NEET‌ ಪ್ರೊಟೆಸ್ಟ್‌‌ಗೆ ತಾರಾಬಲ..ಯಾವ್ಯಾವ ಸ್ಟಾರ್ ಏನಂದ್ರು?

ವಿದ್ಯಾರ್ಥಿಗಳ ಪರ ಯುವರಾಜ್, ಐಂದ್ರಿತಾ, ನಿಶ್ವಿಕಾ, ಕಿಶೋರ್

ಪ್ರೊಟೆಸ್ಟ್ ಗೆ

ನೀಟ್ ಪರೀಕ್ಷೆಯ ಅಕ್ರಮಗಳು, ಅದ್ರಿಂದ ಸಾವನ್ನಪ್ಪಿರೋ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಅಂತ ಡೆಲ್ಲಿಯ ಜಂತರ್ ಮಂತರ್‌‌ನಲ್ಲಿ ಬಹುದೊಡ್ಡ ಪ್ರತಿಭಟನೆ ನಡೆಯುತ್ತಿದೆ. ಅಲ್ಲಿರೋ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಬಾಲಿವುಡ್ ಸೇರಿದಂತೆ ತಮ್ಮ ಸ್ಯಾಂಡಲ್‌ವುಡ್ ಸ್ಟಾರ್‌‌ಗಳು ಸಹ ಧ್ವನಿ ಎತ್ತಿದ್ದಾರೆ. ಕೆಲವರು ಡೆಲ್ಲಿಗೇ ತೆರಳಿ ಪ್ರತ್ಯಕ್ಷವಾಗಿ ಸಾಥ್ ನೀಡಿದ್ರೆ, ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಸ್ಟೂಡೆಂಟ್ಸ್ ಪರ ನಿಂತಿದ್ದಾರೆ. ಹಾಗಾದ್ರೆ ಯಾವ್ಯಾವ ಸ್ಟಾರ್ ಸಪೋರ್ಟ್ ಮಾಡಿದ್ರು..? ಏನು ಹೇಳಿದ್ರು ಅನ್ನೋದ್ರ ಡಿಟೈಲ್ಸ್‌‌ ಇಲ್ಲಿದೆ ನೋಡಿ…

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿದಂತೆ ಅದರಲ್ಲಿನ ಅಕ್ರಮ, ಅವ್ಯವಸ್ಥೆಗಳ ಕುರಿತು ಪ್ರಶ್ನಿಸಿ ದೆಹಲಿಯ ಜಂತರ್ ಮಂತರ್‌‌ನಲ್ಲಿ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸ್ತಿದ್ದಾರೆ. ಸುಮಾರು 20ಕ್ಕೂ ಅಧಿಕ ವಿದ್ಯಾರ್ಥಿಗಳು ಸಾವನ್ನಪ್ಪಿರೋದು ಗೊತ್ತೇಯಿದೆ. ಇದರ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತ ಸೋನಂ ವಾಂಗ್ಚುಕ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಕೂಡ ಜೋರಾಗಿ ನಡೆಯುತ್ತಿದೆ. ವಾಂಗ್ಚುಕ್ ಅನುಪಸ್ಥಿತಿಯಲ್ಲಿ ಅಭಿಜಿತ್ ದೀಪ್ಕೆ ಅದ್ರ ಜವಾಬ್ದಾರಿ ಹೊತ್ತಿದ್ದಾರೆ.

ಕಳೆದ 20-22 ದಿನಗಳಿಂದ ನಡೆಯುತ್ತಿರೋ ಈ ಪ್ರತಿಭಟನೆ ಇದೀಗ ಹಿಂಸಾರೂಪ ತಾಳಿದೆ. ಪ್ರತಿಭಟನಾಕಾರರ ವಿರುದ್ಧ ದೆಹಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ನೂರಾರು ವಿದ್ಯಾರ್ಥಿಗಳು ರಕ್ತದ ಮಡುವಿನಲ್ಲಿಯೂ ಸಹ ತಮ್ಮ ಡಿಮ್ಯಾಂಡ್ಸ್ ಈಡೇರಿಸುವಂತೆ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಲೇ ಇದ್ದಾರೆ. ಇದನ್ನೆಲ್ಲಾ ಕಂಡು, ಇಷ್ಟು ದಿನ ಸೈಲೆಂಟ್ ಆಗಿದ್ದ ಬಾಲಿವುಡ್ ಹಾಗೂ ನಮ್ಮ ಕನ್ನಡದ ಸ್ಟಾರ್‌ಗಳು ಇದೀಗ ವಿದ್ಯಾರ್ಥಿಗಳ ಪರ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದಾರೆ.

