ನಾನು ಲವ್ ಮಾಡಿದ್ದೆನಷ್ಟೇ.. ಆದ್ರೆ ಯಾರೊಟ್ಟಿಗೂ ಸೆಕ್ಸ್ ಮಾಡಿಲ್ಲ.. ಇಂದಿಗೂ ನಾನು ವರ್ಜಿನ್. ಹೀಗಂತ ಈ ವರ್ಷದ ಆರಂಭದಲ್ಲಿ ಒಂದು ಸ್ಟೇಟ್ಮೆಂಟ್ ನೀಡಿ ಸಂಚಲನ ಮೂಡಿಸಿದ್ದ ತಮಿಳು ನಟ ಸಿಂಬು, ಇದೀಗ ತಮ್ಮ ಮಾಜಿ ಪ್ರೇಯಸಿ ನಯನತಾರಾ ಜೊತೆ ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ.
ಮಾಜಿ ಲವರ್ ಸಿಂಬು ಜೊತೆ ನಯನತಾರಾ.. ಸಖತ್ ಸೆನ್ಸೇಷನ್
10 ವರ್ಷಗಳ ನಂತ್ರ ಆನ್ಸ್ಕ್ರೀನ್ ಮೇಲೆ ಒಂದಾಗ್ತಿರೋ ಜೋಡಿ..!
ವಲ್ಲವನ್, ಇದು ನಮ್ಮ ಆಳು ಬಳಿಕ ಮೂರನೇ ಬಾರಿ ಮ್ಯಾಜಿಕ್
ಕಾಂಬಿನೇಷನ್ನಿಂದಲೇ ಹೈಪ್ ಕ್ರಿಯೇಟ್ ಮಾಡ್ತಿರೋ ಪ್ರಾಜೆಕ್ಟ್
ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಸಿಂಬು ತಮ್ಮ ಮುಂದಿನ ಸಿನಿಮಾದಲ್ಲಿ ನಟಿ ನಯನತಾರಾ ಜೊತೆ ನಟಿಸ್ತಿದ್ದಾರಂತೆ. ಈ ಸುದ್ದಿ ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದು, ಎಲ್ಲರೂ ಮಾತನಾಡಿಕೊಳ್ಳುವಂತಾಗಿದೆ. ಹೌದು.. ಲೇಡಿ ಸೂಪರ್ ಸ್ಟಾರ್ ನಯನತಾರಾ-ಸಿಂಬು ನಡುವೆ ಪ್ರೀತಿ, ಪ್ರೇಮ, ಪ್ರಣಯದ ಕಥೆಗಳಿಗೆ. ಒಂದು ಕಾಲದಲ್ಲಿ ಇವರಿಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಂಡಿದ್ದ ಲವ್ ಬರ್ಡ್ಸ್.
2006ರಲ್ಲಿ ತೆರೆಕಂಡ ವಲ್ಲವನ್ ಸಿನಿಮಾದಲ್ಲಿ ಸಿಂಬು ಲೀಡ್ನಲ್ಲಿ ನಟಿಸುವುದರ ಜೊತೆ ಅದಕ್ಕೆ ಅವರೇ ಆ್ಯಕ್ಷನ್ ಕಟ್ ಕೂಡ ಹೇಳಿದ್ದರು. ಅದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಆಗಿದ್ದು, ಸ್ಟೂಡೆಂಟ್ ಲೆಕ್ಚರರ್ನ ಲವ್ ಮಾಡಿ, ಲಿಪ್ಕಿಸ್ ಮಾಡುವ ಹಸಿಬಿಸಿ ದೃಶ್ಯಗಳಿಂದ ಯೂತ್ ದಿಲ್ ದೋಚಿತ್ತು. ಅದಾದ ಬಳಿಕ ಇವರಿಬ್ಬರ ಖಾಸಗಿ ಫೋಟೋಗಳು ಲೀಕ್ ಆಗಿ ಬಹುದೊಡ್ಡ ವಿವಾದ ಹುಟ್ಟಿಹಾಕಿತ್ತು. ಇಷ್ಟೆಲ್ಲಾ ಆದ ಬಳಿಕ ಅವರುಗಳ ಪ್ರೀತಿ ಪ್ರೇಮ ಹಳಸಿ, ಬ್ರೇಕಪ್ ಕೂಡ ಆಗಿಬಿಟ್ಟಿತ್ತು.
