‘ಆಪರೇಷನ್ ಸಿಂದೂರ್’ಗಾಗಿ 30 ಬ್ಯಾನರ್ಸ್‌ ಪೈಪೋಟಿ

ಯಾರ ಪಾಲಾಯ್ತು ಆಪರೇಷನ್ ಸಿಂದೂರ್ ಟೈಟಲ್..?

ಐಶ್ವರ್ಯ (5)

ಇಂಡೋ-ಪಾಕ್ ವಾರ್‌ ಕುರಿತ ನೂರಾರು ಸಿನಿಮಾಗಳು ಈಗಾಗ್ಲೇ ಬೆಳ್ಳಿತೆರೆ ಬೆಳಗಿವೆ. ಭಾರತ-ಪಾಕ್ ವಿಭಜನೆಗೊಂಡ ದಿನದಿಂದ ಸಾಲು ಸಾಲು ಯುದ್ಧಗಳಾಗಿವೆ. ಅವುಗಳ ನೈಜ ಚಿತ್ರಗಳು ಕಣ್ಣಿಗೆ ಕಟ್ಟಿದಂತೆ ಸಿನಿಮಾಗಳ ಮೂಲಕ ಜನರ ಮುಂದೆ ಬಂದಿವೆ. ಇದೀಗ ಆಪರೇಷನ್ ಸಿಂದೂರ್ ಕೂಡ ಸಿನಿಮಾ ಆಗ್ತಿದೆ. ಟೈಟಲ್‌ಗಾಗಿ ಪ್ರೊಡಕ್ಷನ್ ಬ್ಯಾನರ್‌‌ಗಳ ನಡುವೆ ಅಕ್ಷರಶಃ ವಾರ್ ಶುರುವಾಗಿದೆ.

ಭಾರತಕ್ಕೆ ಪಾಕಿಸ್ತಾನ ಬದ್ಧ ಶತ್ರು. 1947ರಲ್ಲಿ ಸ್ವಾತಂತ್ರ್ಯಗೊಂಡ ದಿನದಿಂದ ಪಾಕಿಸ್ತಾನ ಅತೃಪ್ತ ಆತ್ಮದಂತೆ ನಮ್ಮ ಭಾರತದ ವಿರುದ್ಧ ಕಿತಾಪತಿ ಮಾಡ್ತಾ ಬರ್ತಿದೆ. ನೇರವಾಗಿ ಹೊಡೆದಾಡೋಕೆ ಧೈರ್ಯ, ಧಮ್ ಇಲ್ಲದಿದ್ರೂ ಸಹ ಭಯೋತ್ಪಾದಕರ ಮೂಲಕ ಅಂದಿನಿಂದಲೂ ಯುದ್ಧ ಮಾಡ್ತಾನೇ ಬರ್ತಿದೆ. ನಮ್ಮವರು ಕೂಡ ಪ್ರತಿ ಬಾರಿ ಅವರನ್ನ ಸೋಲಿಸುವ ಮೂಲಕ ಒಂದಷ್ಟು ರಕ್ತಬೀಜಾಸುರರನ್ನ ಬಲಿ ಪಡೆಯುತ್ತಲೇ ಇದ್ದಾರೆ.

1971ರ ಇಂಡೋ-ಪಾಕ್ ವಾರ್, 1999ರ ಕಂದಹಾರ್ ಫ್ಲೈಟ್ ಹೈಜಾಕ್, ಭುಜ್ ಏರ್‌ಬೇಸ್ ಮೇಲಿನ ಅಟ್ಯಾಕ್, ಉರಿ ಅಟ್ಯಾಕ್, ಪುಲ್ವಾಮ ದಾಳಿ, ಘಾಜಿ ಅಟ್ಯಾಕ್, ಕಾರ್ಗಿಲ್ ವಾರ್ ಸೇರಿದಂತೆ ಸಾಲು ಸಾಲು ಯುದ್ಧಗಳು ಭಾರತ ಹಾಗೂ ಪಾಕ್ ನಡುವೆ ಏರ್ಪಟ್ಟಿವೆ. ಆದ್ರೆ ಅವುಗಳಲ್ಲಿ ಬಹುತೇಕ ಎಲ್ಲಾ ಯುದ್ಧಗಳನ್ನ ಗೆದ್ದ ಖುಷಿ ಭಾರತಕ್ಕಿದೆ. ಪದೇ ಪದೆ ಸೋತು ಭಾರತಕ್ಕೆ ಶರಣಾದ ಪಾಕಿಸ್ತಾನ ಯುದ್ಧದಲ್ಲಷ್ಟೇ ಅಲ್ಲ, ಕ್ರಿಕೆಟ್‌‌ನಲ್ಲಿ ಸಹ ಗೆದ್ದ ನಿದರ್ಶನಗಳು ಒಂದೋ ಎರಡೋ ಅಷ್ಟೇ.

