‘ಮಾನ್‌ಸ್ಟರ್’ ಮೋಡ್‌‌ನಲ್ಲಿ ಶಿವಣ್ಣ..ಶೂಟಿಂಗ್ ಕಿಕ್‌ಸ್ಟಾರ್ಟ್

ಮುಂಬೈನಲ್ಲಿ ಫಸ್ಟ್‌ಲುಕ್ ಲಾಂಚ್.. ಬೆಂಗಳೂರಲ್ಲಿ ಮುಹೂರ್ತ

Untitled design 2026 09 08T142842.605

ಮುಂಬೈನಲ್ಲಿ ಟೈಟಲ್ ಜೊತೆ ಫಸ್ಟ್‌ಲುಕ್ ಲಾಂಚ್ ಮಾಡಿ, ಬಾಲಿವುಡ್ ತನಕ ಸೌಂಡ್ ಮಾಡಿದ್ದ ಆರ್ ಚಂದ್ರು-ಶಿವಣ್ಣ ಜೋಡಿ ಒರಿಜಿನಲ್ ಮಾನ್‌ಸ್ಟರ್‌ಗೆ ಅಧಿಕೃತ ಚಾಲನೆ ನೀಡಿದ್ದಾರೆ. ಮುಹೂರ್ತ ಪೂಜೆ ಜೊತೆ ಶೂಟಿಂಗ್ ಕೂಡ ಕಿಕ್‌ಸ್ಟಾರ್ಟ್ ಆಗಿದ್ದು, ಟಾಲಿವುಡ್ ಸುನಿಲ್ ಕೂಡ ಸಾಥ್ ನೀಡಿದ್ದಾರೆ. ಈ ಕುರಿತ ಬಿಂದಾಸ್ ಖಬರ್ ಇಲ್ಲಿದೆ.

ಒರಿಜಿನಲ್ ಮಾನ್‌ಸ್ಟರ್.. ತಾಜ್ ಮಹಲ್, ಚಾರ್ ಮಿನಾರ್, ಮೈಲಾರಿ ಹಾಗೂ ಪ್ಯಾನ್ ಇಂಡಿಯಾ ಮೂವಿ ಕಬ್ಜ ಚಿತ್ರಗಳ ನಿರ್ದೇಶಕ ಆರ್ ಚಂದ್ರು ಎರಡೂವರೆ ವರ್ಷದ ಗ್ಯಾಪ್ ಬಳಿಕ ಕೈಗೆತ್ತಿಕೊಂಡಿರೋ ಬಿಗ್ ಪ್ರಾಜೆಕ್ಟ್. ಬಾಲಿವುಡ್‌ನ ದಾದಾ ಆನಂದ್ ಪಂಡಿತ್ ಪ್ರೆಸೆಂಟ್ ಮಾಡ್ತಿರೋ ಈ ಸಿನಿಮಾಗೆ ಆರ್ ಚಂದ್ರು ಪತ್ನಿ ಯಮುನಾ ತಮ್ಮದೇ RC ಸ್ಟುಡಿಯೋಸ್ ಬ್ಯಾನರ್‌‌ನಡಿ ಬಂಡವಾಳ ಹೂಡಿದ್ದಾರೆ. ಹಿಂದಿ ಹಾಗೂ ಕನ್ನಡ ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗ್ತಿರೋ ಈ ಸಿನಿಮಾಗೆ ಶಿವರಾಜಕುಮಾರ್ ನಾಯಕನಟ.

ಮುಂಬೈನಲ್ಲಿ ಅದ್ಧೂರಿ ಟೈಟಲ್ ಲಾಂಚ್ ಜೊತೆ ಫಸ್ಟ್‌ಲುಕ್ ಕೂಡ ರಿವೀಲ್ ಮಾಡಿದ್ದ ಆರ್ ಚಂದ್ರು, ಇದೀಗ ಕೆಂಗೇರಿಯ ಮೋದಿ ಮೈದಾನದಲ್ಲಿ ಮುಹೂರ್ತ ಪೂಜೆ ಮಾಡಿ, ಶೂಟಿಂಗ್‌ಗೆ ಅಧಿಕೃತ ಚಾಲನೆ ನೀಡಿದ್ದಾರೆ. ಗೀತಾ ಶಿವರಾಜಕುಮಾರ್, ಯಮುನಾ ಆರ್ ಚಂದ್ರು, ನೈಸ್ ಸಂಸ್ಥೆಯ ಅಶೋಕ್ ಖೇಣಿ, ಮಾಧವ ಕಿರಣ್, ನಿರ್ಮಾಪಕರಾದ ಉದಯ್ ಕೆ ಮೆಹ್ತಾ, ಗಂಗಾಧರ್ ಮುಂತಾದ ಗಣ್ಯರು ಪೂಜಾ ಸಮಾರಂಭದಲ್ಲಿ ಭಾಗಿಯಾಗಿ ತಂಡಕ್ಕೆ ಶುಭ ಕೋರಿದ್ರು.

