ಟಾಲಿವುಡ್ ಹಿತ್ತಲಕೆ ನಿಶ್ವಿಕಾ.. ವಿಶ್ವಂಭರ ಮೆಗಾ ಆಫರ್

ಮೆಗಾಸ್ಟಾರ್ ಚಿರಂಜೀವಿ ಜೊತೆ ನಿಶ್ವಿಕಾ ಸೂಪರ್ ಸ್ಟೆಪ್ಸ್..!

42

ಕರಟಕ ದಮನಕ ಚಿತ್ರದ ಬಳಿಕ ಸೈಲೆಂಟ್ ಆಗಿದ್ದ ನಿಶ್ವಿಕಾ ನಾಯ್ಡು, ಇದೀಗ ಬಿಗ್ ಬ್ಯಾಂಗಿಂಗ್ ನ್ಯೂಸ್‌ ಮೂಲಕ ಮತ್ತೆ ಸಖತ್ ಸದ್ದು ಮಾಡ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಜೊತೆ ಬಣ್ಣ ಹಚ್ಚುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ ಕನ್ನಡತಿ. ಆ ಮೆಗಾ ಆಫರ್ ಕುರಿತ ಕಂಪ್ಲೀಟ್ ಕಹಾನಿ ಇಲ್ಲಿದೆ.

ಯೆಸ್.. ಕಳೆದ ವರ್ಷ ಪ್ರಭುದೇವ- ಶಿವರಾಜ್‌‌ಕುಮಾರ್ ಕಾಂಬೋದಲ್ಲಿ ತೆರೆಕಂಡ ಕರಟಕ ದಮನಕ ಚಿತ್ರದ ಹಾಡೊಂದು ಇಂದಿಗೂ ಸಖತ್ ಟ್ರೆಂಡಿಂಗ್‌ನಲ್ಲಿದೆ. ನಿಶ್ವಿಕಾ ನಾಯ್ಡು- ಪ್ರಭುದೇವ ಜೋಡಿಯ ಹಿತ್ತಲಕೆ ಕರಿಬ್ಯಾಡ ಮಾವ ಸಾಂಗ್, ಟ್ಯೂನು, ಲೈನು ಹಾಗೂ ಸ್ಟೆಪ್ಸ್‌‌ನಿಂದ ಇಂದಿಗೂ ಅದೇ ಕಿಕ್ ಕೊಡ್ತಿದೆ. ಇದೀಗ ಅದೇ ಹಾಡಿನಿಂದಾಗಿ ಪಕ್ಕದ ತೆಲುಗು ಚಿತ್ರರಂಗದಲ್ಲಿ ಮೆಗಾ ಆಫರ್ ಪಡೆದಿದ್ದಾರೆ ಕನ್ನಡತಿ ನಿಶ್ವಿಕಾ ನಾಯ್ಡು.

ADVERTISEMENT
ADVERTISEMENT

ಮೆಗಾಸ್ಟಾರ್ ಚಿರಂಜೀವಿ ನಟನೆಯ 156ನೇ ಸಿನಿಮಾ ವಿಶ್ವಂಭರದಲ್ಲಿ ನಿಶ್ವಿಕಾ ಸೊಂಟ ಬಳುಕಿಸಲಿದ್ದಾರಂತೆ. ಮಲ್ಲಿಡಿ ವಸಿಷ್ಠ ನಿರ್ದೇಶನದ ಈ ಸಿನಿಮಾ, ಫ್ಯಾಂಟಸಿ ಆ್ಯಕ್ಷನ್ ಎಂಟರ್‌ಟೈನರ್ ಆಗಿದ್ದು, ಈಗಾಗ್ಲೇ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ಬ್ಯುಸಿಯಾಗಿದೆ. ಈ ಚಿತ್ರದಲ್ಲಿ ವಿಎಫ್‌ಎಕ್ಸ್ ಹಾಗೂ ಸಿಜಿಐ ಹೆಚ್ಚಾಹಿ ಇರೋದ್ರಿಂದ ರಿಲೀಸ್ ತಡವಾಗ್ತಿದ್ದು, ಅದಕ್ಕೀಗ ನಿಶ್ವಿಕಾ ಜೊತೆ ಒಂದು ಸ್ಪೆಷಲ್ ಸಾಂಗ್ ಚಿತ್ರಿಸೋಕೆ ಚಿತ್ರತಂಡ ಸ್ಕೆಚ್ ಹಾಕಿದೆ.

