ನಂದಮೂರಿ ಬಾಲಕೃಷ್ಣ.. ಟಾಲಿವುಡ್‌ನ ಈ ಸೆಂಚುರಿ ಸ್ಟಾರ್ ಬಿಲ್ಡಪ್ ಬಾಲಯ್ಯ ಅಂತಲೇ ಫೇಮಸ್. ಇತ್ತೀಚೆಗೆ 65ನೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿರೋ ಎನ್‌ಟಿಆರ್ ತನಯ, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಗರ ಪಾಲಿಗೆ ಆಹಾರ ಆಗಿಬಿಟ್ಟಿದ್ದಾರೆ. ಗಮ್ ಬಾಲಯ್ಯ ಅಂತಲೇ ಎಲ್ಲರೂ ಕರೆಯೋಕೆ ಶುರು ಮಾಡಿದ್ದಾರೆ. ಆ ಗಮ್ ಸೀಕ್ರೆಟ್ ಏನು ಅಂತ ಗೊತ್ತಾಗ್ಬೇಕಾ..? ಈ ಸ್ಟೋರಿ ಓದಿ ಹಾಗಾದರೆ.
- ಅಲಲಲಲೇ ಬಾಲಯ್ಯ.. ನಿನ್ ಮೀಸೆಗೆ ಏನಾಯ್ತಯ್ಯಾ..?
- ವೇದಿಕೆಯಲ್ಲಿ ಉದುರಿದ ಮೀಸೆ.. ಗಮ್‌ಗೆ ಪರದಾಡಿದ ನಟ
- ಅಖಂಡ-2 ಟೀಸರ್ ಕೂಡ ಟ್ರೋಲ್.. ಇದೆಲ್ಲಾ ಬೇಕಿತ್ತಾ ?
- NTR ತನಯ ಬಿಲ್ಡಪ್ ಬಾಲಯ್ಯ ಇನ್ಮೇಲೆ ಗಮ್ ಬಾಲಯ್ಯ
ನಂದಮೂರಿ ಬಾಲಕೃಷ್ಣ.. 110 ಸಿನಿಮಾಗಳನ್ನ ಮಾಡಿರೋ ಲಿವಿಂಗ್ ಲೆಜೆಂಡ್. ಲೆಜೆಂಡರಿ ಆ್ಯಕ್ಟರ್ ಕಮ್ ಮಾಜಿ ಆಂಧ್ರ ಸಿಎಂ ಎನ್‌ಟಿಆರ್ ಮುದ್ದಿನ ಮಗ. 65ರ ಇಳಿವಯಸ್ಸಿನಲ್ಲೂ ಚಿರ ಯುವಕನ ಉತ್ಸಾಹ, ಉಲ್ಲಾಸ. ಹೌದು, ಇತ್ತೀಚೆಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ಬಾಲಕೃಷ್ಣ, ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅದಕ್ಕೆ ಕಾರಣ ಒಂದು ಎರಡಲ್ಲ.. ಹತ್ತು, ಹಲವು.
ಒಂದ್ಕಡೆ ಹಿಂದೂಪುರ ಎಂಎಲ್‌ಎ ಕೂಡ ಆಗಿರೋ ನಂದಮೂರಿ ಬಾಲಕೃಷ್ಣ, ಸಿನಿಮಾ ಹಾಗೂ ರಾಜಕಾರಣದಲ್ಲಿ ನಂದಮೂರಿ ಕುಟುಂಬದ ಲೆಗಸಿಯನ್ನ ಮುಂದುವರೆಸಿಕೊಂಡು ಹೋಗ್ತಿದ್ದಾರೆ. ಮಕ್ಕಳು, ಮೊಮ್ಮಕ್ಕಳ ಜೊತೆ ಆರಾಮಾಗಿ ನಿವೃತ್ತಿ ಜೀವನ ಕಳೆಯಬೇಕಿದ್ದ ಬಾಲಯ್ಯ, ಎಲ್ಲರೂ ಆಡಿಕೊಳ್ಳುವಂತೆ ಟ್ರೋಲ್ ಆಗ್ತಿದ್ದಾರೆ. ಅದಕ್ಕೆ ಕಾರಣ ಅವರಿಗೆ ಅವರೇ ಕೊಟ್ಟಿಕೊಳ್ಳುವ ಬಿಲ್ಡಪ್ಸ್.
ಹೌದು, ಸದ್ಯ ಮೀಸೆಯಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದ್ರೂ ಇವರೇ ಟ್ರೋಲ್ ಆಗ್ತಿದ್ದಾರೆ. ಬರ್ತ್ ಡೇ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿ ವಿಗ್ ಜೊತೆ ಕೃತಕವಾಗಿ ಅಂಟಿಸಿಕೊಂಡಿರೋ ಮೀಸೆ ಜೊತೆ ವೇದಿಕೆಗೆ ಬಂದ ಬಾಲಯ್ಯ, ರಿಯಲ್ ಮೆಟಲ್ ಚಾಕು ಹಿಡಿದು ಕೇಕ್ ಕಟ್ ಮಾಡಿದ್ರು. ಮೈಕ್‌ನ ಬೌಲರ್ ಬಾಳ್ ಎಸೆಯೋಕೂ ಮುನ್ನ ಮೇಲಕ್ಕೆ ಹಾಕಿ ಕ್ಯಾಚ್ ಹಿಡಿಯುತ್ತಾ ಪ್ರಾಕ್ಟೀಸ್ ಮಾಡುವಂತೆ ಮೇಲಕ್ಕೆ ಎಸೆದು ಹಿಡಿದುಕೊಂಡರು.