ಮೈಲಾರಿ, ಕಬ್ಜ ಬಳಿಕ ಶಿವಣ್ಣಗೆ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿರುವುದಕ್ಕೆ ಖುಷಿಯಾಗಿದೆ. ಅವರ ಬೆಂಬಲ ನನಗೆ ಸದಾ ಇರುತ್ತೆ. ತೆಲುಗಿನ ಹೆಸರಾಂತ ನಟ ಸುನಿಲ್ ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಇದೊಂದು ಅದ್ದೂರಿ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಗೆ ಬರಲಿದೆ. ಬೆಂಗಳೂರಿನ HMTಯಲ್ಲಿ ಬೃಹತ್ ಸೆಟ್ ಹಾಕಿ ಮೊದಲ ಹಂತದ ಚಿತ್ರೀಕರಣ ಶುಭಾರಂಭ ಮಾಡ್ತಿದ್ದೀವಿ ಎಂದರು.

ನನಗೆ ಕಥೆ ಇಷ್ಟ ಆಗದೇ ಇದ್ರೆ ಚಿತ್ರ ಒಪ್ಪಿಕೊಳ್ಳಲ್ಲ. ಆರ್ ಚಂದ್ರು ಅವರು ಹೇಳಿದ ಕಥೆ ಇಷ್ಟವಾಯ್ತು. ಚಂದ್ರು ಅವರ ನಿರ್ದೇಶನದಲ್ಲಿ ಮೈಲಾರಿ, ಕಬ್ಜ ನಂತರ ಅಭಿನಯಿಸುತ್ತಿದ್ದೇನೆ. ಒರಿಜಿನಲ್ ಮಾನ್‌‌ಸ್ಟರ್.. ಮಾನ್ ಸ್ಟರ್ ಅಂದ್ರೆ ದೈತ್ಯ ಅಂತ. ಆದ್ರೆ ಆ ದೈತ್ಯನಲ್ಲೂ ಬರೀ ದೈತ್ಯತನವಲ್ಲದೆ ಬೇರೆ ಒಂದು ಲೈನ್ ಇದೆ. ಅದನ್ನ ಈ ಚಿತ್ರದಲ್ಲಿ ನೋಡಬಹುದು. ಇನ್ನೂ, ಚಂದ್ರು ಎಮೋಷನಲ್ ಅಂಶಗಳನ್ನು ಬಹಳ ಚೆನ್ನಾಗಿ ನಿರ್ದೇಶಿಸುತ್ತಾರೆ. ಈ ಚಿತ್ರದಲ್ಲಿ ಎಮೋಷನ್ ಅಂಶ ಕೂಡ ಹೈಲೆಟ್ ಆಗಲಿದೆ. ಒಟ್ಟಿನಲ್ಲಿ ನಾನು ಈವರೆಗೂ ಮಾಡಿರದ ಪಾತ್ರವಿದು. ತೆಲುಗು ಮಿಶ್ರಿತ ಕನ್ನಡದಲ್ಲಿ ನನ್ನ ಸಂಭಾಷಣೆ ಇರುತ್ತದೆ ಅಂದ್ರು ನಟ ಶಿವರಾಜ್‌ಕುಮಾರ್.

ಶಿವಣ್ಣ ಅವ್ರ ಓಂ ಚಿತ್ರವನ್ನ ಸಾಕಷ್ಟು ಸಲ ನೋಡಿದ್ದೇನೆ. ಅವರ ಜೊತೆಗೆ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಸಂತೋಷವಾಗಿದೆ. ಶಿವಣ್ಣ ಅವರು ಹೇಳಿದ ಹಾಗೆ ಈ ಚಿತ್ರದ ಎಮೋಷನ್ ಅಂಶ ಎಲ್ಲರಿಗೂ ಬಹಳ ಇಷ್ಟವಾಗಲಿದೆ. ಆರ್ ಚಂದ್ರು ಉತ್ತಮವಾದ ಕಥೆ ಮಾಡಿಕೊಂಡಿದ್ದಾರೆ ಅಂದ್ರು ನಟ ಸುನಿಲ್.

ಎ ಜೆ ಶೆಟ್ಟಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಹಿಂದಿ ಹಾಗೂ ಕನ್ನಡದಲ್ಲಿ ‌ಈ ಚಿತ್ರ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಆರ್ ಚಂದ್ರು ಅವರ ಜೊತೆ ಮೈಲಾರಿ 2 ಕೂಡ ಮಾಡುತ್ತೇನೆ ಅಂತ ಶಿವಣ್ಣ ಬಿಗ್ ಬ್ರೇಕಿಂಗ್ ನ್ಯೂಸ್ ಕೂಡ ಕೊಟ್ಟಿದ್ದು ವಿಶೇಷ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version