ಬಹುಭಾಷಾ ನಟ ಪ್ರಕಾಶ್ ರೈ ಹಾಗೂ ಹಿರಿಯನಟಿ ಶಬಾನಾ ಆಜ್ಮಿ ನೇರವಾಗಿ ಡೆಲ್ಲಿಯ ಜಂತರ್ ಮಂತರ್‌ಗೇ ತೆರಳಿ ಪ್ರತ್ಯಕ್ಷವಾಗಿ ವಿದ್ಯಾರ್ಥಿಗಳಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಬದುಕಿಯೂ ಸತ್ತಂತಿರಲು ಬಯಸುವುದಿಲ್ಲ ಅಂತ ಪ್ರಕಾಶ್ ರೈ ಕೂಡಲೇ ಬೇಡಿಕೆಗಳನ್ನ ಈಡೇರಿಸಲು ಒತ್ತಾಯಿಸಿದ್ದಾರೆ. ಹಿರಿಯನಟಿ ಶಬಾನಾ ಆಜ್ಮಿ ಕೂಡ ಭಾರತದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ತಮ್ಮ ಸಪೋರ್ಟ್ ಇರಲಿದೆ ಎಂದಿದ್ದಾರೆ.

ಕನ್ನಡದ ನಟಿಯರಾದ ದೊಡ್ಮನೆ ಹುಡ್ಗ ಯುವರಾಜ್‌‌ಕುಮಾರ್, ನಟಿ ಐಂದ್ರಿತಾ ರೇ, ನಟಿ ನಿಶ್ವಿಕಾ ನಾಯ್ಡು, ನಟ ಕಿಶೋರ್ ಸೇರಿದಂತೆ ಸಾಕಷ್ಟು ಜನ ಸ್ಟೂಡೆಂಟ್ಸ್ ಮೇಲೆ ಲಾಠಿ ಚಾರ್ಜ್ ಮಾಡಿರೋದನ್ನ ಖಂಡಿಸಿ ಪೋಸ್ಟ್ ಮಾಡಿದ್ದಾರೆ. ಕೆಲವರು ವಿಡಿಯೋ ಮೂಲಕ ತಮ್ಮ ನಿಲುವುಗಳನ್ನ ಬಹಿರಂಗಪಡಿಸಿದ್ದಾರೆ.

ಅಲ್ಲದೆ ಬಾಲಿವುಡ್‌ನ ಸೂಪರ್ ಸ್ಟಾರ್ ಹೃತಿಕ್ ರೋಷನ್, ಜೆನಿಲಿಯಾ, ರಿತೇಶ್ ದೇಶಮುಖ್‌‌, ಸೋನು ಸೂದ್, ಅನುರಾಗ್ ಕಶ್ಯಪ್, ಸಯ್ಯಾಜಿ ಶಿಂದೆ, ಗಾಯಕ ದಿಲ್ಜೀತ್ ದೋಸಂಜ್.. ಹೀಗೆ ಸಾಕಷ್ಟು ಮಂದಿ ಸ್ಟಾರ್‌‌ಗಳು ವಿದ್ಯಾರ್ಥಿಗಳ ಪರ ಬ್ಯಾಟ್ ಬೀಸಿದ್ದಾರೆ. ನಟಿ ದೀಪಿಕಾ ಪಡುಕೋಣೆ ಮೊದಲು ಇನ್ಸ್‌ಟಾ ಸ್ಟೋರಿಯಲ್ಲಿ ಧ್ವನಿ ಎತ್ತಿ, ನಂತ್ರ ಡಿಲೀಟ್ ಮಾಡಿದ್ರು. ಈ ಬಗ್ಗೆಯೂ ಸಾಕಷ್ಟು ದೊಡ್ಡ ಮಟ್ಟಕ್ಕೆ ಚರ್ಚೆಗಳಾಗ್ತಿದೆ. ಸದ್ಯ ಕಾಕ್ರೋಚ್ ಜನತಾ ಪಾರ್ಟಿ ನಡೆಸ್ತಿದ್ದ ಈ ಪ್ರೊಟೆಸ್ಟ್ ರಾಹುಲ್ ಗಾಂಧಿ, ಖರ್ಗೆ, ಪ್ರಿಯಾಂಕಾ ಗಾಂಧಿ ಎಂಟ್ರಿಯಿಂದ ರಾಜಕೀಯ ರೂಪ ಪಡೆದುಕೊಂಡಿದೆ. ಮುಂದೆ ಏನೆಲ್ಲಾ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

Exit mobile version