ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಪರಿಚಯವಾಗಿ, ಪ್ರೀತಿಯಲ್ಲಿ ಬಿದ್ದು, 2020ರಲ್ಲಿ ಅದ್ಧೂರಿ ಮದುವೆಯಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಂಪತಿ 2024ರ ಜೂನ್‌ನಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದರು. ಇದು ಕನ್ನಡ ಚಿತ್ರರಂಗ ಅಭಿಮಾನಿಗಳಲ್ಲಿ ದೊಡ್ಡ ಆಘಾತ ಸೃಷ್ಟಿಸಿತ್ತು. ಆದರೆ ವಿಚ್ಛೇದನದ ನಂತರವೂ ಇಬ್ಬರು ಸ್ನೇಹಿತರಂತೆ ಉಳಿದಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು.
ಆದರೆ ಗ್ಯಾರಂಟಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ನಿವೇದಿತಾ ಗೌಡ ತಮ್ಮ ಜೀವನದ ಬಗ್ಗೆ ಮೌನ ಮುರಿದಿದ್ದಾರೆ. ಱಪರ್ ಚಂದನ್ ಶೆಟ್ಟಿ ಅವರಿಂದ ದೂರ ಆದ ನಂತರ ಮೌನವಾಗಿದ್ದ ನಟಿ ನಿವೇದಿತಾ ಗೌಡ, ಕೊನೆಗೂ ತಮ್ಮ ಭಾವನೆಗಳನ್ನು ಬಹಿರಂಗಪಡಿಸಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಅವರು, ಈ ನಿರ್ಧಾರದ ಹಿಂದಿನ ಕಾರಣಗಳು ಮತ್ತು ಈಗಿನ ಬ್ಯುಸಿ ಲೈಫ್‌ನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
“ನಾನು ಚಂದನ್ ದೂರ ಆಗಿರೋದು ಸಹಜವಾಗಿಯೇ ಬೇಜಾರಿದೆ.. ವರ್ಕ್ ಆಗ್ತಿಲ್ಲ ಅಂತಾನೇ ಈ ನಿರ್ಧಾರ ತಗೊಂಡಿರೋದು ಅಲ್ವಾ..? ಎಲ್ಲವೂ ಸರಿಯಾಗಿದ್ದಿದ್ರೆ ಯಾರೂ ಇಂತ ನಿರ್ಧಾರ ತಗೊಳ್ತಿರಲಿಲ್ಲ. ಡಿಸಿಷನ್ ತಗೊಂಡ ಬಳಿಕ ಲೈಫ್‌ನ ಹೇಗೆ ಕಟ್ಕೋತೀವಿ ಅನ್ನೋದು ಮುಖ್ಯ. ಖುಷಿ ಅಂದ್ರೆ ತಂದೆ-ತಾಯಿ, ಫ್ರೆಂಡ್ಸ್ ತುಂಬಾ ಸಪೋರ್ಟ್ ಮಾಡಿದ್ರು. ಹಾಗಾಗಿಯೇ ಲೈಫ್ ಸದ್ಯಕ್ಕೆ ಚೆನ್ನಾಗಿ ಹೋಗ್ತಿದೆ.” ಎಂದು ಹೇಳಿಕೊಂಡಿದ್ದಾರೆ.
“ದೂರ ಆದ ಬಳಿಕ ಚಂದನ್ ನನಗೆ ಕಾಲ್, ಮೆಸೇಜ್ ಮಾಡಿಲ್ಲ. ತಂದೆ-ತಾಯಿ ತುಂಬಾ ಸಪೋರ್ಟೀವ್ ಆಗಿದ್ದಾರೆ. ನಾನು ನೋವಲ್ಲಿರೋದನ್ನ ನೋಡೋಕೆ ಅವರಿಗೆ ಆಗೋದೇ ಇಲ್ಲ. ನನಗಾದ ನೋವಿನ 100 ಪಟ್ಟು ನೋವು ಅವರಿಗಾಗಿದೆ. ನಾನು ಖುಷಿಯಾಗಿರೋದಷ್ಟೇ ಅವರ ಗುರಿ ಆಗಿತ್ತು” ಎಂದಿದ್ದಾರೆ.
ಅವರು ಮದುವೆ ಬಗ್ಗೆ ಮಾತನಾಡುತ್ತಾ, “ಮದುವೆ ಬಗ್ಗೆ ನಟಿ ನಿವೇದಿತಾ ಗೌಡ ಮೌನ ಮುರಿದಿದ್ದಾರೆ. ಸದ್ಯಕ್ಕೆ ಎರಡನೇ ಮದುವೆ ಬಗ್ಗೆ ಯೋಚನೆ ಮಾಡಿಲ್ಲ. ಕರಿಯರ್, ಟ್ರಾವೆಲಿಂಗ್ ಅಂತ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದೀನಿ. ಅಪ್ಪ-ಅಮ್ಮ ಒಮ್ಮೆ 2ನೇ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ರು. ಆದ್ರೆ ನಾನೇ ರೆಡಿಯಿಲ್ಲ ಅಂದೆ.. ತುಂಬಾ ಭಯ ಇದೆ ಅಂದಿದ್ದೆ. ಓಕೆ ನೀನು ಯಾವಾಗ ಓಕೆ ಅಂತಿಯೋ ಆಗ ಹುಡುಗನ ಹುಡುಕ್ತೀವಿ ಅಂದ್ರು.” ಎಂದು ಹೇಳಿದ್ದಾರೆ.