ನಮ್ಮ ಯಶ್ ಟಾಕ್ಸಿಕ್ ಹಾದಿಯಲ್ಲೇ ಅಲ್ಲು ಅರ್ಜುನ್ ರಾಕಾ ಕೂಡ ಸಾಗುತ್ತಿದೆ. ಇನ್‌ಫ್ಯಾಕ್ಟ್ ಟಾಕ್ಸಿಕ್ 2.O ಅಂದ್ರೂ ಅಚ್ಚರಿಯಿಲ್ಲ. ಯೆಸ್.. ಐಕಾನ್ ಸ್ಟಾರ್ ಒಂದಲ್ಲ ಎರಡಲ್ಲ ನಾಲ್ಕು ರೋಲ್ಸ್ ಮಾಡ್ತಿದ್ದು, 800 ಕೋಟಿ ಬಜೆಟ್‌ನಿಂದ 2 ಸಾವಿರ ಕೋಟಿ ಬಾಕ್ಸ್ ಆಫೀಸ್ ಟಾರ್ಗೆಟ್ ಇಟ್ಕೊಂಡಿದ್ದಾರೆ. ಈ ಕುರಿತ ಎಕ್ಸ್‌ಕ್ಲೂಸಿವ್ ಧಮಾಕೇದಾರ್ ಸ್ಟೋರಿ ಇಲ್ಲಿದೆ..
- ಯಶ್ ‘ಟಾಕ್ಸಿಕ್’ ಹಾದಿಯಲ್ಲಿ ಅಲ್ಲು ಅರ್ಜುನ್ ‘ರಾಕಾ’
- 3 ಜನರೇಷನ್ 4 ಪಾತ್ರಗಳ ಸೈನ್ಸ್ ಫಿಕ್ಷನ್ ಎಂಟರ್‌ಟೈನರ್
- ಅಲ್ಲು ಅರ್ಜುನ್-ಅಟ್ಲೀ ‘ರಾಕಾ’ ಮತ್ತೆ ಪೋಸ್ಟ್‌ಪೋನ್..!
- 2028ರ ತನಕ ಇಲ್ಲ ರಿಲೀಸ್.. 2000ಕೋಟಿ ಟಾರ್ಗೆಟ್
ರಾಕಾ.. ನಮ್ಮ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಳಿಕ ಇಂಡಿಯನ್ ಸಿನಿದುನಿಯಾದಲ್ಲಿ ತಯಾರಾಗ್ತಿರೋ ಬಹುದೊಡ್ಡ ಹಾಗೂ ದುಬಾರಿ ಸಿನಿಮಾ. ಅಲ್ಲು ಅರ್ಜುನ್ ನಟನೆಯ ಹಾಗೂ ಅಟ್ಲೀ ನಿರ್ದೇಶನದ ಈ ಸಿನಿಮಾದ ಬಜೆಟ್ ಬರೋಬ್ಬರಿ 800 ಕೋಟಿ ಅಂದ್ರೆ ನೀವು ನಂಬಲೇಬೇಕು. ಗ್ಲೋಬಲ್ ಮಾರ್ಕೆಟ್‌ನಲ್ಲಿ ಸುಮಾರು 2 ಸಾವಿರ ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ನಿರೀಕ್ಷಿಸಿರೋ ರಾಕಾ ಟೀಂ, ಅದಕ್ಕಾಗಿ ಡೇ & ನೈಟ್ ಎಫರ್ಟ್ ಹಾಕಿ ಸಿನಿಮಾನ ಕಟ್ಟುತ್ತಿದೆ.
