ವಿಜಯಲಕ್ಷ್ಮಿ ಜೊತೆ ಶೀತಲ ಸಮರದ ನಡುವೆ ದರ್ಶನ್ ಬಗ್ಗೆ ಧನ್ವೀರ್ ಭಾವುಕ ಪೋಸ್ಟ್

Untitled Design 2026 10 27T113346.951

ಬೆಂಗಳೂರು: ನಟ ದರ್ಶನ್ ಹಾಗೂ ಧನ್ವೀರ್ ನಡುವಿನ ಸ್ನೇಹ, ಇನ್ನೊಂದೆಡೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ಧನ್ವೀರ್ ಅವರ ಶೀತಲ ಸಮರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿವಾದದ ನಡುವೆಯೇ ಧನ್ವೀರ್ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಬಗ್ಗೆ ಭಾವುಕ ಪೋಸ್ಟ್ ಹಾಕಿದ್ದು, ವೈರಲ್ ಆಗಿದೆ.

ಧನ್ವೀರ್ ಪೋಸ್ಟ್‌ನಲ್ಲಿ ಏನಿದೆ?

“ದರ್ಶನ್ ಸರ್ ಅವರ ಅಕೌಂಟ್‌ನಿಂದ ನನ್ನನ್ನು ಬ್ಲಾಕ್ ಮಾಡಬಹುದು. ನಾನೇ ಅನ್‌ಫಾಲೋ ಮಾಡಿದೆ ಎಂದು ಬಿಂಬಿಸಬಹುದು. ಜನರ ಮುಂದೆ ನನ್ನನ್ನು ಕೆಟ್ಟವನಾಗಿ ಬಿಂಬಿಸಬಹುದು. ನನ್ನ ವಿರುದ್ಧ ಎಷ್ಟು ಬೇಕಾದರೂ ನೆಗೆಟಿವ್ ಪಿಆರ್ ಮಾಡಬಹುದು… ಆದರೆ ನನ್ನ ಹೃದಯದ ಬಾಗಿಲಲ್ಲಿ ದರ್ಶನ್ ಸರ್ ಅವರಿಗಿರುವ ಸ್ಥಾನಕ್ಕೆ ಬೀಗ ಹಾಕುವ ಶಕ್ತಿ ಯಾರಿಗೂ ಇಲ್ಲ” ಎಂದು ಧನ್ವೀರ್ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಮುಂದುವರಿಸಿ, “ನನ್ನ ಅಭಿಮಾನ ನಿಮ್ಮ ವಿರೋಧದಿಂದ ಹುಟ್ಟಿದ್ದಲ್ಲ. ನಿಮ್ಮ ವಿರೋಧದಿಂದ ಸಾಯುವುದೂ ಇಲ್ಲ. ಜಗತ್ತು ಏನೇ ಹೇಳಲಿ, ಕಾಲವೇ ಬದಲಾಗಲಿ ನನ್ನ ನಿಲುವು ಒಂದೇ. ನನ್ನ ಅಭಿಮಾನ ಒಂದೇ, ದರ್ಶನ್ ಸರ್! ‘ದೆನ್ ನೌ ಫಾರೆವರ್'” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿವಾದದ ಹಿನ್ನೆಲೆ

ನಟ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಪ್ರತಿಕ್ರಿಯಿಸಿದ್ದ ಧನ್ವೀರ್, ತಮ್ಮ ಬಳಿ ಕೂಡ ಆಡಿಯೋ ದಾಖಲೆಗಳಿದ್ದು, ಶೀಘ್ರದಲ್ಲೇ ಅವುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಈ ಹೇಳಿಕೆಯಿಂದ ವಿವಾದ ಇನ್ನಷ್ಟು ಭುಗಿಲೆದ್ದಿದೆ. 

ದರ್ಶನ್ ಅಕೌಂಟ್‌ನಿಂದ ಬ್ಲಾಕ್?

ಧನ್ವೀರ್ ಅವರನ್ನು ದರ್ಶನ್ ಅವರ ಸೋಷಿಯಲ್ ಮೀಡಿಯಾ ಅಕೌಂಟ್‌ನಿಂದ ಬ್ಲಾಕ್ ಮಾಡಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಕುರಿತು ಸ್ಪಷ್ಟ ಪ್ರತಿಕ್ರಿಯೆ ಬಂದಿಲ್ಲ.. ಜೊತೆಗೆ, ತಮ್ಮ ವಿರುದ್ಧ ನೆಗೆಟಿವ್ ಪಿಆರ್ ನಡೆಯುತ್ತಿರುವುದಾಗಿಯೂ ಧನ್ವೀರ್ ಆರೋಪಿಸಿದ್ದಾರೆ.

ಅಭಿಮಾನಿಗಳ ಪ್ರತಿಕ್ರಿಯೆ

ಧನ್ವೀರ್ ಅವರ ಈ ಭಾವುಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಧನ್ವೀರ್ ಅವರ ನಿಷ್ಠೆಯನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಈ ವಿವಾದದ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ದರ್ಶನ್ ಅಭಿಮಾನಿಗಳು ಕೂಡ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದು, ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.

Exit mobile version