ಧನುಷ್ ಹಾಗೂ ಮಮ್ಮುಟ್ಟಿ ನಟನೆಯ ಓಂ ಅಡ್ಡಾಗೆ ಮತ್ತೊಬ್ಬ ಲೇಡಿ ಸೂಪರ್ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ. ಕ್ಲಾಸ್ ಆಗಿ ಸೀತೆ ಪಾತ್ರದಲ್ಲಿ ಮಿಂಚ್ತಿರೋ ಸಾಯಿ ಪಲ್ಲವಿ.. ಇದೀಗ IPS ಆಫೀಸರ್ ಆಗಿ ಮಾಸ್ ಅವತಾರ ತಾಳಿದ್ದಾರೆ. ರಕ್ತಚಂದನ ಬೇಟೆಗೆ ಇಳಿದಿರೋ ಲೇಡಿ ಸಿಂಗಂ ನಿತ್ಯಾ ರೆಡ್ಡಿ ಕುರಿತ ಧಮಾಕೇದಾರ್ ಸ್ಟೋರಿ ಇಲ್ಲಿದೆ…
- ಕ್ಲಾಸ್ ಸೀತೆ ಈಗ ಮಾಸ್ IPS ಆಫೀಸರ್.. ‘ರಕ್ತಚಂದನ’ ಬೇಟೆ
- ಹುತಾತ್ಮ IFS ಆಫೀಸರ್ ಪುತ್ರಿ ನಿತ್ಯಾ ರೆಡ್ಡಿಯಾಗಿ ಸಾಯಿ ಪಲ್ಲವಿ
- ಧನುಷ್-ಮಮ್ಮುಟ್ಟಿ ಓಂ ಅಡ್ಡಾಗೆ ಲೇಡಿ ಸಿಂಗಂ ಗ್ರ್ಯಾಂಡ್ ಎಂಟ್ರಿ
- ನೈಜ ಘಟನೆಗಳನ್ನ ಆಧರಿಸಿದ ಆ್ಯಕ್ಷನ್ ಥ್ರಿಲ್ಲರ್ ‘ಓಂ ಚಾಪ್ಟರ್-1’
ಇದು ತಮಿಳಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಓಂ ಚಾಪ್ಟರ್-1 ಉದಿರಮ್ ದಿ ಬ್ಲಡ್‌ವುಡ್ ಸಿನಿಮಾದ ಹೊಚ್ಚ ಹೊಸ ಟೀಸರ್. ಈ ಸಿನಿಮಾದ ಲೀಡ್‌ನಲ್ಲಿ ಧನುಷ್ ಹಾಗೂ ಮಮ್ಮುಟ್ಟಿ ಇದ್ರೂ ಸಹ ಅವರಷ್ಟೇ ಪವರ್‌ಫುಲ್ ಆಗಿರೋ ಮತ್ತೊಂದು ಕ್ಯಾರೆಕ್ಟರ್ ಅಂದ್ರೆ ಅದು ಸಾಯಿ ಪಲ್ಲವಿಯದ್ದು. ಹಾಗಾಗಿಯೇ ಖಡಕ್ ಪೊಲೀಸ್ ಕಾಪ್ ನಿತ್ಯಾ ರೆಡ್ಡಿ ರೋಲ್‌ನ ಇಂಟ್ರಡ್ಯೂಸ್ ಮಾಡೋ ಈ ಟೀಸರ್ ಇದೀಗ ರಿಲೀಸ್ ಆಗಿದ್ದು, ಎಲ್ಲೆಡೆ ಸಂಚಲನ ಮೂಡಿಸ್ತಿದೆ.
ರಕ್ತಚಂದನ ಸ್ಮಗ್ಲಿಂಗ್ ಮಾಡ್ತಾ ಬದುಕು ಕಟ್ಟಿಕೊಂಡಿರೋ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಅದೆಷ್ಟೋ ಮಂದಿಗೆ ಅದು ಕ್ರೈಂ ಅಂತ ಗೊತ್ತಿದ್ದೂ ಸಹ, ವೃತ್ತಿ ಮಾತ್ರ ಮುಂದುವರೆಸ್ತಿದ್ದಾರೆ. ಅದನ್ನ ಮಟ್ಟ ಹಾಕೋಕೆ ಬರುವ ಖಡಕ್ ಐಪಿಎಸ್ ಆಫೀಸರ್ ಆಗಿ ಸಾಯಿ ಪಲ್ಲವಿ ನಟಿಸಿದ್ದು, ಆಕೆಯ ತಂದೆ ಐಎಫ್‌ಎಸ್ ಆಫೀಸರ್ ಕೆಲಸದ ನಡುವೆ ಹುತಾತ್ಮರಾಗಿರ್ತಾರೆ. ಆ ಸೇಡು ತೀರಿಸಿಕೊಳ್ಳೋದ್ರ ಜೊತೆ ಜೊತೆಗೆ ಬದ್ಧತೆ ಇರೋ ಸೂಪರ್ ಕಾಪ್ ಆಗಿ ಬಣ್ಣ ಹಚ್ಚಿದ್ದಾರೆ. ಅದ್ರಲ್ಲೂ ಸಾಯಿ ಪಲ್ಲವಿ ಹೇರ್ ಸ್ಟೈಲ್ ಹಾಗೂ ಮಾಸ್ ಸೀನ್ಸ್ ಸ್ಪೆಷಲ್ ಅಟ್ರ್ಯಾಕ್ಷನ್.
