ರಚನಾ ಮುದ್ದಾಡಿದ್ದು ಯಾರನ್ನ..? ರಕ್ಷಿತ್- ಚಾರ್ಲಿ ಫ್ಲೇವರ್‌

ಗುಂಡನೊಂದಿಗೆ ರಾಕೇಶ್ ಅಡಿಗ- ರಚನಾ ಸಖತ್ ಜೋಶ್‌

Untitled design 2025 07 29t185213.142

ತನ್ನ ಬೇಬಿ ಜೊತೆ ರೊಮ್ಯಾಂಟಿಕ್ ಆಗಿ ಮುದ್ದಾಡ್ತಿದ್ದಾರೆ ರಚನಾ ಇಂದರ್. ಯೆಸ್.. ನಾನು & ಗುಂಡ-2 ಚಿತ್ರದಿಂದ ಮತ್ತೊಂದು ಮುದ್ದಾದ ಸಾಂಗ್ ಹೊರಬಂದಿದ್ದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿಯನ್ನ ನೆನಪಿಸ್ತಿದೆ. ಸ್ಯಾಂಪಲ್ಸ್‌ನಿಂದ ಭರವಸೆ ಮೂಡಿಸಿರೋ ಗುಂಡನ ಸೆಕೆಂಡ್ ಇನ್ನಿಂಗ್ಸ್ ಇಲ್ಲಿದೆ.

ನಾನು ಮತ್ತು ಗುಂಡ-2.. ರಾಕೇಶ್ ಅಡಿಗ ಹಾಗೂ ರಚನಾ ಇಂದರ್ ಕಾಂಬೋನಲ್ಲಿ ಮೂಡಿಬರ್ತಿರೋ ಸಿನಿಮಾ. ಈಗಾಗ್ಲೇ ಎರಡು ಸಾಂಗ್, ಟೀಸರ್ ಹಾಗೂ ಟ್ರೈಲರ್‌ನಿಂದ ವ್ಹಾವ್ ಫೀಲ್ ತರಿಸಿದ್ದ ಚಿತ್ರತಂಡ, ಇದೀಗ ಮತ್ತೊಂದು ಸಾಂಗ್ ರಿಲೀಸ್ ಮಾಡಿದೆ. ಅದೇ ಓ ಮೈ ಬೇಬಿ ಸಾಂಗ್. ಯೆಸ್.. ಇದು ನೋಡುಗರ ಕಣ್ಮನ ತಣಿಸುತ್ತಿದ್ದು, ರಚನಾ ಇಂದರ್ ಹಾಗೂ ಗುಂಡನ ನಡುವಿನ ಬಾಂಡಿಂಗ್‌ಗೆ ಸಾಕ್ಷಿ ಆಗಿದೆ.

ಓ ಮೈ ಬೇಬಿ ಅಂತ ಮುದ್ದಾದ ಮಗುವಿನ ಜೊತೆ ಮುದ್ದಾಡುವಂತೆ ರಚನಾ ಗುಂಡನೊಂದಿಗೆ ಸಖತ್ ಎಂಜಾಯ್ ಮಾಡ್ತಿದ್ದಾರೆ. ಈ ಹಾಡಿಗೆ ಚಾಯಾಂಕಾ ಸಾಹಿತ್ಯ ಒದಗಿಸಿದ್ದು, ಖ್ಯಾತ ಸಂಗೀತ ಸಂಯೋಜಕ ಆರ್.ಪಿ ಪಟ್ನಾಯಕ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ತನ್ವಿಕ್ ಸಿನಿಮಾಟೋಗ್ರಫಿ ಇಂಪ್ರೆಸ್ಸೀವ್ ಆಗಿದ್ದು, ಐಶ್ವರ್ಯಾ ರಂಗರಾಜನ್ ಕಂಠದಲ್ಲಿ ಹಾಡು ಸೊಗಸಾಗಿ ಮೂಡಿಬಂದಿದೆ.

ರಘು ಹಾಸನ್ ಡ್ರೀಮ್ ಪ್ರಾಜೆಕ್ಟ್ ನಾನು & ಗುಂಡ-2 ಆಗಿದ್ದು, ರಕ್ಷಿತ್ ಶೆಟ್ಟಿಯ 777 ಚಾರ್ಲಿಯಷ್ಟೇ ಕ್ವಾಲಿಟಿ ಮೇಕಿಂಗ್‌ ಮಾಡಿದ್ದಾರೆ. ಅಲ್ಲದೆ 777 ಚಾರ್ಲಿ ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ಬಾಂಧವ್ಯದ‌ ಬಾಂಡಿಂಗ್ ಸಾಂಗ್‌ನ ನೆನಪಿಸ್ತಿದೆ ಈ ಓ ಮೈ ಬೇಬಿ ಗೀತೆ.

ಅಂದಹಾಗೆ ನಾನು & ಗುಂಡ-2 ಚಿತ್ರದಲ್ಲಿ ಒಟ್ಟು ಎರಡು ಶ್ವಾನಗಳನ್ನು ಬಳಸಿ ಸಿನಿಮಾ ಚಿತ್ರಿಸಲಾಗಿದೆ. ಗುಂಡ-1 ಪಾತ್ರವನ್ನು ಸಿಂಬಾ ಮಾಡಿದ್ದು, ಗುಂಡ-2 ಪಾತ್ರವನ್ನು ಬಂಟಿ ಹಾಗೂ ಜಾಕ್ಸನ್ ನಿಭಾಯಿಸಿವೆ. ಕಥೆ, ಪಾತ್ರಗಳು, ಶ್ವಾನಗಳ ಅಭಿನಯ, ವಿಶ್ಯುವಲ್ ಎಫೆಕ್ಸ್ಟ್, ಎಮೋಷನ್ಸ್ ಎಲ್ಲವೂ ಇಂಪ್ರೆಸ್ಸೀವ್ ಆಗಿದ್ದು, ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ ಈ ಎಕ್ಸ್‌ಪೆರಿಮೆಂಟಲ್ ಮೂವಿ.

ಪೊಯೆಮ್ ಪಿಕ್ಚರ್ಸ್‌ ಬ್ಯಾನರ್‌‌ನಡಿ ಈ ಸಿನಿಮಾ ತಯಾರಾಗಿದ್ದು, ಸ್ಯಾಂಪಲ್ಸ್‌‌ನಿಂದಲೇ ಗೆಲ್ಲೋ ಸೂಚನೆ ನೀಡಿದೆ. ಈ ರೀತಿಯ ಭಿನ್ನ ಅಲೆಯ ಸಿನಿಮಾಗಳು ಮತ್ತಷ್ಟು, ಮಗದಷ್ಟು ಬಂದ್ರೆ ಫಿಲ್ಮ್ ಮೇಕರ್‌‌ಗಳ ಕ್ರಿಯಾಶೀಲತೆ ಮತ್ತಷ್ಟು ಹೆಚ್ಚಲಿದೆ. ಜೊತೆಗೆ ಸ್ಫೂರ್ತಿಯೂ ಆಗಲಿದೆ. ಏನೇ ಆಗಲಿ, ರಘು ಹಾಸನ್ ಒಂದೊಳ್ಳೆ ತಂಡದೊಂದಿಗೆ ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿ ಭೇಷ್ ಅನಿಸಿಕೊಳ್ತಿರೋದು ಗ್ರೇಟ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version