ಕನ್ನಡಕ್ಕೆ ಬಿಟೌನ್ ಬಾಂಬ್ ಶೆಲ್ ನೋರಾ ಫತೇಹಿ..KD ಜೊತೆ ಕಿಲ್ಲೇಡಿ

ನೋರಾ ಫತೇಹಿ ಸಂಭಾವನೆ 1 ಕೋಟಿ.. KDಗೆ ಟ್ರಂಪ್‌ಕಾರ್ಡ್..!

Untitled design 2026 03 12T145017.516

ಸಾಲು ಸಾಲು ಬಾಲಿವುಡ್ ಬಾಂಬ್ ಶೆಲ್‌‌ಗಳನ್ನ ಕನ್ನಡಕ್ಕೆ ಇಂಟ್ರಡ್ಯೂಸ್ ಮಾಡಿದ್ದ ಜೋಗಿ ಪ್ರೇಮ್, ಇದೀಗ ಕೆಡಿ ಸಿನಿಮಾದ ಹಾಡೊಂದಕ್ಕಾಗಿ ನೋರಾ ಫತೇಹಿ ಕೂಡ ಸ್ಯಾಂಡಲ್‌ವುಡ್‌ಗೆ ಕಾಲಿಡುವಂತೆ ಮಾಡಿದ್ದಾರೆ. ಯೆಸ್.. ಧ್ರುವ ಸರ್ಜಾ ಜೊತೆ ಸೊಂಟ ಬಳುಕಿಸಿರೋ ನೋರಾ ವೈಯ್ಯಾರ ಹೇಗಿರಲಿದೆ..? ಹಾಡು ಯಾವುದು..? ಯಾವಾಗ ರಿಲೀಸ್..? ಎಷ್ಟು ಕೋಟಿ ರೆಮ್ಯುನರೇಷನ್ ತಗೊಂಡ್ರು ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ.

ಯೆಸ್.. ಮೋಸ್ಟ್ ಎಕ್ಸ್‌ಪೆಕ್ಟೆಡ್ ಕೆಡಿ ಸಿನಿಮಾದ ರಿಲೀಸ್ ಡೇಟ್ ಹತ್ತಿರ ಆಗ್ತಿದ್ದಂತೆ ಪ್ರಮೋಷನ್ಸ್ ಕೂಡ ನೆಕ್ಸ್ಟ್ ಲೆವೆಲ್ ನಡೀತಿವೆ. ಡೈರೆಕ್ಟರ್ ಜೋಗಿ ಪ್ರೇಮ್ ಕೆಡಿ ಅಡ್ಡಾದಿಂದ ಮತ್ತೊಂದು ಹಾಡು ಬರ್ತಿದೆ. ಸರ್ಸೆ ನಿನ್ನ ಸೆರಗ ಸರ್ಸೆ ಅನ್ನೋ ಈ ಹಾಡು ಟಿಪಿಕಲ್ ಪ್ರೇಮ್ ಸಾಂಗ್ ಆಗಿರಲಿದ್ದು, ಅವರೇ ಸಾಹಿತ್ಯ ರಚಿಸಿರೋದು ವಿಶೇಷ. ಅರ್ಜುನ್ ಜನ್ಯ ಒಂದೊಂದು ಭಾಷೆಯಲ್ಲಿ ಒಬ್ಬೊಬ್ಬರ ಬಳಿ ಬೆಸ್ಟ್ ಸಿಂಗರ್‌‌ಗಳಿಂದ ಇದನ್ನ ಹಾಡಿಸಿದ್ದು, ರಾಜು ಸುಂದರಂ ಮಾಸ್ಟರ್ ಕೊರಿಯೋಗ್ರಫಿ ಇದಕ್ಕೆ ಇರಲಿದೆ.

ಧ್ರುವ ಸರ್ಜಾ ಜೊತೆ ಈ ಹಾಡಲ್ಲಿ ಸೆನೋರಿಟಾ ಪಾತ್ರಧಾರಿಯಾಗಿ ಬಾಲಿವುಡ್ ಬಾಂಬ್ ಶೆಲ್ ನೋರಾ ಫತೇಹಿ ಸೊಂಟ ಬಳುಕಿಸಿದ್ದಾರೆ. ಜಸ್ಟ್ ಫಸ್ಟ್‌ಲುಕ್ ಮಾತ್ರ ರಿವೀಲ್ ಆಗಿದ್ದು, ಇದೇ ಮಾರ್ಚ್ 14ಕ್ಕೆ ಕಂಪ್ಲೀಟ್ ಲಿರಿಕಲ್ ಸಾಂಗ್ ಹೊರಬೀಳಲಿದೆ. ಅಂದಹಾಗೆ ಇದನ್ನ ಸೀಗೆಹಳ್ಳಿಯಲ್ಲಿ ಮೋಹನ್ ಬಿ ಕೆರೆ ಆರ್ಟ್ ವರ್ಕ್‌ನಲ್ಲಿ ತಯಾರಾದ ಸೆಟ್ ಹಾಕಿ ಚಿತ್ರಿಸಲಾಗಿದೆ. ಸುಮಾರು 500 ಮಂದಿ ಡ್ಯಾನ್ಸರ್ಸ್ ಹಾಗೂ 500 ಮಂದಿ ಜೂನಿಯರ್ ಆರ್ಟಿಸ್ಟ್‌‌ಗಳು ಈ ಹಾಡೊಂದಕ್ಕಾಗಿ ಭಾಗಿಯಾಗಿರೋದು ಹೈಲೈಟ್.