ಸೈನ್ಸ್ ಫಿಕ್ಷನ್ ಜಾನರ್‌ನ ಈ ರಾಕಾ ಸಿನಿಮಾ ಮಲ್ಟಿ ಜನರೇಷನ್ ಕಥಾನಕವನ್ನ ಹೊಂದಿದೆ. ಇಂಟರೆಸ್ಟಿಂಗ್ ಅಂದ್ರೆ ಅಲ್ಲು ಅರ್ಜುನ್ ಈ ಚಿತ್ರದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಪಾತ್ರಗಳನ್ನ ಪೋಷಿಸುತ್ತಿರೋದು ಸೆಂಟರ್ ಆಫ್ ಅಟ್ರ್ಯಾಕ್ಷನ್. ತಾತ, ಮಗ ಹಾಗೂ ಮೊಮ್ಮಕ್ಕಳು.. ಹೀಗೆ ಮೂರು ಜನರೇಷನ್‌ನ ನಾಲ್ಕು ಪಾತ್ರಗಳಿಗೆ ಜೀವ ತುಂಬುತ್ತಾರಂತೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್.
ಚಿತ್ರದಲ್ಲಿ ಈಗಾಗ್ಲೇ ಅಲ್ಲು ಜೊತೆ ದೀಪಿಕಾ ಪಡುಕೋಣೆ ಬಣ್ಣ ಹಚ್ಚಿದ್ದು, ಮೃಣಾಲ್ ಠಾಕೂರ್, ರಶ್ಮಿಕಾ ಮಂದಣ್ಣ ಹಾಗೂ ಜಾಹ್ನವಿ ಕಪೂರ್ ಕೂಡ ತಾರಾಗಣದಲ್ಲಿ ಇರಲಿದ್ದಾರೆ. ಅಂದಹಾಗೆ ರಾಕಾ ಸಿನಿಮಾ 2027ರ ಏಪ್ರಿಲ್‌ಗೆ ತೆರೆಗೆ ಬರಲಿದೆ ಎನ್ನಲಾಗಿತ್ತು. ಆದ್ರೀಗ 2028ರ ಜನವರಿಗೆ ರಿಲೀಸ್ ಡೇಟ್ ಪೋಸ್ಟ್‌ಪೋನ್ ಮಾಡಿಕೊಂಡಿದೆ ಎನ್ನಲಾಗ್ತಿದೆ. ಸಿನಿಮಾ ಅಂದುಕೊಂಡಿದ್ದಕ್ಕಿಂತ ಬಿಗ್ ಸ್ಕೇಲ್‌ನಲ್ಲಿ ಮೂಡಿ ಬರ್ತಿದ್ದು, ಗ್ಲೋಬಲ್ ಆಡಿಯೆನ್ಸ್‌ಗೆ ಉಣಬಡಿಸಲು ಗ್ಲೋಬಲ್ ಮಾರ್ಕೆಟ್‌ಗೆ ಲಗ್ಗೆ ಇಡೋಕೆ ಈ ಕಾಲಾವಕಾಶ ತೆಗೆದುಕೊಳ್ತಿದೆ ಅನ್ನೋದು ಸದ್ಯದ ಅಪ್ಡೇಟ್.
ಅಂದಹಾಗೆ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಕೂಡ ಡಬಲ್ ರೋಲ್ ಹಾಗೂ ಮಲ್ಟಿ ಶೇಡ್ಸ್‌ನಲ್ಲಿ ನೋಡುಗರ ಹುಬ್ಬೇರಿಸಿದ್ರು. ಇದೀಗ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಅವ್ರ ಹಾದಿಯಲ್ಲೇ ರಾಕಾ ಅಲ್ಲು ಅರ್ಜುನ್ ಕೂಡ ಸಾಗುತ್ತಿದ್ದು, ಇದು ಟಾಕ್ಸಿಕ್ 2.O ಅಂದ್ರೂ ಅಚ್ಚರಿಯಿಲ್ಲ. ಆದ್ರೆ ಕಥೆ, ಮೇಕಿಂಗ್ ಹಾಗೂ ಪ್ರೆಸೆಂಟೇಷನ್ ಎಷ್ಟು ವಿಭಿನ್ನ ಹಾಗೂ ವಿಶಿಷ್ಠವಾಗಿರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