ಆದ್ರೆ 2016ರಲ್ಲಿ ಇದು ನಮ್ಮ ಆಳು ಸಿನಿಮಾ ಮೂಲಕ ಈ ಜೋಡಿ ಮತ್ತೆ ಒಟ್ಟಿಗೆ ತೆರೆಮೇಲೆ ಮೋಡಿ ಮಾಡಿತ್ತು. ತಮ್ಮ ವೈಯಕ್ತಿಕ ವಿಚಾರಗಳನ್ನ ಪಕ್ಕಕ್ಕೆ ಇಟ್ಟು, ಪ್ರೊಫೆಷನಲ್ ಆಗಿ ನಟ-ನಟಿಯರಾಗಿ ನಟಿಸೋ ಮೂಲಕ ಸಿನಿಮಾಗೆ ಜೀವ ತುಂಬಿದ್ದರು. ಬ್ರೇಕಪ್ ಮಾಡಿಕೊಂಡು ಬಹಳ ದೂರ ಪಯಣಿಸಿರೋ ಈ ಜೋಡಿ ಈಗ ಅವರವರದ್ದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಆದ್ರೆ ಈಗ ಮತ್ತೆ ಒಂದು ದಶಕದ ನಂತ್ರ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ತಿರೋದು ಎಲ್ಲರ ಹುಬ್ಬೇರಿಸ್ತಿದೆ.
ಅರೇ ಅದ್ರಲ್ಲಿ ತಪ್ಪೇನಿದೆ..? ಒಟ್ಟಿಗೆ ನಟಿಸಲಿ ಬಿಡಿ ಅಂತ ನೀವು ಅಂದುಕೊಳ್ಳಬಹುದು. ಆದ್ರೆ ಅಲ್ಲೊಂದು ಸಮಸ್ಯೆಯಿದೆ. ನಯನತಾರಾಗೆ ಈಗ ಮದ್ವೆ ಆಗಿ ಇಬ್ಬರು ಮಕ್ಕಳಿದ್ದಾರೆ. ಸಿಂಬು ಇನ್ನೂ ಸಿಂಗಲ್ ಆಗಿಯೇ ಉಳಿದಿದ್ದಾರೆ.
ಹಾಗಾಗಿ ಹಳೆಯ ಪ್ರೇಮಕಥೆಗಳು ಚಿಗುರೊಡೆದರೆ ಮತ್ತೆ ಅವ್ರ ಸಂಸಾರಗಳಲ್ಲಿ ಬಿರುಗಾಳಿ ಏಳುವುದು ನಿಶ್ಚಿತ ಅಂತಿದ್ದಾರೆ ಕೆಲವರು. ಸಾಲದು ಅಂತ ಇದೇ ವರ್ಷದ ಆರಂಭದಲ್ಲಿ ಖಾಸಗಿ ಸಂದರ್ಶನವೊಂದರಲ್ಲಿ ಸಿಂಬು ಮಾತಾಡ್ತಾ.. ನಾನು ಲವ್ ಮಾಡಿದ್ದು ನಿಜ. ಆದ್ರೆ ಇಂದಿಗೂ ವರ್ಜಿನ್ ಆಗಿಯೇ ಇದ್ದೇನೆ. ಯಾರೊಟ್ಟಿಗೂ ಸೆಕ್ಸ್ ಮಾಡಿಲ್ಲ ಅನ್ನೋ ಸ್ಟೇಟ್ಮೆಂಟ್ ನೀಡಿ ಚರ್ಚೆಗೆ ಕಾರಣವಾಗಿದ್ರು.
ಕೀರ್ತೀಶ್ವರನ್ ನಿರ್ದೇಶನದ ಈ ಸಿನಿಮಾ ಪೊಲೀಸ್ ಡ್ರಾಮಾ ಆಗಿರಲಿದ್ದು, ಸಾಯಿ ಅಭ್ಯಂಕರ್ ಸಂಗೀತ ಸಂಯೋಜಿಸುತ್ತಿದ್ದಾರಂತೆ. ಈಗಾಗ್ಲೇ ಒಂದು ಸಾಂಗ್ ಕೂಡ ಕಂಪೋಸಿಂಗ್ ಮುಗಿದಿದ್ದು, ಡಿಸೆಂಬರ್ನಿಂದಲೇ ಶೂಟಿಂಗ್ ಶುಭಾರಂಭ ಆಗಲಿದೆಯಂತೆ. ಒಟ್ಟಾರೆ ನಯನತಾರಾ-ಸಿಂಬು ಗಮನ ನಟನೆ ಹಾಗೂ ಸಿನಿಮಾಗೆ ಸೀಮಿತ ಆದ್ರೆ ಸಾಕು ಅಂತಿದ್ದಾರೆ ಫ್ಯಾನ್ಸ್.