ಒಂದ್ಕಡೆ ಯಶ್-ರಣ್ಬೀರ್ ರಾಮಾಯಣದಲ್ಲಿ ಸೀತೆಯಾಗಿ ಸಖತ್ ಕ್ಲಾಸಿಕ್ ರೋಲ್ ಮಾಡಿರೋ ಸಾಯಿ ಪಲ್ಲವಿ.. ಅದಕ್ಕೆ ಕಾಂಟ್ರಾಸ್ಟ್ ಆಗಿ ನಿತ್ಯಾ ರೆಡ್ಡಿಯಾಗಿ ಮಾಸ್ ಅವತಾರ ತಾಳಿರೋದು ವಿಶೇಷ. ರಾಜ್‌ಕುಮಾರ್ ಪೆರಿಯಾಸ್ವಾಮಿ ನಿರ್ದೇಶನದ ಈ ಸಿನಿಮಾ ಅಮರನ್‌ನಂತೆ ಬಯೋಪಿಕ್ ಅಲ್ಲದಿದ್ರೂ, ನೈಜ ಘಟನೆಗಳನ್ನ ಆಧರಿಸಿಯೇ ತಯಾರಾಗಿದೆ.
ಇಲ್ಲಿ ಮಮ್ಮುಟ್ಟಿ ಇಂಟರ್‌ನ್ಯಾಷನಲ್ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸಿಯಾ ಆಗಿ ಕಾಣಿಸಿಕೊಂಡ್ರೆ, ರಕ್ತ ಚಂದನ ಸ್ಮಗ್ಲಿಂಗ್ ಮಾಡೋರ ಪಾಲಿನ ಲೀಡರ್ ಆಗಿ ಧನುಷ್ ಅಬ್ಬರ, ಆರ್ಭಟ ಜೋರಿದೆ. ಸಾಯಿ ಅಭ್ಯಂಕರ್ ಸಂಗೀತ ಸಂಯೋಜನೆಯ ಸಾಂಗ್ಸ್ ಕೂಡ ಇಂಪ್ರೆಸ್ಸೀವ್ ಆಗಿದ್ದು, ನೋಡುಗರಲ್ಲಿ ಅತೀವ ನಿರೀಕ್ಷೆ ಮೂಡಿಸಿದೆ ಓಂ ಚಾಪ್ಟರ್-1. ರಜನಿಕಾಂತ್ ಜೈಲರ್-2 ಹಾಗೂ ಸೂರ್ಯ ಸೀನ್ ಸಿನಿಮಾಗಳಿಗಾಗಿ ನಿರ್ಮಾಪಕ ಧನುಷ್ ಈ ಸಿನಿಮಾದ ರಿಲೀಸ್ ಪೋಸ್ಟ್‌ಪೋನ್ ಮಾಡಿಕೊಂಡಿದ್ರು. ಇದೀಗ ನವೆಂಬರ್ 20ಕ್ಕೆ ತೆರೆಗೆ ಬರೋಕೆ ಮುಹೂರ್ತ ನಿಗದಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಅಲ್ಲು ಅರ್ಜುನ್ ಪುಷ್ಪ ಸೀರೀಸ್ ಸಿನಿಮಾಗಳ ಬಳಿಕ ರಕ್ತಚಂದನ ಸ್ಮಗ್ಲಿಂಗ್ ಕುರಿತು ಬರ್ತಿರೋ ಮತ್ತೊಂದು ಬಿಗ್ ಸ್ಟಾರ್ಸ್ ಬಿಗ್ ಬಜೆಟ್ ಚಿತ್ರ ಅನಿಸಿಕೊಂಡಿದೆ ಓಂ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