ಅದೆಲ್ಲಾ ಓಕೆ ಆದ್ರೆ ಮಾತಾಡ್ತಾ ಮಾತಾಡ್ತಾ ಆ ಬಿಸಿಗೆ ಬೆವರಿದ್ದ ಬಾಲಯ್ಯನ ಆರ್ಟಿಫಿಶಿಯಲ್ ಮೀಸೆ ಬಲಗಡೆ ಓಪನ್ ಆಯ್ತು. ಅದು ಓಪನ್ ಆಗ್ತಿದ್ದಂತೆ ಹಿಂದಕ್ಕೆ ತಿರುಗಿ, ಗೌಪ್ಯವಾಗಿ ಮೀಸೆಯನ್ನ ಸರಿಯಾಗಿ ಅಂಟಿಸಿಕೊಂಡು ಮಾತು ಶುರು ಮಾಡಬಹುದಿತ್ತು ಬಾಲಕೃಷ್ಣ. ಆದ್ರೆ ಮಾತಿನ ಮಧ್ಯೆಯೇ ಗಮ್ ಗಮ್ ಗಮ್ ಅಂತ ನಾಲ್ಕೈದು ಬಾರಿ ಕೇಳಿ, ಸದ್ಯ ಗಮ್ ಬಾಲಯ್ಯ ಆಗಿ ಫೇಮಸ್ ಆಗಿಬಿಟ್ಟಿದ್ದಾರೆ.
ಅಖಂಡ-2 ಟೀಸರ್ ಕೂಡ ಮಿಕ್ಸಿ ಗ್ರೈಂಡರ್ ಜೊತೆ ಟ್ರೋಲ್ ಆಗ್ತಿದೆ. ಈ ಹಿಂದಿನ ಡಾಕು ಮಹಾರಾಜ ಚಿತ್ರದ ದಬಿಡಿ ದಿಬಿಡಿ ಸಾಂಗ್ ಸಹ ಟ್ರೋಲ್ ಆಗಿತ್ತು. ಅಷ್ಟೇ ಯಾಕೆ ಬಿಲ್ಡಪ್ ಬಾಲಯ್ಯನ ಸಿನಿಮಾಗಳಲ್ಲಿ ಆ ರೀತಿ ಸಾಲು ಸಾಲು ಸೀಕ್ವೆನ್ಸ್‌ಗಳು ಟ್ರೋಲ್ ಆಗಿವೆ. ಜೈಲಲ್ಲಿರುವಾಗ ಕಂಬಿ ಹಿಂದೆಯಿಂದಲೇ ತಾಳಿ ಕಟ್ಟುನ ಸೀನ್ ಇಂದಿಗೂ ಟ್ರೋಲ್ ಆಗ್ತಾನೇ ಇದೆ. ಇವರ ಹುಮ್ಮಸ್ಸೇನೋ ಸರಿ. ಆದ್ರೆ ಅದು ಆರೋಗ್ಯಕರವಾಗಿದ್ರೆ ಓಕೆ. ಹದ್ದು ಮೀರಿದ್ರೆ ಕಮೆಡಿಯನ್‌ನಂತಾಗುತ್ತೆ. ಇನ್‌ಫ್ಯಾಕ್ಟ್ ಇತ್ತೀಚೆಗೆ ಪದ್ಮಭೂಷಣ ಸ್ವೀಕರಿಸೋಕೆ ಹೋದಾಗಲೂ ಸ್ಟೈಲ್ ಮಾಡಲು ಹೋಗಿ ನಗೆಪಾಟಲಿಗೆ ಈಡಾಗಿದ್ರು.
ಬಹುಶಃ ಬಾಲಯ್ಯಗೆ ಇದನ್ನೆಲ್ಲಾ ಹೇಳುವವರು ಯಾರೂ ಇಲ್ಲ ಅನಿಸುತ್ತೆ. ಹಾಗಾಗಿಯೇ ಈ ತರಹದ ಎಡವಟ್‌ಗಳು ಪದೇ ಪದೆ ಮರುಕಳಿಸುತ್ತಿರುತ್ತವೆ. ಅದೇನೇ ಇರಲಿ, ವರ್ಷಕ್ಕೆ ಈಗಲೂ ಎರಡೆರಡು ಸಿನಿಮಾ ಮಾಡಿಕೊಂಡು, ಒಂದ್ಕಡೆ ಒಂದು ವಿಧಾನಸಭಾ ಕ್ಷೇತ್ರಕ್ಕೆ ಶಾಸಕರಾಗಿದ್ದುಕೊಂಡು ಪ್ರಜಾ ಪಾಲನೆ ಕೂಡ ಮಾಡೋದು ಸಾಮಾನ್ಯದ ಮಾತಲ್ಲ. ಗಾಡ್ ಆಫ್ ಮಾಸ್ ಅಂತ ಕರೆಸಿಕೊಂಡಿರೋ ನಟಸಿಂಹ, ಅಖಂಡ 2 ಬಳಿಕ ಜೈಲರ್-2ನಲ್ಲಿ ಕೂಡ ಬಣ್ಣ ಹಚ್ಚುತ್ತಿದ್ದಾರೆ.
