಿಯೇ ಮಾತನಾಡ್ತಿರಬೇಕಾದ್ರೆ, ಇದ್ದಲ್ಲೇ ತೂಗುಯ್ಯಾಲೆಯನ್ನ ಎಳೆದು ಸ್ಟೈಲ್ ಆಗಿ ಕೂರುವ ಪಡೆಯಪ್ಪನ ಖದರ್ ಇಂದಿಗೂ ನೋಡುಗರಿಗೆ ಎಲ್ಲಿಲ್ಲದ ರೋಮಾಂಚನ ನೀಡಲಿದೆ.

210 ಪ್ರಿಂಟ್‌‌ಗಳ ಮೂಲಕ ವರ್ಲ್ಡ್‌ವೈಡ್ ರಿಲೀಸ್ ಆದ ಮೊದಲ ತಮಿಳು ಸಿನಿಮಾ ಪಡೆಯಪ್ಪ. ಅಲ್ಲದೆ ಬರೋಬ್ಬರಿ 7 ಲಕ್ಷ ಆಡಿಯೋ ಕ್ಯಾಸೆಟ್ಸ್‌‌ ಸೋಲ್ಡ್ ಔಟ್ ಆಗುವ ಮೂಲಕ ಸಾರ್ವಕಾಲಿಕ ದಾಖಲೆ ಕೂಡ ಬರೆಯುತ್ತೆ. ಅಲ್ಲದೆ ಆ ವರ್ಷ ಅತಿಹೆಚ್ಚು ಗಳಿಸಿದ ತಮಿಳು ಸಿನಿಮಾ ಅನ್ನೋ ಗರಿಮೆಗೂ ಪಾತ್ರವಾಗುತ್ತೆ. ಇನ್ನು ಬಾಹುಬಲಿ ರಾಜಮಾತ ರಮ್ಯಾಕೃಷ್ಣ ನಟನೆಗೆ ಫಿಲ್ಮ್‌ಫೇರ್ ಪ್ರಶಸ್ತಿ ದೊರೆತರೆ, ತಮಿಳುನಾಡು ಸರ್ಕಾರದಿಂದ ಐದೈದು ಸ್ಟೇಟ್ ಫಿಲ್ಮ್ ಅವಾರ್ಡ್ಸ್ ಕೂಡ ಮುಡಿಗೇರಿಸಿಕೊಳ್ತಾನೆ ಪಡೆಯಪ್ಪ.

ಸ್ಟೈಲ್ ಐಕಾನ್ ರಜನೀಕಾಂತ್ ಯುನಿಕ್ ಸ್ಟೈಲು, ಮ್ಯಾನರಿಸಂ ಜೊತೆಗೆ ರಮ್ಯಾಕೃಷ್ಣ ಗತ್ತು, ಗೈರತ್ತು ಹಾಗೂ ಸೌಂದರ್ಯ ಕ್ಲಾಸ್ ಆ್ಯಕ್ಟಿಂಗ್ ಸಿನಿಮಾ ಎಲ್ಲರ ದಿಲ್ ದೋಚಿತ್ತು. ಇಂದಿಗೂ ಕೂಡ ತಲೈವಾ- ರಮ್ಯಾಕೃಷ್ಣ ಕಾಂಬೋ ಪದೇ ಪದೆ ಮರುಕಳಿಸ್ತಿರೋದು ಫ್ಯಾನ್ಸ್ ಹಾಗೂ ಪ್ರೇಕ್ಷಕರಿಗೆ ಖುಷಿ ಕೊಡ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version