ಸಾಮಾನ್ಯವಾಗಿ ಊರ್ವಶಿ ರೌಟೆಲಾ, ನೋರಾ ಫತೇಹಿ, ಮಲೈಕಾ ಅರೋರಾ ಅಂತಹ ಐಟಂ ಡ್ಯಾನ್ಸರ್ಸ್‌ನ ಇಟ್ಕೊಂಡು ಸೌತ್ ಸ್ಟಾರ್ಸ್‌ ಸ್ಪೆಷಲ್ ಸಾಂಗ್ಸ್ ಮಾಡ್ತಾರೆ. ಆದ್ರೆ ಹಿತ್ತಲಕೆ ಕರಿಬ್ಯಾಡ ಮಾವ ಸಾಂಗ್ ಬರೋಬ್ಬರಿ 14 ಕೋಟಿ ವೀವ್ಸ್‌ನಿಂದ ಇಂದಿಗೂ ನೋಡುಗರ ಕಣ್ಮನ ತಣಿಸುತ್ತಿದೆ. ಅದೇ ಹಾಡಿನಿಂದಾಗಿ ಈಗ ಮೆಗಾಸ್ಟಾರ್ ಚಿರಂಜೀವಿ ಜೊತೆ ಡ್ಯಾನ್ಸ್ ಮಾಡುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.

ಅಂದಹಾಘೆ 200 ಕೋಟಿ ಬಿಗ್ ಬಜೆಟ್ ಮೂವಿ ವಿಶ್ವಂಭರದಲ್ಲಿ ಕನ್ನಡಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಗ್ತಿದೆ. ಸಿನಿಮಾಗೆ ನಾಯಕನಟಿ ತ್ರಿಶಾ ಇದ್ದರೂ ಸಹ, ನಮ್ಮ ಕನ್ನಡದ ಪಟಾಕಿ ಪೋರಿ ಆಶಿಕಾ ರಂಗನಾಥ್ ಕೂಡ ವಿಶ್ವಂಭರ ತಾರಾಗಣ ಸೇರಿಕೊಂಡಿದ್ದಾರೆ. ಇನ್ನು ಮೆಗಾಸ್ಟಾರ್ ಚಿರಂಜೀವಿ ದಿಲ್ ಗೆದ್ದಿರೋ ಭಜರಂಗಿ ಲೋಕಿ ಇದ್ದೇ ಇರ್ತಾರೆ. ಇದೀಗ ಆಶಿಕಾ, ಲೋಕೇಶ್ ಜೊತೆಗೆ ನಿಶ್ವಿಕಾ ಕೂಡ ಪಟ್ಟಿ ಸೇರಿಕೊಂಡಿರೋದು ಇಂಟರೆಸ್ಟಿಂಗ್.

2018ರಲ್ಲಿ ಅಮ್ಮ ಐ ಲವ್ ಯೂ ಸಿನಿಮಾದಿಂದ ಚಿತ್ರರಂಗಕ್ಕೆ ಬಂದಂತಹ ನಿಶ್ವಿಕಾ ಆರೇಳು ವರ್ಷಗಳಲ್ಲಿ ಸುಮಾರು 11ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸೋ ಮೂಲಕ ಗಮನ ಸೆಳೆದಿದ್ದಾರೆ. ಗುರುಶಿಷ್ಯರು, ಜಂಟಲ್‌ಮನ್, ಗಾಳಿಪಟ-2 ಅಂತಹ ಹಿಟ್ ಸಿನಿಮಾಗಳು ಕೂಡ ಆ ಲಿಸ್ಟ್‌‌ನಲ್ಲಿರೋದು ವಿಶೇಷ. ಅದೇನೇ ಇರಲಿ, ಆಫರ್ಸ್ ಇಲ್ಲದೆ ಸೈಲೆಂಟ್ ಆಗಿದ್ದಾರೆ ನಿಶ್ವಿಕಾ ಅಂತ ಆಡಿಕೊಳ್ತಿದ್ದವರಿಗೆ ಚಿರಂಜೀವಿಯ ವಿಶ್ವಂಭರ ಚಿತ್ರದ ಮುಖೇನ ಬಿಗ್ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ ಕನ್ನಡತಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version