ಸದ್ಯ ಪಾಕಿಸ್ತಾನ್ ಉಗ್ರರ ಮೂಲಕ ಕಾಶ್ಮೀರದ ಪಹಲ್ಗಾಮ್ ನಲ್ಲಿ ಇತ್ತೀಚೆಗೆ ಪ್ರವಾಸಿಗರ ಮೇಲೆ ನಡೆಸಿದಂತಹ ದಾಳಿಗೆ ಆಪರೇಷನ್ ಸಿಂದೂರ್ ಮೂಲಕ ಭಾರತ ಪ್ರತಿದಾಳಿ ನಡೆಸಿತು. ಇಡೀ ವಿಶ್ವದಾದ್ಯಂತ ಸದ್ಯ ಆಪರೇಷನ್ ಸಿಂದೂರ್ ಟಾಕ್ ಕ್ರಿಯೇಟ್ ಮಾಡಿದೆ. ಬಹುತೇಕ ರಾಷ್ಟ್ರಗಳು ಭಾರತ ನಡೆಸ್ತಿರೋ ಉಗ್ರರ ಮೇಲಿನ ಯುದ್ಧಕ್ಕೆ ಸಾಥ್ ನೀಡ್ತಿವೆ. ಅದೀಗ ಸಿನಿಮಾ ಆಗೋ ಸೂಚನೆ ಸಿಕ್ಕಿದೆ.

ಆಪರೇಷನ್ ಸಿಂದೂರ್ ಟೈಟಲ್ ರಿಜಿಸ್ಟ್ರೇಷನ್‌ಗೆ ಬಾಲಿವುಡ್ ಪ್ರೊಡಕ್ಷನ್ ಬ್ಯಾನರ್‌‌ಗಳು ನಾ ಮುಂದು ತಾ ಮುಂದು ಅಂತ ಮುಗಿಬಿದ್ದಿವೆ. ಸುಮಾರು 30ಕ್ಕೂ ಅಧಿಕ ಬಿಗ್ ಬ್ಯಾನರ್‌‌ಗಳು ಈ ಟೈಟಲ್‌‌ಗಾಗಿ ಬಡಿದಾಡಿದ್ದು, 40 ರಿಂದ 50 ವೆರೈಟಿ ಟೈಟಲ್ಸ್ ರಿಜಿಸ್ಟರ್ ಆಗಿವೆ ಅಂತ ಟೈಟಲ್ ಕಮಿಟಿ ಅನೌನ್ಸ್ ಮಾಡಿದೆ. ಹಿಂದೂಸ್ತಾನ್‌‌ ಕಾ ಸಿಂದೂರ್, ಮಿಷನ್ ಆಪರೇಷನ್ ಸಿಂದೂರ್, ಸಿಂದೂರ್ ಕಾ ಬದ್ಲಾ, ಪಹಲ್ಗಾಮ್: ದಿ ಟೆರರ್ ಅಟ್ಯಾಕ್, ಪಹಲ್ಗಾಮ್ ಅಟ್ಯಾಕ್ ಹೀಗೆ ಸಾಕಷ್ಟು ಟೈಟಲ್‌‌ಗಳು ಆ ಪಟ್ಟಿಯಲ್ಲಿವೆ ಎನ್ನಲಾಗ್ತಿದೆ.

ನಮ್ಮ ಕರ್ನಾಟಕದ ಸೊಸೆ ಕರ್ನಲ್ ಸೋಫಿಯಾ ಖುರೇಷಿ ಪಾತ್ರವನ್ನು ಹೋಲುವ ಪೋಸ್ಟರ್ ಕೂಡ ಆಪರೇಷನ್ ಸಿಂದೂರ್ ಟೈಟಲ್‌‌ನಲ್ಲಿ ಪ್ರೊಡಕ್ಷನ್ ಬ್ಯಾನರ್‌ ಒಂದು ಅನೌನ್ಸ್ ಮಾಡಿದೆ. ನಿಕ್ಕಿ ವಿಕ್ಕಿ ಭಗ್ನಾನಿ ಫಿಲಂಸ್ ಬ್ಯಾನರ್‌‌‌‌ನಡಿ ಚಿತ್ರದ ಫಸ್ಟ್‌ಲುಕ್ ಪೋಸ್ಟರ್‌‌ನ ಪೋಸ್ಟ್‌ ಮಾಡಲಾಗಿತ್ತು. ಇನ್ನೂ ಆಪರೇಷನ್ ಮುಗಿದಿಲ್ಲವಾದ್ದರಿಂದ ಇದನ್ನ ಕೂಡ ಉದ್ಯಮವಾಗಿ ಬಳಸಿಕೊಳ್ತಿರೋದ್ರ ಬಗ್ಗೆ ನೆಟ್ಟಿಗರು ಪ್ರೊಡಕ್ಷನ್ ಹೌಸ್‌ಗೆ ತರಾಟೆಗೆ ತೆಗೆದುಕೊಂಡ ಹಿನ್ನೆಲೆ, ಕೂಡಲೇ ಅದನ್ನ ಡಿಲೀಟ್ ಮಾಡಿದೆ ಆ ನಿರ್ಮಾಣ ಸಂಸ್ಥೆ.

ಅಕ್ಷಯ್ ಕುಮಾರ್, ಸಿದ್ದಾರ್ಥ್ ಮಲ್ಹೋತ್ರ, ವಿಕ್ಕಿ ಕೌಶಲ್, ಕಂಗನಾ ರಣಾವತ್ ಸೇರಿದಂತೆ ಸಾಕಷ್ಟು ಸ್ಟಾರ್‌ಗಳ ಹೆಸರುಗಳು ಈ ಆಪರೇಷನ್ ಸಿಂದೂರ್ ಸಿನಿಮಾದ ತಾರಾಗಣದಲ್ಲಿ ಕೇಳಿಬರ್ತಿದ್ದು, ಯಾವ ಸ್ಟಾರ್ ಪಾಲಾಗುತ್ತೆ ಈ ಆಪರೇಷನ್ ಸಿಂದೂರ್ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version