ಈ ಹಾಡೊಂದಕ್ಕಾಗಿಯೇ ಬರೋಬ್ಬರಿ 6 ಕೋಟಿ ರೂಪಾಯಿ ಬೃಹತ್ ಮೊತ್ತ ಖರ್ಚು ಮಾಡಿರೋ ಚಿತ್ರತಂಡ, ನೋರಾ ಫತೇಹಿಗೆ 1 ಕೋಟಿ ರೂಪಾಯಿ ರೆಮ್ಯುನರೇಷನ್‌ ನೀಡಿರೋದು ಇಂಟರೆಸ್ಟಿಂಗ್. ಒಟ್ಟಾರೆ ಇಲ್ಲಿಯ ತನಕ ಮೂರು ಹಾಡುಗಳು ರಿಲೀಸ್ ಆಗಿದ್ದು, ಅವೆಲ್ಲಕ್ಕಿಂತ ದುಬಾರಿ ಸಾಂಗ್ ಇದಾಗಲಿದೆ. ಸೋ.. ಕೆಡಿ ಸಿನಿಮಾಗೆ ಇದು ಟ್ರಂಪ್‌ಕಾರ್ಡ್ ಸಾಂಗ್ ಆಗೋದ್ರಲ್ಲಿ ಡೌಟೇ ಇಲ್ಲ.

ಸ್ವತಃ ಜೋಗಿ ಪ್ರೇಮ್ ಅವರೇ ಸಾಹಿತ್ಯ ಬರೆದು, ಜನ್ಯ ಹಂತ್ರ ಟ್ಯೂನ್ ಮಾಡಿಸಿರೋ ಈ ಹಾಡಿಗಾಗಿ ನೋರಾ ಫತೇಹಿಯನ್ನ ಕನ್ನಡಕ್ಕೆ ಕರೆತಂದಿದ್ದಾರೆ ಪ್ರೇಮ್. ಅಂದಹಾಗೆ ಕನ್ನಡಕ್ಕೆ ಬಾಲಿವುಡ್ ಹಾಟ್ ಬ್ಯೂಟಿಯರನ್ನ ಕರೆ ತರೋದು ಪ್ರೇಮ್‌ಗೆ ಹೊಸತೇನಲ್ಲ. ಇಲ್ಲಿಯ ತನಕ ಮಲ್ಲಿಕಾ ಶೆರಾವತ್, ಯಾನಾ ಗುಪ್ತಾ, ಸನ್ನಿ ಲಿಯೋನ್, ಸ್ಕಾರ್ಲೆಟ್ ವಿಲ್ಸನ್, ಸುಮಿತ್ ಕೌರ್, ಆ್ಯಮಿ ಜಾಕ್ಸನ್.. ಹೀಗೆ ಸಾಕಷ್ಟು ಮಂದಿ ಹಾಟ್ ಬ್ಯೂಟೀಸ್‌‌ನ ಇಂಟ್ರಡ್ಯೂಸ್ ಮಾಡಿಸಿದ್ರು ಪ್ರೇಮ್. ಇದೀಗ ನೋರಾ ಐತೇಹಿ ಸರದಿ.

ಕೆನಡಾ ಮೂಲದ ನೋರಾ ಮೋಸ್ಟ್ ಟ್ಯಾಲೆಂಟೆಡ್ ಡ್ಯಾನ್ಸರ್ ಕಮ್ ಸಿಂಗರ್. ನಟಿಯಾಗಿಯೂ ಸಾಕಷ್ಟು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈಕೆ ಸೊಂಟ ಬಳುಕಿಸಿರೋ ಯಾವುದೇ ಸಿನಿಮಾ ಸೋತಿಲ್ಲ. ದುಬಾರಿ ಸಾಂಗ್ಸ್‌‌ನ ದುಬಾರಿ ಐಟಂ ಡ್ಯಾನ್ಸರ್ ಕೂಡ ಹೌದು ಈಕೆ. ಬಹುತೇಕ ಎಲ್ಲಾ ಸೂಪರ್ ಸ್ಟಾರ್ಸ್ ಜೊತೆ ಬಿಟೌನ್‌ನಲ್ಲಿ ತನ್ನ ಅಂದ ಚೆಂದ ವೈಯ್ಯಾರದ ಮೂಲಕ ಪ್ರೇಕ್ಷಕರ ದಿಲ್ ದೋಚಿದ್ದಾರೆ ನೋರಾ. ಇದೀಗ ಪ್ರೇಮ್ ಮೂಲಕ ಕನ್ನಡಕ್ಕೂ ಪಾದಾರ್ಪಣೆ ಮಾಡಿರೋದು ಖುಷಿಯ ವಿಚಾರ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version