ನಾಲ್ಕು ದಿನಕ್ಕೆ 150ಕೋಟಿ.. ಮಿರ್ಜಾಪುರ್ ಮೂವಿ ಸೆನ್ಸೇಷನ್

ನಾಲ್ಕು ದಿನಕ್ಕೆ 150ಕೋಟಿ..

ಮಿರ್ಜಾಪುರ್.. ಸದ್ಯ ಬಾಕ್ಸ್ ಆಫೀಸ್‌‌ನಲ್ಲಿ ಸಖತ್ ಸಂಚಲನ ಮೂಡಿಸಿರೋ ಬಾಲಿವುಡ್‌ನ ಲೇಟೆಸ್ಟ್ ಬ್ಲಾಕ್ ಬಸ್ಟರ್ ಹಿಟ್. ನಾಲ್ಕೇ ದಿನಕ್ಕೆ 150 ಕೋಟಿ ಲೂಟಿ ಮಾಡಿರೋ ಈ ಆ್ಯಕ್ಷನ್ ಕ್ರೈಂ ಥ್ರಿಲ್ಲರ್, ನೋಡುಗರ ನಿರೀಕ್ಷೆ ಮೀರಿ ಎಂಟರ್‌‌ಟೈನ್ ಮಾಡ್ತಿದೆ. ಇಷ್ಟಕ್ಕೂ ಅಂಥದ್ದೇನಿದೆ ಇದರಲ್ಲಿ..? ಯಾರೆಲ್ಲಾ ನಟಿಸಿದ್ದಾರೆ..? ಈ ಮಿರ್ಜಾಪುರ್ ಹಿಂದಿರೋ ಅಸಲಿ ಮಿಸ್ಟರಿ ಏನು ಅನ್ನೋ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಮಿರ್ಜಾಪುರ್.. ಇದು ನಾಲ್ಕು ದಿನಗಳ ಹಿಂದಷ್ಟೇ ತೆರೆ ಕಂಡ ಬಾಲಿವುಡ್ ಮೂವಿ. ರಿಲೀಸ್ ಆದ ನಾಲ್ಕೇ ದಿನದಲ್ಲಿ ವರ್ಲ್ಡ್ ವೈಡ್ ಬರೋಬ್ಬರಿ 150ಕ್ಕೂ ಅಧಿಕ ಕೋಟಿ ರೂಪಾಯಿಗಳನ್ನ ಲೂಟಿ ಮಾಡೋ ಮೂಲಕ ಎಲ್ಲರ ಹುಬ್ಬೇರಿಸಿದೆ. ಆ್ಯಕ್ಷನ್ ಕ್ರೈಂ ಥ್ರಿಲ್ಲರ್ ಜಾನರ್‌ನ ಈ ಸಿನಿಮಾ ನೋಡುಗರಿಗೆ ಸಿಕ್ಕಾಪಟ್ಟೆ ಕಿಕ್ ಕೊಡ್ತಿದ್ದು, ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿರೋದು ವಿಶೇಷ.

ಗುರ್ಮೀತ್ ಸಿಂಗ್ ನಿರ್ದೇಶನದ ಮಿರ್ಜಾಪುರ್ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ, ಆಲಿ ಫಜಲ್, ದಿವ್ಯೇಂದು, ಜಿತೇಂದ್ರ ಕುಮಾರ್ ಹಾಗೂ ರವಿ ಕಿಶನ್ ಲೀಡ್‌‌ನಲ್ಲಿದ್ದು.. ಸುಮಾರು 50ಕ್ಕೂ ಅಧಿಕ ಪ್ರಮುಖ ಪಾತ್ರಗಳಿಗೆ ನುರಿತ ಕಲಾವಿದರುಗಳು ಜೀವ ತುಂಬಿದ್ದಾರೆ. ಇದು ಮಿರ್ಜಾಪುರ್ ಅನ್ನೋ ಸಿಟಿಯ ಗದ್ದುಗೆಗಾಗಿ ನಡೆಯೋ ಗ್ಯಾಂಗ್‌ಸ್ಟರ್ ವಾರ್ ಆಗಿದ್ದು, ಟ್ವಿಸ್ಟ್ & ಟರ್ನ್ಸ್ ಮಸ್ತ್ ಮಜಾ ಕೊಡ್ತಿವೆ.

ಅಂದಹಾಗೆ ಮಿರ್ಜಾಪುರ್ ಮೂವಿ ಹಿಂದೆ ಒಂದು ದೊಡ್ಡ ಇತಿಹಾಸವೇ ಇದೆ. ಅದೇನಪ್ಪಾ ಅಂದ್ರೆ ಪ್ರೇಕ್ಷಕರಿಗೆ ಮಿರ್ಜಾಪುರ್ ಟ್ರೈಲರ್, ಟೀಸರ್ ಅಥ್ವಾ ಸಾಂಗ್ಸ್ ಯಾವುದರ ಇನ್ವಿಟೇಷನ್ ಇಲ್ಲದಿದ್ರೂ ಈ ಸಿನಿಮಾ ಇದೇ ರೇಂಜ್‌‌ನಲ್ಲಿ ಬಿಗ್ ಓಪನಿಂಗ್ ಪಡೆಯುತ್ತಿತ್ತು. ಅದಕ್ಕೆ ಕಾರಣ ಅದೇ ಡೈರೆಕ್ಟರ್, ಅದೇ ಕ್ಯಾರೆಕ್ಟರ್ಸ್‌ನಿಂದ ತಯಾರಾಗಿದ್ದ ಅದೇ ಕಥಾನಕದ ಅದೇ ಟೈಟಲ್‌ನ ವೆಬ್ ಸೀರೀಸ್.  ಹೌದು.. ಮಿರ್ಜಾಪುರ್ ಈ ಹಿಂದೆ ಮೂರು ಸೀಸನ್‌ಗಳಲ್ಲಿ ಸುಮಾರು 29 ಸಂಚಿಕೆಗಳಿಂದ ನೋಡುಗರಿಗೆ ಓಟಿಟಿಯಲ್ಲಿ ಮಸ್ತ್ ಮನರಂಜನೆ ನೀಡಿತ್ತು.

2018ರ ನವೆಂಬರ್‌ನಲ್ಲಿ ಸೀಸನ್-1ನಲ್ಲಿ 9 ಎಪಿಸೋಡ್ಸ್‌‌ನಿಂದ ಶುರುವಾದ ಮಿರ್ಜಾಪುರ್ ಸೀರೀಸ್.. ನಂತ್ರ 2020ರ ಸೀಸನ್-2ನಲ್ಲಿ 10 ಎಪಿಸೋಡ್ ಹಾಗೂ 2024ರ ಸೀಸನ್-3ನಲ್ಲಿ ಒನ್ಸ್ ಅಗೈನ್ 10 ಸಂಚಿಕೆಗಳಿಂದ ನೋಡುಗರಿಗೆ ಬೇಜಾನ್ ಎಂಟರ್‌ಟೈನ್ಮೆಂಟ್ ನೀಡಿತ್ತು. ಆದ್ರೆ ಅಲ್ಲಿ ಅನ್‌‌ ಸೆನ್ಸಾರ್ಡ್ ಇನ್ಸಿಡೆಂಟ್ಸ್, ಲಾಂಗ್ವೇಜ್ ಸಿಕ್ಕಾಪಟ್ಟೆ ಇತ್ತು. ಹಾಗಾಗಿ ಅದನ್ನ ಬೆಳ್ಳಿಪರದೆಗೆ ತರೋ ಪ್ರಯತ್ನ ಮಾಡಿದ ಡೈರೆಕ್ಟರ್ ಗುರ್ಮೀತ್ ಸಿಂಗ್, ಹೊಸದಾಗಿ ಇಡೀ ಸಿನಿಮಾನ ಅದೇ ಕಲಾವಿದರುಗಳ ಜೊತೆ ರೀ-ಶೂಟ್ ಮಾಡಿ ರಿಲೀಸ್ ಮಾಡಿದ್ದಾರೆ. ಇದು ಧುರಂಧರ್ ಮೂವಿ ರೀತಿ ಕ್ರೇಜ್ ಹುಟ್ಟಿ ಹಾಕಿದ್ದು, ಮಿರ್ಜಾಪುರ್-2ಗೂ ಮುನ್ನುಡಿ ಬರೆದಿರೋದು ಅಚ್ಚರಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

Exit mobile version